ಮೋದಿ ಭೇಟಿ ಬೆನ್ನಿಗೆ ಚೀನಾ ಜಲಾಂತರ್ಗಾಮಿಗೆ ಶ್ರೀಲಂಕಾದಲ್ಲಿಲ್ಲ ಜಾಗ!

Subscribe to Oneindia Kannada

ಕೊಲಂಬೋ, ಮೇ 12: ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ ಬೆನ್ನಿಗೆ ಚೀನಾದ ಬೇಡಿಕೆಯೊಂದನ್ನು ಶ್ರೀಲಂಕಾ ತಿರಸ್ಕರಿಸಿದೆ. ಶ್ರೀಲಂಕಾದಲ್ಲಿ ತನ್ನ ಸಬ್ ಮೆರೀನ್ ನಿಲುಗಡೆಗೆ ಚೀನಾ ಅವಕಾಶ ಕೇಳಿತ್ತು. ಆದರೆ ಇದಕ್ಕೆ ಶ್ರೀಲಂಕಾ ಒಪ್ಪಿಲ್ಲ.

ಈ ಹಿಂದೆ 2014ರಲ್ಲಿ ಚೀನಾದ ಸಬ್ ಮೆರೀನ್ ಲಂಗರು ಹಾಕಲು ಇದೇ ಶ್ರೀಲಂಕಾ ಅವಕಾಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಭಾರತವೂ ಚೀನಾದ ಸಬ್ ಮೆರೀನ್ ನಿಲುಗಡೆಗೆ ಶ್ರೀಲಂಕಾ ಅವಕಾಶ ನೀಡಬಾರದು ಎಂದು ಒತ್ತಾಯಿಸಿತ್ತು. ಸದ್ಯ ಭಾರತ ಶ್ರೀಲಂಕಾ ಸಂಬಂಧ ಸುಧಾರಣೆಯಾಗುತ್ತಿದ್ದು ಭಾರತದ ಬೇಡಿಕೆಗೆ ಮನ್ನಣೆ ನೀಡಿರುವ ಶ್ರೀಲಂಕಾ ಚೀನಾದ ಬೇಡಿಕೆಯನ್ನು ಸರಾಸಗಟಾಗಿ ತಳ್ಳಿ ಹಾಕಿದೆ.

China snubbed: Sri Lanka refuses permission to dock submarine

ಇನ್ನು ಶ್ರೀಲಂಕಾದಲ್ಲಿರುವ ಚೀನಾ ರಾಯಭಾರಿಯೇ ಸಬ್ ಮೆರೀನ್ ನಿಲುಗಡೆಗೆ ಅವಕಾಶ ಕೇಳಿದ್ದೆವು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.

ಕಳೆದ ಹಲವು ವರ್ಷಗಳಲ್ಲಿ ಚೀನಾ ಶ್ರೀಲಂಕಾದಲ್ಲಿ ಭಾರೀ ಹೂಡಿಕೆ ಮಾಡಿದೆ. ಇಲ್ಲಿನ ರಸ್ತೆ, ರೈಲ್ವೇ, ವಿಮಾನ ನಿಲ್ದಾಣ, ಬಂದರು ನಿರ್ಮಾಣಗಳಿಗೆಲ್ಲಾ ಹಣ ಹೂಡಿದೆ. ಹತ್ತಿರದಲ್ಲೇ ಇರುವ ಭಾರತಕ್ಕಿಂತ ಜಾಸ್ತಿ ಚೀನಾವೇ ಇಲ್ಲಿ ಹಣ ಹೂಡಿದೆ.

ಇದೇ ರೀತಿ 2014ರಲ್ಲಿ ಜಲಾಂತರ್ಗಾಮಿ ಚಾಂಗ್ ಝೆಂಗ್ - 2 ಹಾಗೂ ಚಾಂಗ್ ಕ್ಸಿಂಗ್ ಡಾವೋ ಎಂಬ ಯುದ್ಧ ನೌಕೆ ಶ್ರೀಲಂಕಾದಲ್ಲಿ ತಂಗಿತ್ತು. ಭಾರತದ ಭಾರೀ ವಿರೋಧ ನಂತರವೂ ಕೊಲೊಂಬೋದ ಬಂದರಿನಲ್ಲಿ ಇವುಗಳು ತಂಗಿದ್ದವು.

ಇತ್ತೀಚೆಗೆ ಅಣ್ವಸ್ತ್ರ ಹೊತ್ತ ಚೀನಾದ ಜಲಂತರ್ಗಾಮಿಯೊಂದು ಪಾಕಿಸ್ತಾನದ ಕರಾಚಿಯಲ್ಲಿ ತಂಗಿತ್ತು. ಗೂಗಲ್ ಅರ್ಥ್ ನಲ್ಲಿ ಇದು ಸ್ಪಷ್ಟವಾಗಿ ಕಾಣಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
There is plenty for India to smile about. Following the visit by Prime Minister Narendra Modi to Colombo, Sri Lanka has rejected China's request to dock one of its submarines. It may be recalled that Sri Lanka had in October 2014 permitted China to dock its submarine in Colombo.
Please Wait while comments are loading...