ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀಜಿಂಗ್‌ನಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ ಎಂದ ಚೀನಾ

|
Google Oneindia Kannada News

ಬೀಜಿಂಗ್, ಜೂನ್ 20: ಬೀಜಿಂಗ್‌ನಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ ಎಂದು ಚೀನಾ ಹೇಳಿದೆ.

Recommended Video

ರಾಹುಲ್ ಗಾಂಧಿಗೆ ಕಿವಿ ಮಾತು ಹೇಳಿದ ಸೈನಿಕನ ತಂದೆ | Oneindia Kannada

ಬೀಜಿಂಗ್‌ನಲ್ಲಿನ ಕ್ಸಿನ್‌ಫದಿ ಆಹಾರ ಮಾರುಕಟ್ಟೆಯಲ್ಲಿ ಕೊರೊನಾ ಸೋಂಕಿನ ಎರಡನೇ ಪರ್ವ ಆರಂಭವಾಗಿತ್ತು. ಅಲ್ಲಿರುವ ಕಡಲ ಆಹಾರ, ಮಾಂಸದ ಮಾರುಕಟ್ಟೆಯಲ್ಲಿ ಶುಚಿತ್ವದ ಕೊರತೆ ಇದ್ದ ಕಾರಣ, ಅಲ್ಲಿನ ಬಹುತೇಕ ಮಂದಿಗೆ ಕೊರೊನಾ ಸೋಂಕು ತಗುಲಿತ್ತು.

ಬೀಜಿಂಗ್‌ನಲ್ಲಿ ಕೊರೊನಾ ಸೋಂಕಿನ 2ನೇ ಪರ್ವ, ಮತ್ತಷ್ಟು ಭಯಾನಕಬೀಜಿಂಗ್‌ನಲ್ಲಿ ಕೊರೊನಾ ಸೋಂಕಿನ 2ನೇ ಪರ್ವ, ಮತ್ತಷ್ಟು ಭಯಾನಕ

ಹೀಗಾಗಿ ಒಟ್ಟು 3,60,000 ಮಂದಿಯನ್ನು ಪರೀಕ್ಷೆಗೊಳಪಡಿಸಿದ್ದು, ಅದರಲ್ಲಿ ಕೇವಲ 25 ಮಂದಿಗಷ್ಟೇ ಕೊರೊನಾ ಸೋಂಕು ತಗುಲಿದೆ ಹೀಗಾಗಿ ಯಾರೂ ಆತಂಕಪಡಬೇಕಿಲ್ಲ. ಕೊರೊನಾ ನಿಯಂತ್ರಣದಲ್ಲಿದೆ ಎಂದು ಚೀನಾ ತಿಳಿಸಿದೆ.

China Says Beijing Coronavirus Outbreak Is Under Control

ಕಳೆದ ಕೆಲವು ವಾರಗಳಿಂದ ಚೀನಾದಲ್ಲಿ 183 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಶುಕ್ರವಾರ 5 ಪ್ರಕರಣಗಳು ಪತ್ತೆಯಾಗಿವೆ.ಶಾಲೆಗಳನ್ನು ಮುಚ್ಚಲಾಗಿದೆ. ಕ್ರೀಡಾ ಚಟುವಟಿಕೆಗಳನ್ನು ಕೂಡ ತಡೆಹಿಡಿಯಲಾಗಿದೆ.

ಇನ್ನು ಬೀಜಿಂಗ್‌ನಲ್ಲಿ ಹರಡಿರುವ ಕೊರೊನಾ ವೈರಸ್ ಸೋಂಕಿನ ಕುರಿತು ವಿಶ್ವ ಆರೋಗ್ಯ ಸಂಸ್ಥೆ(WHO), ಆದಷ್ಟು ಶೀಘ್ರವಾಗಿ ವೈರಾಣು ಪಸರಿಸುವಿಕೆಯನ್ನು ತಡೆಗಟ್ಟಬೇಕಾಗಿದೆ ಎಂದು ಹೇಳಿದೆ.

ಸದ್ಯ ದಿನವೊಂದಕ್ಕೆ 90 ಸಾವಿರ ಜನರನ್ನು ಪರೀಕ್ಷೆಗೆ ಗುರಿಪಡಿಸಲಾಗುತ್ತಿದ್ದು, ನಗರದಾದ್ಯಂತ ಬಿಗಿ ಲಾಕ್‌ಡೌನ್‌ನ್ನು ಜಾರಿಗೊಳಿಸಲಾಗಿದೆ ಎಂದು ನಗರಾಡಳಿತ ಮಾಹಿತಿ ನೀಡಿದೆ.

English summary
China has declared a coronavirus outbreak in Beijing under control after confirming 25 new cases among tests of about 360,000 people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X