ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ವರಸೆ: ಚೀನಾಗಿಂತ ಮೊದಲೇ ಜಗತ್ತಿನಾದ್ಯಂತ ಕೊರೊನಾ ಹರಡಿತ್ತು

|
Google Oneindia Kannada News

ಬೀಜಿಂಗ್, ಅಕ್ಟೋಬರ್ 09: ಕಳೆದ ವರ್ಷ ವಿಶ್ವದ ವಿವಿಧೆಡೆ ಕೊರೊನಾ ಸೋಂಕು ಭುಗಿಲೆದ್ದಿತ್ತು. ಆದರೆ ಮೊದಲ ಸೋಂಕಿನ ವರದಿ ಮಾಡಿದ್ದು ಚೀನಾ ಎಂದು ಹೇಳಿಕೊಂಡಿದೆ.

ವುಹಾನ್‌ನಲ್ಲಿಯೇ ಕೊರೊನಾ ಸೋಂಕು ಹುಟ್ಟಿಕೊಂಡಿದ್ದು ಎನ್ನುವ ವಾದಕ್ಕೆ ಚೀನಾ ಪ್ರತಿಕ್ರಿಯಿಸಿದ್ದು, ಖಂಡಿತವಾಗಿಯೂ ವುಹಾನ್‌ನಲ್ಲಿ ಕೊರೊನಾ ಸೋಂಕು ಹುಟ್ಟಿಕೊಂಡಿಲ್ಲ, ಆದರೆ ಮೊದಲು ಸೋಂಕಿನ ವರದಿ ಮಾಡಿದ್ದು ಚೀನಾ, ಬಳಿಕ ಅದನ್ನು ನಿಭಾಯಿಸಲು ಕೂಡ ಅಷ್ಟೇ ಪ್ರಯತ್ನವನ್ನು ಪಟ್ಟಿದೆ ಎಂದು ಚೀನಾ ಹೇಳಿದೆ.

ಕೋವಿಡ್ ಹಬ್ಬಿಸಿದ ಚೀನಾ ದೊಡ್ಡ ಬೆಲೆ ತೆರಲಿದೆ; ಟ್ರಂಪ್ ಕೋವಿಡ್ ಹಬ್ಬಿಸಿದ ಚೀನಾ ದೊಡ್ಡ ಬೆಲೆ ತೆರಲಿದೆ; ಟ್ರಂಪ್

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದ ವುಹಾನ್ ಲ್ಯಾಬ್‌ನಿಂದಲೇ ಕೊರೊನಾ ಸೋಂಕು ಹುಟ್ಟಿಕೊಂಡಿದ್ದು ಎಂದು ಆರೋಪಿಸಿದ್ದರು.

China Says COVID-19 Broke Globally, We Only Reported It First

ಹಾಗೆಯೇ ಚೀನಾದಲ್ಲಿ ಮನುಷ್ಯರಿಗೆ ಸೋಂಕು ತಗುಲುವ ಮೊದಲು ಬಾವುಲಿ, ಪ್ಯಾಂಗೊಲಿನ್‌ಗಳಿಗೆ ತಗುಲಿತ್ತು ಎನ್ನುವ ವಾದವನ್ನು ಕೂಡ ತಳ್ಳಿ ಹಾಕಿದೆ.
ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಹುವಾ ಚುನೈಂಗ್ ಅವರು ಮಾತನಾಡಿ, ಕೊರೊನಾ ಸೋಂಕು ಒಂದು ಹೊಸ ರೀತಿಯ ವೈರಸ್ ಆಗಿದ್ದು, ವರದಿಗಳು ಬಹಿರಂಗಗೊಳ್ಳುತ್ತಿದ್ದಂತೆಯೇ, ಸಾಕಷ್ಟು ವಿಷಯಗಳು ಕೂಡ ಹೊರಬಿದ್ದಿವೆ.

ಕಳೆದ ವರ್ಷದ ಅಂತ್ಯದಲ್ಲಿ ವಿಶ್ವದಾದ್ಯಂತ ಕೊರೊನಾ ಸೋಂಕು ಹಬ್ಬಲು ಆರಂಭಿಸಿತ್ತು, ಚೀನಾವು ಆ ಸೋಂಕನ್ನು ಗುರುತಿಸಿ ವರದಿ ಮಾಡಿತ್ತು. ಹಾಗೆಯೇ ಜೀನೋಮ್‌ಗಳ ಬಗ್ಗೆಯೂ ವಿಶ್ವದೆದುರು ಹಂಚಿಕೊಂಡಿತ್ತು.

ಚೀನಾದ ಕಮ್ಯುನಿಸ್ಟ್ ಪಕ್ಷದ ಈ ಸೋಂಕಿನ ವಿಷಯವನ್ನು ಮುಚ್ಚಿಟ್ಟಿದ್ದರಿಂದ ವಿಶ್ವದೆಲ್ಲೆಡೆ ಉಲ್ಬಣಗೊಂಡಿತ್ತು ಎಂದು ಪೊಂಪಿಯೋ ಟೋಕಿಯೋದಲ್ಲಿ ನಡೆದ ಸಭೆಯಲ್ಲಿ ಹೇಳಿಕೆ ನೀಡಿದ್ದರು.

ವಿಶ್ವದಾದ್ಯಂತ ಕೊರೊನಾ ಸೋಂಕಿನಿಂದ ಒಂದು ಮಿಲಿಯನ್‌ಗೂ ಅಧಿಕ ಮಂದಿ ಮೃತಪಟ್ಟಿದ್ದಾರೆ 36 ಮಿಲಿಯನ್‌ಗೂ ಅಧಿಕ ಜನರಿಗೆ ಸೋಂಕು ತಗುಲಿದೆ. ಚೀನಾದಲ್ಲಿ 90,736 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು, 4739 ಮಂದಿ ಸಾವನ್ನಪ್ಪಿದ್ದರು.

English summary
China on Friday claimed that the coronavirus broke out in the various parts of the world last year but it was the only one to have reported and acted first, refuting the widely-held view that the deadly contagion originated in Wuhan before turning out to be a pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X