ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 2,592ಕ್ಕೆ ಏರಿಕೆ

|
Google Oneindia Kannada News

ವುಹಾನ್, ಫೆಬ್ರವರಿ 24: ಚೀನಾದಲ್ಲಿ ಕೊರೊನಾ ರೋಗ(ಕೊವಿಡ್19)ಗೆ ಬಲಿಯಾದವರ ಸಂಖ್ಯೆ 2,592ಕ್ಕೆ ಏರಿಕೆಯಾಗಿದೆ.

ಹ್ಯೂಬೆ ಒಂದರಲ್ಲೇ 150ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಕೊರೊನಾ ರೋಗದಿಂದ ಇದೀಗ ದಕ್ಷಿಣ ಕೊರಿಯಾ ಕೂಡ ನಲುಗುತ್ತಿದೆ.

ಕೊರೊನಾ ವೈರಸ್ ಗೆ ಚೀನಾ ಬಳಿಕ ನಲುಗಿದ ಮತ್ತೊಂದು ದೇಶಕೊರೊನಾ ವೈರಸ್ ಗೆ ಚೀನಾ ಬಳಿಕ ನಲುಗಿದ ಮತ್ತೊಂದು ದೇಶ

ದಕ್ಷಿಣ ಕೊರಿಯಾದಲ್ಲಿ ಒಂದೇ ದಿನ 161 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಇದುವರೆಗೂ ದಕ್ಷಿಣ ಕೊರಿಯಾದಲ್ಲಿ ಏಳು ಮಂದಿ ಮಾರಕ ಸೋಂಕಿನಿಂದ ಮೃತಪಟ್ಟಿದ್ದಾರೆ. . ಇನ್ನು, ಸೋಂಕಿತರ ಸಂಖ್ಯೆ ದೇಶದಲ್ಲಿ 763ಕ್ಕೆ ಏರಿಕೆಯಾಗಿದೆ.

Chinas Death Toll From The New Coronavirus Has Risen To 2592

763 ಸೋಂಕಿತರ ಪೈಕಿ 11 ಮಂದಿ ದಕ್ಷಿಣ ಕೊರಿಯಾದ ಸೇನಾಪಡೆಗೆ ಸೇರಿದ ಸಿಬ್ಬಂದಿ ಎಂದು ರಕ್ಷಣಾ ಸಚಿವಾಲಯವು ಸ್ಪಷ್ಟಪಡಿಸಿದೆ. ಎಂಟು ಮಂದಿ ಭೂ ಸೇನೆ, ಒಬ್ಬರು ವಾಯು ಸೇನೆ ಮತ್ತು ಇನ್ನೊಬ್ಬರು ನೌಕಾಸೇನೆಗೆ ಸೇರಿದ ಸಿಬ್ಬಂದಿ ಎನ್ನುವ ಮಾಹಿತಿ ಲಭ್ಯವಾಗಿದೆ.

ಚೀನಾ, ಇಟಲಿ, ದಕ್ಷಿಣ ಕೊರಿಯಾ, ಇರಾನ್‌, ಸಿಂಗಾಪುರ, ಜಪಾನ್‌ ದೇಶಗಳು ಕೊರೊನಾ ವೈರಸ್‌ ದಾಳಿಗೆ ಸಿಲುಕಿ ತತ್ತರಿಸಿವೆ. ಭಾರತದಲ್ಲೂ ಈ ವೈರಸ್ ಹರಡಬಹುದು ಎಂಬ ಮುನ್ಸೂಚನೆ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಸುದ್ದಿಯೊಂದು ಕುಕ್ಕುಟೋದ್ಯಮಕ್ಕೆ ಕಂಟಕವಾಗಿ ಪರಿಣಮಿಸಿದೆ.

ರಾಜ್ಯ ಸೇರಿ ನಾನಾ ಕಡೆ ಈ ಸುಳ್ಳು ವದಂತಿ ಹರಿದಾಡುತ್ತಿದೆ. ಇದಕ್ಕೆ ಸಾರ್ವಜನಿಕರು ಯವುದೇ ರೀತಿಯಲ್ಲಿ ಭಯ ಪಡುವ ಅಗತ್ಯತೆ ಇಲ್ಲ. ಯಾವುದೇ ಆಹಾರದ ವಸ್ತುಗಳು ಬೇಯಿಸಿದ ಮೇಲೆ ಬಿಸಿಯ ತಾಪಕ್ಕೆ ಎಂತಹದೇ ವೈರಸ್‌ ಇದ್ದರೂ ಯಾವುದೇ ಸಮಸ್ಯೆಯಾಗುವುದಿಲ್ಲ. ಇದಕ್ಕೆ ಸಂಬಂದ ಪಟ್ಟಂತೆ ಕೇಂದ್ರ ಹಾಗೂ ರಾಜ್ಯ ಸರಕಾರ ಸ್ಪಷ್ಟನೆ ನೀಡಿದೆ.

English summary
China's death toll from the new coronavirus has risen to 2,592 after 150 more fatalities were reported, all but one in the epicentre of Hubei province.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X