ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಏಪ್ರಿಲ್ ಬಳಿಕ ಅತಿ ಹೆಚ್ಚು ಕೊರೊನಾ ಸೋಂಕಿತರು ಪತ್ತೆ

|
Google Oneindia Kannada News

ಚೀನಾ, ಜುಲೈ 27: ಚೀನಾದಲ್ಲಿ ಹೊಸದಾಗಿ 61 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಏಪ್ರಿಲ್ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಕರಣಗಳು ವರದಿಯಾಗಿವೆ.

Recommended Video

ಕೆಲಸ ಕಿತ್ತುಕೊಂಡ ಕರೋನಾ | Oneindia Kannada

ವಾಯುವ್ಯ ಕ್ಸಿನ್‌ಜಿಯಾಂಗ್‌ನಲ್ಲಿ 57 ಪ್ರಕರಣಗಳು ಪತ್ತೆಯಾಗಿವೆ. ರಾಷ್ಟ್ರೀಯ ಆರೋಗ್ಯ ಆಯೋಗ ಈ ಕುರಿತು ಮಾಹಿತಿ ನೀಡಿದ್ದು, ಜುಲೈ ಮಧ್ಯವಾರದಲ್ಲಿ ಕೊರೊನಾ ಸೋಂಕು ಏಕಾಏಕಿ ಹೆಚ್ಚಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಬೀಜಿಂಗ್‌ನಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ ಎಂದ ಚೀನಾಬೀಜಿಂಗ್‌ನಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ ಎಂದ ಚೀನಾ

ಈಶಾನ್ಯ ಲಿಯಾನಿಂಗ್‌ನಲ್ಲಿ 14 ಹೊಸ ಪ್ರಕರಣಗಳು, ಜಿಲಿನ್ ಬಳಿ 2 ಪ್ರಕರಣಗಳು ಪತ್ತೆಯಾಗಿದೆ. ಏಪ್ರಿಲ್ 14 ರಂದು 89 ಪ್ರಕರಣಗಳು ಪತ್ತೆಯಾಗಿತ್ತು, ಅದಾದ ಬಳಿಕ ಮೊದಲ ಬಾರಿಗೆ 61 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.

China Records Highest Surge In COVID19 Cases Since April

ಚೀನಾದಲ್ಲಿ ಕೊರೊನಾದ ಎರಡನೇ ಅಲೆ ಆರಂಭವಾಗಿದೆ. ಇದುವರೆಗೆ 2.3ಯಿಂದ 3.5 ಮಿಲಿಯನ್ ಮಂದಿಯನ್ನು ಇದುವರೆಗೆ ಪರೀಕ್ಷೆಗೆ ಒಳಪಡಿಸಲಾಗಿದೆ.

ಇದರಿಂದಾಗಿ ಚೀನಾದ ಸೂಪರ್ ಲೀಗ್ ಫೂಟ್‌ಬಾಲ್ ಪಂದ್ಯವನ್ನು ಮುಂದೂಡಲಾಗಿದೆ. ಕ್ಸಿನ್‌ಜಿಯಾಂಗ್‌ನಲ್ಲಿ 178 ಮಂದಿ ಕೊರೊನಾ ಸೋಂಕಿತರಿದ್ದಾರೆ. ಚೀನಾದಲ್ಲಿ ಕೊರೊನಾ ಲಕ್ಷಣವಿಲ್ಲದ 302 ಕೊರೊನಾ ಸೋಂಕಿತ ಪ್ರಕಣಗಳು ಪತ್ತೆಯಾಗಿವೆ. ದೇಶದಾದ್ಯಂತ 331 ಹೊಸ ಪ್ರಕರಣಗಳಿವೆ.

English summary
China recorded 61 new coronavirus cases on Monday -- the highest daily figure since April -- propelled by clusters in three separate regions that have sparked fears of a fresh wave.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X