ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಹೊಸ ಕಾಯಿಲೆ: ಬ್ಯಾಕ್ಟೀರಿಯಾದಿಂದ ಪುರುಷ ಬಂಜೆತನ

|
Google Oneindia Kannada News

ಬೀಜಿಂಗ್, ಸೆಪ್ಟೆಂಬರ್ 18: ಕೊರೊನಾ ವೈರಸ್‌ಅನ್ನು ಜಗತ್ತಿಗೆ ಹರಡಿಸಿದ ಚೀನಾ, ತನ್ನ ದೇಶದಲ್ಲಿ ಸೋಂಕನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಅದರ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಕೊರೊನಾ ವೈರಸ್ ಸೋಂಕು ಹರಡಿದ್ದು ಚೀನಾ ಹೇಳಿಕೊಂಡಿರುವಂತೆ ಪ್ರಾಣಿಗಳಿಂದ ಅಲ್ಲ, ಅದು ಅಲ್ಲಿನ ಲ್ಯಾಬೋರೇಟರಿಗಳಲ್ಲಿ ಹುಟ್ಟಿಕೊಂಡಿದ್ದು ಎಂಬ ಆಘಾತಕಾರಿ ಸಂಗತಿಯನ್ನು ಸಂಶೋಧಕಿ ಡಾ. ಲಿ. ಮೆಂಗ್ ಯಾನ್ ಬಹಿರಂಗಪಡಿಸಿದ್ದರು.

ಕೊರೊನಾ ವೈರಸ್ ಆಘಾತದ ಜತೆಗೇ ಚೀನಾದಲ್ಲಿ ಹಂಟಾ ವೈರಸ್ ವರಾತ ಸೃಷ್ಟಿಯಾಗಿತ್ತು. ಆದರೆ ಅದು ಹೆಚ್ಚು ವ್ಯಾಪಿಸಲಿಲ್ಲ. ಮನುಕುಲಕ್ಕೆ ಮಾರಕವಾಗುತ್ತಿರುವ ಈ ವೈರಸ್ ಸಂಕಷ್ಟಗಳ ನಡುವೆ ಚೀನಾದಲ್ಲಿ ಬ್ಯಾಕ್ಟೀರಿಯಾ ಹಾವಳಿ ಶುರುವಾಗಿದೆ. ಕೊರೊನಾ ವೈರಸ್‌ನಂತೆ ಈ ಬ್ಯಾಕ್ಟೀರಿಯಾ ಕೂಡ ವ್ಯಾಪಿಸಿದರೆ ಇಡೀ ಜಗತ್ತು ಅತ್ಯಂತ ದೊಡ್ಡ ಅಪಾಯಕ್ಕೆ ಸಿಲುಕುವುದರಲ್ಲಿ ಅನುಮಾನವಿಲ್ಲ.

ವುಹಾನ್ ವೈರಸ್ ಬಗ್ಗೆ ತಿಳಿಸಿದ ಲಿ ಮೆಂಗ್ ಟ್ವಿಟ್ಟರ್ ಖಾತೆ ಬಂದ್ ವುಹಾನ್ ವೈರಸ್ ಬಗ್ಗೆ ತಿಳಿಸಿದ ಲಿ ಮೆಂಗ್ ಟ್ವಿಟ್ಟರ್ ಖಾತೆ ಬಂದ್

ಚೀನಾದ ವಾಯವ್ಯ ಪ್ರದೇಶದ ಸಾವಿರಾರು ಮಂದಿಯಲ್ಲಿ ಬ್ಯಾಕ್ಟೀರಿಯಾಗಳಿಂದ ಹರಡುವ ಬ್ರುಸೆಲ್ಲೊಸಿಸ್ ಕಾಯಿಲೆ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಜೈವಿಕ ಔಷಧೀಯ ಕಂಪೆನಿಯೊಂದರಲ್ಲಿ 2019ರಲ್ಲಿ ಸಂಭವಿಸಿದ ಸೋರಿಕೆಯ ಪರಿಣಾಮದಿಂದ ಈ ಸಮಸ್ಯೆ ಉಂಟಾಗಿದೆ ಎಂದು ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ. ಮುಂದೆ ಓದಿ.

ಪುರುಷ ಬಂಜೆತನದ ಅಪಾಯ

ಪುರುಷ ಬಂಜೆತನದ ಅಪಾಯ

ಗನ್ಸು ಪ್ರಾಂತ್ಯದ ರಾಜಧಾನಿ ಲಾಂಝೋದ ಆರೋಗ್ಯ ಆಯೋಗವು 3,245 ಮಂದಿ ಈ ಬ್ಯಾಕ್ಟೀರಿಯಾ ಕಾಯಿಲೆಗೆ ತುತ್ತಾಗಿದ್ದಾರೆ ಎಂದು ಮಾಹಿತಿ ನೀಡಿದೆ. ಬ್ರುಸೆಲ್ಲಾ ಎಂಬ ಬ್ಯಾಕ್ಟೀರಿಯಾಗಳನ್ನು ಹೊಂದಿರುವ ಜಾನುವಾರುಗಳಿಂದಾಗಿ ಈ ಕಾಯಿಲೆ ಹರಡಿದೆ. ಕೆಲವು ವರದಿಗಳ ಪ್ರಕಾರ ಬ್ಯಾಕ್ಟೀರಿಯಾದಿಂದ ಹರಡುವ ಕಾಯಿಲೆಯು ಪುರುಷರ ವೃಷಣಗಳಲ್ಲಿ ಊತದ ಅಡ್ಡಪರಿಣಾಮ ಉಂಟುಮಾಡುತ್ತದೆ. ಇದರಿಂದ ಅನೇಕ ಮಂದಿ ಪುರುಷರು ಬಂಜೆತನವನ್ನು ಅನುಭವಿಸುವಂತಾಗಬಹುದು.

ಜ್ವರ, ತಲೆನೋವು ಲಕ್ಷಣ

ಜ್ವರ, ತಲೆನೋವು ಲಕ್ಷಣ

ಮಾಲ್ಟಾ ಫೀವರ್ ಅಥವಾ ಮೆಡಿಟರೇನಿಯನ್ ಜ್ವರ ಎಂದು ಕರೆಯಲಾಗುವ ಈ ಕಾಯಿಲೆಯಲ್ಲಿ ತಲೆನೋವು, ಸ್ನಾಯು ನೋವು, ಜ್ವರ ಹಾಗೂ ಆಯಾಸ ಪ್ರಮುಖ ಲಕ್ಷಣಗಳಾಗಿವೆ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ತಿಳಿಸಿದೆ.

ಸತ್ಯ ಬಹಿರಂಗ: ವುಹಾನ್ ಲ್ಯಾಬಿನಿಂದಲೇ ಕೊವಿಡ್19 ಉತ್ಪತ್ತಿಸತ್ಯ ಬಹಿರಂಗ: ವುಹಾನ್ ಲ್ಯಾಬಿನಿಂದಲೇ ಕೊವಿಡ್19 ಉತ್ಪತ್ತಿ

ವಾಸಿಯಾಗದೆಯೂ ಇರಬಹುದು

ವಾಸಿಯಾಗದೆಯೂ ಇರಬಹುದು

ಇವುಗಳಲ್ಲಿ ಕೆಲವು ಲಕ್ಷಣಗಳು ಕಡಿಮೆಯಾಗಬಹುದು. ಇನ್ನು ಕೆಲವು ಲಕ್ಷಣಗಳು ದೀರ್ಘಕಾಲ ಇರಬಹುದು ಅಥವಾ ಗುಣವಾಗದೆಯೂ ಇರಬಹುದು. ಕೆಲವು ಅಂಗಾಂಗಗಳಲ್ಲಿ ಊತ ಅಥವಾ ಸಂಧಿವಾತದಂತಹ ಸಮಸ್ಯೆಗಳು ಕೊನೆಯವರೆಗೂ ಉಳಿದುಕೊಳ್ಳಬಹುದು.

3,245 ಮಂದಿಯಲ್ಲಿ ರೋಗ

3,245 ಮಂದಿಯಲ್ಲಿ ರೋಗ

ನಗರದ 2.9 ಮಿಲಿಯನ್ ಜನಸಂಖ್ಯೆಯಲ್ಲಿ ಸುಮಾರು 21,847 ಮಂದಿಯನ್ನು ಇದರ ತಪಾಸಣೆಗೆ ಒಳಪಡಿಸಲಾಗಿದೆ. ಅವರಲ್ಲಿ 3,245 ಮಂದಿಯಲ್ಲಿ ರೋಗ ಕಾಣಿಸಿಕೊಂಡಿದ್ದು, ಇನ್ನೂ 1,400 ಮಂದಿಯಲ್ಲಿ ಕಾಯಿಲೆ ಇದೆ ಎಂದು ಶಂಕಿಸಲಾಗಿದೆ. ಇದುವರೆಗೂ ಯಾವುದೇ ಸಾವು ಸಂಭವಿಸಿರುವುದು ವರದಿಯಾಗಿಲ್ಲ.

ಅಧಿಕ ತೂಕವಿರುವವರಿಗೆ ಕೊರೊನಾ ಸೋಂಕಿನಿಂದ ಹೆಚ್ಚು ಅಪಾಯ?ಅಧಿಕ ತೂಕವಿರುವವರಿಗೆ ಕೊರೊನಾ ಸೋಂಕಿನಿಂದ ಹೆಚ್ಚು ಅಪಾಯ?

ಗಾಳಿಯಲ್ಲಿ ಸೇರಿದ ಬ್ಯಾಕ್ಟೀರಿಯಾ

ಗಾಳಿಯಲ್ಲಿ ಸೇರಿದ ಬ್ಯಾಕ್ಟೀರಿಯಾ

ಕಳೆದ ವರ್ಷ ಜುಲೈ-ಆಗಸ್ಟ್ ಅವಧಿಯಲ್ಲಿ ಝೊಂಗ್ಮು ಲಾಂಝೌ ಜೈವಿಕ ಔಷಧೀಯ ಕಾರ್ಖಾನೆಯಲ್ಲಿ ಸೋರಿಕೆ ಸಂಭವಿಸಿತ್ತು. ಇದರಿಂದಾಗಿ ಈ ಕಾಯಿಲೆ ಹರಡಿದೆ. ಕಾರ್ಖಾನೆಯು ಜಾನುವಾರುಗಳಲ್ಲಿ ಕಂಡುಬರುವ ಬ್ರುಸೆಲ್ಲಾ ಲಸಿಕೆಯನ್ನು ಉತ್ಪಾದಿಸುವ ಸಂದರ್ಭದಲ್ಲಿ ಅವಧಿ ಮೀರಿದ ಕೀಟನಾಶಕ ಹಾಗೂ ಸ್ಯಾನಿಟೈಸರ್‌ಗಳನ್ನು ಬಳಸಿತ್ತು. ಇದರಿಂದ ಕಲುಷಿತ ವ್ಯರ್ಥ ಅನಿಲವು ವಾಯುದ್ರವ ಸೃಷ್ಟಿಸಿತ್ತು. ಇದರಲ್ಲಿ ಬ್ಯಾಕ್ಟೀರಿಯಾಗಳಿದ್ದು, ಗಾಳಿಯಲ್ಲಿ ಸೋರಿಕೆಯಾಗಿತ್ತು.

ಮನುಷ್ಯರಿಗೆ ಬರುವುದು ವಿರಳ

ಮನುಷ್ಯರಿಗೆ ಬರುವುದು ವಿರಳ

ಸಾಮಾನ್ಯವಾಗಿ ಪ್ರಾಣಿಗಳಲ್ಲಿ ಈ ಬ್ಯಾಕ್ಟೀರಿಯಾ ಕಂಡುಬರುತ್ತದೆ. ಇವು ಮನುಷ್ಯರಿಗೆ ಹರಡುವುದು ತೀರಾ ವಿರಳ. ಹಾಗೆ ಹರಡಿದಾಗ ಜ್ವರದಂತಹ ಸಮಸ್ಯೆ ಕಾಣಿಸುತ್ತದೆ. ಕಲುಷಿತಗೊಂಡ ಆಹಾರ ಸೇವನೆ ಅಥವಾ ಬ್ಯಾಕ್ಟೀರಿಯಾವನ್ನು ಉಸಿರಾಡುವುದರಿಂದ ಇದು ಹರಡುವ ಸಾಧ್ಯತೆ ಇದೆ.

Recommended Video

ಕೊರೋನ ಬಂದಿದ್ದು ಒಳ್ಳೇದೇ ಆಯ್ತು ,ಅಸಹ್ಯಕರ ವ್ಯಕ್ತಿಗಳ Hand Shake stop!! | Oneindia Kannada
ನವೆಂಬರ್‌ನಿಂದ ವರದಿ

ನವೆಂಬರ್‌ನಿಂದ ವರದಿ

ಕಳೆದ ವರ್ಷದ ನವೆಂಬರ್‌ನಲ್ಲಿ ಸೋಂಕಿನ ಬಗ್ಗೆ ಸಂಸ್ಥೆಯ ಜನರು ಮೊದಲು ವರದಿ ಮಾಡಿದ್ದರು. ಡಿಸೆಂಬರ್ ಅಂತ್ಯದ ವೇಳೆಗೆ ಕನಿಷ್ಠ 181 ಮಂದಿಯಲ್ಲಿ ಬ್ರುಸೆಲ್ಲೊಸಿಸ್ ಪಾಸಿಟಿವ್ ಕಂಡುಬಂದಿತ್ತು. ಇದರಲ್ಲಿ ಲಾಂಝೌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸಹ ಸೇರಿದ್ದಾರೆ.

English summary
Thousands of people in Lanzhou, China have tested positive for Brucellosis, a bacterial disease which may lead to men infertile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X