ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಾಂಗ ಸಚಿವರ ಸಭೆಯಲ್ಲಿ ಚೀನಾ, ರಷ್ಯಾದಿಂದ ಒಗ್ಗಟ್ಟು ಪ್ರದರ್ಶನ

|
Google Oneindia Kannada News

ಬೀಜಿಂಗ್, ಮಾರ್ಚ್ 23: ವಿದೇಶಾಂಗ ಸಚಿವರ ಸಭೆಯಲ್ಲಿ ಚೀನಾ ಹಾಗೂ ರಷ್ಯಾ ಒಗ್ಗಟ್ಟು ಪ್ರದರ್ಶಿಸಿದೆ.

ತಮ್ಮ ದೇಶಗಳ ಸಾರ್ವಭೌಮ ರಾಜಕೀಯ ವ್ಯವಸ್ಥೆಯೊಳಗೆ ಹೊರದೇಶಗಳು ಮೂಗು ತೂರಿಸುವುದನ್ನು ತಿರಸ್ಕರಿಸಿದ ಚೀನಾ ಮತ್ತು ರಷ್ಯಾ ವಿದೇಶಾಂಗ ಸಚಿವರಾದ ವಾಂಗ್ ಯೀ ಮತ್ತು ಸರ್ಗೈ ಲಾವ್ರೋವ್, ಹವಾಮಾನ ಬದಲಾವಣೆಯಿಂದ ಹಿಡಿದು ಕೊರೊನಾ ಸೋಂಕಿನವರೆಗೆ ಎಲ್ಲಾ ವಿಷಯಗಳ ಕುರಿತು ಜಾಗತಿಕವಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದರು.

ಭಾರತ-ಚೀನಾ ನಡುವೆ ಯುದ್ಧ ನಡೆಯುವುದಿಲ್ಲ ಎಂಬ ನಂಬಿಕೆ ಇದೆ: ಅಮೆರಿಕಭಾರತ-ಚೀನಾ ನಡುವೆ ಯುದ್ಧ ನಡೆಯುವುದಿಲ್ಲ ಎಂಬ ನಂಬಿಕೆ ಇದೆ: ಅಮೆರಿಕ

ಮಾನವ ಹಕ್ಕುಗಳ ವಿಷಯದಲ್ಲಿ ಟೀಕೆಗಳು ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವೆಯೂ ನಡೆದ ವಿದೇಶಾಂಗ ಸಚಿವರ ಸಭೆಯಲ್ಲಿ ಉಭಯ ದೇಶಗಳು ಒಗ್ಗಟ್ಟು ಪ್ರಸರ್ಶಿಸಿವೆ. ಎಲ್ಲಾ ರೀತಿಯ ಏಕಪಕ್ಷೀಯ ನಿರ್ಧಾರಗಳನ್ನು ವಿರೋಧಿಸಲು ಎಲ್ಲಾ ದೇಶಗಳು ಒಗ್ಗಟ್ಟಾಗಿ ನಿಲ್ಲಬೇಕು ಎಂದು ವಾಂಗ್ ಹೇಳಿದರು.

 China, Russia Officials Meet In Show Of Unity Against European Union, U.S.

ದಕ್ಷಿಣ ಚೀನಾದ ನ್ಯಾನಿಂಗ್ ನಲ್ಲಿ ಸೋಮವಾರ ನಡೆದ ಆರಂಭಿಕ ಸಭೆಯಲ್ಲಿ ವಾಂಗ್ ಮತ್ತು ಲಾವ್ರೊವ್ ಅವರು ಬೇರೆ ಬೇರೆ ದೇಶಗಳ ವ್ಯವಹಾರಗಳಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದ್ದರು.

ಇರಾನ್ ಜತೆಗಿನ ಅಣ್ವಸ್ತ್ರ ಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದು, ಈ ಒಪ್ಪಂದಕ್ಕೆ ಮತ್ತೆ ಸೇರ್ಪಡೆಗೊಳ್ಳುವಂತೆ ಅಮೆರಿಕವನ್ನು ಒತ್ತಾಯಿಸಿದರು.

ಉಭಯ ರಾಷ್ಟ್ರಗಳ ಸಚಿವರು ಮಾತನಾಡಿ, ಚೀನಾದ ಪಶ್ಚಿಮ ಕ್ಸಿನ್ ಜಿಯಾಂಗ್ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಚೀನಾದ ಅಧಿಕಾರಿಗಳ ವಿರುದ್ಧ ಐರೋಪ್ಯ ಒಕ್ಕೂಟ ಬ್ರಿಟನ್, ಕೆನಡಾ ಹಾಗೂ ಅಮೆರಿಕ ಜಾರಿಗೊಳಿಸಿರುವ ಸಂಘಟಿತ ನಿರ್ಬಂಧಗಳನ್ನು ವಾಂಗ್ ತೀವ್ರವಾಗಿ ಖಂಡಿಸಿದರು.

English summary
The foreign ministers of China and Russia displayed unity at their meeting on Tuesday amid criticism and Western sanctions against them over human rights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X