ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಕುಸಿಯುತ್ತಿದೆ ಜನಸಂಖ್ಯೆ..! ಭವಿಷ್ಯದಲ್ಲಿ ಭಾರತಕ್ಕೆ ನಂ. 1 ಪಟ್ಟ..?

|
Google Oneindia Kannada News

ಕೊರೊನಾ ನಂತರ ಎಲ್ಲವೂ ಬದಲಾಗುತ್ತಿದೆ, ಅದರಲ್ಲೂ ಕೊರೊನಾ ಕಂಡುಬಂದ ಚೀನಾದಲ್ಲಿ ಜನಸಂಖ್ಯೆಯ ಪ್ರಮಾಣ ಭಾರಿ ಕುಸಿತ ಕಂಡಿದೆ. ಚೀನಾದಲ್ಲಿ ಕಳೆದ ವರ್ಷ ಅಂದರೆ 2020ರಲ್ಲಿ ಜನಸಂಖ್ಯೆ ಏರಿಕೆ ಪ್ರಮಾಣ 0.53ರಷ್ಟು ಮಾತ್ರ ದಾಖಲಾಗಿದ್ದು, ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಸಾಕಷ್ಟು ಕುಸಿತ ಕಂಡಿದೆ.

Recommended Video

ಚೀನಾವನ್ನು ಸದ್ಯದರಲ್ಲೇ ಸೈಡ್ ಹೊಡೆಯಲಿದೆ ಭಾರತ | Oneindia Kannada

ಈ ರೀತಿ ಚೀನಾದಲ್ಲಿ ಜನಸಂಖ್ಯೆಯು ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿರುವುದು ಇದೇ ಮೊದಲು ಎನ್ನಲಾಗಿದೆ. ಮುಂದಿನ ವರ್ಷವೂ ಚೀನಾದಲ್ಲಿ ಜನಸಂಖ್ಯೆ ಮತ್ತಷ್ಟು ಇಳಿಮುಖವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಅಂದಹಾಗೆ 2019ರಲ್ಲಿ ಚೀನಾ ಜನಸಂಖ್ಯೆ 140 ಕೋಟಿ ಇತ್ತು, 2020ರಲ್ಲಿ ಜನಸಂಖ್ಯೆಯ ಪ್ರಮಾಣ 141.17 ಕೋಟಿಗೆ ಹೆಚ್ಚಳವಾಗಿದೆ.

ಅಭಿವೃದ್ಧಿಯಲ್ಲಿ ಚೀನಾ ಮೀರಿಸುವವರೇ ಇಲ್ಲ..! 'ಜಿಡಿಪಿ' ವಿಚಾರದಲ್ಲಿ ಹೊಸ ದಾಖಲೆ..!ಅಭಿವೃದ್ಧಿಯಲ್ಲಿ ಚೀನಾ ಮೀರಿಸುವವರೇ ಇಲ್ಲ..! 'ಜಿಡಿಪಿ' ವಿಚಾರದಲ್ಲಿ ಹೊಸ ದಾಖಲೆ..!

ಆದರೂ ಈ ಅಂಕಿ-ಅಂಶವು ಚೀನಾದಲ್ಲಿ ಜನಸಂಖ್ಯೆ ಕುಸಿಯುತ್ತಿರುವ ಮುನ್ಸೂಚನೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಚೀನಾದಲ್ಲಿ ಒಂದೇ ಮಗು ಪಡೆಯುವ ಬಗ್ಗೆ ಕಠಿಣ ನಿಯಮ ಇತ್ತು. ಆದರೆ 2016ರಲ್ಲಿ ಮಕ್ಕಳನ್ನು ಪಡೆಯುವ ಕಠಿಣ ನಿಯಮಗಳಲ್ಲಿ ಬದಲಾವಣೆ ತರಲಾಗಿತ್ತು. ಆದರೂ ಚೀನಾದಲ್ಲಿ ಜನಸಂಖ್ಯೆ ಏರಿಕೆ ಕಡಿಮೆಯಾಗುತ್ತಿದೆ.

 ಕಾರ್ಮಿಕರ ಕೊರತೆ ಅಪಾಯ..?

ಕಾರ್ಮಿಕರ ಕೊರತೆ ಅಪಾಯ..?

ಯಾವುದೇ ದೇಶದ ಆರ್ಥಿಕತೆ ನಿರ್ಧಾರ ಆಗುವುದು ನೈಸರ್ಗಿಕ ಸಂಪತ್ತು ಹಾಗೂ ಶ್ರಮಿಕ ವರ್ಗದ ಮೇಲೆ. ಜನಸಂಖ್ಯೆ ಅಗತ್ಯಕ್ಕೆ ತಕ್ಕಷ್ಟು ಇರಬೇಕೆ ವಿನಃ, ಹೆಚ್ಚು-ಕಡಿಮೆಯಾದರೆ ಆರ್ಥಿಕತೆಗೆ ನೇರ ಪೆಟ್ಟು ಕೊಡಲಿದೆ. ಈ ಹಿಂದೆ ಚೀನಾದಲ್ಲಿ ಭಾರಿ ಪ್ರಮಾಣದಲ್ಲಿ ಜನಸಂಖ್ಯೆ ಏರಿಕೆ ಕಾಣುತ್ತಿತ್ತು. ಆದರೆ ಇದೀಗ ದಿಢೀರ್ ಕುಸಿತ ಕಾಣುತ್ತಿರುವುದು ಮುಂಬರುವ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರು ಹಾಗೂ ಬಳಕೆದಾರರ ಕೊರತೆ ಎದುರಾಗುವ ಮುನ್ಸೂಚನೆ ನೀಡುತ್ತಿದೆ. ಜಗತ್ತಿನ 2ನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರಕ್ಕೆ ಜನಸಂಖ್ಯೆ ಕುಸಿತ ದೊಡ್ಡ ತಲೆನೋವು ತಂದೊಡ್ಡುತ್ತಿದೆ.

7ನೇ ರಾಷ್ಟ್ರೀಯ ಜನಗಣತಿ

7ನೇ ರಾಷ್ಟ್ರೀಯ ಜನಗಣತಿ

ಭಾರತದಲ್ಲಿ ನಡೆಯುವಂತೆ ಪ್ರತಿ 10 ವರ್ಷಕ್ಕೆ ಒಂದು ಬಾರಿ ಚೀನಾದಲ್ಲೂ ಜನಗಣತಿ ನಡೆಯುತ್ತದೆ. 7ನೇ ಜನಗಣತಿ ವರದಿಯನ್ನು ಬಿಡುಗಡೆ ಮಾಡಿರುವ ಚೀನಾ ಜನಸಂಖ್ಯೆ ಏರಿಳಿತದ ಬಗ್ಗೆ ಮಾಹಿತಿ ನೀಡಿದೆ. ಒಟ್ಟು 31 ಪ್ರಾಂತ್ಯಗಳು ಸೇರಿದಂತೆ ಚೀನಾದಲ್ಲಿ ವಾಸಿಸುತ್ತಿರುವ ಪ್ರಜೆಗಳ ವಿವರ ಇದರಲ್ಲಿದೆ. ಆದರೆ ಹಾಂಕಾಂಗ್‌ ಮತ್ತು ಮಕಾವೊ ಜನಸಂಖ್ಯೆ ವಿವರ ಈ ಜನಗಣತಿಯಲ್ಲಿ ಇಲ್ಲದಿರುವುದು ವಿಶೇಷ. ಚೀನಾದಲ್ಲಿ 60 ವರ್ಷ ಮೇಲ್ಪಟ್ಟವರ ಸಂಖ್ಯೆ 26 ಕೋಟಿಗೆ ಹೆಚ್ಚಳವಾಗಿದ್ದರೆ 15-59 ವರ್ಷದೊಳಗಿನವರ ಸಂಖ್ಯೆಯು 89.4 ಕೋಟಿ ಇದೆ. ಚೀನಾದಲ್ಲಿ ನಗರ ಪ್ರದೇಶಗಳಲ್ಲಿ 90 ಕೋಟಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 50 ಕೋಟಿ ಪ್ರಜೆಗಳು ವಾಸ ಮಾಡುತ್ತಿದ್ದಾರೆ.

ಚೀನಾದಲ್ಲಿ ಬಡವರೇ ಇಲ್ಲ..!

ಚೀನಾದಲ್ಲಿ ಬಡವರೇ ಇಲ್ಲ..!

ಒಂದು ಕಾಲದಲ್ಲಿ ತೀವ್ರ ಬಡತನ ತುಂಬಿದ ರಾಷ್ಟ್ರವಾಗಿದ್ದ ಚೀನಾದಲ್ಲಿ ಈಗ ಬಡವರೇ ಇಲ್ಲ. ಪವರ್ ಫುಲ್ ರಾಷ್ಟ್ರಗಳೇ ಬಡತನದ ಸಂಕೋಲೆಯಲ್ಲಿ ನರಳುತ್ತಿರುವ ಸಂದರ್ಭದಲ್ಲಿ ಚೀನಾ ಮಾತ್ರ ಜಗತ್ತು ಮೆಚ್ಚುವ ಕೆಲಸ ಮಾಡಿದೆ. ಚೀನಾ ತನ್ನ ದೇಶದಲ್ಲಿದ್ದ 77 ಕೋಟಿ ಬಡವರನ್ನು ವಿಷ ವರ್ತುಲದಿಂದ ಹೊರತಂದಿದೆ. ಫೆಬ್ರವರಿ ತಿಂಗಳಲ್ಲಿ ಈ ವಿಚಾರ ಹಂಚಿಕೊಂಡಿದ್ದ ಚೀನಾ, ಸತತ 40 ವರ್ಷಗಳ ಪರಿಶ್ರಮದ ನಂತರ ಗುರಿ ತಲುಪುವಲ್ಲಿ ಯಶಸ್ವಿಯಾಗಿತ್ತು. ಇದರ ಜೊತೆಗೆ ಶ್ರೀಮಂತರ ಪಟ್ಟಿಯಲ್ಲೂ ಚೀನಾ ನಂಬರ್ 1 ಸ್ಥಾನವನ್ನು ಅಲಂಕರಿಸಿದೆ. ಆದರೆ ಜನಸಂಖ್ಯೆ ಇಳಿಕೆ ಚೀನಾ ಸರ್ಕಾರಕ್ಕೆ ಸಣ್ಣ ಆತಂಕ ತಂದೊಡ್ಡಿದೆ.

ಬಡವರಿಗೆ ಐಷಾರಾಮಿ ಫ್ಲ್ಯಾಟ್‌ಗಳು..!

ಬಡವರಿಗೆ ಐಷಾರಾಮಿ ಫ್ಲ್ಯಾಟ್‌ಗಳು..!

ಚೀನಾದಲ್ಲಿ ಬಡವರಿಗೆ ವಸತಿ ಒದಗಿಸುವ ಯೋಜನೆ ಜಾರಿಗೆ ಬಂದಾಗ, ಜಗತ್ತಿನ ಇತರ ರಾಷ್ಟ್ರಗಳಂತೆ ಇಲ್ಲೂ ಮಾಮೂಲಿ ಸೂರು ಸಿಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಆ ಊಹೆ ಸುಳ್ಳಾಗಿತ್ತು. ಈಗಲೂ ಬಹುತೇಕ ಕೊಳೆಗೇರಿ ಜನರಿಗೆ ಐಷಾರಾಮಿ ಫ್ಲ್ಯಾಟ್‌ಗಳನ್ನ ಒದಗಿಸಿದೆ ಚೀನಿ ಸರ್ಕಾರ. ಇದಕ್ಕಾಗಿ ಸಾವಿರಾರು ಕೋಟಿ ವೆಚ್ಚ ಮಾಡಿ, ಹತ್ತಾರು ವರ್ಷಗಳ ಪರಿಶ್ರಮವನ್ನೂ ಹಾಕಿದೆ. ಇದರ ಪರಿಣಾಮ ಬಡ ಜನರಿಗೂ ಅತ್ಯುತ್ತಮ ಸೇವೆ ಸಿಗುವಂತಾಗಿದೆ. ಈ ಸಾಧನೆ ಕಂಡಿದ್ದ ಬಹುತೇಕ ಶ್ರೀಮಂತ ರಾಷ್ಟ್ರಗಳು ಶಾಕ್‌ ಆಗಿದ್ದುಂಟು.

English summary
China records lowest population growth in 2020 since 1960, census report revealed the information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X