ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ತೀವ್ರ ಬಡತನದ ಅಂತ್ಯ; ಅಧ್ಯಕ್ಷ ಜಿನ್ ‌ಪಿಂಗ್‌ಗೆ ಶ್ಲಾಘನೆ

|
Google Oneindia Kannada News

ಬೀಜಿಂಗ್, ಫೆಬ್ರವರಿ 25: ಕೊರೊನಾ ಸೋಂಕು ಆವರಿಸಿದ ಸಂಕಷ್ಟದ ಸಮಯದಲ್ಲಿಯೂ ಚೀನಾ ಚೇತರಿಸಿಕೊಂಡು ಮುನ್ನುಗ್ಗುತ್ತಿದೆ. ದೇಶದಲ್ಲಿ ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ‌ಪಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.

ಗುರುವಾರ ಚೀನಾದಲ್ಲಿ ಈ ಸಾಧನೆಯ ಸಂಭ್ರಮಾಚರಣೆ ಮಾಡಲಾಗಿದ್ದು, ಕಳೆದ 40 ವರ್ಷಗಳಲ್ಲಿ 77 ಕೋಟಿ ಜನರನ್ನು ಬಡತನದಿಂದ ಹೊರತರುವ ಮೂಲಕ ಬಡತನ ನಿರ್ಮೂಲನೆಯಲ್ಲಿ ಚೀನಾ ಗೆಲುವು ಸಾಧಿಸಿದೆ. ಇದು ಇತಿಹಾಸದಲ್ಲಿ ದಾಖಲಾಗಲಿದೆ ಎಂದು ಹೇಳಿದ್ದಾರೆ.

ಕೊರೊನಾ ಮತ್ತು ಅಪೌಷ್ಠಿಕತೆಯಿಂದ ಕ್ಷಯ ರೋಗದ ಅಪಾಯ!ಕೊರೊನಾ ಮತ್ತು ಅಪೌಷ್ಠಿಕತೆಯಿಂದ ಕ್ಷಯ ರೋಗದ ಅಪಾಯ!

2030 ವರ್ಷದ ಒಳಗೆ ದೇಶದಲ್ಲಿ ತೀವ್ರ ಬಡತನ ಹೋಗಲಾಡಿಸಲು ವಿಶ್ವ ಬ್ಯಾಂಕ್ ಗುರಿ ನೀಡಿದ್ದು, ದಶಕದ ಮುನ್ನವೇ ಚೀನಾ ಈ ಸಾಧನೆ ಮಾಡಿರುವ ಕಾರಣಕ್ಕೆ ಜಿಂಗ್‌ ಪಿಂಗ್ ಅವರಿಗೂ ಶ್ಲಾಘನೆ ವ್ಯಕ್ತವಾಗಿದೆ. ಇದೇ ಸಂದರ್ಭ ಬಡತನ ನಿರ್ಮೂಲನೆಯಲ್ಲಿ ತೊಡಗಿಕೊಂಡ ಹತ್ತು ಸಂಘಟನೆಗಳಿಗೆ ಪದಕ ನೀಡಿ ಗೌರವಿಸಲಾಗಿದೆ.

China President Xi Jinping Announced Complete End Of Extreme Poverty

ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಬಡತನ ನಿರ್ಮೂಲನೆ ಸಾಮಾನ್ಯ ಕೆಲಸವಲ್ಲ. ಇದೀಗ ಆ ಅಸಾಮಾನ್ಯ ಕೆಲಸವನ್ನು ಸಾಧಿಸಿದ್ದೇವೆ. ಚೀನಾದಲ್ಲಿ ಸಂಪೂರ್ಣವಾಗಿ ಬಡತನವನ್ನು ನಿರ್ಮೂಲನೆ ಮಾಡಿದ್ದೇವೆ. ಚೀನಾದಲ್ಲಿ ಒಟ್ಟು 140 ಕೋಟಿ ಜನಸಂಖ್ಯೆಯಿದ್ದು, ಕಳೆದ ಎಂಟು ವರ್ಷಗಳಲ್ಲಿ ಬಡತನ ರೇಖೆಗಿಂತ ಕೆಳಗಿದ್ದ 9.89 ಕೋಟಿ ಜನರನ್ನು ಬಡತನದಿಂದ ಮುಕ್ತಗೊಳಿಸಲಾಗಿದೆ ಎಂದು ವಿವರಿಸಿದರು.

English summary
China president Xi Jinping has announced that china has succeeded in eradcating poverty completely,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X