ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವುಹಾನ್‌ನಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ಪರೀಕ್ಷೆ ಮಾಡುವಂತೆ ಚೀನಾ ಆದೇಶ

|
Google Oneindia Kannada News

ಬೀಜಿಂಗ್, ಆಗಸ್ಟ್ 03: ಇಡೀ ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ವುಹಾನ್ ಪ್ರಾಂತ್ಯದಲ್ಲಿ ಪ್ರತಿಯೊಬ್ಬರಿಗೂ ಮತ್ತೆ ಕೊರೊನಾ ಪರೀಕ್ಷೆ ನಡೆಸುವಂತೆ ಚೀನಾ ಸರ್ಕಾರ ಆದೇಶಿಸಿದೆ.

ಚೀನಾದಲ್ಲಿ ಡೆಲ್ಟಾ ಪ್ಲಸ್ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವುಹಾನ್ ನಗರದಲ್ಲಿ ಸಾಮೂಹಿಕ ಪರೀಕ್ಷೆ ನಡೆಸುವಂತೆ ಆದೇಶಿಸಲಾಗಿದೆ.

ಕೊರೊನಾವೈರಸ್ ಪರಿಚಯಿಸಿದ ಚೀನಾದಲ್ಲಿ ಹೇಗಿದೆ ಡೆಲ್ಟಾ ಹಾವಳಿ!?ಕೊರೊನಾವೈರಸ್ ಪರಿಚಯಿಸಿದ ಚೀನಾದಲ್ಲಿ ಹೇಗಿದೆ ಡೆಲ್ಟಾ ಹಾವಳಿ!?

2019ರ ಆರಂಭದಲ್ಲಿ ವುಹಾನ್ ನಗರದಲ್ಲಿ ವ್ಯಾಪಕವಾಗಿ ಹರಡಿದ್ದ ಕೊರೊನಾ ಇಲ್ಲಿನ ಜನರನ್ನು ಕಂಗೆಡಿಸಿತ್ತು, ನಂತರ ಇತರೆ ದೇಶಗಳಿಗೂ ಕ್ರಮವೇಣವಾಗಿ ಹರಡಿತ್ತು. ಇದೀಗ ಇಡೀ ವಿಶ್ವವನ್ನೇ ಆವರಿಸಿದೆ.

China Orders Mass Testing In Wuhan As COVID-19 Outbreak Spreads

1.1 ಕೋಟಿ ಜನಸಂಖ್ಯೆ ಇರುವ ವುಹಾನ್, ಮಧ್ಯ ಚೀನಾದ ಪ್ರಾಂತೀಯ ರಾಜಧಾನಿ, ಇತ್ತೀಚಿನ ದಿನಗಳಲ್ಲಿ ಸಾಮೂಹಿಕ ಕೊರೊನಾ ಪರೀಕ್ಷೆಗೆ ಆದೇಶಿಸಲಾದ ಚೀನಾದ ಮೊದಲ ನಗರವಾಗಿದೆ. ಸೋಮವಾರ ಇಲ್ಲಿ ಮೂರು ಪ್ರಕರಣಗಳು ದೃಢಪಟ್ಟಿದ್ದವು.

ಪ್ರಸ್ತುತ ಚೀನಾದ ದಿನನಿತ್ಯದ ಕೋವಿಡ್ ಪ್ರಕರಣಗಳ ಸಂಖ್ಯೆ ನೂರರಲ್ಲಿದ್ದರೂ ಸಹ ರಾಜಧಾನಿ ಬೀಜಿಂಗ್ ಸೇರಿದಂತೆ ಅನೇಕ ಪ್ರಾಂತ್ಯಗಳು ಮತ್ತು ನಗರಗಳನ್ನು ತಲುಪಿದೆ.
2019ರ ಬಳಿಕ ಅಧಿಕಾರಿಗಳು ಸೋಂಕಿತ ಜನರನ್ನು ಪ್ರತ್ಯೇಕಿಸಲು ತ್ವರಿತ ಲಾಕ್‌ಡೌನ್‌ಗಳು ಮತ್ತು ಸಾಮೂಹಿಕ ಪರೀಕ್ಷೆಗಳಂತಹ ತುರ್ತು ಕ್ರಮಗಳ ಮೂಲಕ ರೋಗವನ್ನು ನಿಯಂತ್ರಣಕ್ಕೆ ತರುತ್ತಿದ್ದಾರೆ.

ಹೆಚ್ಚಿನ ಕೋವಿಡ್ ಪ್ರಕರಣಗಳು ಜಿಯಾಂಗ್ಸು ಪ್ರಾಂತ್ಯದಲ್ಲಿದೆ, ಈ ಪ್ರಾಂತ್ಯದ ರಾಜಧಾನಿಯಾದ ನಾನ್ಜಿಂಗ್ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಕೊರೊನಾ ಪ್ರಕರಣಗಳು ಮೊದಲಿಗೆ ಪತ್ತೆಯಾಗಿದ್ದವು. ಜತೆಗೆ 105 ಕಿ.ಮೀ ದೂರದಲ್ಲಿರುವ ಯಾಂಗ್‌ಝೌನಗರಕ್ಕೂ ಹರಡಿತ್ತು.

24 ಗಂಟೆಗಳಲ್ಲಿ 90 ಹೊಸ ಪ್ರಕರಣಗಳು ಪತ್ತೆಯಾಗಿವೆ, 61 ಮಂದಿ ಸ್ಥಳೀಯರಾದರೆ 29 ಮಂದಿ ವಿದೇಶದಿಂದ ಬಂದವರಿದ್ದಾರೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗವು ತಿಳಿಸಿದೆ.

ಕೊರೊನಾವೈರಸ್‌ನ ಹೊಸ ತಳಿಗಳ ವಿರುದ್ಧ ಚೀನಾದ ಲಸಿಕೆಗಳು ಕಡಿಮೆ ಪರಿಣಾಮಕಾರಿ ಎಂದು ಅಲ್ಲಿನ ವಿಜ್ಞಾನಿಗಳು ಹೇಳಿದ್ದಾರೆ. ಈ ಪೈಕಿ ಹಲವು ಮಂದಿಗೆ ಹೆಚ್ಚು ಸಾಂಕ್ರಾಮಿಕ ಎನ್ನಲಾದ ಡೆಲ್ಟಾ ರೂಪಾಂತರ ತಗುಲಿದೆ ಎಂದು ಗುರುತಿಸಲಾಗಿದೆ, ಡೆಲ್ಟಾ ತಳಿಯು ವಿಶ್ವದ ಹಲವು ದೇಶಗಳಲ್ಲಿ ವ್ಯಾಪಕ ಹರಡುವಿಕೆಗೆ ಕಾರಣವಾಗಿದೆ.

ಕೊರೊನಾ ವೈರಸ್ ಚೀನಾದಿಂದ ಹರಡಿದೆ ಎಂದು ಇಡೀ ವಿಶ್ವದ ಇತರ ದೇಶಗಳು ಬೊಟ್ಟು ಮಾಡುತ್ತಿದೆ. ಆದರೆ ಚೀನಾ ಇದನ್ನು ನಿರಾಕರಿಸುತ್ತ ಬಂದಿದೆ. ಇದೀಗ ಕೊರೊನಾ ವೈರಸ್ ಲೀಕ್ ಆಗಿದ್ದು ಚೀನಾ ಲ್ಯಾಬ್‍ನಿಂದಲೇ ಎಂದು ಸಾಕ್ಷಿ ಸಿಕ್ಕಿದೆ ಎನ್ನುವುದನ್ನು ಯುಎಸ್ ರಿಪಬ್ಲಿಕನ್ ವರದಿ ಮಾಡಿದೆ.

ಕೊರೊನಾ ವೈರಸ್ ಹರಡಿರುವುದು ಚೀನಾದ ಲ್ಯಾಬ್ ನಿಂದಲೇ ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ ಎಂದು ಅಮೆರಿಕಾದ ಹೌಸ್ ಆಫ್ ಫಾರಿನ್ ಅಫೇರ್ಸ್ ಕಮಿಟಿಯ ಸದಸ್ಯ ಮೈಕ್ ಮೆಕಲ್ ತಿಳಿಸಿದ್ದಾರೆ ಎಂದು ಯುಎಸ್ ರಿಪಬ್ಲಿಕನ್ ವರದಿ ಮಾಡಿದೆ. ಆದರೆ ಚೀನಾ ಮಾತ್ರ ಈವರೆಗೆ ಕೊರೊನಾ ವೈರಸ್ ಲ್ಯಾಬ್ ನಿಂದ ಲೀಕ್ ಆಗಿಲ್ಲ. ಅದು ವುಹಾನ್‍ನ ಮಾರುಕಟ್ಟೆಯಿಂದ ಹರಡಿದೆ ಎಂದು ಹೇಳುತ್ತ ಬಂದಿದೆ.

ಹಲವು ದೇಶಗಳು ಮತ್ತು ಸಂಶೋಧನ ತಂಡಗಳು ಚೀನಾದ ಲ್ಯಾಬ್‍ನಿಂದ ಕೊರೊನಾ ವೈರಸ್ ಲೀಕ್ ಆಗಿರುವ ಬಗ್ಗೆ ಈ ಹಿಂದೆ ತಿಳಿಸಿದ್ದರು. ಆದರೆ ಚೀನಾ ಮಾತ್ರ ಇದನ್ನು ತಿರಸ್ಕರಿಸುತ್ತಾ ಬಂದಿದೆ. ಈ ನಡುವೆ ಅಮೆರಿಕದ ಸಂಶೋಧನ ತಂಡವೊಂದು ವೈರಸ್‍ನ ಸತ್ಯಾಂಶ ತಿಳಿಯಲು ಸಾಕ್ಷಿ ಸಂಗ್ರಹಿಸಿದೆ.

2019ರಲ್ಲಿ ಕೊರೊನಾ ವೈರಸ್ ಮೊದಲ ಬಾರಿಗೆ ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿತ್ತು. ಆದರೆ ಚೀನಾ ಇದನ್ನು ಮುಚ್ಚಿಟ್ಟು ಇತರ ದೇಶಗಳಿಗೂ ಹರಡುವಂತೆ ಮಾಡಿತು. ಬಳಿಕ ವೈರಸ್ ಕುರಿತು ಹಲವು ಸಂಶೋಧನೆಯಲ್ಲಿ ಕಂಡುಬಂದ ಅಂಶಗಳ ಕುರಿತು ತನ್ನದೆ ವಾದದ ಮೂಲಕ ನಿರಾಕರಿಸುತ್ತ ಬಂದಿದೆ.

ಆದರೆ ಇದೀಗ ಯುಎಸ್ ರಿಪಬ್ಲಿಕನ್ ವರದಿಯ ಪ್ರಕಾರ ಚೀನಾದ ಲ್ಯಾಬ್‍ನಿಂದಲೇ ಕೊರೊನಾ ವೈರಸ್ ಲೀಕ್ ಆಗಿರುವ ಬಗ್ಗೆ ಸಾಕ್ಷಿ ಸಿಕ್ಕಿರುವುದಾಗಿ ತಜ್ಞರ ತಂಡ ತಿಳಿಸಿರುವುದು ಕೂತುಹಲ ಮೂಡಿಸಿದೆ. ಮುಂದಿನ ದಿನಗಳಲ್ಲಿ ಸತ್ಯಾಂಶ ಹೊರಬರುವ ಸಾಧ್ಯತೆ ಇದೆ.

English summary
Chinese authorities announced Tuesday mass coronavirus testing in Wuhan as an unusually wide series of COVID-19 outbreaks reached the city where the disease was first detected in late 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X