ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಶಾಲೆಯಲ್ಲಿ ಸಾಮಾಜಿಕ ಅಂತರ: ಮಕ್ಕಳ ಮೇಲೆ ಟೋಪಿ

|
Google Oneindia Kannada News

ಬೀಜಿಂಗ್‌, ಏಪ್ರಿಲ್ 28: ಕೊರೊನಾದಿಂದ ಹದಗೆಟ್ಟಿದ್ದ ಚೀನಾದ ಪರಿಸ್ಥಿತಿ ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದೆ. ಹೀಗಾಗಿ, ಅಲ್ಲಿನ ಸರ್ಕಾರ ಶಾಲೆಗಳನ್ನು ತರೆಯಲು ಅವಕಾಶ ನೀಡಿದೆ. ನಿನ್ನೆಯಿಂದ (ಸೋಮವಾರ) ಚೀನಾದಲ್ಲಿ ಶಾಲೆಗಳು ಮರು ಪ್ರಾರಂಭವಾಗಿವೆ.

ಕೊರೊನಾ ಬಿಸಿ ಕಡಿಮೆ ಆಗಿದ್ದರೂ, ಇನ್ನು ಕೆಲವು ಕ್ರಮಗಳನ್ನು ಪಾಲಿಸಬೇಕಿದೆ. ಮಾಸ್ಕ್, ಸಾಮಾಜಿಕ ಅಂತರ ಇದರಲ್ಲಿ ಪ್ರಮುಖವಾಗಿದೆ. ಶಾಲೆಗಳು ಪ್ರಾರಂಭವಾಗಿದ್ದು, ಅಲ್ಲಿಯು ಈ ಕ್ರಮಗಳನ್ನು ಪಾಲನೆ ಮಾಡಲಾಗುತ್ತೆ. ಇದಕ್ಕೆ ಅಲ್ಲಿನ ಸರ್ಕಾರ ವಿಶೇಷ ಪ್ಲಾನ್ ಮಾಡಿದ್ದಾರೆ.

ಖಾಸಗಿ ಶಾಲೆ ಶುಲ್ಕ, ಶಿಕ್ಷಕರ ವೇತನದ ಬಗ್ಗೆ ಸರ್ಕಾರದ ಸೂಚನೆ ಖಾಸಗಿ ಶಾಲೆ ಶುಲ್ಕ, ಶಿಕ್ಷಕರ ವೇತನದ ಬಗ್ಗೆ ಸರ್ಕಾರದ ಸೂಚನೆ

ಶಾಲೆಗಳಲ್ಲಿ ಮಕ್ಕಳ ತಲೆಯ ಮೇಲೆ ಒಂದು ಟೋಪಿ ಹಾಕಲಾಗಿದೆ. ಅದು ಉದ್ದವಾದ ರೆಕ್ಕೆಗಳನ್ನು ಹೊಂದಿದೆ. ಇದರಿಂದ ಮಕ್ಕಳು ಒಬ್ಬರ ಹತ್ತಿರ ಮತ್ತೊಬ್ಬರು ಹೋಗಲು ಸಾಧ್ಯವಾಗುವುದಿಲ್ಲ. ಆಕಸ್ಮಿಕವಾಗಿ ಮಕ್ಕಳು ಹತ್ತಿರ ಬರುವುದನ್ನು ಇದು ತಪ್ಪಿಸುತ್ತದೆ. ಇದರ ಮೂಲಕ ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ.

China Schools Students Have To Wear Unique Headgear To Maintain Social Distance

ಶಾಲೆಗೆ ಬರುವ ಮಕ್ಕಳಿಗೆ ಈ ವಿಶೇಷ ಟೋಪಿ ಹಾಗೂ ಮಾಸ್ಕ್ ಕಡ್ಡಾಯವಾಗಿದೆ. ಆ ಟೋಪಿ ಹಾಕಿಕೊಂಡು ಅವರು ಪಾಠ ಕೇಳಬೇಕಿದೆ. ಶಾಲೆಯಲ್ಲಿ ಚಿಕ್ಕ ಮಕ್ಕಳ ನಡುವೆ ಸಾಮಾಜಿಕ ಅಂತರ ಕಾಪಾಡುವಂತೆ ನೋಡಿಕೊಳ್ಳುವುದು ಕಷ್ಟ. ಹೀಗಾಗಿ, ಈ ಪ್ಲಾನ್‌ ಮಾಡಲಾಗಿದೆ.

ವಿಶೇಷ ಅಂದರೆ, ಚೀನಾದಲ್ಲಿ ಸಾಂಗ್ ರಾಜವಂಶದ ಅವಧಿಯಲ್ಲಿ ಅಧಿಕಾರಿಗಳು ನ್ಯಾಯಾಲಯದಲ್ಲಿ ಪರಸ್ಪರ ಪಿಸುಗುಟ್ಟುವ ಮತ್ತು ಪಿತೂರಿ ಮಾಡುವುದನ್ನು ತಡೆಯಲು ಇದೇ ರೀತಿಯ ಟೋಪಿಗಳನ್ನು ಧರಿಸಲಾಗುತ್ತಿತಂತೆ. ಈ ವಿಷಯವನ್ನು ಟ್ವಿಟ್ಟರ್‌ನಲ್ಲಿ ಚೀನಾ ಮಹಿಳೆಯೊಬ್ಬರು ಹಂಚಿಕೊಂಡಿದ್ದಾರೆ.

ಚೀನಾದಲ್ಲಿ 84,341 ಮಂದಿಗೆ ಕೊರೊನಾ ಸೋಂಕು ತಗುಲಿತ್ತು. 77555 ಜನರು ಅದರಿಂದ ಗುಣಮುಖರಾಗಿದ್ದಾರೆ. 4643 ಜನರು ಮರಣ ಹೊಂದಿದ್ದಾರೆ.

English summary
China schools students have to wear unique headgear for to maintain social distance. China schools reopen from Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X