ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿರುವ ಚೀನಿಯರ ಸ್ಥಳಾಂತರಕ್ಕೆ ಮುಂದಾದ ಚೀನಾ!

|
Google Oneindia Kannada News

ನವದೆಹಲಿ, ಮೇ 25: ಕೊರೊನಾ ಹಾವಳಿ ನಡುವೆ ಭಾರತದಲ್ಲಿರುವ ಚೀನಿಯರ ಬಗ್ಗೆ ಚೀನಾ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

Recommended Video

ವಿರಾಟ್ ಕೊಹ್ಲಿ ಸಮೀಪ ಬಂದ ಪಾಕಿಸ್ತಾನ ಕ್ರಿಕೆಟಿಗ..! | Babar Azam | Virat Kohli

ಭಾರತದಲ್ಲಿರುವ ಚೀನಿಯರನ್ನು ತವರಿಗೆ ಕರೆದುಕೊಂಡು ಹೋಗಲು ಯೋಜನೆ ರೂಪಿಸಿದೆ ಚೀನಾ ಸರ್ಕಾರ. ಈ ಬಗ್ಗೆ ಇಂದು ನವದೆಹಲಿಯಲ್ಲಿರುವ ಚೀನಿ ರಾಯಭಾರ ಕಚೇರಿ ಸೂಚನೆ ಹೊರಡಿಸಿದ್ದು, ಭಾರತದಲ್ಲಿರುವ ಚೀನಿಯರನ್ನು ವಿಶೇಷ ವಿಮಾನದ ಮೂಲಕ ತವರಿಗೆ ಕರೆಯಿಸಿಕೊಳ್ಳಲಾಗುವುದು ಎಂದು ಹೇಳಲಾಗಿದೆ ಎಂದು ದಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಮಾಡಿದ್ದುಣ್ಣೋ ಮಹಾರಾಯ: ಚೀನಾಗೂ ಬಿತ್ತು ಕೊರೊನಾ ವೈರಸ್ ಪೆಟ್ಟು!ಮಾಡಿದ್ದುಣ್ಣೋ ಮಹಾರಾಯ: ಚೀನಾಗೂ ಬಿತ್ತು ಕೊರೊನಾ ವೈರಸ್ ಪೆಟ್ಟು!

ಅತ್ತ ಭಾರತ ಚೀನಾ ಗಡಿ ಪ್ರದೇಶವಾದ ಲಡಾಕ್ ಸೆಕ್ಟರ್‌ನಲ್ಲಿ ಚೀನಾ ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ಸಿಬ್ಬಂದಿಯನ್ನು ನಿಯೋಜನೆ ಮಾಡುತ್ತಿರುವುದಕ್ಕೂ ಇತ್ತ ಚೀನಾ ತನ್ನ ನಾಗರಿಕರನ್ನು ಸ್ಥಳಾಂತರಿಸುತ್ತಿರುವುದಕ್ಕೂ ಉಬಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಸಂಭವಿಸಿದೆ ಎಂದು ವರದಿಗಳು ಹೇಳುತ್ತಿವೆ.

ವೆಬ್‌ಸೈಟ್‌ನಲ್ಲಿ ಪ್ರಕಟ

ವೆಬ್‌ಸೈಟ್‌ನಲ್ಲಿ ಪ್ರಕಟ

ಚೀನಾ ತನ್ನ ನಾಗರಿಕರನ್ನು ಭಾರತದಿಂದ ಸ್ಥಳಾಂತರಿಸಲು ಯೋಜಿಸುತ್ತಿದೆ ಎಂದು ನವದೆಹಲಿಯ ಚೀನೀ ರಾಯಭಾರ ಕಚೇರಿ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತದಲ್ಲಿ ಸಿಕ್ಕಿಹಾಕಿಕೊಂಡಿರುವ ವಿದ್ಯಾರ್ಥಿಗಳು, ಪ್ರವಾಸಿಗರು ಮತ್ತು ಉದ್ಯಮಿಗಳಿಗೆ ವಿಶೇಷ ವಿಮಾನಗಳಲ್ಲಿ ಚೀನಾಕ್ಕೆ ಹಿಂತಿರುಗಲು ಅವಕಾಶ ನೀಡಲಾಗುವುದು ಎಂದು ಚೀನಿ ದೂತಾವಾಸದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಮೇ 27 ರಂದು ಚೀನಾಕ್ಕೆ ಮರಳಲು ಸೂಚನೆ

ಮೇ 27 ರಂದು ಚೀನಾಕ್ಕೆ ಮರಳಲು ಸೂಚನೆ

ಮೇ 27 ರಂದು ಚೀನಾಕ್ಕೆ ಮರಳಲು ಬೀಜಿಂಗ್ ತನ್ನ ನಾಗರಿಕರನ್ನು ಕೇಳಿದೆ. ಇದರಲ್ಲಿ ಯೋಗಾಭ್ಯಾಸ ಮಾಡುತ್ತಿರುವ ಅಥವಾ ಬೌದ್ಧ ಧಾರ್ಮಿಕ ತೀರ್ಥಯಾತ್ರೆಗಾಗಿ ಭಾರತಕ್ಕೆ ಬಂದಿರುವ ಚೀನಾದ ನಾಗರಿಕರು ಸೇರಿದ್ದಾರೆ. ಚೀನಾದ ವಿಶೇಷ ವಿಮಾನಗಳು ಯಾವಾಗ ಅಥವಾ ಎಲ್ಲಿಗೆ ಹೋಗುತ್ತವೆ ಎಂಬುದನ್ನು ಬಹಿರಂಗಪಡಿಸಿಲ್ಲ.

ಚೀನಿ ನಾಗರಿಕರ ಸಂಖ್ಯೆ ಸುಲಭವಾಗಿ ಲಭ್ಯವಿದೆ

ಚೀನಿ ನಾಗರಿಕರ ಸಂಖ್ಯೆ ಸುಲಭವಾಗಿ ಲಭ್ಯವಿದೆ

ಭಾರತ ಮತ್ತು ಚೀನಾ ನಡುವೆ ಎರಡು ವಿವಾದಾತ್ಮಕ ಗಡಿಗಳಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಥಳಾಂತರಿಸುವ ಸೂಚನೆ ಬಂದಿರುವುದು ಆತಂಕಕ್ಕೆ ಈಡು ಮಾಡಿದೆ. ಭಾರತದಲ್ಲಿ ಪ್ರಸ್ತುತ ಅಧ್ಯಯನ ಮಾಡುತ್ತಿರುವ ಅಥವಾ ಉಳಿದುಕೊಂಡಿರುವ ಮತ್ತು ಕೆಲಸ ಮಾಡುವ ಚೀನಿ ನಾಗರಿಕರ ಸಂಖ್ಯೆ ಸುಲಭವಾಗಿ ಲಭ್ಯವಿದೆ ಎಂದು ಚೀನಿ ದೂತಾವಾಸ ಕಚೇರಿ ತಿಳಿಸಿದೆ.

ಸೇನಾ ಮುಖ್ಯಸ್ಥ ನರವಾನೆ ಭೇಟಿ

ಸೇನಾ ಮುಖ್ಯಸ್ಥ ನರವಾನೆ ಭೇಟಿ

ಚೀನಾ ಮತ್ತು ಭಾರತದ ಗಡಿಯ ಲಡಾಕ್‌ ಸೆಕ್ಟರ್‌ನಲ್ಲಿ ಉದ್ವಿಗ್ನತೆಯ ವಾತಾವರಣ ಹೆಚ್ಚಾಗುತ್ತಿದೆ. ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾನೆ ಅವರು ನಿನ್ನೆಯಷ್ಟೇ ಈ ಸ್ಥಳಕ್ಕೆ ಬೇಟಿ ನೀಡಿ ಬಂದಿದ್ದಾರೆ. ಭಾರತವೂ ಕೂಡ ಈ ಸ್ಥಳದಲ್ಲಿ ಹೆಚ್ಚಿನ ಸೇನಾ ಸಿಬ್ಬಂದಿಯನ್ನು ಜಮಾವಣೆ ಮಾಡುತ್ತಿದೆ. ಇತ್ತ ನಾಗರಿಕರನ್ನು ಚೀನಾ ಕರೆಯಿಸಿಕೊಳ್ಳುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

English summary
China Plans For Evacuating their citizens from India. China Embassy In Delhi Issued Notice to China citizen People. other side tempt create in China and India border.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X