ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಗಡಿ ಸಮೀಪದ ಟಿಬೆಟಿಯನ್ ನಗರಕ್ಕೆ ಅಚ್ಚರಿಯ ಭೇಟಿ ನೀಡಿದ ಚೀನಾ ಅಧ್ಯಕ್ಷ

|
Google Oneindia Kannada News

ಬೀಜಿಂಗ್‌, ಜು.23: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಟಿಬೆಟ್ ಸ್ವಾಯತ್ತ ಪ್ರದೇಶಕ್ಕೆ (ಟಿಎಆರ್) ಅಘೋಷಿತ ಭೇಟಿ ನೀಡಿದ್ದಾರೆ ಎಂದು ಅಧಿಕೃತ ಮಾಧ್ಯಮಗಳು ಶುಕ್ರವಾರ ಬೆಳಿಗ್ಗೆ ತಿಳಿಸಿವೆ.

ಎರಡು ದಿನಗಳ ಹಿಂದೆ ಅರುಣಾಚಲ ಪ್ರದೇಶದ ಸಿನೋ-ಇಂಡಿಯಾ ಗಡಿಯ ಸಮೀಪವಿರುವ ನೈಂಗ್ಚಿಯಲ್ಲಿ ಈ ಭೇಟಿ ನಡೆದಿದೆ ಎಂದು ಕೂಡಾ ಅಧಿಕೃತ ಮಾಧ್ಯಮಗಳು ಶುಕ್ರವಾರ ಬೆಳಿಗ್ಗೆ ಹೇಳಿದೆ.

ಭಾರತದ ಗಡಿ ಸಮೀಪವಿರುವ ಟಿಬೆಟ್‌ನಲ್ಲಿ ಮೊದಲ ಬುಲೆಟ್ ರೈಲಿಗೆ ಚಾಲನೆ ನೀಡಿದ ಚೀನಾ ಭಾರತದ ಗಡಿ ಸಮೀಪವಿರುವ ಟಿಬೆಟ್‌ನಲ್ಲಿ ಮೊದಲ ಬುಲೆಟ್ ರೈಲಿಗೆ ಚಾಲನೆ ನೀಡಿದ ಚೀನಾ

ಬುಧವಾರ ನಿಂಗ್ಚಿಗೆ ಬಂದಿಳಿದ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಗುರುವಾರ ಲಾಸಾಗೆ ಭೇಟಿ ನೀಡಿದ್ದಾರೆ. ಚೀನಾದ ಅಧ್ಯಕ್ಷರು ಒಂದು ದಶಕಕ್ಕೂ ಅಧಿಕ ಸಮಯದ ನಂತರ ಟಿಬೆಟಿಯನ್ ರಾಜಧಾನಿಗೆ ಭೇಟಿ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.

China President Xi Jinping makes surprise visit to Tibetan city near India border

ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿಡಿಯೋ ತುಣುಕಿನಲ್ಲಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಪ್ರಧಾನ ಕಾರ್ಯದರ್ಶಿ ಕ್ಸಿ, ನೈಂಗ್ಚಿಯಲ್ಲಿನ ನಿವಾಸಿಗಳಿಗೆ ಟಿಬೆಟಿಯನ್ ಸಂಪ್ರದಾಯದಲ್ಲಿ ತಾಶಿ ಡೆಲೆಕ್ ಎಂದು ಶುಭಾಶಯ ಕೋರಿದ್ದಾರೆ. ಕ್ಸಿ ನಂತರ ಉತ್ತಮ ಭವಿಷ್ಯದ ಬಗ್ಗೆ ನಂಬಿಕೆ ಇಡಬೇಕೆಂದು ಕರೆ ನೀಡಿದ್ದಾರೆ.

ಅಧಿಕೃತ ಸುದ್ದಿ ಸಂಸ್ಥೆ ಕ್ಸಿನ್ಹುವಾ ಬಿಡುಗಡೆ ಮಾಡಿದ ಸಂಕ್ಷಿಪ್ತ ವರದಿಯ ಪ್ರಕಾರ, ಕ್ಸಿ ಬುಧವಾರ ನೈಂಗ್ಚಿ ಮೈನ್‌ಲಿಂಗ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಸ್ಥಳೀಯ ಜನರು ಮತ್ತು ವಿವಿಧ ಜನಾಂಗದ ಅಧಿಕಾರಿಗಳು ಈ ಸಂದರ್ಭದಲ್ಲಿ ಕ್ಸಿ ಜಿನ್‌ಪಿಂಗ್‌ರನ್ನು ಪ್ರೀತಿಯಿಂದ ಸ್ವಾಗತಿಸಿದ್ದಾರೆ.

"ನಂತರ ಯಾರ್ಲುಂಗ್ ಜಾಂಗ್ಬೊ ನದಿ ಮತ್ತು ಅದರ ಉಪನದಿ ನ್ಯಾಂಗ್ ನದಿಯ ಜಲಾನಯನ ಪ್ರದೇಶದಲ್ಲಿನ ಪರಿಸರ ಸಂರಕ್ಷಣೆಯನ್ನು ಪರಿಶೀಲಿಸಲು ನ್ಯಾಂಗ್ ನದಿ ಸೇತುವೆಗೆ ಭೇಟಿ ನೀಡಿದರು," ಎಂದು ಕ್ಸಿನ್ಹುವಾ ವರದಿ ತಿಳಿಸಿದೆ.

ಚೀನಾ ಕಮ್ಯೂನಿಸ್ಟ್‌ ಪಕ್ಷದ ಶತಮಾನೋತ್ಸವ: ಇಲ್ಲಿದೆ ಪ್ರಮುಖ ಮೈಲಿಗಲ್ಲುಚೀನಾ ಕಮ್ಯೂನಿಸ್ಟ್‌ ಪಕ್ಷದ ಶತಮಾನೋತ್ಸವ: ಇಲ್ಲಿದೆ ಪ್ರಮುಖ ಮೈಲಿಗಲ್ಲು

"ಟಿಬೆಟ್‌ನ ಶಾಂತಿಯುತ ವಿಮೋಚನೆಯ" 60 ನೇ ವರ್ಷಾಚರಣೆಯ ನೆನಪಿಗಾಗಿ ಕ್ಸಿ ಜುಲೈ 18, 2011 ರಂದು ಚೀನಾದ ಅಂದಿನ ಉಪಾಧ್ಯಕ್ಷರಾಗಿ ಲಾಸಾಗೆ ಇದೇ ರೀತಿಯ ನಿಯೋಗದೊಂದಿಗೆ ಆಗಮಿಸಿದ್ದರು ಎಂದು ಹಾಂಗ್ ಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಒಂದು ದಶಕದ ಹಿಂದೆ ತನ್ನ ಭಾಷಣದಲ್ಲಿ, ದೇಶಭ್ರಷ್ಟ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಜೊತೆಗೆ ಸಂಬಂಧ ಹೊಂದಿರುವ "ಪ್ರತ್ಯೇಕತಾವಾದಿ ಚಟುವಟಿಕೆಗಳ" ವಿರುದ್ಧ ಹೋರಾಡಲು ಪ್ರತಿಜ್ಞೆ ಮಾಡಿದ್ದಾರೆ.

ಆಡಳಿತಾರೂಢ ಸಿಪಿಸಿ ತನ್ನ 100 ನೇ ವಾರ್ಷಿಕೋತ್ಸವವನ್ನು ಜುಲೈ 1 ರಂದು ಆಚರಿಸುವ ಒಂದು ವಾರದ ಮೊದಲು, ರಾಜಧಾನಿ ಲಾಸಾ ಮತ್ತು ನೈಂಗ್ಚಿ ನಗರದ ನಡುವೆ ಟಿಬೆಟ್‌ನಲ್ಲಿ ಚೀನಾ ತನ್ನ ಮೊದಲ ಎಲೆಕ್ಟ್ರಿಕ್ ರೈಲು ಸೇವೆಯನ್ನು ಉದ್ಘಾಟಿಸಿದೆ. ಇದಾದ ಒಂದು ತಿಂಗಳ ನಂತರ ಕ್ಸಿ ನೈಂಗ್ಚಿಗೆ ಭೇಟಿ ನೀಡಿದ್ದಾರೆ.

ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿನ ಮೊದಲ ವಿದ್ಯುದ್ದೀಕೃತ ರೈಲ್ವೆ ಲಾಸಾ ಮತ್ತು ನೈಂಗ್ಚಿಯನ್ನು ಸಂಪರ್ಕಿಸುವ ಬುಲೆಟ್ ರೈಲು ಮಾರ್ಗವಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಕ್ಸಿನ್ ಹುವಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ನೈಂಗ್ಚಿ ಅರುಣಾಚಲ ಪ್ರದೇಶದ ಗಡಿಯ ಪಕ್ಕದಲ್ಲಿರುವ ಮೆಡೋಗ್ ಪ್ರಾಂತ್ಯದ ನಗರವಾಗಿದೆ. ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ನ ಭಾಗವೆಂದು ಚೀನಾ ಹೇಳಿಕೊಂಡಿದೆ. ಇದನ್ನು ಭಾರತ ದೃಢವಾಗಿ ತಿರಸ್ಕರಿಸಿದೆ. ಭಾರತ-ಚೀನಾ ಗಡಿ ವಿವಾದವು 3,488 ಕಿ.ಮೀ ಉದ್ದದ ವಾಸ್ತವಿಕ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಒಳಗೊಂಡಿದೆ.

(ಒನ್‌ಇಂಡಿಯಾ ಸುದ್ದಿ)

English summary
Chinese President Xi Jinping has made an unannounced, surprise visit to Tibetan city near India border said official media on July 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X