ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

CoronaVirus: ಸೋಂಕಿತರು ಸರಿದಾಡಿದರೂ ಮೆಸೇಜ್, ತಂತ್ರಜ್ಞಾನದ ಎಫೆಕ್ಟ್!

|
Google Oneindia Kannada News

ಬೀಜಿಂಗ್, ಫೆಬ್ರವರಿ.09: ಕೊರೊನಾ ವೈರಸ್.. ಚೀನಾದ ಹೃದಯ ಭಾಗದಲ್ಲಿರುವ ವುಹಾನ್ ನಗರದಲ್ಲಿ ಮೊದಲಿಗೆ ಕಾಣಿಸಿಕೊಂಡ ಮಾರಕ ರೋಗ ಜಾಗತಿಕ ಮಟ್ಟದಲ್ಲಿ ಸವಾಲ್ ಆಗಿ ಪರಿವರ್ತನೆ ಆಗಿದೆ. ವೈದ್ಯಕೀಯ ಲೋಕಕ್ಕೆ ಸವಾಲ್ ವೊಡ್ಡಿ ನಿಂತಿರುವ ರೋಗದ ತಡೆ ಮತ್ತು ನಿಗ್ರಹಕ್ಕೆ ಚೀನಾ ತಂತ್ರಜ್ಞಾನದ ಮೊರೆ ಹೋಗಿದೆ.

ಈಗಾಗಲೇ ಚೀನಾದಲ್ಲಿ ಕೊರೊನಾ ವೈರಸ್ ಗೆ 750ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದಾರೆ. 35 ಸಾವಿರಕ್ಕೂ ಅಧಿಕ ಜನರಿಗೆ ಸೋಂಕು ತಗಲಿರುವ ಬಗ್ಗೆ ಅಂದಾಜಿಸಲಾಗಿದೆ. ಚೀನಾ ಅಷ್ಟೇ ಅಲ್ಲದೇ ಜಪಾನ್, ಥೈಲ್ಯಾಂಡ್, ಅಮೆರಿಕಾ, ಇಂಗ್ಲೆಂಡ್ ಸೇರಿದಂತೆ 26ಕ್ಕೂ ಹೆಚ್ಚು ದೇಶಗಳಲ್ಲಿ ಕೊರೊನಾ ವೈರಸ್ ಹರಡಿಕೊಂಡಿದೆ.

ಕೊರೊನಾ ವೈರಸ್ ಹುಟ್ಟು ಮತ್ತು ಸಾವಿನ ಸರಣಿ ಸುತ್ತ ಒಂದು ವರದಿಕೊರೊನಾ ವೈರಸ್ ಹುಟ್ಟು ಮತ್ತು ಸಾವಿನ ಸರಣಿ ಸುತ್ತ ಒಂದು ವರದಿ

ಚೀನಾ ಸರ್ಕಾರವು ಕೊರೊನಾ ವೈರಸ್ ಗೆ ಕಡಿವಾಣ ಹಾಕಲು ನೂತನ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಲು ಮುಂದಾಗಿದೆ. ಕೊರೊನಾ ಪೀಡಿತರು ಈಗ ದೇಶದಲ್ಲಿ ಕುಳಿತರೂ, ನಿಂತರೂ, ಒಂದು ಹೆಜ್ಜೆ ಹಿಂದೆ ಮುಂದೆ ಸರಿದಾಡಿದರೂ ಥಟ್ ಅಂತಾ ಮೆಸೇಜ್ ಪಾಸ್ ಆಗಿ ಬಿಡುತ್ತದೆ.

ಮನೆಗೆ ಬಂದ ಪೊಲೀಸ್ ಕಂಡು ವ್ಯಕ್ತಿ ನಿಬ್ಬೆರಗು

ಮನೆಗೆ ಬಂದ ಪೊಲೀಸ್ ಕಂಡು ವ್ಯಕ್ತಿ ನಿಬ್ಬೆರಗು

ಚೀನಾದ ಜಿಯಾಂಗ್ಸು ವ್ಯಾಪ್ತಿಯಲ್ಲಿರುವ ನಂಜಿಂಗ್ ನಗರದ ಮನೆಯೊಂದಕ್ಕೆ ದಿಢೀರ್ ಎಂದು ಚೀನಾದ ಪೊಲೀಸರು ವಿಸಿಟ್ ಕೊಟ್ಟರು. ಮನೆಯಲ್ಲಿದ್ದ ವ್ಯಕ್ತಿಯ ಕುರಿತಾಗಿ ಪ್ರಶ್ನಿಸಿದ ಪೊಲೀಸರು ನೀವು ಇತ್ತೀಚಿಗಷ್ಟೇ ವುಹಾನ್ ನಗರಕ್ಕೆ ಭೇಟಿ ನೀಡಿದ್ದೀರಿ ಅಲ್ಲವಾ, ನಿಮ್ಮನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕಿದೆ ಎಂದು ಹೇಳಿದರು. ಯಾರಿಗೂ ಮಾಹಿತಿ ನೀಡದೇ ಗೌಪ್ಯವಾಗಿ ವುಹಾನ್ ಗೆ ತೆರಳಿ ವಾಪಸ್ ಆಗಿದ್ದ ವ್ಯಕ್ತಿ ಪೊಲೀಸರು ಹೇಳಿದ ಮಾತಿನಿಂದ ನಿಬ್ಬೆರಗಾಗಿ ಹೋದನು. ಇದು ಚೀನಾದಲ್ಲಿ ಸದ್ಯ ಸರ್ಕಾರವು ಸೋಂಕಿನ ತಡೆಗೆ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿರುವುದು ಹೇಗೆ ಎಂದು ತಿಳಿಸಲು ಸ್ಥಳೀಯ ಪತ್ರಿಕೆಯೊಂದು ಬಿತ್ತರಿಸಿದ ವರದಿ ಒಂದು ಭಾಗವಷ್ಟೇ. ಇದೇ ರೀತಿ ಹಲವು ಕಡೆಗಳಲ್ಲಿ ಸರ್ಕಾರವು ರೋಗದ ತಡೆಗೆ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದೆ.

ಪ್ರಯಾಣಿಕರ ಸಂಪೂರ್ಣ ಮಾಹಿತಿ ಸಂಗ್ರಹಿಸಿದ ಸರ್ಕಾರ

ಪ್ರಯಾಣಿಕರ ಸಂಪೂರ್ಣ ಮಾಹಿತಿ ಸಂಗ್ರಹಿಸಿದ ಸರ್ಕಾರ

ಚೀನಾದ ಪ್ರಜೆಗಳು ಯಾವಾಗ ಯಾವ ಪ್ರದೇಶಕ್ಕೆ ತೆರಳುತ್ತಾರೆ. ಚೀನಾದ ನಗರಗಳಲ್ಲಿ ಯಾವ ದೇಶದ ಪ್ರಜೆಗಳು ಸಂಚರಿಸುತ್ತಿದ್ದಾರೆ. ಪ್ರಯಾಣಿಕರು ಎಲ್ಲಿಂದ ಎಲ್ಲಿಗೆ ಪ್ರಯಾಣ ಬೆಳೆೆಸಿದರು, ಮೂಲ ಊರು ಯಾವುದು, ಅವರ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯ ಆದಿಯಾಗಿ ಎಲ್ಲ ರೀತಿಯ ಸಂಪೂರ್ಣ ಮಾಹಿತಿಯನ್ನು ಫೀಡ್ ಮಾಡಿಕೊಳ್ಳಲಾಗುತ್ತಿದೆ. ನಿರ್ಬಂಧಿತ ನಗರಗಳಿಗೆ ತೆರಳುವ ಜನರ ಮೇಲೆ ಸರ್ಕಾರವೇ ಸ್ವತಃ ನಿಗಾ ವಹಿಸಿದೆ.

ಹಲೋ.. 104.. ಕರ್ನಾಟಕದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿತಾ ಹೆಂಗೆ?ಹಲೋ.. 104.. ಕರ್ನಾಟಕದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿತಾ ಹೆಂಗೆ?

ಕೊರೊನಾ ವೈರಸ್ ಪತ್ತೆಗೆ APP ಸಂಶೋಧಿಸಿದ ಚೀನಾ

ಕೊರೊನಾ ವೈರಸ್ ಪತ್ತೆಗೆ APP ಸಂಶೋಧಿಸಿದ ಚೀನಾ

ಚೀನಾದ ಕೆಲವು ತಾಂತ್ರಿಕ ಕಂಪನಿಗಳು ವಿಶೇಷ ಆಪ್ ಗಳನ್ನು ಆವಿಷ್ಕರಿಸಿವೆ. ಈ ಆಪ್ ಗಳ ಮೂಲಕ ಜನರು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊರೊನಾ ವೈರಸ್ ಸೋಂಕಿತರು ಇದ್ದಾರೆಯೇ ಎಂದು ಪರೀಕ್ಷಿಸಿಕೊಳ್ಳಬಹುದು. ಇನ್ನು, ಪ್ರಯಾಣದ ಟಿಕೆಟ್ ಬುಕ್ಕಿಂಗ್ ವೇಳೆಯಲ್ಲಿ ಸೋಂಕಿತರು ಸಹ ತಾವು ಪ್ರಯಾಣಿಸುತ್ತಿರುವ ರೈಲ್ವೆ, ಬಸ್, ಮತ್ತು ವಿಮಾನಗಳಲ್ಲಿ ಇದ್ದಾರೆಯೇ ಎಂದು ಪೂರ್ವದಲ್ಲೇ ಪರೀಕ್ಷಿಸಿಕೊಳ್ಳಲು ಈ ಆಪ್ ಗಳು ಸಹಾಯಕವಾಗಲಿವೆ ಎಂದು ವರದಿಯಾಗಿದೆ.

ಚೀನಾದಲ್ಲಿ ಸುರಕ್ಷತಾ ಮಾಸ್ಕ್ ಪರಿಶೀಲನೆೆಗೆ ರೋಬೋಟ್

ಚೀನಾದಲ್ಲಿ ಸುರಕ್ಷತಾ ಮಾಸ್ಕ್ ಪರಿಶೀಲನೆೆಗೆ ರೋಬೋಟ್

ಚೀನಾದ ಗೋಂಗ್ ಜುವಾ ಎಂಬ ಪ್ರದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಕಡ್ಡಾಯ ಮಾಸ್ಕ್ ಧರಿಸಿದ್ದಾರೆಯೇ ಇಲ್ಲವೇ, ಪ್ರಜೆಗಳು ಧರಿಸಿರುವ ಮಾಸ್ಕ್ ಗಳು ಸುರಕ್ಷಿತವಾಗಿದ್ದಾವೆಯೇ ಇಲ್ಲವೇ ಎಂದು ಪರಿಶೀಲನೆ ನಡೆಸಲು ರೋಬೋಟ್ ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆ ಮೂಲಕ ಜನರಿಂದ ಜನರಿಗೆ ಹರಡುತ್ತಿರುವ ರೋಗಕ್ಕೆ ಕಡಿವಾಣ ಹಾಕಲು ಕ್ರಮ ತೆಗೆದುಕೊಳ್ಳಲಾಗಿದೆ.

ಕೊರೊನಾ ಸುಳಿಯಲ್ಲಿ 70 ಭಾರತೀಯ ವಿದ್ಯಾರ್ಥಿಗಳು, ಇದು ಕಥೆಯಲ್ಲ ಸತ್ಯ!ಕೊರೊನಾ ಸುಳಿಯಲ್ಲಿ 70 ಭಾರತೀಯ ವಿದ್ಯಾರ್ಥಿಗಳು, ಇದು ಕಥೆಯಲ್ಲ ಸತ್ಯ!

ಸಾವಿರಾರು ಕುಟುಂಬಗಳ ಹೊಣೆ ಹೊತ್ತ ನೆರೆಹೊರೆ ಕಮಿಟಿ

ಸಾವಿರಾರು ಕುಟುಂಬಗಳ ಹೊಣೆ ಹೊತ್ತ ನೆರೆಹೊರೆ ಕಮಿಟಿ

ಬೀಜಿಂಗ್ ನ ಅಪಾರ್ಟ್ ಮೆಂಟ್ ಒಂದರಲ್ಲೇ ನೆಲೆಸಿರುವ 2,400 ಕುಟುಂಬಗಳ ರಕ್ಷಣೆಗೆ ನೆರೆಹೊರೆ ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ಈ ಸಮಿತಿಯು 2,400 ಕುಟುಂಬಗಳಲ್ಲಿ ಒಬ್ಬ ಸದಸ್ಯನ ಆರೋಗ್ಯದಲ್ಲಿ ಏರುಪೇರಾದರೂ ವೈದ್ಯರಿಗೆ ಮಾಹಿತಿ ನೀಡುತ್ತದೆ. ಒಬ್ಬರೇ ಒಬ್ಬರು ಬೇರೆ ನಗರಗಳಿಗೆ ತೆರಳಿದರೂ ಆ ಕುರಿತು ಮಾಹಿತಿಯನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಇದರ ಜೊತೆಗೆ ಇತ್ತೀಚಿಗೆ ಈ ಕುಟುಂಬಗಳ ಸದಸ್ಯರ ರೈಲ್ವೆ, ವಿಮಾನ ಮತ್ತು ಬಸ್ ಸಂಚಾರದ ಕುರಿತು ಮಾಹಿತಿಯನ್ನು ಕಲೆ ಹಾಕುತ್ತಿದೆ.

ದೇಶದೊಳಗಿನ ಇಲಾಖೆಗಳಲ್ಲಿ ಲಿಂಕ್ ಪಾಸ್

ದೇಶದೊಳಗಿನ ಇಲಾಖೆಗಳಲ್ಲಿ ಲಿಂಕ್ ಪಾಸ್

ಸಾರ್ವಜನಿಕ ಸುರಕ್ಷತೆ, ಸಂಚಾರಿ, ಏರ್ ಪೋರ್ಟ್, ಸಂಪರ್ಕ ಮತ್ತು ವೈದ್ಯಕೀಯ ಇಲಾಖೆಗಳ ನಡುವೆ ನಿರಂತರ ಸಂಪರ್ಕ ಕೊಂಡಿಯನ್ನು ಬೆಸೆಯಲಾಗಿದೆ. ಒಬ್ಬ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾದರೂ ಸಹ ಈ ಕುರಿತು ಎಲ್ಲ ಇಲಾಖೆಗಳ ವೆಬ್ ಸೈಟ್ ಗಳಿಗೂ ಸಂದೇಶ ರವಾನೆಯಾಗುತ್ತದೆ. ಇದರಿಂದ ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತಿದೆ.

ಕೊರೊನಾ ವೈರಸ್‌ ಹರಡಲು ಪ್ಯಾಂಗೋಲಿನ್ ಕಾರಣ?ಕೊರೊನಾ ವೈರಸ್‌ ಹರಡಲು ಪ್ಯಾಂಗೋಲಿನ್ ಕಾರಣ?

ಕೊರೊನಾ ಸೋಂಕಿತರ ಪತ್ತೆಗೆ ಕಟ್ಟುನಿಟ್ಟಿನ ಕ್ರಮ

ಕೊರೊನಾ ಸೋಂಕಿತರ ಪತ್ತೆಗೆ ಕಟ್ಟುನಿಟ್ಟಿನ ಕ್ರಮ

ಕೊರೊನಾ ವೈರಸ್ ಬಾಧಿತರಿಗೆ ಉಸಿರಾಟದಲ್ಲಿ ತೊಂದರೆ, ಶೀತ, ಜ್ವರದಂತಾ ಸಾಮಾನ್ಯ ಲಕ್ಷಣಗಳನ್ನು ಹೊಂದಿರುತ್ತಾರೆ. ಈ ಬಗ್ಗೆ ಪತ್ತೆ ಹಚ್ಚಲು ಸಾಕಷ್ಟು ಕಡೆಗಳಲ್ಲಿ ಭದ್ರತಾ ಸಿಬ್ಬಂದಿ ಮತ್ತು ವೈದ್ಯರು ಉಷ್ಣಮಾಪಕಗಳನ್ನು ಕೈಯಲ್ಲೇ ಹಿಡಿದು ನಿಂತಿದ್ದಾರೆ. 2ನೇ ಹಂತದಲ್ಲಿ ಸೋಂಕಿತ ಲಕ್ಷಣ ಕಂಡು ಬರುತ್ತಿದ್ದಂತೆ ತಕ್ಷಣ ಅಂಥವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

200 ಮಂದಿಯ ಪರೀಕ್ಷಿಸಲು 1 ನಿಮಿಷ ಸಾಕು!

200 ಮಂದಿಯ ಪರೀಕ್ಷಿಸಲು 1 ನಿಮಿಷ ಸಾಕು!

ರೈಲ್ವೆ ಮತ್ತು ವಿಮಾನ ನಿಲ್ದಾಣಗಳಲ್ಲಿ ಉಷ್ಣಾಂಶ ಮಾಪಕ ಹಿಡಿದು ಪ್ರತಿಯೊಬ್ಬರನ್ನು ಪರೀಕ್ಷಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಇದನ್ನು ತಡೆಯಲೆಂದು ವಿಶಿಷ್ಟ ತಾಂತ್ರಿಕ ಸ್ಕ್ರೀನಿಂಗ್ ಮಷಿನ್ ಗಳನ್ನು ರೈಲ್ವೆ ಮತ್ತು ವಿಮಾನ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಹಲವು ಸಾರ್ವಜನಿಕ ಪ್ರದೇಶಗಳಲ್ಲಿ ಇರಿಸಲಾಗಿದೆ. ಈ ಸ್ಕ್ರೀನಿಂಗ್ ಮಷಿನ್ ಗಳ ಎದುರು ಹಾದು ಹೋಗುವ 200 ವ್ಯಕ್ತಿಗಳನ್ನು ಒಂದೇ ನಿಮಿಷದಲ್ಲಿ ಸ್ಕ್ಯಾನ್ ಮಾಡುವ ಸಾಮರ್ಥ್ಯವನ್ನು ಈ ತಂತ್ರಜ್ಞಾನ ಹೊಂದಿದೆ ಎಂದು ಹೇಳಲಾಗುತ್ತಿದೆ.

ಜಪಾನಿನ ಹಡಗಿನಲ್ಲಿ ಸಿಲುಕಿರುವ 200 ಭಾರತೀಯರಿಗೆ ಕೊರೊನಾ ವೈರಸ್ ಭೀತಿಜಪಾನಿನ ಹಡಗಿನಲ್ಲಿ ಸಿಲುಕಿರುವ 200 ಭಾರತೀಯರಿಗೆ ಕೊರೊನಾ ವೈರಸ್ ಭೀತಿ

ಸೋಂಕು ಪತ್ತೆಯಾಗುತ್ತಿದ್ದಂತೆ ಅಲಾರಾಂ!

ಸೋಂಕು ಪತ್ತೆಯಾಗುತ್ತಿದ್ದಂತೆ ಅಲಾರಾಂ!

ಇನ್ನು, ಸ್ಕ್ರೀನಿಂಗ್ ಮಷಿನ್ ಗಳ ಮುಂದೆ ಹಾದು ಹೋಗುವ ಸಂದರ್ಭದಲ್ಲಿ ವ್ಯಕ್ತಿಯ ದೇಹದ ಉಷ್ಣಾಂಶವನ್ನು ಮಾಪನ ಮಾಡಲಾಗುತ್ತದೆ. ಈ ವೇಳೆ ಉಷ್ಣಾಂಶವು 37.3 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ ಆಟೋಮೆಟಿಕ್ ಆಗಿ ಅಲಾರಾಂ ಹೊಡೆದುಕೊಳ್ಳಲು ಶುರುವಾಗುತ್ತದೆ. ಈ ನಂತರದಲ್ಲಿ ಸೋಂಕಿತರು ಎಂಬ ಅನುಮಾನದ ಮೇಲೆ ಅಂಥವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

Megvii ಕಂಪನಿಯಿಂದ ಆವಿಷ್ಕಾರಕ್ಕೆ ಪಣ

Megvii ಕಂಪನಿಯಿಂದ ಆವಿಷ್ಕಾರಕ್ಕೆ ಪಣ

ಚೀನಾ ಮೂಲದ ಮೇಗ್ವಿ ಎಂಬ ತಾಂತ್ರಿಕ ಕಂಪನಿಯ 100ಕ್ಕೂ ಹೆಚ್ಚಿ ವಿಜ್ಞಾನಿಗಳು ಕೊರೊನಾ ವೈರಸ್ ನಿವಾರಣೆಗೆ ನೆರವಾಗುವಂತಾ ತಂತ್ರಜ್ಞಾನ ಆವಿಷ್ಕಾರಕ್ಕಾಗಿ ಶ್ರಮಿಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಹರಡುತ್ತಿರುವ ರೋಗವನ್ನು ಕುಳಿತಲ್ಲಿ ಕುಳಿತು ನಿವಾರಿಸುವುದು, ಡ್ರೋನ್ ಗಳ ಮೂಲಕ ಔಷಧಗಳನ್ನು ರವಾನಿಸುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಆವಿಷ್ಕರಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿವೆ.

English summary
Robots For Checking Mask, Drones For Medical Supply, Linking Between Departments For Internal Communication. China Utilized Technology Effectively For Fight Against Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X