ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಡೆಲ್ಟಾ ರೂಪಾಂತರಿ ಸ್ಫೋಟ, ಕಠಿಣ ನಿಯಮಗಳು ಜಾರಿ

|
Google Oneindia Kannada News

ಬೀಜಿಂಗ್, ಜುಲೈ 31: ಚೀನಾದಲ್ಲಿ ಡೆಲ್ಟಾ ರೂಪಾಂತರಿ ಸ್ಪೋಟಗೊಂಡಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ.

ಚೀನಾದ ಹಲವು ಕಡೆಗಳಲ್ಲಿ ಮತ್ತು ಆಸ್ಟ್ರೇಲಿಯಾದಲ್ಲಿ ಕೊರೊನಾವೈರಸ್‌ನ ಡೆಲ್ಟಾ ರೂಪಾಂತರಿಯಿಂದ ಉಂಟಾಗುವ ಸೋಂಕು ಪ್ರಸರಣ ಹೆಚ್ಚಾಗಿದೆ.
ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಎರಡೂ ದೇಶಗಳು ಕಠಿಣ ನಿರ್ಬಂಧಗಳನ್ನು ವಿಧಿಸಲು ಮುಂದಾಗಿವೆ.

10 ಲಕ್ಷಕ್ಕೂ ಹೆಚ್ಚು ಜನರಿರುವ ಪ್ರದೇಶಗಳನ್ನು ಲಾಕ್‌ಡೌನ್‌ಗೆ ಒಳಪಡಿಸುವ ಮೂಲಕ ಚೀನಾ ಸರ್ಕಾರವು ತ್ವರಿತವಾಗಿ ಹರಡಬಲ್ಲ ಡೆಲ್ಟಾ ರೂಪಾಂತರಿ ಪ್ರಸರಣ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ.

China Outbreak Spreads As WHO Sounds Alarm On Delta

ಸಾಮೂಹಿಕ ಸೋಂಕು ಪತ್ತೆ ಪರೀಕ್ಷೆ ಅಭಿಯಾನವನ್ನೂ ಆರಂಭಿಸಿದೆ. ಡೆಲ್ಟಾ ರೂಪಾಂತರವು ಮಾರಕವಾಗಿ ಪರಿವರ್ತನೆಯಾಗುವ ಮೊದಲು ಪ್ರಸರಣ ತಡೆಯುವ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿತ್ತು.

ಚೀನಾದ ಪುಜಿಯಾನ್ ಮತ್ತು ಚಾಂಗ್‌ಕ್ವಿಂಗ್‌ನಲ್ಲಿ ಸೋಂಕು ಹರಡುವಿಕೆ ಹೆಚ್ಚಾಗಿದೆ. ನಾನ್‌ಜಿಂಗ್ ನಗರದಲ್ಲಿ 200ಕ್ಕೂ ಹೆಚ್ಚು ಡೆಲ್ಟಾ ಪ್ರಕರಣಗಳು ಪತ್ತೆಯಾಗಿವೆ.
ಡೆಲ್ಟಾ ರೂಪಾಂತರಿಯಿಂದಾಗಿ ವಿಶ್ವಾದ್ಯಂತ ಕಳೆದ ನಾಲ್ಕು ವಾರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಆರಂಭದಲ್ಲಿ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 9 ಮಂದಿ ಸ್ವಚ್ಛತಾ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು ಎನ್ನಲಾಗಿದೆ.

ಜಾಗತಿಕವಾಗಿ ಕೊರೊನಾ ಸೋಂಕಿನ ಹೊಸ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಏರಿಕೆ ಕಾಣುತ್ತಲೇ ಇದೆ. ಇದು ಪುನಃ ಕೊರೊನಾ ಅಬ್ಬರ ಹೆಚ್ಚುವುದರ ಸುಳಿವು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ''ಜುಲೈ 19 ರಿಂದ 25ರ ನಡುವೆ ಜಾಗತಿಕವಾಗಿ ಕೊರೊನಾ ಸೋಂಕಿಗೆ ಬಲಿಯಾದವರ ಪ್ರಮಾಣ ಶೇ. 21ರಷ್ಟು ಹೆಚ್ಚಳವಾಗಿದೆ. ಕಳೆದ ಒಂದು ವಾರದಲ್ಲಿ ವಿಶ್ವದಾದ್ಯಂತ ಕೊರೊನಾ ಸೋಂಕಿಗೆ 69 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.

ಜತೆಗೆ ಸೋಂಕಿನ ಹೊಸ ಪ್ರಕರಣಗಳು ಕೂಡ ನಿಧಾನಗತಿಯಲ್ಲಿ ಏರಿಕೆ ಕಾಣುತ್ತಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಈ ವಾರ ಹೊಸ ಕೇಸ್‌ಗಳು ಶೇ.8ರಷ್ಟು ಏರಿಕೆ ಕಂಡಿವೆ. ಹಲವು ರಾಷ್ಟ್ರಗಳಲ್ಲಿ ಕೊರೊನಾ ಮೂರು ಮತ್ತು ನಾಲ್ಕನೇ ಅಲೆಗಳು ಆರಂಭವಾಗುತ್ತಿವೆ. ಅಮೆರಿಕ ಹಾಗೂ ಆಗ್ನೇಯ ಏಷ್ಯಾ ಪ್ರಾಂತ್ಯಗಳಲ್ಲಿ ಸೋಂಕು ತೀವ್ರವಾಗಿ ಪ್ರಸರಣ ಹೊಂದುತ್ತಿದೆ. ಅಮೆರಿಕದಲ್ಲಿ ಶೇ.50ರಷ್ಟು ಜನಸಂಖ್ಯೆ ಕೊರೊನಾ ನಿರೋಧಕ ಲಸಿಕೆಗಳನ್ನು ನೀಡಿದ್ದರೂ ನಾಲ್ಕನೇ ಅಲೆಯ ಆರ್ಭಟ ಜೋರಾಗುತ್ತಿದೆ,'' '' ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ತಿಳಿಸಿದೆ.

ವಿಶ್ವದಲ್ಲೇ ಅತಿಹೆಚ್ಚು ಸಂಖ್ಯೆಯಲ್ಲಿ ಹೊಸ ಕೇಸ್‌ಗಳು ಅಮೆರಿಕದಲ್ಲಿ ವರದಿಯಾಗಿವೆ. ನಿತ್ಯ 1.35 ಲಕ್ಷ ಮಂದಿಗೆ ಕೊರೊನಾ ತಗುಲುತ್ತಿದ್ದು, ಈವರೆಗೆ 7.63 ಕೋಟಿ ಜನ ಸೋಂಕಿಗೆ ತುತ್ತಾಗಿದ್ದು, 6 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಸುಮಾರು 34 ಕೋಟಿ ಅಮೆರಿಕನ್ನರಿಗೆ ಲಸಿಕೆ ನೀಡಲಾಗಿದೆ.

ಕೆಲ ದಿನಗಳಿಂದ ಕೊರೊನಾ ತೀವ್ರತೆ ಇಳಿಮುಖವಾಗಿದ್ದ ಭಾರತದಲ್ಲಿಯೂ ಸೋಂಕಿನ ಹೊಸ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಮತ್ತೆ ಏರುಗತಿಗೆ ಮರಳಿದೆ. ಸತತ ಎರಡನೇ ದಿನ 40 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 41,649 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ ವಾರ 29-30 ಸಾವಿರದ ಅಂಚಿನಲ್ಲಿದ್ದ ಕೊರೊನಾ ಪ್ರಕರಣಗಳು ಇದೀಗ ದ್ವಿಗುಣಗೊಂಡಿವೆ. ಒಂದೇ ದಿನದಲ್ಲಿ 37,291 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಒಂದು ದಿನದ ಅವಧಿಯಲ್ಲಿ 593 ಮಂದಿ ಸೋಂಕಿನಿಂದ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಶನಿವಾರದ ಅಂಕಿಸಂಖ್ಯೆ ಪ್ರಕಾರ, ಇದುವರೆಗೂ ದೇಶದಲ್ಲಿ ಒಟ್ಟು 3,16,13,993 ಕೊರೊನಾ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ ನಾಲ್ಕು ಲಕ್ಷ ದಾಟಿದ್ದು, ಸದ್ಯ 4,08,920 ಪ್ರಕರಣಗಳಿವೆ.

ಇಲ್ಲಿಯವರೆಗೆ ದೇಶದಲ್ಲಿ ಸೋಂಕಿನಿಂದ 4,23,810 ಮಂದಿ ಸಾವನ್ನಪ್ಪಿದ್ದಾರೆ. ಈವರೆಗೂ ಒಟ್ಟು 3,07,81,263 ಮಂದಿ ಗುಣಮುಖರಾಗಿದ್ದಾರೆ.

ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 196 ದಿನಗಳಲ್ಲಿ ಈವರೆಗೂ 46 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ. ಶುಕ್ರವಾರ ರಾತ್ರಿ 7 ಗಂಟೆ ವೇಳೆಗೆ 44,38,901 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ. ಈವರೆಗೂ ಸುಮಾರು 45 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ. ಇದುವರೆಗೂ 46,15,18,479 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಎಸ್‌.ಕೆ.ಸಿಂಗ್‌ ನೇತೃತ್ವದ ತಂಡವು ಶುಕ್ರವಾರ ಕೇರಳಕ್ಕೆ ತೆರಳಲಿದೆ. ಕೇರಳದಲ್ಲಿ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಆರು ಸದಸ್ಯರ ತಜ್ಞರ ತಂಡವನ್ನು ರಾಜ್ಯಕ್ಕೆ ಕಳುಹಿಸಿಕೊಡಲಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಎಸ್‌.ಕೆ.ಸಿಂಗ್‌ ನೇತೃತ್ವದ ತಂಡವು ಶುಕ್ರವಾರ ಕೇರಳಕ್ಕೆ ತೆರಳಲಿದೆ.

English summary
Mushrooming outbreaks of the highly contagious Delta variant prompted China and Australia to impose stricter Covid-19 restrictions on Saturday as the WHO urged the world to quickly contain the mutation before it turns into something deadlier and draws out the pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X