ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೊರೊನಾ ಮಾನವ ನಿರ್ಮಿತವಲ್ಲ': ಪುರಾವೆ ಇಲ್ಲದ ಆರೋಪ ಇದು

|
Google Oneindia Kannada News

ಬೀಜಿಂಗ್, ಏಪ್ರಿಲ್ 19: ಜಗತ್ತಿನಾದ್ಯಂತ ಮಾರಣಹೋಮ ನಡೆಸುತ್ತಿರುವ ಕೊರೊನಾ ವೈರಸ್‌ ಸೃಷ್ಟಿಗೆ ಕಾರಣವಾಗಿದ್ದು ಚೀನಾ. ಈಗ ಚೈನೀಸ್ ದೇಶದ ಮೇಲೆ ವಿಶ್ವದ ಹಲವು ರಾಷ್ಟ್ರಗಳು ಕೆಂಗಣ್ಣಿನಿಂದ ನೋಡುತ್ತಿದ್ದು, ಪ್ರಪಂಚದಲ್ಲಿ ಪಾರುಪತ್ಯ ಸಾಧಿಸಲು, ಅಭಿವೃದ್ದಿ ಹೊಂದಿದ ರಾಷ್ಟ್ರಗಳನ್ನು ಸೋಲಿಸಲು ಚೀನಾ ಉದ್ದೇಶಪೂರ್ವಕವಾಗಿ ಕೊವಿಡ್ ಹುಟ್ಟುಹಾಕಿದೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ.

ಆದರೆ, ಆರೋಪವನ್ನು ನಿಜ ಎಂದು ಹೇಳಲು ಯಾವುದೇ ಸಾಕ್ಷಿ ಇಲ್ಲ. ಕೊರೊನಾ ಮಾನವ ನಿರ್ಮಿತ ಎಂದು ಸಾಬೀತು ಪಡಿಸಲು ಆಧಾರವಿಲ್ಲ. ಈಗ ಇದೇ ವಿಚಾರವನ್ನು ಚೀನಾದ ವೈರಾಲಜಿ ಪ್ರಯೋಗಾಲಯ ಹೇಳುತ್ತಿದೆ.

ಕೊರೊನಾ ವೈರಸ್ ಮಾನವ ನಿರ್ಮಿತವೇ? ಇಲ್ಲಿದೆ ಉತ್ತರಕೊರೊನಾ ವೈರಸ್ ಮಾನವ ನಿರ್ಮಿತವೇ? ಇಲ್ಲಿದೆ ಉತ್ತರ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವರು ಕೊರೊನಾ ವೈರಸ್ ಮೊದಲ ಬಾರಿಗೆ ಚೀನಾದ ವೈರಾಲಜಿ ಪ್ರಯೋಗಾಲಯದಲ್ಲಿ ಸೃಷ್ಟಿಯಾಗಿದೆ. ಅಲ್ಲಿಂದಲೇ ಬೇರೆ ದೇಶಗಳಿಗೆ ಹರಡಿದೆ ಎಂದು ಟೀಕಿಸಿದ್ದಾರೆ. ಕಳೆದ ಡಿಸೆಂಬರ್‌ ತಿಂಗಳಲ್ಲಿ ವೈರಾಲಜಿ ಪ್ರಯೋಗಾಲ ಅಥವಾ ಸೀಫುಡ್ ಮಾರುಕಟ್ಟೆಯಿಂದ ಕೊರೊನಾ ಹುಟ್ಟಿಕೊಂಡಿದೆ ಎಂದು ಆರೋಪಿಸಿದ್ದಾರೆ.

China Lab Clarified Coronavirus Is Not Man made

'ಪ್ರಯೋಗಾಲಯದಲ್ಲಿ ಯಾವ ರೀತಿ ಸಂಶೋಧನೆ ನಡೆಯುತ್ತಿದೆ, ವೈರಸ್ ಮತ್ತು ಮಾದರಿಗಳನ್ನು ಸಂಸ್ಥೆ ಹೇಗೆ ನಿರ್ವಹಿಸುತ್ತಿದೆ ಎಂದು ನಮಗೆ ತಿಳಿದಿದೆ. ಕೊರೊನಾ ನಮ್ಮಿಂದ ಬಂದಿದೆ ಎಂಬುದು ಸಮಂಜಸವಲ್ಲ. ಅದಕ್ಕೆ ಯಾವುದೇ ಪುರಾವೆ ಇಲ್ಲ' ಎಂದು ಲ್ಯಾಬ್ ಮುಖ್ಯಸ್ಥ ಹೇಳಿದ್ದಾರೆ.

'ನಮ್ಮಲ್ಲಿ ಕಟ್ಟುನಿಟ್ಟಾದ ನಿಯಮಗಳಿವೆ. ಸಂಶೋಧನೆಗಾಗಿ ನಮ್ಮಲ್ಲಿ ನೀತಿ ಸಂಹಿತೆ ಇದೆ. ಅದರ ಅಡಿಯಲ್ಲಿ ನಾವು ಕೆಲಸ ಮಾಡುತ್ತೇವೆ. ಜ್ಞಾನವಿಲ್ಲದ ಜನರು ಆಧಾರವಿಲ್ಲದೇ ದೂರುತ್ತಿದ್ದಾರೆ. ಕೊರೊನಾ ಮಾನವನಿರ್ಮಿತವಲ್ಲ' ಎಂದು ಸಮರ್ಥಿಸಿಕೊಂಡಿದೆ.

ಭಾರತದಲ್ಲಿ ಕೊರೊನಾದಿಂದ ಹಿರಿಯರಿಗೆ ಹೆಚ್ಚು ಅಪಾಯ, ಅಂಕಿ-ಅಂಶ ಬಿಚ್ಚಿಟ್ಟ ಸತ್ಯಭಾರತದಲ್ಲಿ ಕೊರೊನಾದಿಂದ ಹಿರಿಯರಿಗೆ ಹೆಚ್ಚು ಅಪಾಯ, ಅಂಕಿ-ಅಂಶ ಬಿಚ್ಚಿಟ್ಟ ಸತ್ಯ

ಇದುವರೆಗೂ ಜಗತ್ತಿನಲ್ಲಿ ಒಟ್ಟು 2,345,476 ಜನರಲ್ಲಿ ಕೊರೊನಾ ದೃಢವಾಗಿದೆ. ಅದರಲ್ಲಿ 161,196 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 604,606 ಜನರು ಈ ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ. ಅಮೆರಿಕದಲ್ಲಿ 39,015 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಟಲಿಯಲ್ಲಿ 23,227 ಜನರು ಸಾವನ್ನಪ್ಪಿದ್ದಾರೆ.

English summary
Chinese virology laboratory clarified 'Coronavirus is not man made'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X