ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಆರೋಗ್ಯ ಅಧೀವೇಶನದಲ್ಲಿ ಚೀನಾ ಅಧ್ಯಕ್ಷರ ಮಹತ್ವದ ಹೇಳಿಕೆ

|
Google Oneindia Kannada News

ಬಿಜಿಂಗ್, ಮೇ 18: ಕೊರೊನಾ ಕುರಿತು ಚೀನಾದ ಮೇಲೆ ಜಗತ್ತಿನ ಇತರ ರಾಷ್ಟ್ರಗಳ ಆರೋಪಗಳನ್ನು ತಳ್ಳಿ ಹಾಕುತ್ತಾ ಬಂದಿದೆ ಚೀನಾ. ಈ ಬಗ್ಗೆ ಇಂದು ಚೀನಾ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.

Recommended Video

Virat Kohli : RSS ಅಂಗ ಸಂಸ್ಥೆ ಸೇವಾಭಾರತಿ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು | Oneindia Kannada

''ಮಹಾಮಾರಿ ಕೊರೊನಾ ವೈರಸ್ ಸೋಂಕು ಜಗತ್ತಿನ ತುಂಬ ಪಸರಿಸಲು ಚೀನಾ ಎಂಬ ಆರೋಪವನ್ನು ಕೆಲ ರಾಷ್ಟ್ರಗಳು ಆರೋಪಿಸುತ್ತಿವೆ. ಈ ಬಗ್ಗೆ ತನಿಖೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆ ಮೇಲೆ ಒತ್ತಡ ತಂದು ತನಿಖೆ ನಡೆಯುತ್ತಿದೆ''.

ವಿಶ್ವ ಆರೋಗ್ಯ ಸಂಸ್ಥೆ ಕುರಿತು ತನಿಖೆಗೆ ಭಾರತ ಸೇರಿ 62 ರಾಷ್ಟ್ರಗಳ ಒತ್ತಾಯವಿಶ್ವ ಆರೋಗ್ಯ ಸಂಸ್ಥೆ ಕುರಿತು ತನಿಖೆಗೆ ಭಾರತ ಸೇರಿ 62 ರಾಷ್ಟ್ರಗಳ ಒತ್ತಾಯ

''ಕೊರೊನಾ ವೈರಸ್ ನ ಈ ತನಿಖೆ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಗೆ ಅಗತ್ಯ ಸಹಕಾರವನ್ನು ಚೀನಾ ನೀಡಲಿದೆ'' ಎಂದು ಜಿನ್ ಪಿಂಗ್ ಹೇಳಿದ್ದಾರೆ. ಅವರು ಸೋಮವಾರ ನಡೆದ ವಿಶ್ವ ಆರೋಗ್ಯ ಅಧಿವೇಶನದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಈ ಮಾತು ಹೇಳಿದ್ದಾರೆ.

China President Xi Jinping Says We Supports WHO

''ಕೋವಿಡ್ ಚೀನಾದಲ್ಲಿ ನಿಯಂತ್ರಣಕ್ಕೆ ಬಂದಿದೆ. ಅದೇ ರೀತಿ ವಿಶ್ವದ ಇತರೆ ರಾಷ್ಟ್ರಗಳಲ್ಲಿಯೂ ಬರುತ್ತದೆ. ತನಿಖೆಯನ್ನು ಚೀನಾ ನಿಷ್ಪಕ್ಷಪಾತವಾಗಿ ಬೆಂಬಲಿಸುತ್ತದೆ. ಚೀನಾ ಮನುಕುಲಕ್ಕೆ ಒಳ್ಳೆಯದಾಗುವುದನ್ನು ಬೆಂಬಲಿಸುತ್ತದೆ'' ಎಂದು ಹೇಳಿದ್ದಾರೆ.

''ಅಲ್ಲದೇ ವಿಶ್ವಆರೋಗ್ಯ ಸಂಸ್ಥೆಗೆ ಎರಡು ಬಿಲಿಯನ್ ಯುಎಸ್ ಡಾಲರ್ ನ್ನು ಮುಂದಿನ ಎರಡು ವರ್ಷದಲ್ಲಿ ನೀಡುತ್ತದೆ. ಸಾರ್ವಜನಿಕ ಹಿತ ದೃಷ್ಟಿಯಿಂದ ನಾವು ಲಸಿಕೆ ತಯಾರಿಸುತ್ತಿದ್ದೇವೆ'' ಎಂದು ಅವರು ವಿಡಿಯೋ ಸಂವಾದದಲ್ಲಿ ಹೇಳಿದ್ದಾರೆ.

English summary
China President Xi Jinping Says We Supports WHO. Xi Jinping attended the world health assembly on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X