ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನೀ ಪ್ರಜೆಯನ್ನು ಇಸ್ಲಾಂಗೆ ಮತಾಂತರ ಮಾಡಿದ ಇಮ್ರಾನ್ ಖಾನ್ ಪಕ್ಷ

|
Google Oneindia Kannada News

ಪೇಶಾವರ (ಪಾಕಿಸ್ತಾನ), ಜನವರಿ 29: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ರ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಪಕ್ಷದಿಂದ ಚೀನಾದ ಪ್ರಜೆಯೊಬ್ಬನನ್ನು ಇಸ್ಲಾಮ್ ಗೆ ಮತಾಂತರ ಮಾಡಿದ ವಿಡಿಯೋ ಈಗ ಪಾಕ್ ನಲ್ಲಿ ಭಾರೀ ಸುದ್ದಿ ಆಗಿದೆ. ಹಲವು ಮಾಧ್ಯಮಗಳು ಸೋಮವಾರದಂದು ಈ ಬಗ್ಗೆ ವರದಿ ಮಾಡಿವೆ.

ವಿಡಿಯೋದಲ್ಲಿ ಇರುವ ದೃಶ್ಯಾವಳಿ ಪ್ರಕಾರ, ಪಿಟಿಐನ ಸಚಿವ ಅಮ್ಜದ್ ಅಲಿ ಚೀನಾದ ಪ್ರಜೆಗೆ ಧರ್ಮಕ್ಕೆ ಸಂಬಂಧಿಸಿದ ಕೆಲವು ವಾಕ್ಯಗಳನ್ನು ಪುನರುಚ್ಚರಿಸುವಂತೆ ಹೇಳುತ್ತಾರೆ. ಕಲಿಮಾ ಉಚ್ಚರಿಸುವ ಚೀನಾದ ಆ ವ್ಯಕ್ತಿ ಕಾಣಿಸಿಕೊಂಡಿದ್ದು, ಆತನಿಗೆ ಅಬ್ದುಲ್ಲಾ ಎಂದು ಹೆಸರಿಡಲಾಗಿದೆ.

ಪಾಕ್ ಚುನಾವಣೆ : ಇಸ್ಲಾಮಿಕ್ ಪಕ್ಷಗಳನ್ನು ತಿರಸ್ಕರಿಸಿದ ಜನರು!ಪಾಕ್ ಚುನಾವಣೆ : ಇಸ್ಲಾಮಿಕ್ ಪಕ್ಷಗಳನ್ನು ತಿರಸ್ಕರಿಸಿದ ಜನರು!

ಖೈಬರ್ ಪಂಖ್ತುವಾದ ಪಕ್ಷದ ಮಾಧ್ಯಮ ವಿಭಾಗ ಈ ವಿಡಿಯೋ ಬಿಡುಗಡೆ ಮಾಡಿದೆ. "ಅಭಿನಂದನೆಗಳು. ನೀವೀಗ ಮುಸ್ಲಿಂ. ನಿಮ್ಮ ಹೆಸರು ಅಬ್ದುಲ್ಲಾ" ಎಂದು ಅಮ್ಜದ್ ಅಲಿ ವಿಡಿಯೋದಲ್ಲಿ ಹೇಳಿದ್ದಾರೆ. ಈ ಅಮ್ಜದ್ ಅಲಿ ಖೈಬರ್ ಪಂಖ್ತುವಾದ ಖನಿಜ ಖಾತೆ ಸಚಿವ.

China man converted to Islam by Pakistan minister

ಆತ ನಮ್ಮ ಜತೆಗೆ ಕೆಲವು ಫೋಟೋಗಳನ್ನು ತೆಗೆದುಕೊಂಡರು ಮತ್ತು ನಂತರ ನಾವು ಮಾತನಾಡಲು ಆರಂಭಿಸಿದೆವು. ಅವರಿಗೆ ಬಹಳ ಮೆಚ್ಚುಗೆಯಾಯಿತು. ಕೂಡಲೇ ಇಸ್ಲಾಮ್ ಗೆ ಮತಾಂತರ ಮಾಡುವಂತೆ ಕೇಳಿಕೊಂಡರು ಎಂದು ಪಿಟಿಐ ಸಚಿವ ಅಮ್ಜದ್ ಅಲಿ ಹೇಳಿಕೊಂಡಿದ್ದಾರೆ.

ಚೀನಾದ ವ್ಯಕ್ತಿಯನ್ನು ಅಮ್ಜದ್ ಅಲಿ ಮೊದಲಿಗೆ ಭೇಟಿ ಆಗಿದ್ದು ಗ್ವಾನ್ ಗ್ಜೌನಲ್ಲಿ. ಅಲ್ಲಿ ಸಾದ್ ಬಿನ್ ಅಬಿ ವಕಾಸ್ ಭೇಟಿಗೆ ತೆರಳಿದ್ದ ವೇಳೆ ಪರಿಚಯ ಆಗಿದೆ. ಇಸ್ಲಾಮ್ ನ ಬಗ್ಗೆ ತಿಳಿದುಕೊಳ್ಳಲು, ಧಾರ್ಮಿಕ ವಿಚಾರಗಳನ್ನು ಅಳವಡಿಸಿಕೊಳ್ಳಲು ಚೀನಾದ ವ್ಯಕ್ತಿ ಪಾಕಿಸ್ತಾನಕ್ಕೆ ಬಂದಿರುವುದಾಗಿ ತಿಳಿದುಬಂದಿದೆ.

English summary
A video of a Chinese national reportedly being converted to Islam by Pakistani Prime Minister Imran Khan's party Pakistan Tehreek-e-Insaf or PTI was widely circulated in the country and carried by most news channels yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X