ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಹೊಸ ವರಸೆ: ಕೊರೊನಾ ವೈರಸ್ ಬಂದಿದ್ದು ಆಸ್ಟ್ರೇಲಿಯಾದಿಂದ ಅಂತೆ!

|
Google Oneindia Kannada News

ಬೀಜಿಂಗ್, ಡಿಸೆಂಬರ್ 8: ಕೊರೊನಾ ವೈರಸ್ ಭಾರತದಲ್ಲಿಯೇ ಹುಟ್ಟಿದ್ದು ಎಂದು ಕಳೆದ ತಿಂಗಳಷ್ಟೇ ಆರೋಪಿಸಿದ್ದ ಚೀನಾ, ಈಗ ವೈರಸ್‌ನ ಮೂಲ ಆಸ್ಟ್ರೇಲಿಯಾ ಎಂದಿದೆ. ತನ್ನ ವುಹಾನ್ ನಗರದಿಂದ ಜಗತ್ತಿನಾದ್ಯಂತ ವೈರಸ್‌ಅನ್ನು ಹರಡಿಸುವ ಮೂಲಕ ವಿಶ್ವವನ್ನೇ ಸಂಕಷ್ಟಕ್ಕೆ ದೂಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಟೀಕೆಗೆ ಒಳಗಾಗಿರುವ ಚೀನಾ, ಸೋಂಕಿನ ಉಗಮ ತನ್ನಲ್ಲಿ ಆಗಿದ್ದಲ್ಲ ಎಂದು ತನ್ನ ವೈರಿ ದೇಶಗಳ ಮೇಲೆಯೇ ಆಪಾದನೆ ಹೊರಿಸುತ್ತಿದೆ. ಕೆಲವು ತಿಂಗಳ ಹಿಂದೆ ಕೊರೊನಾ ವೈರಸ್‌ ಮೂಲ ಅಮೆರಿಕ ಎಂದು ಚೀನಾ ಆರೋಪಿಸಿತ್ತು.

ಚೀನಾ ಮತ್ತು ಆಸ್ಟ್ರೇಲಿಯಾ ನಡುವೆ ರಾಜತಾಂತ್ರಿಕ ಸಂಘರ್ಷ ನಡೆಯುತ್ತಿದ್ದು, ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಳ್ಳಲಾದ ಶೈತ್ಯೀಕರಿಸಿದ ವಸ್ತುವಿನ ಮೂಲಕ ತಮ್ಮ ದೇಶಕ್ಕೆ ಕೊರೊನಾವೈರಸ್ ಸೋಮಕು ಬಂದಿದೆ ಎಂದು ಚೀನಾ ಹೊಸ ತಗಾದೆ ಶುರುಮಾಡಿದೆ.

ಭಾರತದಲ್ಲೇ ಕೊರೊನಾ ಸೋಂಕು ಹುಟ್ಟು, ಚೀನಾ ಗಂಭೀರ ಆರೋಪಭಾರತದಲ್ಲೇ ಕೊರೊನಾ ಸೋಂಕು ಹುಟ್ಟು, ಚೀನಾ ಗಂಭೀರ ಆರೋಪ

ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಈ 'ತನಿಖಾ ವರದಿ' ಪ್ರಕಟಿಸಿದೆ. ನಾವೆಲ್ ಕೊರೊನಾ ವೈರಸ್ 2019ರಲ್ಲಿ ಹೌನಾನ್‌ನ ಹಸಿ ಮಾರುಕಟ್ಟೆಗೆ ಆಮದಾಗಿರುವ ಸಾಧ್ಯತೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಆದರೆ ಸಾರ್ಸ್-ಕೋವ್-2 ವೈರಸ್‌ನ ಮೂಲವನ್ನು ಖಚಿತವಾಗಿ ಅರಿತುಕೊಳ್ಳಲು ಮತ್ತಷ್ಟು ಪುರಾವೆಗಳ ಅಗತ್ಯವಿದೆ ಎಂದು ಅದು ಹೇಳಿದೆ.

China Now Blames Australia For Coronavirus Pandemic

ವೈರಸ್ ಮೊದಲು ಹರಡುತ್ತಿರುವುದು ಹೊರ ಜಗತ್ತಿಗೆ ತಿಳಿಯದಂತೆ ಮುಚ್ಚಿಟ್ಟಿದ್ದ ಚೀನಾ, ಬಳಿಕ ಅದು ತನ್ನ ದೇಶದೊಳಗೆ ಹೆಚ್ಚಾಗದಂತೆ ನಿಯಂತ್ರಿಸಿತ್ತು. ಆದರೆ ಬೇರೆ ದೇಶಗಳಿಗೆ ಅಲ್ಲಿಂದ ಹರಡಿತ್ತು. ಜಗತ್ತಿಗೆ ವೈರಸ್ ಹರಡಿದ್ದಕ್ಕಾಗಿ ದೂಷಣೆಗೆ ಒಳಗಾಗಿರುವ ಚೀನಾ, ಅಕ್ಟೋಬರ್‌ನಿಂದ ತನ್ನ ವರಸೆ ಬದಲಿಸಿದೆ. ಬೇರೆ ದೇಶದಿಂದ ಆಮದಾದ ವಸ್ತುವಿನಿಂದಾಗಿ ವೈರಸ್ ಹರಡಿದೆ. ಶೈತ್ಯೀಕೃತ ವ್ಯವಸ್ಥೆಯಲ್ಲಿದ್ದ ಪ್ಯಾಕೆಟ್‌ಗಳ ಮೇಲೆ ವೈರಸ್ ಇರುವುದು ಪತ್ತೆಯಾಗಿದೆ. ಹೀಗಾಗಿ ಇದು ಬೇರೆ ದೇಶದ ಕೊಡುಗೆ ಎಂದು ಪ್ರತಿ ಆರೋಪಗಳನ್ನು ಶುರುಮಾಡಿದೆ.

ಮೊದಲ ಬಾರಿಗೆ ಭಾರತದಿಂದ ಅಕ್ಕಿ ಖರೀದಿಸಿದ ಚೀನಾಮೊದಲ ಬಾರಿಗೆ ಭಾರತದಿಂದ ಅಕ್ಕಿ ಖರೀದಿಸಿದ ಚೀನಾ

ಏಡಿ, ಶೆಲ್‌ಫಿಶ್‌ನಂತಹ ಕೋಲ್ಡ್ ಚೈನ್- ಸೀಫುಡ್‌ಗಳನ್ನು ಮತ್ತು ಬ್ರೆಜಿಲ್ ಹಾಗೂ ಜರ್ಮನಿಯಂತಹ ದೇಶಗಳಿಂದ ಆಮದು ಮಾಡಿಕೊಳ್ಳಲಾದ ಮಾಂಸಗಳ ಪ್ಯಾಕೆಟ್ ಮೇಲೆ ವೈರಸ್ ಕಂಡುಬಂದಿದೆ. 2019ಕ್ಕೂ ಮುನ್ನ ಆಸ್ಟ್ರೇಲಿಯಾದ ಮಾಂಸ, ಚಿಲಿಯ ಚೆರ್ರಿ ಮತ್ತು ಈಕ್ವೆಡಾರ್‌ನ ಸೀಫುಡ್‌ಗಳಲ್ಲಿ ಕೂಡ ವೈರಸ್ ಇತ್ತು ಎಂದು ಚೀನಾ ಹೇಳಿದೆ.

ಇದಕ್ಕೂ ಮುನ್ನ ಅದು ಯಾವುದೇ ಪುರಾವೆಯಿಲ್ಲದೆ ಅಮೆರಿಕ ಮತ್ತು ಇಟಲಿಗಳ ಮೇಲೆ ಚೀನಾ ಆರೋಪಿಸಿತ್ತು. ಬಾಂಗ್ಲಾದೇಶ, ಗ್ರೀಕ್, ಜೆಕ್ ರಿಪಬ್ಲಿಕ್, ರಷ್ಯಾ, ಸರ್ಬಿಯಾ ಹೀಗೆ ಚೀನಾ ಮನಬಂದ ದೇಶಗಳ ಮೇಲೆ ಆಪಾದನೆ ಹೊರಿಸುತ್ತಲೇ ಇದೆ. ಈಗ ಆಸ್ಟ್ರೇಲಿಯಾದೊಂದಿಗಿನ ರಾಜತಾಂತ್ರಿಕ ಬಿಕ್ಕಟ್ಟು ತೀವ್ರವಾಗಿರುವ ಹಿನ್ನೆಲೆಯಲ್ಲಿ ಅದರ ನಳಿಗೆ ಆ ದೇಶದತ್ತ ತಿರುಗಿದೆ.

English summary
After the diplomatic spat with Australia, China now blames the country as the origin of Covid-19 pandemic. Earlier it blamed US and India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X