ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಸೇನೆ ಸೇರಿಕೊಂಡ್ವು ಮಂಗ್ಯಾಗಳು

By Mahesh
|
Google Oneindia Kannada News

ಬೀಜಿಂಗ್, ಮೇ 9: ಚೀನಾ ಸೇನೆಯ ವಾಯು ಪಡೆಯು ಇದೀಗ ಮಂಗಗಳಿಗೆ ತರಬೇತಿಯನ್ನು ನೀಡುವ ಮೂಲಕ ರಾಜಧಾನಿಯ ವಾಯುನೆಲೆ ರಕ್ಷಣೆಯ ಕಾರ್ಯವನ್ನು ಈ ವಾನರ ಪಡೆಗೆ ವಹಿಸಿದೆ. ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ ಎ) macques ಗಳಿಗೆ ವಿಶೇಷ ತರಬೇತಿ ನೀಡುತ್ತಿದೆ ಎಂದು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ವಿಮಾನ ಹಾರಾಟದ ವೇಳೆ ಸುರಕ್ಷತೆಯನ್ನು ಖಚಿತಪಡಿಸುವ ಮತ್ತು ಭೂಸ್ಪರ್ಶ ಹಾಗೂ ಹಾರಾಟ ಪ್ರಾರಂಭದ ವೇಳೆ ವಿಮಾನವನ್ನು ಪಕ್ಷಿಘಾತಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಪಕ್ಷಿಗಳ ಗೂಡುಗಳನ್ನು ಕಿತ್ತುಹಾಕಲು ಚೀನಾದ ವಾಯುಪಡೆಯು ಎರಡು ಮಂಗಗಳಿಗೆ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ.

ಬೇಸಿಗೆ ಕಾಲದಲ್ಲಿ ಲಕ್ಷಾಂತರ ವಲಸೆ ಹಕ್ಕಿಗಳು ಉತ್ತರದ ಕಡೆಗೆ ಹಾರಾಟ ನಡೆಸಲಾರಂಭಿಸಿರುವ ಸಂದರ್ಭದಲ್ಲಿ ಹಕ್ಕಿಗಳಿಂದ ವಿಮಾನಗಳಿಗೆ ಯಾವುದೇ ತೊಂದರೆಯಾಗುವುದನ್ನು ತಡೆಯಲು ವಾಯುಪಡೆಯ ಬೀಜಿಂಗ್ ಪ್ರಾದೇಶಿಕ ಸೇನಾ ಕಮಾಂಡ್ ಮಂಗಗಳನ್ನು ನಿಯೋಜಿಸಿದ್ದಾರೆ.

China's air force creates a battalion of monkeys

ತರಬೇತಿ ಪಡೆದ ಮಂಗಗಳು ವಾಯುನೆಲೆಯ ಸುತ್ತಲಿನ ಮರಗಳಲ್ಲಿರುವ ಹಕ್ಕಿಗಳ ಗೂಡುಗಳನ್ನು ನಾಶಪಡಿಸುವುದಲ್ಲದೇ ಈ ಹಕ್ಕಿಗಳು ವಾಯುನೆಲೆಯ ವಾತಾವರಣದಲ್ಲಿ ಹಾರಾಟ ನಡೆಸಿದಲ್ಲಿ ಅವುಗಳನ್ನು ಬೆಂಬತ್ತುವ ಕಾರ್ಯವನ್ನೂ ಮಾಡುತ್ತಿವೆ. ಇದರಿಂದಾಗಿ ಇದೀಗ ವಾಯುನೆಲೆಯಲ್ಲಿ ಸಮರ ವಿಮಾನಗಳ ಆಗಮನ-ನಿರ್ಗಮನ ಪ್ರಕ್ರಿಯೆಗಳು ಸುಲಲಿತವಾಗಿ ನಡೆಯುತ್ತಿವೆ. ಈ ವಾಯುನೆಲೆಯಲ್ಲಿ ಪಕ್ಷಿಗಳ ಉಪಟಳ ಎಷ್ಟು ಮಿತಿಮೀರಿತ್ತೆಂದರೆ ಸುಡುಮದ್ದುಗಳಿಗಾಗಲೀ ಮದ್ದುಗುಂಡುಗಳಿಗಾಗಲೀ ಈ ಹಕ್ಕಿಗಳು ಜಗ್ಗುತ್ತಿರಲಿಲ್ಲ. ಹಕ್ಕಿಗಳ ಈ ಹದ್ದುಮೀರಿದ ವರ್ತನೆಯಿಂದ ಬೇಸತ್ತ ವಾಯುಸೇನೆ ಹಕ್ಕಿಗಳನ್ನು ಓಡಿಸಲು ವಾನರ ಪಡೆಯ ನೆರವು ಪಡೆದಿದೆ.

ಹಕ್ಕಿಗಳ ಹೊಡೆತದಿಂದ ವಿಮಾನವನ್ನು ರಕ್ಷಿಸುವ ಕ್ರಮವಾಗಿ ಇತ್ತೀಚೆಗೆ ವಾಯುಪಡೆಯು ಮಂಗಗಳಿಗೆ ತರಬೇತಿ ಪ್ರಾರಂಭಿಸಿತ್ತು ಎಂದು ಸರಕಾರಿ ಮಾಧ್ಯಮವೊಂದು ವರದಿ ಮಾಡಿದೆ. ಮಂಗಗಳು ಸಹಜವಾಗಿಯೇ ಏರಲು ಹಾಗೂ ಹಾರಲು ಶಕ್ತವಾಗಿರುವುದರಿಂದ ಅವುಗಳಿಗೆ ತರಬೇತಿ ನೀಡುವುದು ಅತ್ಯಂತ ಸುಲಭ ಎಂದು ವಾಯುಪಡೆ ಕೇಂದ್ರದ ನಿರ್ದೇಶಕ ವಾಂಗ್ ಯೂಜಿಯಾನ್ ತಿಳಿಸಿದ್ದಾರೆ.

ಹಕ್ಕಿ ಹೊಡೆತಗಳನ್ನು ತಪ್ಪಿಸಲು ಬಳಸಲಾದ ಇತರ ವಿಧಾನಗಳಿಗೆ ಹೋಲಿಸಿದಲ್ಲಿ ಮಂಗಗಳ ಬಳಕೆ ಹೆಚ್ಚು ಸುರಕ್ಷಿತ, ಸಮರ್ಥ, ಕಡಿಮೆ ವೆಚ್ಚದಾಯಕ ಹಾಗೂ ಹಕ್ಕಿಗಳಿಗೆ ಉಂಟಾಗುವ ಅಪಾಯವೂ ಅತ್ಯಂತ ಕಡಿಮೆಯಾಗಿದೆ ಎಂದು ವಾಯುಪಡೆ ಕೇಂದ್ರದ ನಿರ್ದೇಶಕ ವಾಂಗ್ ಯೂಜಿಯಾನ್ ತಿಳಿಸಿದ್ದಾರೆ.

ತರಬೇತಿಯ ಬಳಿಕ ಪ್ರತಿಯೊಂದು ಮಂಗ ದಿನಕ್ಕೆ ಆರರಿಂದ ಎಂಟು ಹಕ್ಕಿಗೂಡುಗಳನ್ನು ತೆರವುಗೊಳಿಸಲು ಸಾಧ್ಯವಾಗಿದೆ. ತರಬೇತಿ ಪಡೆದಿರುವ ಮಂಗಗಳು ಈಗಾಗಲೇ ವಿಮಾನ ನಿಲ್ದಾಣದ ಸುತ್ತಲೂ ಸುಮಾರು 180ಕ್ಕೂ ಅಧಿಕ ಹಕ್ಕಿಗೂಡುಗಳನ್ನು ವಿಲೇವಾರಿ ಮಾಡಿವೆ ಎಂದು ತಿಳಿದು ಬಂದಿದೆ.

ಈ ಹಿಂದೆ ಅಮೆರಿಕದ ಸೇನಾಪಡೆ ನೆಲಬಾಂಬ್ ‌ಗಳ ಪತ್ತೆಗೆ ಡಾಲ್ಫಿನ್ ‌ಗಳನ್ನು ಬಳಸಿಕೊಂಡಿತ್ತು. ಈ ಹಿಂದಿನಿಂದಲೂ ನಾಯಿಯನ್ನು ರಕ್ಷಣಾ ಪಡೆಗಳಲ್ಲಿ ಬಳಸಿಕೊಂಡು ಬರಲಾಗುತ್ತಿದ್ದು ಅಲ್ ‌ಖೈದಾ ಮುಖ್ಯಸ್ಥ ಲಾಡೆನ್ ‌ನ ಹತ್ಯೆ ಕಾರ್ಯಾಚರಣೆ ನಡೆದ ಸಂದರ್ಭದಲ್ಲಿಯೂ ಅಮೆರಿಕದ ಪಡೆಗಳು 'ಕೈರೋ' ಎಂಬ ಹೆಸರಿನ ಬೆಲ್ಜಿಯಂ ಶೆಪರ್ಡ್ ನಾಯಿಯನ್ನು ಬಳಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. (ಐಎಎನ್ ಎಸ್)

English summary
The Air Force of the People's Liberation Army (PLA) of China has trained a group of macaques to help protect an air base close to Beijing. These monkeys have been put here to take care of the huge flocks of birds that pose a threat to flights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X