• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾದಲ್ಲಿ 8 ತಿಂಗಳ ಬಳಿಕ ಕೊರೊನಾ ಸೋಂಕಿಗೆ ಮೊದಲ ಬಲಿ

|

ಬೀಜಿಂಗ್,ಜನವರಿ 14:ಕೊರೊನಾ ಪ್ರಕರಣ ಮೊದಲು ಪತ್ತೆಯಾಗಿ, ಎಲ್ಲಾ ದೇಶಕ್ಕಿಂತ ಮೊದಲು ಪ್ರಕರಣಗಳ ಇಳಿಕೆ ಕಂಡಿದ್ದ ಚೀನಾದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ.

ಚೀನಾದ ಹುಬೈ ಪ್ರಾಂತ್ಯದಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾನೆ. ಕಳೆದ 24 ಗಂಟೆಗಳಲ್ಲಿ, ಚೀನಾದಲ್ಲಿ 138 ಹೊಸ ಕೊರೊನಾ -19 ಪ್ರಕರಣ ದಾಖಲಾಗಿದೆ.

ಕೊರೊನಾ ನಿಜವಾದ ಕಾರಣ ತಿಳಿಯಲು ವಿಶ್ವಆರೋಗ್ಯ ಸಂಘಟನೆಯ ಪರಿಣಿತರ ತಂಡ ಚೀನಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವಾಗಲೇ ಚೀನಾ ಕಳೆದ 8 ತಿಂಗಳ ನಂತರ ಕೊರೋನಾ ಸೋಂಕಿನ ಮೊದಲ ಸಾವನ್ನು ಖಚಿತಪಡಿಸಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಗುರುವಾರ ತಿಳಿಸಿದೆ.

ಕೊರೊನಾವೈರಸ್ ಮೂಲವನ್ನು ಪತ್ತೆಹಚ್ಚಲು ಚೀನಾದ ವುಹಾನ್‌ಗೆ ಆಗಮಿಸಿದ WHO ತಜ್ಞರ ತಂಡ

ಕಳೆದ ಎಂಟು ತಿಂಗಳಿನಿಂದ ಚೀನಾದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರಲಿಲ್ಲ. ಇದೀಗ ಚೀನಾ ಕೆಲ ಪ್ರಾಂತ್ಯಗಳಲ್ಲಿ ಸೋಂಕು ವರದಿಯಾಗುತ್ತಿವೆ.

2019ರಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು ಜಗತ್ತನ್ನೇ ತಲ್ಲಣಗೊಳಿಸಿತ್ತು. ಕೋಟ್ಯಾಂತರ ಮಂದಿಗೆ ಸೋಂಕಿಗೆ ತುತ್ತಾಗಿದ್ದರೆ ಲಕ್ಷಾಂತರ ಮಂದಿ ಸೋಂಕಿಗೆ

ಚೀನಾ ತನ್ನ ರಾಜಧಾನಿ ಬೀಜಿಂಗ್ ಸಮೀಪದ ನಗರದಲ್ಲಿ ಮಂಗಳವಾರದಿಂದ ಲಾಕ್‌ಡೌನ್ ಜಾರಿಗೆ ತಂದಿದೆ. ದೇಶದಾದ್ಯಂತ ಅನೇಕ ಭಾಗಗಳಲ್ಲಿ ಎರಡನೆಯ ಅಲೆ ತೀವ್ರಗೊಂಡಿದ್ದು, ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಂಡಿದೆ. ಹೆಚ್ಚಿನ ಪ್ರಕರಣಗಳು ರಾಜಧಾನಿ ಗಡಿಯಲ್ಲಿನ ಹೆಬೀ ಪ್ರಾಂತ್ಯದ ಉತ್ತರ ಭಾಗದಲ್ಲಿ ಪತ್ತೆಯಾಗಿದೆ. ಸುಮಾರು 4.9 ಮಿಲಿಯನ್ ನಿವಾಸಿಗಳು ಲಾಕ್‌ಡೌನ್‌ಗೆ ಒಳಪಟ್ಟಿದ್ದಾರೆ.

ಲಾಂಗ್‌ಫ್ಯಾಂಗ್ ನಗರದಲ್ಲಿ ಮಂಗಳವಾರ ಲಾಕ್‌ಡೌನ್ ಘೋಷಿಸಲಾಗಿದೆ. ಒಂದು ವಾರದವರೆಗೆ ನಿವಾಸಿಗಖನ್ನು ಮನೆಯಲ್ಲಿಯೇ ಕ್ವಾರೆಂಟೈನ್‌ಗೆ ಒಳಪಡಿಸಲಾಗುತ್ತಿದ್ದು, ಅವರನ್ನು ಸಾಮೂಹಿಕ ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬಲಿಯಾಗಿದ್ದಾರೆ.

English summary
China on Thursday reported its first death from Covid-19 in eight months as the country battles to contain a resurgence in cases and prepares for the arrival of an expert team from the WHO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X