ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶತ್ರುವಿನ ಶತ್ರು ಮಿತ್ರ: ಅಮೆರಿಕಾದ ವಿಶ್ವಾಸ ಕಳೆದುಕೊಂಡಿತಾ ಚೀನಾ?

|
Google Oneindia Kannada News

ನವದೆಹಲಿ, ಮೇ.07: ಚೀನಾ ಮತ್ತು ಅಮೆರಿಕಾ ಅಂದ್ರೆ ಸದ್ಯದ ಪರಿಸ್ಥಿತಿಯಲ್ಲಿ ಹಾವು-ಮುಂಗುಸಿ. ನೊವೆಲ್ ಕೊರೊನಾ ವೈರಸ್ ಮರಣ ಮೃದಂಗ ಬಾರಿಸಲು ಡ್ರ್ಯಾಗನ್ ರಾಷ್ಟ್ರವೇ ಕಾರಣ ಎಂದು ಗುಡುಗುತ್ತಿರುವ ವಿಶ್ವದ ದೊಡ್ಡಣ್ಣ ಚೀನಾ ಜೊತೆಗಿನ ಎಲ್ಲ ವಾಣಿಜ್ಯ ಸಂಬಂಧಗಳನ್ನು ಕಡಿದುಕೊಳ್ಳಲು ತೀರ್ಮಾನಿಸಿದಂತಿದೆ.

Recommended Video

ಗ್ರೀನ್ ಜೋನ್‌ನಲ್ಲಿದ್ದಂತ ದಾವಣಗೆರೆಯಲ್ಲಿ ಈಗ ಪ್ರತಿ ನಿತ್ಯ ಹೊಸ ಕೊರೊನ ಪ್ರಕರಣ | Davangere | Oneindia Kannada

ಚೀನಾದ ಬೀಜಿಂಗ್ ನಗರದಲ್ಲಿರುವ ಅಮೆರಿಕಾದ 1,000ಕ್ಕೂ ಅಧಿಕ ಕಂಪನಿಗಳನ್ನು ಭಾರತ ಮತ್ತು ವಿಯೆಟ್ನಾಂ ರಾಷ್ಟ್ರಗಳಿಗೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಈಗಾಗಲೇ ಮಾತುಕತೆ ನಡೆಸಲಾಗುತ್ತಿದೆ. ಸಂಕಷ್ಟದ ಸಂದರ್ಭದಲ್ಲಿ ಅಮೆರಿಕಾಗೆ ವೈದ್ಯಕೀಯ ನೆರವು ನೀಡಿದ ಭಾರತದ ಮೇಲೆ ವಿಶ್ವದ ದೊಡ್ಡಣ್ಣನಿಗೆ ಅತಿಯಾದ ವಿಶ್ವಾಸ ಮೂಡಿದಂತಿದೆ.

ಶತ್ರುವಿನ ಶತ್ರು ಮಿತ್ರ: ಭಾರತದ ಜೊತೆ ಕೈ ಜೋಡಿಸಲು ಅಮೆರಿಕಾ ಮಂತ್ರ! ಶತ್ರುವಿನ ಶತ್ರು ಮಿತ್ರ: ಭಾರತದ ಜೊತೆ ಕೈ ಜೋಡಿಸಲು ಅಮೆರಿಕಾ ಮಂತ್ರ!

ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ ಹೈಡ್ರೋಕ್ಸಿ ಕ್ಲೋರೊಕ್ಯೂನ್ ಉಪಯುಕ್ತ ಎಂದು ಆರಂಭಿಕ ಹಂತದಲ್ಲಿ ತಿಳಿದು ಬಂದಿತ್ತು. ಕಳೆದ ಏಪ್ರಿಲ್ ತಿಂಗಳಿನಲ್ಲೇ ಹೈಡ್ರೋಕ್ಸಿ ಕ್ಲೋರೊಕ್ಯೂನ್ ರಫ್ತಿನ ಮೇಲೆ ಭಾರತವು ನಿರ್ಬಂಧ ವಿಧಿಸಿತ್ತು. ಹೀಗಿದ್ದರೂ ಡೊನಾಲ್ಡ್ ಟ್ರಂಪ್ ಮನವಿಗೆ ಸ್ಪಂದಿಸಿದ ಭಾರತ 130 ಬಿಲಿಯನ್ ರೂಪಾಯಿ ಮೌಲ್ಯದ ಹೈಡ್ರೋಕ್ಸಿ ಕ್ಲೋರೊಕ್ಯೂನ್ ನ್ನು ಅಮೆರಿಕಾಗೆ ರಫ್ತು ಮಾಡಿತು.

ಚೀನಾ ವಿರುದ್ಧ ವಾಣಿಜ್ಯ ಯುದ್ಧ ಸಾರಿದ ಅಮೆರಿಕಾ

ಚೀನಾ ವಿರುದ್ಧ ವಾಣಿಜ್ಯ ಯುದ್ಧ ಸಾರಿದ ಅಮೆರಿಕಾ

ಚೀನಾ ವಿರುದ್ಧ ಕೆಂಡಾಮಂಡಲ ಆಗಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಣಿಜ್ಯ ಯುದ್ಧ ಸಾರುವ ನಿಟ್ಟಿನಲ್ಲಿ ಪ್ಲಾನ್ ಮಾಡಿದ್ದಾರೆ. ಚೀನಾದ ಮೇಲಿನ ವಿಶ್ವಾಸ ಕಳೆದುಕೊಂಡ ಅಮೆರಿಕಾ ಸಂದಿಗ್ಧ ಸ್ಥಿತಿಯಲ್ಲೂ ಕೂಡಾ ಚೀನಾದಿಂದ ವೈದ್ಯಕೀಯ ಸರಕುಗಳನ್ನು ಮತ್ತು ಔಷಧಿಗಳನ್ನು ಆಮದು ಮಾಡಿಕೊಳ್ಳಲಿಲ್ಲ. ಬದಲಿಗೆ ಭಾರತದಿಂದ ಅಗತ್ಯ ವೈದ್ಯಕೀಯ ಸರಕು-ಸೇವೆ ಮತ್ತು ಹೈಡ್ರೋಕ್ಸಿ ಕ್ಲೋರೊಕ್ಯೂನ್ ಮಾತ್ರೆಗಳನ್ನು ಖರೀದಿಸಿತು.

ಚೀನಾಗೆ ಸೆಡ್ಡು ಹೊಡೆಯಲು ಭಾರತದ ಜೊತೆ ಬೆಸುಗೆ!

ಚೀನಾಗೆ ಸೆಡ್ಡು ಹೊಡೆಯಲು ಭಾರತದ ಜೊತೆ ಬೆಸುಗೆ!

ನೊವೆಲ್ ಕೊರೊನಾ ವೈರಸ್ ಸೋಂಕು ಹರಡಲು ಕಾರಣವಾದ ಚೀನಾ ವಿರುದ್ಧ ವಾಣಿಜ್ಯ ಯುದ್ಧ ಸಾರುವುದಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಣಿಯಾಗಿದ್ದಾರೆ. ಈ ಹಿನ್ನೆಲೆ ಚೀನಾದಲ್ಲಿ ಇರುವ ಕಂಪನಿಗಳಿಗೆ ಬೇರೆ ದೇಶದಲ್ಲಿ ನೆಲೆ ಕಲ್ಪಿಸಲು ಹುಡುಕಾಟ ನಡೆಸಿದ್ದು, ವಿಯೆಟ್ನಾಂ ಮತ್ತು ಭಾರತಕ್ಕೆ ಕಂಪನಿಗಳನ್ನು ಸ್ಥಳಾಂತರಿಸಲು ಚಿಂತನೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಹಲವು ರಾಷ್ಟ್ರಗಳೊಂದಿಗೆ ವಾಣಿಜ್ಯ ಸಂಬಂಧ ವೃದ್ಧಿ

ಹಲವು ರಾಷ್ಟ್ರಗಳೊಂದಿಗೆ ವಾಣಿಜ್ಯ ಸಂಬಂಧ ವೃದ್ಧಿ

ಕಳೆದ ತಿಂಗಳು ಅಮೆರಿಕಾದ ಸ್ಟೇಟ್ ಸೆಕ್ರಟರಿ ಮಿಚೆಲ್ ಪೊಂಪಿಯೋ ಕಂಪನಿಗಳ ಪುನರ್ ರಚನೆಗೆ ಸಂಬಂಧಿಸಿದಂತೆ ಭಾರತ, ಆಸ್ಟ್ರೇಲಿಯಾ, ಜಪಾನ್, ನ್ಯೂಜಿಲೆಂಡ್, ವಿಯೆಟ್ನಾಂ ಹಾಗೂ ದಕ್ಷಿಣ ಕೊರಿಯಾ ಜೊತೆಗೆ ಚರ್ಚಿಸಲಾಗಿದೆ. ಈ ಮೊದಲು ಸರಬರಾಜು ಪ್ರಕ್ರಿಯೆಯಲ್ಲಿ ನಡೆದ ಲೋಪದೋಷಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ. ಚೀನಾದೊಂದಿಗೆ ಜಾಗತಿಕ ಸರಬರಾಜು ಸಂಬಂಧವನ್ನು ಕಡಿದುಕೊಳ್ಳುವ ಬಗ್ಗೆ ಪೊಂಪಿಯೋ ತಿಳಿಸಿದ್ದಾರೆ ಎಂದು ರಾಯಟರ್ಸ್ ಸುದ್ದಿ ಸಂಸ್ಥೆಯು ವರದಿ ಮಾಡಿತ್ತು.

ವಿಯೆಟ್ನಾಂ ಮತ್ತು ಭಾರತದ ಮೇಲೆ ಅಮೆರಿಕಾ ವಿಶ್ವಾಸ

ವಿಯೆಟ್ನಾಂ ಮತ್ತು ಭಾರತದ ಮೇಲೆ ಅಮೆರಿಕಾ ವಿಶ್ವಾಸ

ಜಾಗತಿಕ ಸರಕು ಸರಂಜಾಮು ಪೂರೈಕೆ ನಿಟ್ಟಿನಲ್ಲಿ ಚೀನಾದ ಸ್ಥಾನವನ್ನು ಭಾರತ ಮತ್ತು ವಿಯೆಟ್ನಾಂ ತುಂಬುವ ಸಾಮರ್ಥ್ಯವನ್ನು ಹೊಂದಿವೆ ಎಂದು ವಾಶಿಂಗ್ಟನ್ ಮೂಲದ ರಾಂಡ್ ಕಾರ್ಪೋರೇಷನ್ ನ ಸಂಶೋಧಕ ಡೆರೆಕ್ ಗ್ರಾಸ್ ಮೆನ್ ತಿಳಿಸಿದ್ದಾರೆ. ದಶಕಗಳ ಕಾಲ ಅಮೆರಿಕಾದ ಗುಪ್ತಚರ ಇಲಾಖೆಯ ಅಧಿಕಾರಿಯಾಗಿದ್ದ ಗ್ರಾಸ್ ಮೆನ್, ಚೀನಾದಲ್ಲಿರುವ ಅಮೆರಿಕಾದ ಉತ್ಪಾದನಾ ಘಟಕಗಳನ್ನು ಸ್ಥಳಾಂತರಿಸುವುದು ಅಷ್ಟೊಂದು ಸುಲಭದ ಕಾರ್ಯವಲ್ಲ. ಆದರೆ ಅದಕ್ಕೆ ಅಗತ್ಯವಿರುವ ಎಲ್ಲ ರೀತಿಯ ಸವಲತ್ತುಗಳನ್ನು ಭಾರತ ಮತ್ತು ವಿಯೆಟ್ನಾಂ ರಾಷ್ಟ್ರಗಳು ಕಲ್ಪಿಸಿ ಕೊಡುವ ಸಾಧ್ಯತೆಯಿರುವ ಹಿನ್ನೆಲೆ ಎರಡು ರಾಷ್ಟ್ರಗಳ ಮೇಲೆ ಹೆಚ್ಚಿನ ವಿಶ್ವಾಸ ಇರಿಸಲಾಗಿದೆ ಎಂದಿದ್ದಾರೆ.

English summary
USA Trade War Against China: Dragon Nation Did Not Retain The American Faith.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X