ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸಾವಿಲ್ಲದೇ ಮೊಟ್ಟ ಮೊದಲ ದಿನ ಕಳೆಯಿತಾ ಚೀನಾ?

|
Google Oneindia Kannada News

ಬೀಜಿಂಗ್, ಏಪ್ರಿಲ್ 7: ಕೊರೊನಾ ವೈರಸ್‌ನಿಂದ ಸ್ಮಶಾನವಾಗಿದ್ದ ಚೀನಾದಲ್ಲಿ ನಿಧಾನವಾಗಿ ಪರಿಸ್ಥಿತಿ ಬದಲಾಗುತ್ತಿದೆ. ಸೋಂಕು ಹರಡುವಿಕೆ ಸಂಪೂರ್ಣವಾಗಿ ಕಡಿಮೆಯಾಗಿದ್ದು, ದಿನದಿನಕ್ಕೆ ಕೊವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ ಎಂದು ಚೀನಾ ಸರ್ಕಾರ ಹೇಳುತ್ತಿದೆ.

Recommended Video

ಬುಲೆಟ್ ಪ್ರಕಾಶ್ ನೆನೆದು ಕಂಬನಿ ಮಿಡಿದ ಕೌರವ ಬಿಸಿ ಪಾಟೀಲ್ | Oneindia Kannada

ಡಿಸೆಂಬರ್‌ನಲ್ಲಿ ಸೋಂಕು ಪತ್ತೆಯಾಗಿತ್ತು. ಜನವರಿಯಿಂದ ಆರಂಭವಾದ ಮರಣಮೃದಂಗ ಇಲ್ಲಿವರೆಗೂ ನಡೆಯುತ್ತಲೇ ಇದೆ. ಸಾವಿರಾರು ಜನರು ಚೀನಾದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿದಿನವೂ ಎಷ್ಟು ಜನ ಸತ್ತರು ಎಂದು ಲೆಕ್ಕಹಾಕುತ್ತಿತ್ತು ಚೀನಾ.

 China Reports No New Coronavirus Death For The First Time

ಚೀನಾದಲ್ಲಿ ಭಾನುವಾರ 38 ಹೊಸ ಕೇಸ್, 1 ಸಾವು ವರದಿಚೀನಾದಲ್ಲಿ ಭಾನುವಾರ 38 ಹೊಸ ಕೇಸ್, 1 ಸಾವು ವರದಿ

ಆದ್ರೆ, ಇದೇ ಮೊದಲ ಬಾರಿಗೆ ಕೊರೊನಾ ಸೋಂಕಿತರ ಸಾವು ಇಲ್ಲದೇ ದಿನ ಕಳೆದಿದೆ ಎಂದು ಚೀನಾ ಸರ್ಕಾರ ಪ್ರಕಟಣೆ ನೀಡಿದೆ. ಜನವರಿಯಲ್ಲಿ ಅಂಕಿಅಂಶಗಳನ್ನು ಪ್ರಕಟಿಸಲು ಆರಂಭಿಸಿದ ನಂತರ ಮೊದಲ ಬಾರಿಗೆ ಚೀನಾದಲ್ಲಿ ಮಂಗಳವಾರ ಸಾವು ವರದಿಯಾಗಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ಚೀನಾದಲ್ಲಿ ಸದ್ಯ ಕೊರೊನಾ ಕೇಸ್‌ಗಳು ಕಡಿಮೆಯಾಗಿದೆ. ಮೂಲ ಚೀನಾದವರಲ್ಲಿ ಸೋಂಕು ಕಾಣಿಸುತ್ತಿಲ್ಲ. ಆದರೆ, ವಿದೇಶದಿಂದ ಬಂದವರಲ್ಲಿ ಸೋಂಕು ಪತ್ತೆಯಾಗುತ್ತಿದೆ. ಇದುವರೆಗೂ 1000 ಜನರು ವಿದೇಶಿಗರಲ್ಲಿ ಸೋಂಕು ದೃಢವಾಗಿದೆ ಎಂದು ಮಾಹಿತಿ ನೀಡಿದೆ.

ಚೀನಾದಲ್ಲೊಂದು ವಿಚಿತ್ರ ಕೊರೊನಾ ಕೇಸ್: ವಾಸಿ ಆಗಿದ್ದು ಹೇಗೆ ಗೊತ್ತಾ.?ಚೀನಾದಲ್ಲೊಂದು ವಿಚಿತ್ರ ಕೊರೊನಾ ಕೇಸ್: ವಾಸಿ ಆಗಿದ್ದು ಹೇಗೆ ಗೊತ್ತಾ.?

ಚೀನಾದಲ್ಲಿ ಒಟ್ಟಾರೆ 81,740 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಅದರಲ್ಲಿ 3331 ಜನರು ಸಾವನ್ನಪ್ಪಿದ್ದಾರೆ. 77,167 ಜನರು ಕೊರೊನಾದಿಂದ ಚೇತರಿಕೆ ಕಂಡಿದ್ದಾರೆ. 211 ಜನರ ಸ್ಥಿತಿ ಇನ್ನು ಗಂಭೀರವಾಗಿದ್ದು, 1,242 ಕೇಸ್ ಇನ್ನು ಚಾಲ್ತಿಯಲ್ಲಿದೆ.

English summary
China reports no new Coronavirus death for the first time: AFP news agency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X