ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿತ್ತು.. ಬಿತ್ತು.. ಬಿದ್ದೇ ಬಿಡ್ತು! ಭೂಮಿ ಮೇಲೆ ಪ್ರಳಯ ಜಸ್ಟ್ ಮಿಸ್!

|
Google Oneindia Kannada News

ಭೂಮಿಗೆ ಅನ್ಯಗ್ರಹ ಅಥವಾ ಕ್ಷುದ್ರಗ್ರಹ ಕಾಟ ಹೆಚ್ಚಾಗುತ್ತಿದೆ. ಇದರ ನಡುವೆ ಮಾನವನೇ ನಿರ್ಮಿಸಿಕೊಂಡ ವ್ಯವಸ್ಥೆ ಕೂಡ ಮುಳ್ಳಾಗುತ್ತಿದೆ. ಹೌದು, ತೀವ್ರ ಆತಂಕ ಸೃಷ್ಟಿಸಿದ್ದ ಚೀನಾ ರಾಕೆಟ್‌ನ ಭಗ್ನಾವಶೇಷ ಭೂಮಿಯ ಮೇಲೆ ಬಿದ್ದಿದೆ. ಚೀನಾದ 'ಲಾಂಗ್ ಮಾರ್ಚ್ 5-ಬಿ' ರಾಕೆಟ್‌ ತುಣುಕುಗಳು ಮಾಲ್ಡೀವ್ಸ್‌ಗೆ ಸಮೀಪದಲ್ಲಿ, ಅಂದರೆ ಹಿಂದೂ ಮಹಾಸಾಗರದ ಮೇಲೆ ಬಿದ್ದಿವೆ.

Recommended Video

ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿದ್ದು ಚೀನಾ ರಾಕೆಟ್! | Oneindia Kannada

ರಾಕೆಟ್‌ನ ಭಗ್ನಾವಶೇಷ ಭೂಮಿ ಪ್ರವೇಶಿಸಿರುವ ಕುರಿತು ಚೀನಾ ಬಾಹ್ಯಾಕಾಶ ಸಂಸ್ಥೆ ಸ್ಪಷ್ಟನೆ ನೀಡಿದೆ. ಸಾಗರ ಪ್ರದೇಶದಲ್ಲಿ 72.47 ಡಿಗ್ರಿ ಪೂರ್ವ ರೇಖಾಂಶ ಹಾಗೂ 2.65 ಡಿಗ್ರಿ ಉತ್ತರ ಅಕ್ಷಾಂಶದಲ್ಲಿ ಅಪ್ಪಳಿಸಿದೆ. ಇತ್ತೀಚೆಗೆ ಭೂಮಿಗೆ ಕ್ಷುದ್ರಗ್ರಹ ಅಪ್ಪಳಿಸುವ ಆತಂಕ ಇತ್ತು. ಆದರೆ ಕ್ಷುದ್ರಗ್ರಹಗಳು ಭೂಮಿಯಿಂದ ದೂರದಲ್ಲೇ ಹಾದು ಹೋಗಿದ್ದವು.

ಆದರೆ ಮಾನವನೇ ನಿರ್ಮಿಸಿರುವ ರಾಕೆಟ್‌ನಿಂದ ಭೂಮಿಗೆ ಬಹುದೊಡ್ಡ ಆಪತ್ತು ಎದುರಾಗಿತ್ತು. ಅದರಲ್ಲೂ ನಗರ ಪ್ರದೇಶಗಳ ಮೇಲೆ ರಾಕೆಟ್ ಭಗ್ನಾವಶೇಷ ಅಪ್ಪಳಿಸುವ ಭೀತಿ ಆವರಿಸಿತ್ತು. ಆದರೆ ಅದೆಲ್ಲಾ ಈಗ ದೂರವಾಗಿದ್ದು, ಹಿಂದೂ ಮಹಾಸಾಗರದ ಮೇಲೆ ರಾಕೆಟ್ ಭಗ್ನಾವಶೇಷ ಅಪ್ಪಳಿಸಿರುವುದು ಖಾತ್ರಿಯಾಗಿದೆ.

22 ಟನ್ ತೂಕದ ರಾಕೆಟ್..!

22 ಟನ್ ತೂಕದ ರಾಕೆಟ್..!

ಭೂಮಿ ಗುರುತ್ವದಿಂದ ತಪ್ಪಿಸಿಕೊಂಡು ಹೊರಗೆ ಹೋಗಲು ಭಾರಿ ಪ್ರಮಾಣದ ಶಕ್ತಿ ಅಗತ್ಯವಿರುತ್ತದೆ. ರಾಕೆಟ್ ಲಾಂಚ್ ಆದ ಬಳಿಕ ಬಾಹ್ಯಾಕಾಶದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ರಾಕೆಟ್‌ಗೆ ಗಾತ್ರ ಕೂಡ ಬಹುಮುಖ್ಯವಾಗಿದೆ. ಇದೇ ಕಾರಣಕ್ಕೆ 22 ಟನ್‌ ತೂಕದ ರಾಕೆಟ್‌ನ ಉಡಾಯಿಸಿತ್ತು ಚೀನಾ.

ಆದರೆ ಏನೋ ಎಡವಟ್ಟು ಆಗಿದ್ದು, ಚೀನಾದ ರಾಕೆಟ್ ನಿಯಂತ್ರಣ ಕಳೆದುಕೊಂಡು ಭೂಮಿಗೆ ಅಪ್ಪಳಿಸಿದೆ. ಹೀಗೆ ರಾಕೆಟ್ ಭೂಮಿಗೆ ಬೀಳುವ ಸಂದರ್ಭದಲ್ಲಿ ಕೆಲವು ಬಿಡಿಭಾಗಗಳು ಭೂಮಿ ಗುರುತ್ವ ಬಲೆಗೆ ಸಿಲುಕಿ ಆ ಘರ್ಷಣೆಯಲ್ಲಿ ಉರಿದು ಹೋಗಿವೆ. ಆದರೆ ಇನ್ನುಳಿದ ತುಣುಕುಗಳು ಮಾಲ್ಡೀವ್ಸ್ ಬಳಿ ಸಾಗರಕ್ಕೆ ಅಪ್ಪಳಿಸಿವೆ.

ಜೀವ ಕೈಯಲ್ಲಿ ಹಿಡಿದಿದ್ದರು..!

ಜೀವ ಕೈಯಲ್ಲಿ ಹಿಡಿದಿದ್ದರು..!

ರಾಕೆಟ್ ಭೂಮಿಗೆ ಅಪ್ಪಳಿಸುವ ಮುನ್ಸೂಚನೆ ಸಿಕ್ಕ ತಕ್ಷಣ ಅಲರ್ಟ್ ಆಗಿದ್ದು ಅಮೆರಿಕ ಮಿಲಿಟರಿ. ರಾಕೆಟ್‌ನ ಬಿಡಿಭಾಗ ಭೂಮಿ ಮೇಲೆ ಎಲ್ಲೆಲ್ಲಿ ಬೀಳಬಹುದು ಎಂದು ಅಂದಾಜಿಸಿತ್ತು ಅಮೆರಿಕ ಮಿಲಿಟರಿ. ಈ ಪಟ್ಟಿಯಲ್ಲಿ ಪ್ರಮುಖ ನಗರ ಹಾಗೂ ಜನರು ವಾಸಿಸುವ ಸ್ಥಳಗಳು ಇದ್ದವು.

ಆದರೆ ಅದೃಷ್ಟವಶಾತ್ ದುರಂತ ಸಂಭವಿಸಿಲ್ಲ. ಘಟನೆಯ ಬಳಿಕ ಹಲವು ರಾಷ್ಟ್ರಗಳು ಚೀನಾ ವಿರುದ್ಧ ಆಕ್ರೋಶ ಹೊರಹಾಕಿವೆ. ಪ್ರತಿ ಸೆಕೆಂಡ್‌ಗೆ 8 ಕಿಲೋ ಮೀಟರ್ ವೇಗದಲ್ಲಿ ರಾಕೆಟ್‌ ಭೂಮಿ ಪ್ರವೇಶಿಸಿತ್ತು. ಇದರಿಂದ ತೊಂದರೆ ಆಗಿದ್ದರೆ ಯಾರು ಹೊಣೆ ಎಂದು ಚೀನಾ ಬಗ್ಗೆ ಅಸಮಾಧಾನ ಹೊರಹಾಕಿವೆ.

ರೊಚ್ಚಿಗೆದ್ದ ‘ನಾಸಾ’ ವಿಜ್ಞಾನಿಗಳು

ರೊಚ್ಚಿಗೆದ್ದ ‘ನಾಸಾ’ ವಿಜ್ಞಾನಿಗಳು

ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಬಲ ಸಂಸ್ಥೆ ‘ನಾಸಾ'ಗೆ ಇರುವ ಏಕೈಕ ಪೈಪೋಟಿ ಚೀನಾದ್ದು. ಆದರೆ ಚೀನಾ ಈಗ ಮಾಡಿರುವ ಎಡವಟ್ಟು ನಾಸಾ ವಿಜ್ಞಾನಿಗಳನ್ನ ರೊಚ್ಚಿಗೆಬ್ಬಿಸಿದೆ. ಚೀನಾ ರಾಕೆಟ್‌ ತುಣುಕುಗಳು ನಗರ ಅಥವಾ ಜನ ವಾಸ ಮಾಡುವ ಸ್ಥಳದಲ್ಲಿ ಬಿದ್ದಿದ್ದರೆ ಕಥೆ ಏನು ಎಂದು ನಾಸಾ ಪ್ರಶ್ನೆ ಮಾಡಿದೆ. ಬಾಹ್ಯಾಕಾಶ ಅವಶೇಷ ನಿರ್ವಹಣೆಯ ವಿಚಾರದಲ್ಲಿ ಚೀನಾ ಜವಾಬ್ದಾರಿಯುತವಾಗಿ ನಡೆದುಕೊಂಡಿಲ್ಲ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ಆಡಳಿತಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದ್ದು, ಜಾಗತಿಕ ಬಾಹ್ಯಾಕಾಶ ತಿಕ್ಕಾಟಕ್ಕೆ ನಾಂದಿ ಹಾಡಿದೆ.

ನೀತಿ ಪಾಠ ಹೇಳಿದ ‘ನಾಸಾ’

ನೀತಿ ಪಾಠ ಹೇಳಿದ ‘ನಾಸಾ’

ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎಂಬಂತೆ ನಾಸಾ ಚೀನಾಗೆ ಬುದ್ಧಿ ಮಾತು ಹೇಳಿದೆ. ಆದರೆ 1979ರ ಸಂದರ್ಭದಲ್ಲಿ ನಾಸಾ ಸಂಸ್ಥೆ ಸ್ಪೇಸ್ ಲ್ಯಾಬ್ ಕೂಡ ಹೀಗೆ ನಿಯಂತ್ರಣ ತಪ್ಪಿ ಭೂಮಿಗೆ ಅಪ್ಪಳಿಸಿತ್ತು. ಅಂದು ಆಸ್ಟ್ರೇಲಿಯಾದಲ್ಲಿ ಸ್ಪೇಸ್ ಲ್ಯಾಬ್ ಅವಶೇಷ ಬಿದ್ದಿದ್ದವು. ಈ ಘಟನೆ ಬಳಿಕ ನಾಸಾ ದೊಡ್ಡ ಎಡವಟ್ಟುಗಳನ್ನು ಮಾಡಿಕೊಂಡಿಲ್ಲ. ಆದರೆ ಆರಂಭದಲ್ಲಿ ನಾಸಾ ಕೂಡ ಹಲವಾರು ತಪ್ಪನ್ನ ಮಾಡಿತ್ತು. ಈಗ ಚೀನಾ ವಿಚಾರದಲ್ಲಿ ಕೂಡ ಅದೇ ಆಗಿದೆ. ಹೀಗೆಂದು ಇಂತಹ ತಪ್ಪುಗಳು ಮರುಕಳಿಸಬಾರದು ಎನ್ನುತ್ತಿದ್ದಾರೆ ಬಾಹ್ಯಾಕಾಶ ತಜ್ಞರು.

English summary
China’s failed rocket parts has been crashed on Indian Ocean near Maldives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X