ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮ್ ರಹೀಮ್ ಉದಾಹರಣೆ ನೀಡಿ ಭಾರತದ ಆಧ್ಯಾತ್ಮಿಕ ಕೋರ್ಸ್ ಗಳ ಬಗ್ಗೆ ಚೀನಾ ಎಚ್ಚರಿಕೆ

|
Google Oneindia Kannada News

ಭಾರತೀಯ ಆಧ್ಯಾತ್ಮಿಕ ಕೋರ್ಸ್, ಆರಾಧನೆಗಳ ಬಗ್ಗೆ ಎಚ್ಚರಿಕೆ ನೀಡಿದ ಚೀಭಾರತದ ಧಾರ್ಮಿಕ ಸಂಸ್ಥೆಗಳ ಕೋರ್ಸ್ ಗಳಿಂದ ಹುಷಾರಾಗಿರುವಂತೆ ಚೀನಾವು ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ. ಕೆಲವು ಧಾರ್ಮಿಕ ಸಂಘಟನೆಗಳ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣಗಳಿವೆ. ಅಂಥ ಶಂಕಿತ ಧಾರ್ಮಿಕ ಆರಾಧನೆಗಳ ತಂಡಗಳಿಂದ ದೂರ ಇರಿ ಎಂದು ತನ್ನ ನಾಗರಿಕರಿಗೆ ಸೂಚನೆ ನೀಡಿದೆ.

ಸಾರ್ವಜನಿಕ ಭದ್ರತಾ ಸಚಿವಾಲಯ, ಚೀನಾದ ಪೊಲೀಸ್ ಇಲಾಖೆ ಈ ಎಚ್ಚರಿಕೆಯನ್ನು ನೀಡಿದೆ. ತೈವಾನ್ ನ ನಟಿಯೊಬ್ಬರು ದಕ್ಷಿಣ ಭಾರತ ಮೂಲದ ಧಾರ್ಮಿಕ ಸಂಸ್ಥೆಯೊಂದರ ಆಧ್ಯಾತ್ಮಿಕ ಕೋರ್ಸ್ ವೊಂದರ ಬಗ್ಗೆ ಪ್ರಚಾರ ಮಾಡಿದ್ದರು. ಆ ನಂತರ ಚೀನಾ ದೇಶದಾದ್ಯಂತ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಹುಟ್ಟು ಹಾಕಿದೆ. ಈ ಸೆಲೆಬ್ರಿಟಿ ಧಾರ್ಮಿಕ ಆರಾಧನೆಯನ್ನು ಪ್ರಚಾರ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪತ್ರಕರ್ತನ ಹತ್ಯೆ ಪ್ರಕರಣ: ರಾಮ್ ರಹೀಮ್‌ಗೆ ಜೀವಾವಧಿ ಶಿಕ್ಷೆಪತ್ರಕರ್ತನ ಹತ್ಯೆ ಪ್ರಕರಣ: ರಾಮ್ ರಹೀಮ್‌ಗೆ ಜೀವಾವಧಿ ಶಿಕ್ಷೆ

ತೈವಾನ್ ನ ನಟಿ ಯೀ ನೆಂಗ್ ಜಾಂಗ್ ಅಥವಾ ಆನಿ ಯೀ ಸೋಮವಾರದಂದು ಸೈನಾ ವಿಬೋ (ಟ್ವಿಟ್ಟರ್ ನ ಚೀನಾ ಮಾದರಿ)ದಲ್ಲಿ ಚಿತ್ತೂರು ಮೂಲದ ಅಮ್ಮ ಹಾಗೂ ಭಗವಾನ್ ರ ಪ್ರವಚನಗಳನ್ನು ಸೋಮವಾರ ಪ್ರಚಾರ ಮಾಡಿದ್ದರು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ವಿಬೋದಲ್ಲಿ ಇದರಿಂದ ಭಾರೀ ಚರ್ಚೆಯಾಗಿದೆ.

China warned its citizens against Indian spiritual courses and ‘cults’

ಎಂಪಿಎಸ್ ಹಾಗೂ ಚೀನಾ ಆಂಟಿ ಕಲ್ಟ್ ಅಸೋಸಿಯೇಷನ್ ಈ ಪೋಸ್ಟ್ ಗಳನ್ನು ಫಾರ್ವರ್ಡ್ ಮಾಡಿ, ಸಾರ್ವಜನಿಕರನ್ನು ಎಚ್ಚರಿಸಿದೆ. ಭಾರತದ ಕೆಲವು ಆಧ್ಯಾತ್ಮಿಕ ಸಂಘಟನೆಗಳು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾಗಿವೆ ಎಂದು ಎಚ್ಚರಿಸಿವೆ. ಇಷ್ಟೆಲ್ಲ ರಾದ್ಧಾಂತ ಆದ ನಂತರ ನಟಿಯು ತನ್ನ ಪೋಸ್ಟ್ ತೆಗೆದುಹಾಕಿದ್ದಾರೆ.

ಚೀನಾದಲ್ಲಿ ವಿರೋಧ ಭಾರತದ ಅಧ್ಯಾತ್ಮಿಕ ಸಂಘಟನೆಗಳನ್ನು ವಿರೋಧ ಮಾಡುತ್ತಿರುವ ಸಂಸ್ಥೆಯು ರಾಮ್ ರಹೀಮ್ ಗುರ್ಮಿತ್ ಪ್ರಕರಣವನ್ನು ಉದಾಹರಣೆಯಾಗಿ ನೀಡಿದೆ. ಇನ್ನೂರರಷ್ಟು ಭಕ್ತೆಯರನ್ನು ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಆತ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ ಎಂದು ಕೂಡ ಹೇಳಿದೆ.

ಮಹಾಭಾರತ ಕಾಲದ ಪಾರಂಪರಿಕ ಸ್ಥಳದ ರಕ್ಷಣೆಗೆ ಮುಂದಾದ ಪಾಕಿಸ್ತಾನಮಹಾಭಾರತ ಕಾಲದ ಪಾರಂಪರಿಕ ಸ್ಥಳದ ರಕ್ಷಣೆಗೆ ಮುಂದಾದ ಪಾಕಿಸ್ತಾನ

ಎರಡು ವರ್ಷಗಳ ಹಿಂದೆ ಚೀನಾ ಆಂಟಿ ಕಲ್ಟ್ ನೆಟ್ ವರ್ಕ್ ಎಂಬ ವೆಬ್ ಸೈಟ್ ಆರಂಭಿಸಿದೆ. ಧಾರ್ಮಿಕ ಆರಾಧನೆ ವಿಚಾರವಾಗಿ ಚೀನಾ ಅಳವಡಿಕೊಂಡಿರುವ ನೀತಿ-ಕ್ರಮಗಳನ್ನು ಪ್ರಚುರ ಪಡಿಸುವುದು ಇದರ ಉದ್ದೇಶವಾಗಿದೆ. ಈ ವೆಬ್ ಸೈಟ್ ಮೂಲಕ ಸಾರ್ವಜನಿಕರು ತಮ್ಮ ಮೇಲಾದ ಅಪರಾಧ ಪ್ರಕರಣಗಳ ದೂರು ನೀಡಬಹುದು. ಮಾರ್ಗದರ್ಶನ ಪಡೆಯಬಹುದು. ನಾಪತ್ತೆಯಾದ ತಮ್ಮ ಸಂಬಂಧಿಕರನ್ನು ಹುಡುಕಲು ನೆರವು ಪಡೆಯಬಹುದು.

English summary
China has warned its citizens to stay alert about spiritual courses offered by Indian religious schools, warning that some of them are mired in “sexual assault” cases and urged its citizens to stay off “suspected religious cults”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X