ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ನಡೆದ ಹಿಂಸಾಚಾರ 'ಸುಂದರ ದೃಶ್ಯ' ಎಂದು ಚೀನಾ ಲೇವಡಿ

|
Google Oneindia Kannada News

ಬೀಜಿಂಗ್, ಜನವರಿ 7: ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಪರ ಬೆಂಬಲಿಗರು ಕ್ಯಾಪಿಟಲ್ ಕಟ್ಟಡಕ್ಕೆ ನುಗ್ಗಿ ಹಿಂಸಾಚಾರ ನಡೆಸಿದ ಘಟನೆಯನ್ನು ಚೀನಾ ಲೇವಡಿ ಮಾಡಿದೆ. ಅಮೆರಿಕದಲ್ಲಿನ ಸನ್ನಿವೇಶವನ್ನು ಅದು 2019ರಲ್ಲಿ ಹಾಂಕಾಂಗ್‌ನಲ್ಲಿ ನಡೆದ ಸರ್ಕಾರ ವಿರೋಧಿ ಪ್ರತಿಭಟನೆಗೆ ಹೋಲಿಸಿದೆ.

ಅಮೆರಿಕದಲ್ಲಿ ಬುಧವಾರ ನಡೆದ ಗಲಭೆಯ ಫೋಟೊ ಮತ್ತು 2019ರ ಜುಲೈ ತಿಂಗಳಲ್ಲಿ ಹಾಂಕಾಂಗ್ ಪ್ರತಿಭಟನಾಕಾರರು ನಗರದ ಪರಿಷತ್ ಸಂಕೀರ್ಣವನ್ನು ಆಕ್ರಮಿಸಿದ ಫೋಟೊಗಳನ್ನು ಅಕ್ಕಪಕ್ಕ ಹಾಕಿ ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಪತ್ರಿಕೆ ಟ್ವೀಟ್ ಮಾಡಿದೆ. ಜತೆಗೆ ಅಮೆರಿಕದ ಹಿಂಸಾಚಾರದ ಘಟನೆಯನ್ನು ಸುಂದರ ದೃಶ್ಯ ಎಂದು ವ್ಯಂಗ್ಯವಾಡಿದೆ.

'ನ್ಯಾನ್ಸಿ ಪೆಲೋಸಿ ಅವರು ಒಮ್ಮೆ ಹಾಂಕಾಂಗ್‌ನ ಗಲಭೆಯನ್ನು 'ನೋದಲು ಸುಂದರ ದೃಶ್ಯ' ಎಂದು ಉಲ್ಲೇಖಿಸಿದ್ದರು' ಎಂದು ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ 2019ರ ಜೂನ್‌ನಲ್ಲಿ ಹಾಂಕಾಂಗ್‌ನಲ್ಲಿ ನಡೆದ ಪ್ರಜಾಪ್ರಭುತ್ವ ಪರ ಪ್ರತಿಭಟನೆಯ ಫೋಟೊ ಹಂಚಿಕೊಂಡು ಬರೆದಿದ್ದನ್ನು ಗ್ಲೋಬಲ್ ಟೈಮ್ಸ್ ಪೋಸ್ಟ್ ಮಾಡಿದೆ.

ಹಿಂಸಾಚಾರ ನಡೆಸಿದವರನ್ನು 'ದೇಶಭಕ್ತರು' ಎಂದ ಟ್ರಂಪ್ ಪುತ್ರಿಹಿಂಸಾಚಾರ ನಡೆಸಿದವರನ್ನು 'ದೇಶಭಕ್ತರು' ಎಂದ ಟ್ರಂಪ್ ಪುತ್ರಿ

ಕ್ಯಾಪಿಟಲ್ ಹಿಲ್‌ನಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಸಹ ಅವರು ಇದೇ ರೀತಿಯ ಹೇಳಿಕೆ ನೀಡುತ್ತಾರೆಯೇ ಎನ್ನುವುದು ಇನ್ನೂ ಕಂಡುಬಂದಿಲ್ಲ' ಎಂದು ಗ್ಲೋಬಲ್ ಟೈಮ್ಸ್ ಲೇವಡಿ ಮಾಡಿದೆ. ಮುಂದೆ ಓದಿ.

ಹಾಂಕಾಂಗ್ ಪ್ರತಿಭಟನೆ ಬೆಂಬಲಿಸಿದ್ದರು

ಹಾಂಕಾಂಗ್ ಪ್ರತಿಭಟನೆ ಬೆಂಬಲಿಸಿದ್ದರು

ಚೀನಾದ ಕಮ್ಯುನಿಸ್ಟ್ ಯೂತ್ ಲೀಗ್ ಕೂಡ ತನ್ನ ವೀಬೊ ತಾಣದಲ್ಲಿ ಅಮೆರಿಕದ ಗಲಭೆಯನ್ನು 'ಸುಂದರ ದೃಶ್ಯ' ಎಂದು ಕರೆದಿದೆ.

ಚೀನಾದ ಸಾಮಾಜಿಕ ಮಾಧ್ಯಮ ವೀಬೊದಲ್ಲಿ 'ಯುಎಸ್ ಕ್ಯಾಪಿಟಲ್‌ಗೆ ಟ್ರಂಪ್ ಬೆಂಬಲಿಗರು ನುಗ್ಗಿದ್ದಾರೆ' ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದೆ. ಹಾಂಕಾಂಗ್‌ನಲ್ಲಿ ಚೀನಾ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯನ್ನು ಎಲ್ಲ ದೇಶಗಳೂ ಬೆಂಬಲಿಸಿದ್ದವು. ಈಗ ಅಮೆರಿಕದ ಗಲಭೆಯನ್ನು ಖಂಡಿಸುತ್ತಿವೆ ಎಂದು ಚೀನಾ ಟೀಕಿಸಿದೆ.

ಹಿಂಸಾಚಾರಕ್ಕೆ ಟ್ರಂಪ್ ಕಾರಣ: ಬರಾಕ್ ಒಬಾಮ ಆರೋಪಹಿಂಸಾಚಾರಕ್ಕೆ ಟ್ರಂಪ್ ಕಾರಣ: ಬರಾಕ್ ಒಬಾಮ ಆರೋಪ

ಯುರೋಪ್‌ನ ದ್ವಿಮುಖ ನಿಲುವು

ಯುರೋಪ್‌ನ ದ್ವಿಮುಖ ನಿಲುವು

'ಪ್ರಸ್ತುತ ಎಲ್ಲ ಯುರೋಪಿಯನ್ ದೇಶಗಳೂ ದ್ವಿಮುಖ ನಿಲುವು ಪ್ರದರ್ಶಿಸುತ್ತಿವೆ. ವಾಷಿಂಗ್ಟನ್ ಗಲಭೆಯನ್ನು ಖಂಡಿಸಿವೆ. ಹಾಂಕಾಂಗ್ ಅಥವಾ ತೈವಾನ್‌ನ ಮಾಧ್ಯಮಗಳು ಈಗ ಯಾವ ರೀತಿಯ ದ್ವಿಮುಖ ರೂಪದ ವರದಿಗಳನ್ನು ಪ್ರಕಟಿಸುತ್ತವೆಯೋ ಗೊತ್ತಿಲ್ಲ' ಎಂದು ಅನೇಕರು ಹೇಳಿದ್ದಾರೆ.

ಬೋರಿಸ್ ಜಾನ್ಸನ್ ಖಂಡನೆ

ಬೋರಿಸ್ ಜಾನ್ಸನ್ ಖಂಡನೆ

ಅಮೆರಿಕದ ಘಟನೆಗೆ ಜಗತ್ತಿನ ಅನೇಕ ಮುಖಂಡರು ಖಂಡನೆ ವ್ಯಕ್ತಪಡಿಸಿದ್ದಾರೆ. 'ಅಮೆರಿಕ ಕಾಂಗ್ರೆಸ್‌ನಲ್ಲಿ ಅವಮಾನಕಾರಿ ಘಟನೆ ನಡೆದಿದೆ. ಅಮೆರಿಕವು ಜಗತ್ತಿನಾದ್ಯಂತ ಪ್ರಜಾಪ್ರಭುತ್ವದ ನೆಲೆಯಾಗಿದೆ. ಅಲ್ಲಿ ಶಾಂತಿಯುತ ಮತ್ತು ಸುವ್ಯವಸ್ಥಿತ ಅಧಿಕಾರ ಹಸ್ತಾಂತರ ನಡೆಯುವುದು ಮುಖ್ಯ' ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಅಮೆರಿಕದಲ್ಲಿ ಪ್ರತಿಭಟನೆಯ ಬೆನ್ನಲ್ಲೇ ಶುರುವಾಯ್ತು ರಾಜೀನಾಮೆ ಪರ್ವಅಮೆರಿಕದಲ್ಲಿ ಪ್ರತಿಭಟನೆಯ ಬೆನ್ನಲ್ಲೇ ಶುರುವಾಯ್ತು ರಾಜೀನಾಮೆ ಪರ್ವ

ಕೆನಡಾ ಪ್ರಧಾನಿ ಟ್ವೀಟ್

ಕೆನಡಾ ಪ್ರಧಾನಿ ಟ್ವೀಟ್

ನಮ್ಮ ನಿಕಟವರ್ತಿ ಮತ್ತು ನೆರೆಯ ದೇಶ ಅಮೆರಿಕದ ಪ್ರಜಾಪ್ರಭುತ್ವದ ಮೇಲೆ ನಡೆದ ದಾಳಿಯಿಂದ ಕೆನಡಿಯನ್ನರು ತೀವ್ರ ಬೇಸರಪಟ್ಟುಕೊಂಡಿದ್ದಾರೆ. ಹಿಂಸೆಯು ಜನರ ಇಚ್ಛಾಶಕ್ತಿಯನ್ನು ಬದಲಿಸುವಲ್ಲಿ ಸಫಲವಾಗುವುದಿಲ್ಲ. ಅಮೆರಿಕದಲ್ಲಿನ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಬೇಕು. ಅದು ನಡೆಯಲಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಟ್ವೀಟ್ ಮಾಡಿದ್ದಾರೆ.

English summary
china mocked the violence at US capitol by Donald Trump's supporters as beautifu; sight of chaos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X