ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೆಯ ನೋಟ್ ನಿಂದ ಕೊರೊನಾ ವೈರಸ್ ಸೋಂಕು ತಗುಲುತ್ತದೆಯೇ?

|
Google Oneindia Kannada News

ಚೀನಾ, ಮಾರ್ಚ್ 04: ಚೀನಾದಲ್ಲಿ ಹಳೆಯ ನೋಟ್ ಗಳಿಗೆ ಕ್ರಿಮಿನಾಶಕ ಸಿಂಪಡಿಸಲಾಗುತ್ತಿದೆ. ಬ್ಯಾಂಕ್, ಎಟಿಎಂ ನಲ್ಲಿರುವ ಹಳೆಯ ನೋಟ್ ಗಳಿಂದ ಕೊರೊನಾ ವೈರಸ್ ಸೋಂಕು ತಗುಲುತ್ತದೆ ಎಂಬ ಭೀತಿ ಹಬ್ಬಿದ್ದು, ಈ ರೀತಿ ಮಾಡಲು ಕಾರಣವಾಗಿದೆ.

ಬ್ಯಾಂಕ್, ಎಟಿಎಮ್ ನಲ್ಲಿರುವ ಹಳೆಯ ನೋಟ್ ಗಳನ್ನು ಒಬ್ಬರಿಂದ ಇನ್ನೊಬ್ಬರು ಪಡೆದರೆ, ಕೊರೊನಾ ವೈರಸ್ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ವಿಶ್ವ ಸಂಸ್ಥೆ ತಿಳಿಸಿದೆ. ಎಟಿಎಮ್ ಮಾತ್ರವಲ್ಲದೆ, ಟಿಕೆಟ್ ಮಿಷಿನ್ ನಿಂದಲೂ ಕಾಯಿಲೆ ಬರಬಹುದು ಎಂದು ಮಾಹಿತಿ ನೀಡಿದೆ.

ಕೊರಾನಾವೈರಸ್ ಭೀತಿಯಲ್ಲಿದ್ದರೆ ಈ ಸಹಾಯವಾಣಿಗೆ ಕರೆ ಮಾಡಿಕೊರಾನಾವೈರಸ್ ಭೀತಿಯಲ್ಲಿದ್ದರೆ ಈ ಸಹಾಯವಾಣಿಗೆ ಕರೆ ಮಾಡಿ

ವಿಶ್ವ ಸಂಸ್ಥೆ ನೀಡಿರುವ ಮಾಹಿತಿ ಚೀನಾ ಜನತೆಗೆ ಇನ್ನಷ್ಟು ಭಯ ಹುಟ್ಟಿಸಿದೆ. ಹಳೆಯ ನೋಟ್ ಗಳಿಗೆ ಕ್ರಿಮಿನಾಶಕ ಸಿಂಪಡಿಸಿ ವೈರಸ್ ನಿಂದ ದೂರ ಇರುವ ಪ್ರಯತ್ನ ಮಾಡಲಾಗುತ್ತಿದೆ. ಕೊರೊನಾ ವೈರಸ್ ಬಗ್ಗೆ ತೆಗೆದುಕೊಳ್ಳುತ್ತಿರುವ ಕ್ರಮಗಳಲ್ಲಿ ಇದು ಒಂದಾಗಿದೆ.

China Quarantines Old ATM Currency Notes

ಅಂದಹಾಗೆ, ಈವರೆಗೆ ಚೀನಾದಲ್ಲಿ 80 ಸಾವಿರಕ್ಕೂ ಅಧಿಕ ಜನರಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. 1871 ಜನರು ಕೊರೊನಾದಿಂದ ಜೀವ ಕಳೆದುಕೊಂಡಿದ್ದಾರೆ. ವಿಶ್ವದಲ್ಲಿ 3198 ಜನರು ಮರಣ ಹೊಂದಿದ್ದಾರೆ.

ಕೊರೊನಾ ವೈರಸ್ ಬಂದರೆ ಏನೇನಾಗುತ್ತದೆ?: ಅಧ್ಯಯನ ವರದಿಕೊರೊನಾ ವೈರಸ್ ಬಂದರೆ ಏನೇನಾಗುತ್ತದೆ?: ಅಧ್ಯಯನ ವರದಿ

ಕರ್ನಾಟಕಕ್ಕೂ ಕೊರೊನಾ ವೈರಸ್ ಕಾಲಿಟ್ಟಿದೆ. ಹಳೆ ನೋಟ್ ನಿಂದ ಕೊರೊನಾ ವೈರಸ್ ಬರುತ್ತದೆ ಎನ್ನುವ ಸಂಗತಿ ಇನ್ನಷ್ಟು ಆತಂಕ ಹೆಚ್ಚು ಮಾಡಿದೆ...

English summary
Coronavirus: China Quarantines Old ATM Currency Notes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X