ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಚೀನಾ ಅಧ್ಯಕ್ಷರಿಂದ ಶೀತಲ ಸಮರ ಎಚ್ಚರಿಕೆ

|
Google Oneindia Kannada News

ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಶೀತಲ ಸಮರ ನಡೆಯುವ ಎಚ್ಚರಿಕೆಯನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನೀಡಿದ್ದಾರೆ.

ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಶೀತಲ ಸಮರ ಏರ್ಪಡುವ ಸಾಧ್ಯತೆ ಇದೆ ಎಂದಿದ್ದಾರೆ.

ಪಾಕಿಸ್ತಾನಕ್ಕೆ ಸುಧಾರಿತ ಯುದ್ಧನೌಕೆ ಕೊಟ್ಟ ಚೀನಾಪಾಕಿಸ್ತಾನಕ್ಕೆ ಸುಧಾರಿತ ಯುದ್ಧನೌಕೆ ಕೊಟ್ಟ ಚೀನಾ

ವ್ಯಾಪಾರ ಸಂಬಂಧ ಪೆಸಿಫಿಕ್ ನಲ್ಲಿನ ಮಾರ್ಗಗಳನ್ನು ಸದಾ ಕಾರ್ಯಾಚರಿಸುವಂತೆ ನೋಡಿಕೊಳ್ಳಬೇಕು.

ಇಲ್ಲವಾದರೆ ಅದರಿಂದಾಗಿ ವ್ಯಾಪಾರ ಮಾರ್ಗಗಳು ಮುಚ್ಚಿ ದೇಶಗಳ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಉಂಟಾಗುವುದಾಗಿ ಚೀನಾ ಅಧ್ಯಕ್ಷ ತಿಳಿಸಿದ್ದಾರೆ.

China’s Leader Xi Warns Against Cold War In Asia-Pacific

ಇತ್ತೀಚಿಗಷ್ಟೆ ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯ ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಹೊಸ ಒಕ್ಕೂಟ ಸ್ಥಾಪನೆ ಕುರಿತಾಗಿ ಚರ್ಚೆ ನಡೆಸಿದ್ದವು. ಅದರ ಬೆನ್ನಲ್ಲೇ ಕ್ಸಿ ಜಿನ್‌ಪಿಂಗ್ ಈ ಎಚ್ಚರಿಕೆ ನೀಡಿದ್ದಾರೆ.

ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಆಸ್ಟ್ರೇಲಿಯ ಪರಮಾಣುಚಾಲಿತ ಸಬ್ ಮೆರಿನ್ ಅಭಿವೃದ್ಧಿ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆದಿತ್ತು. ಇದನ್ನು ಚೀನಾ ಕಟುವಾಗಿ ವಿರೋಧಿಸಿದೆ.

ಭಾರತದ ಸುತ್ತಮುತ್ತಲಿನ ಇಂಡೋ-ಪೆಸಿಫಿಕ್‌ ಸಮುದ್ರ ಪ್ರದೇಶದಲ್ಲಿ ಚೀನಾ ಹೆಚ್ಚು ಪ್ರಭಾವ ಬೆಳೆಸುತ್ತಿರುವುದನ್ನು ಮನಗಂಡಿರುವ ಅಮೆರಿಕ, ಬ್ರಿಟನ್‌ ಹಾಗೂ ಆಸ್ಪ್ರೇಲಿಯಾಗಳು ಈಗ ಒಗ್ಗಟ್ಟಾಗಿದ್ದು ಹೊಸ ತ್ರಿಪಕ್ಷೀಯ ಭದ್ರತಾ ಒಪ್ಪಂದದ ಘೋಷಣೆ ಮಾಡಿವೆ. ಚೀನಾ ಪ್ರಭಾವವನ್ನು ಈ ವಲಯದಲ್ಲಿ ತಗ್ಗಿಸುವ ಉದ್ದೇಶವನ್ನೇ ಈ ಮೈತ್ರಿಕೂಟ ಹೊಂದಿದೆ ಎಂದು ಹೇಳಲಾಗಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಹಾಗೂ ಬ್ರಿಟನ್‌ ಪ್ರಧಾನಿ ಬೊರಿಸ್‌ ಜಾನ್ಸನ್‌ ಅವರು ಈ ಮೈತ್ರಿ ಘೋಷಿಸಿ ಜಂಟಿ ಹೇಳಿಕೆ ನೀಡಿದ್ದಾರೆ. ಈ ನಡೆಯು ಇಂಡೋ-ಪೆಸಿಫಿಕ್‌ ವಲಯದಲ್ಲಿ ಸ್ಥಿರತೆ ಉಂಟು ಮಾಡಲಿದೆ. ಇದು ಐತಿಹಾಸಿಕ ಕ್ರಮ ಎಂದು ಹೇಳಿದ್ದಾರೆ.

'ಔಕುಸ್‌' (ಆಸ್ಪ್ರೇಲಿಯ, ಬ್ರಿಟನ್‌, ಅಮೆರಿಕ) ಹೆಸರಿನ ಈ ಮೈತ್ರಿಕೂಟದಲ್ಲಿ ಎಲ್ಲ ಮೂರೂ ದೇಶಗಳು ಸಾಗರ ರಕ್ಷಣೆಗೆ ಸಂಬಂಧಿಸಿದ ತಂತ್ರಜ್ಞಾನ ಸಹಕಾರ ವೃದ್ಧಿಸಿಕೊಳ್ಳಲಿವೆ. ಒಬ್ಬರ ನೆಲೆಯನ್ನೊಬ್ಬರು ಬಳಕೆ ಮಾಡಿಕೊಳ್ಳಲಿವೆ. ರಕ್ಷಣಾ ವಿಜ್ಞಾನ-ತಂತ್ರಜ್ಞಾನದ ವಿನಿಮಯ ಮಾಡಿಕೊಳ್ಳಲಿವೆ.

ಇದೇ ವೇಳೆ, ಆಸ್ಪ್ರೇಲಿಯಾ ದೇಶವು ಅಣ್ವಸ್ತ್ರ ಚಾಲಿತ ಸಬ್‌ಮರೀನ್‌ಗಳನ್ನು ಅಮೆರಿಕ ಹಾಗೂ ಬ್ರಿಟನ್‌ ಸಹಾಯದಿಂದ ನಿರ್ಮಿಸಲಿದೆ. ಈ ಜಲಾಂತರ್ಗಾಮಿಗಳ ಮೂಲಕ ಏಷ್ಯಾ ಪೆಸಿಫಿಕ್‌ ವಲಯದ ಸಮುದ್ರದಲ್ಲಿ ಕಣ್ಗಾವಲು ಇಡಲಾಗುತ್ತದೆ. ಇದು ಈ ವಲಯದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳುವ ಹವಣಿಕೆಯಲ್ಲಿ ಇರುವ ಚೀನಾ ಓಟಕ್ಕೆ ಬ್ರೇಕ್‌ ಹಾಕುವ ಉದ್ದೇಶ ಹೊಂದಿವೆ.

ಮುಂದಿನ 18 ತಿಂಗಳಲ್ಲಿ ಈ ಉದ್ದೇಶಿತ ಯೋಜನೆಯನ್ನು ಏಷ್ಯಾ ಪೆಸಿಫಿಕ್‌ ವಲಯದಲ್ಲಿ ಸಾಕಾರಗೊಳಿಸುವ ಉದ್ದೇಶ ಹೊಂದಿದ್ದೇವೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

English summary
Chinese President Xi Jinping warned Thursday against letting tensions in the Asia-Pacific region cause a relapse into a Cold War mentality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X