• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Breaking; ಭಾರತದ ವಿದ್ಯಾರ್ಥಿಗಳಿಗೆ ವೀಸಾ ನೀಡಲು ಚೀನಾ ಒಪ್ಪಿಗೆ

|
Google Oneindia Kannada News

ಬೀಜಿಂಗ್, ಏಪ್ರಿಲ್ 29 ; ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ನೀಡಲು ಚೀನಾ ಒಪ್ಪಿಗೆ ನೀಡಿದೆ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಎರಡು ವರ್ಷಗಳಿಂದ ಚೀನಾ ವೀಸಾ ನೀಡುತ್ತಿರಲಿಲ್ಲ.

ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಜೊತೆ ಸಭೆ ನಡೆಸಿದ್ದರು. ಶುಕ್ರವಾರ ಚೀನಾದ ವಿದೇಶಾಂಗ ಇಲಾಖೆ ವೀಸಾ ನೀಡುವ ತೀರ್ಮಾನ ಪ್ರಕಟಿಸಿದೆ.

ಸಾಲದ ಸುಳಿಯಲ್ಲಿ ಲಂಕಾ, ಪಾಕ್; ಸಹಾಯಕ್ಕೆ ಚೀನಾ ಯಾಕೆ ಹಿಂದೇಟು? ಸಾಲದ ಸುಳಿಯಲ್ಲಿ ಲಂಕಾ, ಪಾಕ್; ಸಹಾಯಕ್ಕೆ ಚೀನಾ ಯಾಕೆ ಹಿಂದೇಟು?

ಭಾರತೀಯ ವಿದ್ಯಾರ್ಥಿಗಳು ಚೀನಾದಲ್ಲಿ ವ್ಯಾಸಂಗ ಮಾಡಲು ಚೀನಾ ವೀಸಾ ನೀಡಲಿದೆ. ಇದರಿಂದಾಗಿ ಅಧ್ಯಯನದ ಉದ್ದೇಶಕ್ಕೆ ಚೀನಾಗೆ ಭೇಟಿ ನೀಡುವ ವಿದ್ಯಾರ್ಥಿಗಳಿಗೆ ಸಹಾಯಕವಾಗಲಿದೆ.

ಚೀನಾ ಹೆಸರು ಹೇಳಿ ಭಾರತಕ್ಕೆ ಎಚ್ಚರಿಕೆ ನೀಡಿದ ಯುಎಸ್ಎ ಚೀನಾ ಹೆಸರು ಹೇಳಿ ಭಾರತಕ್ಕೆ ಎಚ್ಚರಿಕೆ ನೀಡಿದ ಯುಎಸ್ಎ

ಚೀನಾಗೆ ಮರಳಲು ಬಯಸುವ ವಿದ್ಯಾರ್ಥಿಗಳು ಮೇ 8ರೊಳಗೆ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು ಎಂದು ವಿದೇಶಾಂಗ ಇಲಾಖೆ ಹೇಳಿದೆ.

 ಉಕ್ರೇನ್‌ನಲ್ಲಿ ತಕ್ಷಣದ ಕದನ ವಿರಾಮದ ಅಗತ್ಯವನ್ನು ಒಪ್ಪಿದ ಭಾರತ, ಚೀನಾ ಉಕ್ರೇನ್‌ನಲ್ಲಿ ತಕ್ಷಣದ ಕದನ ವಿರಾಮದ ಅಗತ್ಯವನ್ನು ಒಪ್ಪಿದ ಭಾರತ, ಚೀನಾ

ಪ್ರವಾಸಿ ವೀಸಾ ಇಲ್ಲ; ಚೀನಾಕ್ಕೆ ತೆರಳಲು ವಿದ್ಯಾರ್ಥಿಗಳಿಗೆ ವೀಸಾ ಸಿಕ್ಕಿದರೂ ಪ್ರವಾಸಿ ವೀಸಾ ಸದ್ಯಕ್ಕೆ ಸಿಗುವುದಿಲ್ಲ. ಭಾರತದ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಮಾತನಾಡಿ, "ಚೀನಾದ ವಿವಿಧ ನಗರದಲ್ಲಿನ ಕೋವಿಡ್ ಪರಿಸ್ಥಿತಿ ಬಗ್ಗೆ ಅರಿವು ಇದೆ. ಪ್ರವಾಸಿ ವೀಸಾವನ್ನು ಮತ್ತೆ ನೀಡಲು ಇದು ಸೂಕ್ತವಾದ ಸಮಯವಲ್ಲ" ಎಂದು ಹೇಳಿದ್ದರು.

ಕೆಲವು ದಿನಗಳ ಹಿಂದೆ ಭಾರತ ಚೀನಾ ರಾಷ್ಟ್ರೀಯರಿಗೆ ನೀಡಿರುವ ಪ್ರವಾಸಿ ವೀಸಾಗಳನ್ನು ಅಮಾನತು ಮಾಡಿತ್ತು. ಕೋವಿಡ್ ಪರಿಸ್ಥಿತಿ ಬಳಿಕ ಚೀನಾ ಪ್ರವಾಸಿ ವೀಸಾ ನೀಡುವುದನ್ನು ಸ್ಥಗಿತಗೊಳಿಸಿದೆ.

English summary
Chinese foreign ministry decided to issue student visa after over 2 years. China to permit some stranded Indian students to return for studies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X