ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಅಯೋಮಯ: ಹಾಂಗ್ ಕಾಂಗ್ ತೊರೆದವರಿಗೆ ತೈವಾನ್ ನಲ್ಲಿ ಆಶ್ರಯ!

|
Google Oneindia Kannada News

ಬೀಜಿಂಗ್, ಜುಲೈ.01: ರಾಷ್ಟ್ರೀಯ ಭದ್ರತಾ ಕಾನೂನು. ಚೀನಾ ಅನುಮೋದನೆ ನೀಡಿರುವ ಹೊಸ ಶಾಸನವು ಇದೀಗ ಹಾಂಗ್ ಕಾಂಗ್ ಜನತೆಯ ಎದೆಯಲ್ಲಿ ನಡುಕ ಹುಟ್ಟಿಸಿದೆ. ಯಾವಾಗ ಏನಾಗುತ್ತೋ ಏನೋ ಎಂಬ ಭೀತಿಯಲ್ಲೇ ಪ್ರತಿಭಟನೆಯ ಕಿಚ್ಚು ಹೊತ್ತಿಕೊಂಡಿದೆ.

Recommended Video

KSRTC ಬಸ್ ಹತ್ತಬೇಕಾದಲ್ಲಿ ಈ ನಿಯಮಗಳನ್ನು ಪಾಲಿಸಲೇಬೇಕು | KSRTC Rules & Regulations | Oneindia Kannada

ಹಾಂಗ್ ಕಾಂಗ್ ನಲ್ಲಿ ಚೀನಾದ ವಿರುದ್ಧ ಪ್ರಜಾಪ್ರಭುತ್ವಕ್ಕಾಗಿ ಉಗ್ರ ಹೋರಾಟ ಒಂದು ಕಡೆಯಲ್ಲಿ ನಡೆಯುತ್ತಿದೆ. ಇದರ ನಡುವೆ ರಾಷ್ಟ್ರೀಯ ಭದ್ರತಾ ಕಾನೂನು ಜಾರಿಗೊಳಿಸಿದ್ದರಿಂದ ಆತಂಕಕ್ಕೆ ಒಳಗಾಗಿರುವ ಹಾಂಗ್ ಕಾಂಗ್ ಪ್ರಜೆಗಳಿಗೆ ಆಶ್ರಯ ನೀಡುವುದಕ್ಕೆ ತೈವಾನ್ ಮುಂದಾಗಿದೆ.

ಡ್ರ್ಯಾಗನ್ ರಾಷ್ಟ್ರದ ಶಾಸನದಿಂದ ಹೌ ಹಾರಿದರಾ ಹಾಂಗ್ ಕಾಂಗ್ ಜನ?ಡ್ರ್ಯಾಗನ್ ರಾಷ್ಟ್ರದ ಶಾಸನದಿಂದ ಹೌ ಹಾರಿದರಾ ಹಾಂಗ್ ಕಾಂಗ್ ಜನ?

ತೈವಾನ್ ನ್ನು ಕೂಡಾ ಚೀನಾ ತನ್ನದೇ ಆದ ಭೂಪ್ರದೇಶವೆಂದು ಹೇಳಿಕೊಂಡಿದೆ. ಹಾಂಗ್ ಕಾಂಗ್‌ನಲ್ಲಿ ಜಾರಿಯಲ್ಲಿರುವ "ಒಂದು ದೇಶ, ಎರಡು ವ್ಯವಸ್ಥೆಗಳು" ಚೌಕಟ್ಟಿನಡಿ ಮುಖ್ಯ ಭೂಭಾಗದೊಂದಿಗೆ ಒಗ್ಗೂಡಿಸಬೇಕೆಂಬ ಬೀಜಿಂಗ್ ಬೇಡಿಕೆಯನ್ನು ತಿರಸ್ಕರಿಸಿದೆ. ಇದರಿಂದ ತೈವಾನ್ ಒಂದು ಸ್ವ-ಆಡಳಿತ ಪ್ರಜಾಪ್ರಭುತ್ವವಾಗಿದೆ.

ಹಾಂಗ್ ಕಾಂಗ್ ಗೆ ತೆರಳುವವರಿಗೆ ಅನುಕೂಲ

ಹಾಂಗ್ ಕಾಂಗ್ ಗೆ ತೆರಳುವವರಿಗೆ ಅನುಕೂಲ

ತೈವಾನ್ ಕೇಂದ್ರದ ವ್ಯವಹಾರಗಳ ಸಮಿತಿ ಸಚಿವ ಚೆನ್ ಮಿಂಗ್-ಟಾಂಗ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಶಿಕ್ಷಣ ಮತ್ತು ವ್ಯವಹಾರ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ದ್ವೀಪಕ್ಕೆ ತೆರಳಲು ಬಯಸುವ ಹಾಂಗ್ ಕಾಂಗ್ ವೃತ್ತಿಪರರಿಗೆ ಈ ಕಚೇರಿ ಸಹಾಯ ಮಾಡುತ್ತದೆ ಎಂದು ಹೇಳಿದರು.

ಹಾಂಗ್ ಕಾಂಗ್ ನಲ್ಲಿ ಹೊಸ ಕಾನೂನು ಭೀತಿ

ಹಾಂಗ್ ಕಾಂಗ್ ನಲ್ಲಿ ಹೊಸ ಕಾನೂನು ಭೀತಿ

ಮಂಗಳವಾರ ಹಾಂಗ್ ಕಾಂಗ್ ನಲ್ಲಿ ಜಾರಿಗೆ ಬಂದ ರಾಷ್ಟ್ರೀಯ ಭದ್ರತಾ ಕಾನೂನಿನ ಪ್ರಕಾರ, ಮೊದಲ ದಿನವ 200 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ರಾಯಟರ್ಸ್ ವರದಿ ಮಾಡಿದೆ. ಅಸಲಿಗೆ ಪ್ರತ್ಯೇಕತಾವಾದಿ, ವಿಧ್ವಂಸಕ ಅಥವಾ ಭಯೋತ್ಪಾದಕ ಸ್ವಭಾವದವರು ಅಥವಾ ವಿದೇಶಿ ಪಡೆಗಳೊಂದಿಗೆ ಒಡನಾಟ ಹೊಂದಿದ್ದ ಚಟುವಟಿಕೆಗಳನ್ನು ಪ್ರಚೋದಿಸಿದವರು ಜೀವಾವಧಿ ಶಿಕ್ಷೆಗೆ ಗುರಿಪಡಿಸಬಹುದು.

ಹಾಂಗ್ ಕಾಂಗ್ ಮಂದಿ ನೆರವಿಗೆ ತೈವಾನ್ ದೃಢ ನಿರ್ಧಾರ

ಹಾಂಗ್ ಕಾಂಗ್ ಮಂದಿ ನೆರವಿಗೆ ತೈವಾನ್ ದೃಢ ನಿರ್ಧಾರ

ವಿಶೇಷ ಕಚೇರಿಯ ಸ್ಥಾಪನೆಯು ಹಾಂಗ್ ಕಾಂಗ್‌ನ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯಕ್ಕೆ ತೈವಾನ್ ನೀಡಿದ ಬೆಂಬಲದ ಹೇಳಿಕೆ ಮಾತ್ರವಲ್ಲ. ಬದಲಿಗೆ ಹಾಂಗ್ ಕಾಂಗ್ ಜನರನ್ನು ನೋಡಿಕೊಳ್ಳುವ ನಮ್ಮ ದೃಢವಾದ ನಿರ್ಧಾರವನ್ನು ಎತ್ತಿ ತೋರಿಸುತ್ತದೆ ಎಂದು ಚೆನ್ ತಿಳಿಸಿದ್ದಾರೆ. 1997ರ ಒಪ್ಪಂದದ ಪ್ರಕಾರ ಚೀನೀ ಆಡಳಿತಕ್ಕೆ ಹಾಂಗ್ ಕಾಂಗ್ ಮರಳುತ್ತಿದೆ. ಇದರಿಂದ ದ್ವೀಪ ನಗರವು ತನ್ನ ಪ್ರತ್ಯೇಕ ಕಾನೂನು, ಆರ್ಥಿಕ ಮತ್ತು ನಾಗರಿಕ ಹಕ್ಕುಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗುತ್ತದೆ. ಏಕೆಂದರೆ ಚೀನಾದ ಭರವಸೆ ಹಾಗೂ ಕಾನೂನಿನ ಅನುಷ್ಠಾನದಿಂದ ಪರಿಣಾಮಕಾರಿಯಾಗಿ ಹಾಂಗ್ ಕಾಂಗ್ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವಂತಾಗಿದೆ ಎಂದು ಚೆನ್ ಹೇಳಿದ್ದಾರೆ.

ತೈವಾನ್ ವಶಕ್ಕೆ ಪಡೆಯಲು ಮುಂದಾದ ಚೀನಾ

ತೈವಾನ್ ವಶಕ್ಕೆ ಪಡೆಯಲು ಮುಂದಾದ ಚೀನಾ

ತೈವಾನ್‌ನ ಹೈಟೆಕ್ ಆರ್ಥಿಕತೆ ಮತ್ತು ಜನನ ಪ್ರಮಾಣ ಕುಸಿಯುತ್ತಿದೆ. ತೈವಾನೀಸ್ ವೃತ್ತಿಪರರನ್ನು ವಿದೇಶದಿಂದ ಮರಳಲು ಸ್ವತಃ ಸರ್ಕಾರವೇ ಪ್ರೇರೇಪಿಸುತ್ತಿದೆ. ಜೊತೆಗೆ ಇತರ ದೇಶಗಳು ಮತ್ತು ಪ್ರಾಂತ್ಯಗಳಿಂದ ಹೊಸ ಬಂಡವಾಳ ಮತ್ತು ಹೂಡಿಕೆ ಮಾಡುವವರನ್ನು ಆಕರ್ಷಿಸುತ್ತದೆ. ಈಗಾಗಲೇ ಚೀನಾ, ತೈವಾನ್ ಸರ್ಕಾರದೊಂದಿಗಿನ ಸಂಬಂಧವನ್ನು ಕಡಿತಗೊಳಿಸಿದ್ದು, ದ್ವೀಪವನ್ನು ರಾಜತಾಂತ್ರಿಕವಾಗಿ ಪ್ರತ್ಯೇಕಿಸುವ ಪ್ರಯತ್ನಗಳನ್ನು ಚುರುಕುಗೊಳಿಸಿದೆ. ಅಗತ್ಯವಿದ್ದರೆ ಮಿಲಿಟರಿ ಬಲದಿಂದ ತೈವಾನ್ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಾಗಿ ಚೀನಾ ಹೇಳುತ್ತಿದೆ.

English summary
China Passes National Security Law: Taiwan Opens Migration Office For Hong Kong Peoples.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X