ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರನ ಮೇಲೆ ಇಳಿದ ಚೀನಾದ ಮಾನವರಹಿತ ನೌಕೆ

|
Google Oneindia Kannada News

ಬೀಜಿಂಗ್, ಡಿಸೆಂಬರ್ 2: ಚಂದ್ರನ ಮೇಲ್ಭಾಗದ ಮಣ್ಣಿನ ಮಾದರಿಗಳನ್ನು ಸಂಗ್ರಹಿಸುವ ಐತಿಹಾಸಿಕ ಯೋಜನೆಯೊಂದಿಗೆ ಚೀನಾ ಮಾನವ ರಹಿತ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದೆ.

ನವೆಂಬರ್ 24ರಂದು ಚೀನಾ ತನ್ನ 'ಚಾಂಗ್- 5 ಪ್ರೋಬ್' ನೌಕೆಯನ್ನು ಉಡಾವಣೆ ಮಾಡಿತ್ತು. ಅದು ಮಂಗಳವಾರ ಚಂದ್ರನ ಅಂಗಳದಲ್ಲಿ ಇಳಿದಿದೆ. ಈ ಮಾನವರಹಿತ ನೌಕೆಗೆ ಚೀನಾದ ಪೌರಾಣಿಕ ದೇವತೆಯ ಹೆಸರನ್ನು ಇಡಲಾಗಿದೆ. ಚಂದ್ರನ ಉಗಮದ ಕುರಿತಾದ ರಹಸ್ಯವನ್ನು ತಿಳಿಯಲು ವಿಜ್ಞಾನಿಗಳಿಗೆ ಅನುಕೂಲವಾಗುವಂತೆ ಈ ನೌಕೆಯು ಚಂದ್ರನ ಮೇಲ್ಭಾಗದಲ್ಲಿನ ವಸ್ತುಗಳನ್ನು ಸಂಗ್ರಹಿಸಲಿದೆ.

ಚಂದ್ರನ ಅಂಗಳದಲ್ಲಿ ಮತ್ತಷ್ಟು ನೀರು: ನಾಸಾ ಅಧ್ಯಯನಚಂದ್ರನ ಅಂಗಳದಲ್ಲಿ ಮತ್ತಷ್ಟು ನೀರು: ನಾಸಾ ಅಧ್ಯಯನ

ಚಂದ್ರನ ಓಷನ್ ಆಫ್ ಸ್ಟಾರ್ಮ್ಸ್ ಎಂದು ಕರೆಯಲಾಗುವ ಅಪಾರ ಲಾವಾ ಕೇಂದ್ರಿತ ಪ್ರದೇಶಕ್ಕೆ ಇದುವರೆಗೂ ಯಾವನೌಕೆಯೂ ಕಾಲಿರಿಸಿರಲಿಲ್ಲ. ಇದೇ ಮೊದಲ ಬಾರಿಗೆ ಚೀನಾದ ನೌಕೆ ಅಲ್ಲಿಗೆ ತೆರಳಿದ್ದು, ಸುಮಾರು 2 ಕೆಜಿಯಷ್ಟು ಕಲ್ಲು, ಮಣ್ಣಿನ ಮಾದರಿಗಳನ್ನು ಸಂಗ್ರಹಿಸಲಿದೆ.

 Chinas Unamanned Change-5 Probe Spacecraft Lands On Moon To Collect Samples

ಒಂದು ವೇಳೆ ಚೀನಾದ ನೌಕೆಯು ಯಶಸ್ವಿಯಾಗಿ ಅಲ್ಲಿಂದ ವಸ್ತುಗಳನ್ನು ಹೊತ್ತು ಮರಳಿದರೆ ಅಮೆರಿಕ ಮತ್ತು ಸೋವಿಯತ್ ರಷ್ಯಾದ ಬಳಿಕ ಚಂದ್ರನ ಮಾದರಿಗಳನ್ನು ತಂದ ಮೂರನೇ ದೇಶ ಎನಿಸಲಿದೆ.

ನಾಸಾ ಮತ್ತು ನೋಕಿಯಾ ಯೋಜನೆ: ಚಂದ್ರನ ಮೇಲೆ ಸ್ಥಾಪನೆಯಾಗಲಿದೆ 4ಜಿ ನೆಟ್‌ವರ್ಕ್ನಾಸಾ ಮತ್ತು ನೋಕಿಯಾ ಯೋಜನೆ: ಚಂದ್ರನ ಮೇಲೆ ಸ್ಥಾಪನೆಯಾಗಲಿದೆ 4ಜಿ ನೆಟ್‌ವರ್ಕ್

Recommended Video

ಲಸಿಕೆ ತಗೊಂಡ್ರೆ ನಿಮ್ ಮೇಲೆ ಕೇಸ್ ಹಾಕ್ತಾರೆ !! | Oneindia Kannada

ಚಂದ್ರನ ಮೇಲೆ ಇಳಿದ ಬಳಿಕ ಲ್ಯಾಂಡರ್ ವಾಹನವು ತನ್ನ ರೋಬೋಟಿಕ್ ಕೈಗಳಿಂದ ಚಂದ್ರನ ನೆಲವನ್ನು ಅಗೆಯಲಿದೆ. ಬಳಿಕ ಅದರ ಮಣ್ಣು ಮತ್ತು ಕಲ್ಲಿನ ಮಾದರಿಗಳನ್ನು ಏರಿಕೆ ವಾಹನಕ್ಕೆ ತುಂಬಿಸಲಿದೆ. ಅದು ಆರ್ಬಿಟಿಂಗ್ ಮಾಡುಲ್‌ಗೆ ಅದನ್ನು ಸೇರಿಸಲಿದೆ. ಮುಂದಿನ ಎರಡು ದಿನಗಳ ಕಾಲ ಅದು ಮಾದರಿಗಳನ್ನು ಸಂಗ್ರಹಿಸಲಿದೆ. ಬಳಿಕ ಚೀನಾದ ಮಂಗೋಲಿಯಾ ಪ್ರದೇಶಕ್ಕೆ ಮರಳಲಿದೆ.

English summary
China's unmanned Chang'e-5 probe spacecraft on Tuesday landed on moon, which will collect lunar surface samples.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X