ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬತ್ತಿದ ಚೀನಾದ ಅತಿ ದೊಡ್ಡ ಸರೋವರ! ಮೊದಲ ಬಾರಿಗೆ ಪೊಯಾಂಗ್‌ನಿಂದಾಗಿ ರೆಡ್ ಅಲರ್ಟ್

|
Google Oneindia Kannada News

ಬೀಜಿಂಗ್ ಸೆಪ್ಟೆಂಬರ್ 24: ಚೀನಾ ಈ ವರ್ಷ ಭೀಕರ ಬರ ಎದುರಿಸುತ್ತಿದೆ. ಈ ಬಾರಿ ಅಲ್ಲಿನ ಹಲವೆಡೆ ಅನಿರೀಕ್ಷಿತ ಬಿಸಿ ಕಾಣಿಸಿಕೊಂಡಿದ್ದು, ಮಳೆ ಸಂಪೂರ್ಣ ಬಂದ್ ಆಗಿದೆ. ಇದರ ದೊಡ್ಡ ಮತ್ತು ಗಂಭೀರ ಪರಿಣಾಮವು ಮಧ್ಯ ಚೀನಾದ ಜಿಯಾಂಗ್ಸಿ ಪ್ರಾಂತ್ಯದಲ್ಲಿ ಕಂಡುಬರುತ್ತಿದ್ದು, ಅಲ್ಲಿ ಪೊಯಾಂಗ್ ಸರೋವರದ ನೀರು ಸಂಪೂರ್ಣವಾಗಿ ಬತ್ತಿ ಹೋಗಿದೆ. ಈ ಸರೋವರದ ಸುತ್ತಲು ಭಯದ ಕೂಗು ಮೊಳಗುತ್ತಿದೆ. ಚೀನಾದ ಈ ದೊಡ್ಡ ಸರೋವರದಲ್ಲಿ ನೀರು ಕಾಣೆಯಾದ ಕಾರಣ, ರೆಡ್ ಅಲರ್ಟ್ ನೀಡಬೇಕಾಗಿದೆ.

ಚೀನಾದ ಅತಿದೊಡ್ಡ ಸಿಹಿನೀರಿನ ಪೊಯಾಂಗ್ ಸರೋವರ ಮೊದಲ ಬಾರಿಗೆ ತೀವ್ರ ಬರ ಎದುರಿಸುತ್ತಿದೆ. ಇದರಿಂದಾಗಿ ಮಧ್ಯ ಚೀನಾದ ಜಿಯಾಂಗ್ಸಿ ಪ್ರಾಂತ್ಯವು ಮೊದಲ ಬಾರಿಗೆ ನೀರು ಪೂರೈಕೆಗೆ ಸಂಬಂಧಿಸಿದಂತೆ ರೆಡ್ ಅಲರ್ಟ್ ಘೋಷಿಸಬೇಕಾಗಿದೆ. ಸುದ್ದಿ ಸಂಸ್ಥೆ ರಾಯಿಟರ್ಸ್‌ನ ವರದಿಯ ಪ್ರಕಾರ, ಸರೋವರದ ನೀರಿನ ಮಟ್ಟವು ದಾಖಲೆಗೆ ಇಳಿದಿರುವುದರಿಂದ ಜಿಯಾಂಗ್‌ಕ್ಸಿ ಸರ್ಕಾರವು ಶುಕ್ರವಾರ ಮೊದಲ ಬಾರಿಗೆ ನೀರು ಪೂರೈಕೆ ಮಾಡಲು ಆಗದೆ ಈ ಕ್ರಮವನ್ನು ಕೈಗೊಂಡಿದೆ.

ಪೊಯಾಂಗ್ ಸರೋವರವು ಸಾಮಾನ್ಯವಾಗಿ ಚೀನಾದ ಅತಿ ಉದ್ದದ ನದಿಯಾದ ಯಾಂಗ್ಟ್ಜಿಗೆ ಪ್ರಮುಖ ಪ್ರವಾಹದ ನೀರಿನ ಹೊರಹರಿವು ಆಗಿ ಕಾರ್ಯನಿರ್ವಹಿಸುತ್ತದೆ. ಆದರೆ ಈ ಬಾರಿ ಅದು ಜೂನ್‌ನಿಂದ ಹನಿ ಹನಿ ನೀರಿಗಾಗಿ ಹಾತೊರೆಯುತ್ತಿದೆ. ನೀರಿನ ಮಟ್ಟವನ್ನು ಮೇಲ್ವಿಚಾರಣೆ ಮಾಡುವ ಪೊಯಾಂಗ್ ಸರೋವರದಲ್ಲಿ, ಅದರ ನೀರಿನ ಮಟ್ಟವು ಮೂರು ತಿಂಗಳಲ್ಲಿ 19.43 ಮೀಟರ್‌ಗಳಿಂದ ಕೇವಲ 7.1 ಮೀಟರ್‌ಗೆ ಇಳಿದಿದೆ. ಮುಂದಿನ ದಿನಗಳಲ್ಲಿ ಕೆರೆಯಲ್ಲಿನ ನೀರು ಮತ್ತಷ್ಟು ಕಡಿಮೆಯಾಗಲಿದೆ ಎಂದು ಜಿಯಾಂಗ್ಸಿ ಜಲ ನಿಗಾ ಕೇಂದ್ರ ತಿಳಿಸಿದೆ.

ಜಲವಿದ್ಯುತ್‌ನ ಮೇಲೂ ಪರಿಣಾಮ

ಜಲವಿದ್ಯುತ್‌ನ ಮೇಲೂ ಪರಿಣಾಮ

ವಾಸ್ತವವಾಗಿ ಈ ಬಾರಿ ಚೀನಾದ ಈ ಪ್ರದೇಶದಲ್ಲಿ ಇದುವರೆಗೆ ಮಳೆಯಾಗಿಲ್ಲ. ಜುಲೈನಿಂದ ಇಲ್ಲಿ ಮಳೆ ಕಳೆದ ವರ್ಷಕ್ಕಿಂತ ಶೇ.60ರಷ್ಟು ಕಡಿಮೆ ದಾಖಲಾಗಿದೆ. ಚೀನಾದಾದ್ಯಂತ 267 ಹವಾಮಾನ ಕೇಂದ್ರಗಳು ಈ ಆಗಸ್ಟ್‌ನಲ್ಲಿ ದಾಖಲೆಯ ತಾಪಮಾನವನ್ನು ದಾಖಲಿಸಿವೆ. ಯಾಂಗ್ಟ್ಜಿ ನದಿಯ ಜಲಾನಯನ ಪ್ರದೇಶದಲ್ಲಿನ ಬರ ಪರಿಸ್ಥಿತಿಗಳು ಜಲವಿದ್ಯುತ್‌ನಿಂದ ವಿದ್ಯುತ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತಿವೆ. ಮಾತ್ರವಲ್ಲದೆ ಶರತ್ಕಾಲದ ಪೂರ್ವದ ಕೃಷಿ ಬೆಳೆಗಳನ್ನು ಹಾನಿಗೊಳಿಸಿವೆ.

ಕೆಟ್ಟದಾದ ನೆರೆ ಪ್ರಾಂತ್ಯದ ಪರಿಸ್ಥಿತಿ

ಕೆಟ್ಟದಾದ ನೆರೆ ಪ್ರಾಂತ್ಯದ ಪರಿಸ್ಥಿತಿ

ನೈಋತ್ಯ ಚೀನಾದಲ್ಲಿ ಭಾರೀ ಮಳೆಯ ನಂತರ ಬರಗಾಲದಿಂದ ವಿರಾಮವಿದೆಯಾದರೂ, ಮಧ್ಯ ಚೀನಾದಲ್ಲಿ ಅತ್ಯಂತ ಶುಷ್ಕ ಪರಿಸ್ಥಿತಿಗಳು ಉಳಿದಿವೆ. ಜಿಯಾಂಗ್ಕ್ಸಿಯ ಪರಿಸ್ಥಿತಿಯು 70 ದಿನಗಳವರೆಗೂ ಸುಧಾರಿಸಿಲ್ಲ. ಸಮಸ್ಯೆ ಏನೆಂದರೆ, ಪಕ್ಕದ ಅನ್ಹುಯಿ ಪ್ರಾಂತ್ಯದ ಎಲ್ಲಾ 10 ಜಲಾಶಯಗಳು ಕೂಡ 'ಡೆಡ್ ಪೂಲ್' ಮಟ್ಟಕ್ಕಿಂತ ಕೆಳಕ್ಕೆ ಬಿದ್ದಿವೆ. ಅಂದರೆ ಇಲ್ಲಿಂದ ನೀರು ಬಿಡುವ ಸ್ಥಿತಿಯೂ ಇಲ್ಲ. ಸ್ಥಳೀಯ ವಾಟರ್ ಬ್ಯೂರೋ ಈ ವಾರದ ಆರಂಭದಲ್ಲಿ ಈ ಸಂಗತಿಯನ್ನು ವರದಿ ಮಾಡಿದೆ.

ಮೋಡ ಬಿತ್ತನೆಗೆ ಸಲಹೆ

ಮೋಡ ಬಿತ್ತನೆಗೆ ಸಲಹೆ

ಚೀನಾದ ಅಧಿಕೃತ ಹವಾಮಾನ ಇಲಾಖೆಯು ಈ ವಾರ ಯಾಂಗ್ಟ್ಜಿಯ ಮಧ್ಯ ಮತ್ತು ತಗ್ಗು ಪ್ರದೇಶಗಳಲ್ಲಿ ಬರ ಪರಿಸ್ಥಿತಿಗಳು ಇನ್ನೂ ಮುಂದುವರೆದಿದೆ ಎಂದು ಹೇಳಿದೆ. ಸೀಡ್ ಕ್ಲೌಡಿಂಗ್ (ಕೃತಕ ಮಳೆ) ಮಾಡುವಂತೆ ಮತ್ತು ಇತರ ಪ್ರದೇಶಗಳಿಂದ ನೀರನ್ನು ತಿರುಗಿಸಲು ಸಲಹೆ ನೀಡಲಾಯಿತು. ಆದರೆ, ಇಂತಹ ಅನಿರೀಕ್ಷಿತ ನೀರಿನ ಬಿಕ್ಕಟ್ಟನ್ನು ನೀಗಿಸಲು ಚೀನಾ ಸರ್ಕಾರ ಏನು ಮಾಡಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರಪಂಚದಾದ್ಯಂತ ಹವಾಮಾನ ವೈಪರೀತ್ಯಕ್ಕೆ ಹವಾಮಾನ ಬದಲಾವಣೆಯೇ ಕಾರಣ ಎಂದು ತಜ್ಞರು ಬಹಳ ಹಿಂದಿನಿಂದಲೂ ಹೇಳುತ್ತಿದ್ದಾರೆ.

ಬರಗಾಲದ ಸಮಸ್ಯೆ ಎದುರಿಸುವ ವಿಡಿಯೋ

ಬರಗಾಲದ ಸಮಸ್ಯೆ ಎದುರಿಸುವ ವಿಡಿಯೋ

ಚೀನಾದ ಸರ್ಕಾರಿ ಅಧಿಕಾರಿ ಜಾಂಗ್ ಮೈಫಾಂಗ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಿಂದ ಎಡಿಟ್ ಮಾಡಿದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಬರಗಾಲದ ಸಮಸ್ಯೆಯನ್ನು ಎದುರಿಸಲು ಕೃತಕ ಮಳೆಯನ್ನು ಹೇಗೆ ಆಶ್ರಯಿಸುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಮೋಡ ಬಿತ್ತನೆಗೆ ಯುಎವಿಗಳನ್ನು ಯಶಸ್ವಿಯಾಗಿ ಬಳಸಲು ಆರಂಭಿಸಿರುವುದು ಚೀನಾಕ್ಕೆ ಸಂತಸ ತಂದಿದೆ.

English summary
China's largest freshwater lake, Poyang, has dried up for the first time due to severe drought. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X