• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾದಿಂದ ಮರುಬಳಕೆ ಬಾಹ್ಯಾಕಾಶ ನೌಕೆ ಉಡಾವಣೆ, ಯೋಜನೆ ವಿವರ ಗೌಪ್ಯ

|

ಬೀಜಿಂಗ್, ಸೆಪ್ಟೆಂಬರ್ 05: ಚೀನಾವು ಮರುಬಳಕೆ ಮಾಡಬಹುದಾದ ಪ್ರಾಯೋಗಿಕ ಬಾಹ್ಯಾಕಾಶ ನೌಕೆಯನ್ನು ಗೌಪ್ಯವಾಗಿ ಉಡಾವಣೆ ಮಾಡಿದ್ದು, ಅದರ ವಿವರಗಳನ್ನು ಕೂಡ ಗೌಪ್ಯವಾಗಿಯೇ ಇರಿಸಿದೆ.

   China ಗೌಪ್ಯವಾಗಿ ಕೈಗೊಂಡ ಕಾರ್ಯಾಚರಣೆ ಏನು ? | Oneindia Kannada

   ಈ ಉಡಾವಣೆಯಲ್ಲಿ ಹಲವು ಪ್ರಥಮಗಳಿವೆ. ಬಾಹ್ಯಾಕಾಶ ನೌಕೆ ಹೊಸದು, ಉಡಾವಣಾ ವಿಧಾನವು ವಿಭಿನ್ನವಾಗಿದೆ. ಅದಕ್ಕಾಗಿಯೇ ಹೆಚ್ಚುವರಿ ಭದ್ರತೆ ಇದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು.

   ಎಕ್ಸ್ -37ಬಿ ಮಾನವರಹಿತ ಬಾಹ್ಯಾಕಾಶ ನೌಕೆಯಾಗಿದ್ದು, ಇದು ಬಾಹ್ಯಾಕಾಶ ನೌಕೆಯ ಸಣ್ಣ ಆವೃತ್ತಿಯಂತೆ ಕಾರ್ಯನಿರ್ವಹಿಸುತ್ತದೆ. ಇದು ರಾಕೆಟ್‌ನಿಂದ ಉಡಾವಣೆಯಾಗುತ್ತದೆ ಮತ್ತು ರನ್‌ವೇ ಲ್ಯಾಂಡಿಂಗ್‌ಗಾಗಿ ಭೂಮಿಗೆ ಮರಳುತ್ತದೆ.

   ವಾಯುವ್ಯ ಚೀನಾದ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಲಾಂಗ್ ಮಾರ್ಚ್ -2 ಎಫ್ ಕ್ಯಾರಿಯರ್ ರಾಕೆಟ್‌ನಲ್ಲಿ ಈ ಬಾಹ್ಯಾಕಾಶ ನೌಕೆಯನ್ನು ಉಡಾಯಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಸಿನ್ಹುವಾ ವರದಿ ಮಾಡಿದೆ.

   ಚೀನಾದಿಂದ ಭಾರತಕ್ಕೆ ಶಿಫ್ಟ್‌ ಆಗುವ ಕಂಪನಿಗಳಿಗೆ ಜಪಾನ್ ಪ್ರೋತ್ಸಾಹ..!

   ಕಕ್ಷೆಯ ಕಾರ್ಯಾಚರಣೆ ಮುಗಿಸಿದ ಬಾಹ್ಯಾಕಾಶ ನೌಕೆ ಪೂರ್ವನಿರ್ಧರಿತ ಲ್ಯಾಂಡಿಂಗ್ ಪ್ರದೇಶಕ್ಕೆ ಹಿಂತಿರುಗುತ್ತದೆ. ಇದು ತನ್ನ ಹಾರಾಟದ ಸಮಯದಲ್ಲಿ ಮರುಬಳಕೆ ಮಾಡಬಹುದಾದ ತಂತ್ರಜ್ಞಾನಗಳನ್ನು ಪರೀಕ್ಷಿಸಲಿದೆ.

   ಹಾಂಗ್ ಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಬಾಹ್ಯಾಕಾಶ ಯಾನವನ್ನು ರಹಸ್ಯವಾಗಿಡಲಾಗಿದೆ ಎಂದು ವರದಿ ಮಾಡಿದೆ.

   ಯೋಜನೆ ವಿವರಗಳ ಬಗ್ಗೆ ಪ್ರತಿಕ್ರಿಯಿಸಲು ಅಧಿಕಾರಿ ನಿರಾಕರಿಸಿದ್ದಾರೆ.

   English summary
   China launched an experimental reusable spacecraft into orbit on Friday (Sept. 4), with few details about what the spacecraft will do.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X