ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ ಪರ್ವತಗಳ 'ಸ್ಪಂಗರ್ ಗ್ಯಾಪ್' ನಲ್ಲಿ ಗನ್ ಹಿಡಿದು ನಿಂತ ಚೀನಾ ಸೇನೆ!

|
Google Oneindia Kannada News

ನವದೆಹಲಿ, ಸಪ್ಟೆಂಬರ್.13: ಭಾರತ-ಚೀನಾ ಪೂರ್ವ ಭಾಗದ ಲಡಾಖ್ ಗಡಿಯಲ್ಲಿ ಭಾರತೀಯ ಸೇನೆ ಹದ್ದಿನ ಕಣ್ಣಿರಿಸಿದೆ. ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ಭಾಗದಲ್ಲಿರುವ ಸ್ಪಾಂಗರ್ ಗ್ಯಾಪ್ ಪ್ರದೇಶಕ್ಕೆ ಚೀನಾವು ಸಾವಿರಾರು ಯೋಧರು, ಯುದ್ಧ ಟ್ಯಾಂಕರ್ ಮತ್ತು ಹೂವಿಟ್ಜರ್ ಗಳನ್ನು ಕಳುಹಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಚುಶುಲ್ ನಿಗದಿತ ಗಡಿರೇಖೆಗೆ ಸಮೀಪವಿರುವ ಪ್ಯಾಂಗಾಂಗ್ ತ್ಸೋ ಸರೋವರದ ಎತ್ತರದ ಪ್ರದೇಶಗಳನ್ನು ಭಾರತೀಯ ಯೋಧರು ವಶಕ್ಕೆ ಪಡೆದುಕೊಂಡ ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಭಾರತೀಯ ಯೋಧರು ಇರುವ ಪ್ರದೇಶಕ್ಕೆ ಚೀನಾ ತನ್ನ ಸೇನೆಯನ್ನು ಕಳುಹಿಸುತ್ತಿರುವುದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ.

ಚೀನಾಕ್ಕೆ ಪ್ರತ್ಯುತ್ತರ: ಪರ್ವತ ಪ್ರದೇಶ ಆಕ್ರಮಿಸಿದ ಭಾರತಚೀನಾಕ್ಕೆ ಪ್ರತ್ಯುತ್ತರ: ಪರ್ವತ ಪ್ರದೇಶ ಆಕ್ರಮಿಸಿದ ಭಾರತ

ಕಳೆದ ಆಗಸ್ಟ್.30ರಿಂದ ಗುರುಂಗ್ ಹಿಲ್ ಮತ್ತು ಮಗರ್ ಹಿಲ್ ಮಧ್ಯಭಾಗದಲ್ಲಿರುವ ಸ್ಪಂಗರ್ ಗ್ಯಾಪ್ ಪ್ರದೇಶದಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿ ಯೋಧರು ನಿರಂತರವಾಗಿ ಪ್ರಚೋದನಕಾರಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಚೀನಾ-ಭಾರತದ ನಡುವಿರುವ ಸ್ಪಂಗರ್ ಗ್ಯಾಪ್

ಚೀನಾ-ಭಾರತದ ನಡುವಿರುವ ಸ್ಪಂಗರ್ ಗ್ಯಾಪ್

ಸ್ಪಂಗರ್ ಗ್ಯಾಪ್ ಪ್ರದೇಶವು ಭಾರತ ಮತ್ತು ಚೀನಾದ ನಿಗದಿತ ಗಡಿರೇಖೆಗೆ ಹೊಂದಿಕೊಂಡಂತಿದೆ. ಪ್ಯಾಂಗಾಂಗ್ ತ್ಸೋ ಸರೋವರ ಮತ್ತು ಸ್ಪಂಗರ್ ಸರೋವರದ ಪರ್ವತ ಶ್ರೇಣಿಗಳ ನಡುವಿನ ಪ್ರದೇಶ ಇದಾಗಿದ್ದು, 1962ರ ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನಾ ಶಿಬಿರಗಳು ಇದೇ ಸ್ಪಂಗರ್ ಗ್ಯಾಪ್ ನಲ್ಲಿದ್ದವು. ತದನಂತರದಲ್ಲಿ ಭದ್ರತಾ ದೃಷ್ಟಿಯಿಂದ ಸೇನೆಯನ್ನು ಅಲ್ಲಿಂದ ಭಾರತದ ಗಡಿಯಲ್ಲಿರುವ ಚುಶುಲ್ ಪ್ರದೇಶಕ್ಕೆ ವಾಪಸ್ ಕರೆಸಿಕೊಳ್ಳಲಾಯಿತು.

ಭಾರತ-ಚೀನಾ ಗಡಿಯಲ್ಲಿ ಶಸ್ತ್ರಾಸ್ತ್ರ ಹಿಡಿದು ನಿಂತ ಸೈನಿಕರು

ಭಾರತ-ಚೀನಾ ಗಡಿಯಲ್ಲಿ ಶಸ್ತ್ರಾಸ್ತ್ರ ಹಿಡಿದು ನಿಂತ ಸೈನಿಕರು

ಚೀನಾ ಮತ್ತು ಭಾರತದ ಗಡಿಯಲ್ಲಿರುವ ಸ್ಪಂಗರ್ ಪ್ರದೇಶದಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿಯು ಸೇನಾ ಪ್ರಮಾಣ ಮತ್ತು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸುತ್ತಿದೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಕೂಡ ಸೇನಾ ಸಾಮರ್ಥ್ಯ ಮತ್ತು ಯುದ್ಧೋಪಕರಣಗಳನ್ನು ಸ್ಪಂಗರ್ ಗ್ಯಾಪ್ ಗೆ ರವಾನಿಸುತ್ತಿದೆ. ಎರಡು ಕಡೆಗಳಲ್ಲಿ ಯೋಧರು ಗನ್ ಹಿಡಿದು ನಿಲ್ಲುವಂತಾ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಎತ್ತರ ಪ್ರದೇಶವನ್ನು ವಶಕ್ಕೆ ಪಡೆಯಲು ತಂತ್ರ

ಎತ್ತರ ಪ್ರದೇಶವನ್ನು ವಶಕ್ಕೆ ಪಡೆಯಲು ತಂತ್ರ

ಉಭಯ ರಾಷ್ಟ್ರಗಳ ಗಡಿಯಲ್ಲಿ ಹೆಚ್ಚುವರಿ ಸೇನಾ ತುಕಡಿಗಳನ್ನು ಚೀನಾ ನಿಯೋಜಿಸುತ್ತಿದೆ. ಟಿಬೆಟ್ ಪ್ರದೇಶವನ್ನು ಸ್ಥಿರವಾಗಿರಿಸಿಕೊಳ್ಳುವುದರ ಜೊತೆಗೆ ಎತ್ತರದ ಪ್ರದೇಶಗಳಲ್ಲಿ ಕುಳಿತಿರುವ ಭಾರತೀಯ ಸೇನಾ ಯೋಧರನ್ನು ಹಿಮ್ಮೆಟ್ಟಿಸುವುದಕ್ಕೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ತಂತ್ರ ರೂಪಿಸುತ್ತಿದೆ. ಪ್ಯಾಂಗಾಂಗ್ ತ್ಸೋ ಉತ್ತರ ಮತ್ತು ದಕ್ಷಿಣದ ಕೆಲವು ಪ್ರದೇಶಗಳಲ್ಲಿ ಚೀನಾ ಸೇನೆಯು ನಿರಂತರವಾಗಿ ಸೇನಾ ಚಟುವಟಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಚೀನಾಗೆ ಬೆಂಬಲವಾಗಿ ನಿಲ್ಲುತ್ತೆ ಪ್ರಜಾಶಕ್ತಿ

ಚೀನಾಗೆ ಬೆಂಬಲವಾಗಿ ನಿಲ್ಲುತ್ತೆ ಪ್ರಜಾಶಕ್ತಿ

"ಗಡಿಯಲ್ಲಿ ಪರ್ವತರೋಹಿಗಳು, ಬಾಕ್ಸರ್ ಗಳು, ಸ್ಥಳೀಯ ಫೈಟ್ ಕ್ಲಬ್ ಸದಸ್ಯರನ್ನೊಳಗೊಂಡಂತೆ ಪ್ರಜಾ ಸೇನೆಯ ಮೂಲಕ ಜನಸಂಖ್ಯೆ ಹೆಚ್ಚಿಸುವುದಕ್ಕೆ ಚೀನಾ ಮುಂದಾಗಿದೆ. ಸಾಮಾನ್ಯವಾಗಿ ಚೀನಾ ಸೇನೆ ಎಂದರೆ ಪೀಪಲ್ಸ್ ಲಿಬರೇಷನ್ ಆರ್ಮಿಯನ್ನು ಮಾತ್ರ ಒಳಗೊಂಡಿರುತ್ತದೆ. ಯುದ್ಧದ ಸಂದರ್ಭಗಳಲ್ಲಿ ಈ ಸೇನೆಗೆ ಪ್ರಜೆಗಳನ್ನು ಸೇರಿಸಿಕೊಳ್ಳುವುದರ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತದೆ. " ಚೀನಾದ ಸೇನೆ ಸ್ವತಂತ್ರವಾಗಿ ಕಾರ್ಯಾಚರಣೆ ನಡೆಸುತ್ತದೆ. ಪೀಪಲ್ಸ್ ಲಿಬರೇಷನ್ ಆರ್ಮಿಗೆ ಯುದ್ಧದ ಸಂಬರ್ಭಗಳಲ್ಲಿ ಮಾತ್ರ ಮಾನವಶಕ್ತಿಯು ಬೆಂಬಲ ನಿಲ್ಲುತ್ತದೆ" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತೀಕಾರದ ಎಚ್ಚರಿಕೆ ನೀಡಿದ ಭಾರತೀಯ ಸೇನೆ

ಪ್ರತೀಕಾರದ ಎಚ್ಚರಿಕೆ ನೀಡಿದ ಭಾರತೀಯ ಸೇನೆ

ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಚೀನಾ ಸೇನೆಯು ಪ್ರಚೋದನಾತ್ಮಕ ಚಟುವಟಿಕೆಗಳನ್ನು ನಡೆಸಿದ್ದಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ. ಭಾರತೀಯ ಸೇನೆ ಕೂಡ ಪ್ರತೀಕಾರ ತೀರಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಲಾಗಿದೆ. ಪ್ಯಾಂಗಾಂಗ್ ತ್ಸೋ ಸರೋವರದ ಉತ್ತರ ಭಾಗಗಳಲ್ಲಿ ಫಿಂಗರ್ 4ನಲ್ಲಿ ಪರ್ವತಗಳನ್ನು ಪಿಎಲ್ಎ ಅತಿಕ್ರಮಿಸಿಕೊಳ್ಳುವುದನ್ನು ಮುಂದುವರಿಸಿದರೆ, ಭಾರತೀಯ ಸೇನೆಯು ಚೀನಾದ ಸಂಬಂಧಿಸಿದ ಎತ್ತರದ ಪ್ರದೇಶಗಳನ್ನು ಅತಿಕ್ರಮಿಸಿಕೊಳ್ಳುತ್ತದೆ. ಚೀನಾ ಸೇನೆಯು ಈಗಾಗಲೇ ಅತಿಕ್ರಮಿಸಿಕೊಂಡ ಕೆಲವು ಪ್ರದೇಶಗಳನ್ನು ಭಾರತೀಯ ಸೇನೆಯು ವಾಪಸ್ ಪಡೆದುಕೊಂಡಿದೆ ಎಂದು ತಿಳಿಸಿದೆ.

English summary
Amid China India Conflict, China Sends Thousands Of Soldiers, Tanks To Spanggur Gap.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X