ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಗ್ರಹ ಚಿತ್ರ: ಗೋಬಿ ಮರುಭೂಮಿಯಲ್ಲಿ ಪರಮಾಣು ಕ್ಷಿಪಣಿ ಸಂಗ್ರಹಕ್ಕೆ ಚೀನಾ ತಯಾರಿ!

|
Google Oneindia Kannada News

ನವದೆಹಲಿ, ಜುಲೈ 05: ಪೂರ್ವ ಲಡಾಖ್ ಗಡಿಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ ನಡೆದು ವರ್ಷವೇ ಕಳೆದಿದೆ. ಪರಮಾಣು ಶಸ್ತ್ರಾಗಾರದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬೀಜಿಂಗ್ ಮತ್ತೊಮ್ಮೆ ಸುದ್ದಿಯಾಗಿದೆ.

Recommended Video

China ದೇಶದ ಹೊಸ ಬೆಳವಣಿಗೆ ಬಹಳ ಆತಂಕಕಾರಿ | Oneindia Kannada

ಚೀನಾದ ವಾಯುವ್ಯ ಭಾಗದಲ್ಲಿನ ಯುಮೆನ್ ನಗರದ ಬಳಿ ಇರುವ ಮರುಭೂಮಿಯಲ್ಲಿ ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು (ಐಸಿಬಿಎಂ) ಹಿಡಿದಿಡಲು ಚೀನಾ 100ಕ್ಕೂ ಹೆಚ್ಚು ಸಿಲೋಗಳ ನಿರ್ಮಾಣವನ್ನು ಶುರು ಮಾಡಿದೆ ಎಂದು ವರದಿಯಾಗಿದೆ.

ಬೀಜಿಂಗ್‌ನ ಪರಮಾಣು ಸಾಮರ್ಥ್ಯದ ವಿಸ್ತರಣೆಯು ಸ್ಪಷ್ಟವಾಗಿ ಗೋಚರಿಸುತ್ತಿದೆ. ಚೀನಾ ಈಗಾಗಲೇ 250 ರಿಂದ 350 ಪರಮಾಣು ಶಸ್ತ್ರಾಸ್ತ್ರಗಳ ದಾಸ್ತಾನು ಮಾಡಿಕೊಂಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಜಗತ್ತು ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ನರಳುತ್ತಿರುವ ಸಂದರ್ಭದಲ್ಲಿ ಚೀನಾ ತನ್ನ ಶಸ್ತ್ರಾಸ್ತ್ರ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಿರುವುದಕ್ಕೆ ಸ್ಯಾಟ್ ಲೈಟ್ ಚಿತ್ರಗಳು ಸಾಕ್ಷಿಯಾಗಿವೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಕಳೆದ ನಾಲ್ಕೇ ತಿಂಗಳಿನಲ್ಲಿ ದಿಢೀರ್ ಬದಲಾವಣೆ

ಕಳೆದ ನಾಲ್ಕೇ ತಿಂಗಳಿನಲ್ಲಿ ದಿಢೀರ್ ಬದಲಾವಣೆ

ಚೀನಾ ಯುಮೆನ್ ನಗರದ ಪಶ್ಚಿಮ ಮತ್ತು ನೈಋತ್ಯ ಭಾಗದ ತುದಿಯಲ್ಲಿ ಇರುವ ಗೋಬಿ ಮರುಭೂಮಿಯಲ್ಲಿ ಆಗಿರುವ ಬದಲಾವಣೆಗಳನ್ನು ಖಾಸಗಿ ಸ್ಯಾಟ್ ಲೈಟ್ ಭಾವಚಿತ್ರಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. 'ದಿ ವಾಶಿಂಗ್ಟನ್ ಪೋಸ್ಟ್' ಪ್ರಕಟಿಸಿರುವ ಚಿತ್ರಗಳಲ್ಲಿ ಹೊಸ ಉತ್ಖನನ, ದೊಡ್ಡ ದೊಡ್ಡ ಕಂದಕಗಳು, ಮೇಲ್ಮೈ ರಚನೆಯಲ್ಲಿ ಆಗಿರುವ ಬದಲಾವಣೆಗಳು ಪರಮಾಣು ಸೌಲಭ್ಯದ ಲಕ್ಷಣಗಳ ರೀತಿ ಗೋಚರಿಸುತ್ತಿವೆ. ಕಳೆದ ನಾಲ್ಕು ತಿಂಗಳ ಹಿಂದೆ ಇದೇ ಪ್ರದೇಶದಲ್ಲಿ ಕಂಡು ಬಂದ ಚಿತ್ರಗಳು ಮತ್ತು ಪ್ರಸ್ತುತ ಬಿಡುಗಡೆ ಆಗಿರುವ ಚಿತ್ರಗಳನ್ನು ವಿಮರ್ಶಿಸಿ ನೋಡಿದಾಗ ನಾಲ್ಕು ತಿಂಗಳಿನಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬಂದಿವೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಚಿತ್ರ ಕೃಪೆ: ಇಂಡಿಯಾ ಟುಡೇ

ಚಿತ್ರಸಾಕ್ಷ್ಯ: ಭಾರತದ ಮತ್ತೊಂದು ಗಡಿಯಲ್ಲಿ ಕಾಣಿಸಿಕೊಂಡ ಚೀನಾ ಸೇನೆ!ಚಿತ್ರಸಾಕ್ಷ್ಯ: ಭಾರತದ ಮತ್ತೊಂದು ಗಡಿಯಲ್ಲಿ ಕಾಣಿಸಿಕೊಂಡ ಚೀನಾ ಸೇನೆ!

ಹೊಸ ಕಿಡಿ ಹೊತ್ತಿಸಲು ಯತ್ನಿಸುತ್ತಿದೆಯಾ ಚೀನಾ?

ಹೊಸ ಕಿಡಿ ಹೊತ್ತಿಸಲು ಯತ್ನಿಸುತ್ತಿದೆಯಾ ಚೀನಾ?

"ಇದೊಂದು ಗುರುತರ ಬದಲಾವಣೆಯಾಗಿದ್ದು, ಸಹಿಸಿಕೊಂಡು ಇರುವುದು ತುಂಬಾ ಕಷ್ಟಸಾಧ್ಯವಾಗುತ್ತದೆ. ಈ ಹೊಸ ರಚನೆಯು ವಾಷಿಂಗ್ಟನ್ ನಿಂದ ದೆಹಲಿವರೆಗೂ ಹೊಸ ಕಿಡಿಯನ್ನು ಹೊತ್ತಿಸುವ ಅಪಾಯವಿದೆ. ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನೇತೃತ್ವದಲ್ಲಿ ಬೀಜಿಂಗ್ ವಿಸ್ತರಣಾ ನೀತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ, ಎಂದು ಚೀನಾ ಪರಮಾಣು ಯೋಜನೆ ತಜ್ಞ ಜೆಫ್ರಿ ಲೇವಿಸ್ 'ದಿ ನ್ಯೂಯಾರ್ಕ್ ಟೈಮ್ಸ್' ಪತ್ರಿಕೆಗೆ ತಿಳಿಸಿದ್ದಾರೆ.

ಒತ್ತಡ ತಡೆಯಲು ಪ್ರಾಯೋಗಿಕ ಪ್ರಯತ್ನಕ್ಕೆ ಪ್ರೋತ್ಸಾಹ

ಒತ್ತಡ ತಡೆಯಲು ಪ್ರಾಯೋಗಿಕ ಪ್ರಯತ್ನಕ್ಕೆ ಪ್ರೋತ್ಸಾಹ

"ಗಡಿಯಲ್ಲಿ ಉದ್ವಿಗ್ನತೆ ಹಾಗೂ ಒತ್ತಡವನ್ನು ಅಸ್ಥಿರಗೊಳಿಸಲು ಹಾಗೂ ಅಪಾಯವನ್ನು ಕಡಿಮೆ ಮಾಡಲು ಅಗತ್ಯವಿರುವ ಪ್ರಾಯೋಗಿಕ ಕ್ರಮಗಳಲ್ಲಿ ನಮ್ಮೊಂದಿಗೆ ಕೈ ಜೋಡಿಸುವುದಕ್ಕೆ ಬೀಜಿಂಗ್ ಅನ್ನು ನಾವು ಪ್ರೋತ್ಸಾಹಿಸುತ್ತೇವೆ. ಈ ಮೇಲ್ಮೈ ರಚನೆಯು ಅದಕ್ಕೆ ಸಂಬಂಧಿಸಿದ್ದಾಗಿದೆ," ಎಂದು ಯುಎಸ್ ರಾಜ್ಯ ಇಲಾಖೆ ವಕ್ತಾರ ನೆಡ್ ಪ್ರೈಸ್ ಹೇಳಿರುವುದಾಗಿ 'ವಾಷಿಂಗ್ಟನ್ ಪೋಸ್ಟ್' ವರದಿ ಮಾಡಿದೆ. ಇದರ ಮಧ್ಯೆ ಚೀನಾದ ಯೋಜನೆಗಳ ವಿರುದ್ಧ ಪೆಂಟಗಾನ್ ಎಚ್ಚರಿಕೆ ಸಂದೇಶ ರವಾನಿಸಿದೆ.

ಚಿತ್ರ ಕೃಪೆ: ಇಂಡಿಯಾ ಟುಡೇ

ಚಿತ್ರಸಾಕ್ಷ್ಯ: ಭಾರತೀಯ ಗಡಿ ಪ್ರದೇಶದಲ್ಲಿ ಚೀನಾ ಆಡಿದ್ದೇ ಆಟ!ಚಿತ್ರಸಾಕ್ಷ್ಯ: ಭಾರತೀಯ ಗಡಿ ಪ್ರದೇಶದಲ್ಲಿ ಚೀನಾ ಆಡಿದ್ದೇ ಆಟ!

1.70 ಲಕ್ಷ ನಿವಾಸಿಗಳಿದ್ದ ಪ್ರದೇಶದಲ್ಲಿ ಕಾರ್ಯ

1.70 ಲಕ್ಷ ನಿವಾಸಿಗಳಿದ್ದ ಪ್ರದೇಶದಲ್ಲಿ ಕಾರ್ಯ

ಸಿಲ್ಕ್ ರಸ್ತೆಯಲ್ಲಿ 1,70,000 ನಿವಾಸಿಗಳು ವಾಸವಿದ್ದ ಪ್ರದೇಶದಲ್ಲಿ ನಿರ್ಮಾಣ ಕಾರ್ಯವನ್ನು ನಡೆಸಲಾಗುತ್ತಿದೆ. 'ದಿ ವಾಶಿಂಗ್ಟನ್ ಪೋಸ್ಟ್' ವರದಿ ಪ್ರಕಾರ, ಒಂದು ನಿರ್ಮಾಣ ಸ್ಥಳದಿಂದ ಮತ್ತೊಂದು ಸ್ಥಳದ ನಡುವೆ ಎರಡು ಮೈಲಿ ಅಂತರವನ್ನು ಕಾಯ್ದುಕೊಳ್ಳಲಾಗಿದೆ. ಹಲವು ಪ್ರದೇಶಗಳಲ್ಲಿ ದೊಡ್ಡದಾದ ಗುಮ್ಮಟಗಳನ್ನು ಹೊದಿಕೆಗಳಿಂದ ಮರೆ ಮಾಚಲಾಗಿದೆ. ಗುಮ್ಮಟದಂತಹ ಹೊದಿಕೆ ಇಲ್ಲದ ಪ್ರದೇಶಗಳಲ್ಲಿ ಕಾರ್ಮಿಕರು ಮರುಭೂಮಿ ನೆಲದಲ್ಲಿ ವಿಶಿಷ್ಟವಾದ ವೃತ್ತಾಕಾರದ ಆಕಾರದ ಹಳ್ಳವನ್ನು ಉತ್ಖನನ ಮಾಡುತ್ತಿರುವುದು ಗೋಚರಿಸುತ್ತಿದೆ.

ಚೀನಾದ ಐಸಿಬಿಎಂ ಅನ್ನು ಡಿಎಫ್ -41 ಎಂದು ಕರೆಯಲು ಸಿಲೋಗಳನ್ನು ನಿರ್ಮಿಸಲಾಗುತ್ತಿದೆ ಎಂದು ಲೆವಿಸ್ ಗುರುತಿಸಿದ್ದಾರೆ. "ಇದು ಸುಮಾರು 15,000 ಕಿಲೋಮೀಟರ್‌ಗಳಷ್ಟು ದೂರದಲ್ಲಿ ಅನೇಕ ಸಿಡಿತಲೆಗಳನ್ನು ಸಾಗಿಸಬಲ್ಲದು. ಭಾರತ, ತೈವಾನ್ ಮತ್ತು ಯುಎಸ್ ಪ್ರಮುಖ ಪ್ರದೇಶಕ್ಕೆ ತಲುಪಿಸುವ ಶಕ್ತಿಯನ್ನು ಹೊಂದಿರುತ್ತದೆ," ಎಂದಿದ್ದಾರೆ.

ಚಿತ್ರ ಕೃಪೆ: ಇಂಡಿಯಾ ಟುಡೇ

ಜಗತ್ತಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಕ್ಸಿ ಜಿನ್ ಪಿಂಗ್

ಜಗತ್ತಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಕ್ಸಿ ಜಿನ್ ಪಿಂಗ್

ಬೀಜಿಂಗ್ ನಲ್ಲಿ ಇತ್ತೀಚಿಗೆ ನಡೆದ ಚೈನೀಸ್ ಕಮ್ಯೂನಿಸ್ಟ್ ಪಕ್ಷದ 100ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ "ಚೀನಾದ ಪ್ರಜೆಗಳಾದ ನಮ್ಮನ್ನು ಯಾವುದೇ ದೇಶದ ಪಡೆಗಳು ಪೀಡಿಸಲು, ದಬ್ಬಾಳಿಕೆ ನಡೆಸಲು ಹಾಗೂ ಅಧೀನಗೊಳಿಸಿಕೊಳ್ಳಲು ಸಾಧ್ಯವಿಲ್ಲ. ಯಾರಾದರೂ ಹಾಗೆ ಮಾಡುವುದಕ್ಕೆ ಪ್ರಯತ್ನಿಸಿದರೆ 1.4 ಬಿಲಿಯನ್ ಚೀನಿಯರ ಉಕ್ಕಿನ ಗೋಡೆಗೆ ಡಿಕ್ಕಿ ಹೊಡೆದಂತೆ," ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿರುವ ಬಗ್ಗೆ ಕ್ಸಿನುವಾ ವರದಿ ಮಾಡಿದೆ.

English summary
China's Nuclear building construction To Hold Over 100 ICMBs in Gobi Desert: Satellite Images Expose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X