ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ನಮ್ಮ ಅತಿ ಮುಖ್ಯ ಪಾಲುದಾರ ಎಂದು ಹೇಳಿಕೊಂಡ ತಾಲಿಬಾನ್

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಕಾಬೂಲ್, ಸೆಪ್ಟೆಂಬರ್ 3: 'ಚೀನಾ ನಮ್ಮ ಪ್ರಮುಖ ಪಾಲುದಾರ ಹಾಗೂ ಅಫ್ಘಾನಿಸ್ತಾನದ ಆರ್ಥಿಕ ಪುನರುಜ್ಜೀವನಕ್ಕೆ ತಾಲಿಬಾನ್ ನಾಯಕತ್ವ ಬೀಜಿಂಗ್‌ನ ಹಣಕಾಸು ನೆರವಿನ ಮೇಲೆ ಅವಲಂಬಿತವಾಗಿರುತ್ತದೆ' ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಶುಕ್ರವಾರ ಹೇಳಿದ್ದಾರೆ.

ಇಟಲಿ ಪತ್ರಿಕೆಯೊಂದಿಗೆ ಮಾತನಾಡಿರುವ ಜಬೀವುಲ್ಲಾ, 'ಅಫ್ಘಾನಿಸ್ತಾನದಲ್ಲಿ ತಾಲಿಬಾನ್, ತನ್ನ ಆರ್ಥಿಕತೆ ಸುಧಾರಣೆ ಹಾಗೂ ಪುನರುಜ್ಜೀವನಕ್ಕೆ ಚೀನಾದ ನಿಧಿಯನ್ನು ಅವಲಂಬಿಸಿದೆ' ಎಂದು ಹೇಳಿಕೊಂಡಿದ್ದಾರೆ.

'ಚೀನಾ ನಮಗೆ ಅಸಾಧಾರಣ ಅವಕಾಶಗಳನ್ನು ನೀಡುತ್ತಿದೆ. ನಮ್ಮ ದೇಶದಲ್ಲಿ ಹೂಡಿಕೆ ಮಾಡಲು ಹಾಗೂ ದೇಶದ ಪುನರ್ ನಿರ್ಮಾಣಕ್ಕೆ ನೆರವಾಗಲು ಚೀನಾ ಸಿದ್ಧವಾಗಿದೆ. ಹೀಗಾಗಿ ಚೀನಾ ನಮ್ಮ ಪ್ರಮುಖ ಪಾಲುದಾರನಾಗಲಿದೆ' ಎಂದು ಜಬೀವುಲ್ಲಾ 'ಲಾ ರಿಪಬ್ಲಿಕಾ'ಗೆ ತಿಳಿಸಿದ್ದಾರೆ.

China Is Our Most Important Partner Says Taliban Ahead Of New Government

'ದೇಶದಲ್ಲಿ ಶ್ರೀಮಂತ ತಾಮ್ರದ ಗಣಿಗಳಿವೆ. ಚೀನಾದವರಿಂದ ಕಾರ್ಯಾಚರಣೆ ಹಾಗೂ ಆಧುನೀಕರಣ ಸಾಧ್ಯವಾಗುವ ನಿರೀಕ್ಷೆಯಿದೆ. ಇದರೊಂದಿಗೆ ಪ್ರಪಂಚದಾದ್ಯಂತ ಮಾರುಕಟ್ಟೆಗಳಿಗೆ ಚೀನಾ ನಮಗೆ ದಾರಿಯಾಗಬಹುದಾಗಿದೆ' ಎಂದು ಹೇಳಿದ್ದಾರೆ.

ಸರ್ಕಾರ ರಚಿಸಲು ಹೊರಟಿರುವ ತಾಲಿಬಾನ್ ಎದುರಿಗೆ ಸದ್ಯ ಸಾಕಷ್ಟು ಸವಾಲುಗಳಿವೆ. ಅಂತರರಾಷ್ಟ್ರೀಯ ಹೂಡಿಕೆದಾರರ ಮೇಲೆ ತಾಲಿಬಾನ್ ದೃಷ್ಟಿ ನೆಟ್ಟಿದೆ. ಸಾಮೂಹಿಕ ಸ್ಥಳಾಂತರ ಪ್ರಕ್ರಿಯೆ ನಂತರ ಅಫ್ಘನ್ನರು ಮತ್ತು ವಿದೇಶಿ ಪ್ರಯಾಣಿಕರ ಸುರಕ್ಷಿತ ಸಂಚಾರಕ್ಕೆ ಅವಕಾಶ ನೀಡುವುದಾಗಿ ತಾಲಿಬಾನ್ ಭರವಸೆ ನೀಡಿದೆ. ಆದರೆ ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಇಂದಿಗೂ ಮುಚ್ಚಿದೆ. ಸರ್ಕಾರ ರಚನೆ, ವ್ಯಾಪಾರ ವಹಿವಾಟಿಗೆ ಇತರೆ ದೇಶಗಳ ಬೆಂಬಲವನ್ನು ಮನಗಂಡಿರುವ ತಾಲಿಬಾನ್ ಈಗ ಚೀನಾ ನೆರವನ್ನು ಬಯಸುತ್ತಿದೆ.

'ಕಾಶ್ಮೀರದ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕು ನಮಗಿದೆ' ಎಂದ ತಾಲಿಬಾನ್‌ 'ಕಾಶ್ಮೀರದ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕು ನಮಗಿದೆ' ಎಂದ ತಾಲಿಬಾನ್‌

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಿಡಿತ ಸಾಧಿಸಿ ಎರಡು ವಾರಗಳು ಕಳೆಯುತ್ತಿದ್ದಂತೆ ನೂತನ ಸರ್ಕಾರದ ಕಸರತ್ತು ಆರಂಭವಾಗಿದೆ. ಶುಕ್ರವಾರದ ಪ್ರಾರ್ಥನೆ ಬಳಿಕ ತಾಲಿಬಾನ್ ಸಂಘಟನೆಯು ಅಧಿಕೃತವಾಗಿ ಸರ್ಕಾರ ರಚನೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ನಂತರ ಅಧಿಕಾರ ಸಾಧಿಸಲಿರುವ ತಾಲಿಬಾನ್ ಸೆಪ್ಟೆಂಬರ್ 3ರಂದು ನೂತನ ಸರ್ಕಾರ ರಚಿಸಲಿರುವುದಾಗಿ ತಿಳಿದುಬಂದಿದೆ.

ಆದರೆ ಮಹಿಳೆಯರಿಗೆ ಸರ್ಕಾರ ರಚನೆಯಲ್ಲಿ ಯಾವುದೇ ಸ್ಥಾನ ನೀಡುವುದಿಲ್ಲ ಎಂಬುದನ್ನೂ ತಾಲಿಬಾನ್ ಪ್ರಕಟಿಸಿದೆ.
'ಭವಿಷ್ಯದಲ್ಲಿ ಮಹಿಳೆಯರಿಗೆ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ಅವಕಾಶ ನೀಡಲಾಗುವುದು, ಮಹಿಳೆಯರು ದಾದಿಯರಾಗಿ, ಪೊಲೀಸ್ ಪಡೆಯಲ್ಲಿ, ಸಚಿವಾಲಯಗಳಲ್ಲಿ ಸಹಾಯಕರಾಗಿ ಕೆಲಸ ಮಾಡಲು ಸಾಧ್ಯವಾಗಲಿದೆ. ಸರ್ಕಾರದಲ್ಲಿ ಯಾವುದೇ ಮಹಿಳಾ ಸಚಿವರು ಇರುವುದಿಲ್ಲ' ಎಂದು ಸ್ಪಷ್ಟಪಡಿಸಿದೆ.

China Is Our Most Important Partner Says Taliban Ahead Of New Government

ಅಫ್ಘಾನಿಸ್ತಾನ ಹೊಸ ಸರ್ಕಾರದಲ್ಲಿ ತಾಲಿಬಾನ್‌ನ ಅತ್ಯುನ್ನತ ನಾಯಕ ಹೈಬತುಲ್ಲಾ ಅಖುಂಡಜಾದ ಅಗ್ರಸ್ಥಾನವನ್ನು ಪಡೆದುಕೊಳ್ಳಲಿದ್ದು, ಅವರ ಅಧೀನದಲ್ಲಿ ಅಧ್ಯಕ್ಷರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹಿರಿಯ ತಾಲಿಬಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮೆರಿಕ ಸೇನಾಪಡೆ ವಾಪಸ್:
ಆಗಸ್ಟ್‌ 15ರಂದು ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿದೆ. ಎರಡು ದಶಕಗಳ ನಂತರ ಅಫ್ಘಾನ್‌ನಿಂದ ಅಮೆರಿಕ ತನ್ನ ಸೇನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದಂತೆ ತಾಲಿಬಾನಿಗಳು ಆಕ್ರಮಣ ಮಾಡಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದಾರೆ. ಆಗಸ್ಟ್‌ 31ರಂದು ಅಮೆರಿಕ ಪಡೆ ಅಫ್ಘಾನ್ ತೊರೆಯುತ್ತಿದ್ದಂತೆ ಸ್ವಾತಂತ್ರ್ಯ ಘೋಷಿಸಿಕೊಂಡಿರುವ ತಾಲಿಬಾನ್, ಹೊಸ ಸರ್ಕಾರ ರಚಿಸುವ ಸಿದ್ಧತೆ ನಡೆಸುತ್ತಿದೆ.

ಸೆಪ್ಟೆಂಬರ್ 3: ಅಫ್ಘಾನಿಸ್ತಾನದಲ್ಲಿ ಇಂದೇ ತಾಲಿಬಾನ್ ಸಂಘಟನೆ ಸರ್ಕಾರ ರಚನೆಸೆಪ್ಟೆಂಬರ್ 3: ಅಫ್ಘಾನಿಸ್ತಾನದಲ್ಲಿ ಇಂದೇ ತಾಲಿಬಾನ್ ಸಂಘಟನೆ ಸರ್ಕಾರ ರಚನೆ

1996 ರಿಂದ 2001ರವರೆಗೂ ಅಫ್ಘಾನಿಸ್ತಾನ ತಾಲಿಬಾನ್ ಉಗ್ರ ಸಂಘಟನೆಯ ಹಿಡಿತದಲ್ಲಿತ್ತು. 2001ರ ಸೆಪ್ಟೆಂಬರ್ 11ರಂದು ಅಮೆರಿಕದ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ್ದರು. ಅಲ್ ಖೈದಾ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದ ಕಾರಣಕ್ಕಾಗಿ ತಾಲಿಬಾನ್ ಮೇಲೂ ಅಮೆರಿಕ ಸೇನಾಪಡೆ ಕಾರ್ಯಾಚರಣೆಗೆ ಇಳಿಯಿತು. ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಅಫ್ಘಾನ್ ಮೇಲೆ ದಾಳಿ ನಡೆಸಿ ಅಫ್ಘಾನಿಸ್ತಾನವನ್ನು 2001ರಲ್ಲಿ ತಾಲಿಬಾನ್ ಹಿಡಿತದಿಂದ ಬಿಡುಗಡೆಗೊಳಿಸಿತು. 20 ವರ್ಷಗಳ ನಂತರ ಅಮೆರಿಕ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಘೋಷಿಸುತ್ತಿದ್ದಂತೆ ಈಗ ಮತ್ತೆ ತಾಲಿಬಾನ್ ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧತೆ ನಡೆಸುತ್ತಿದೆ.

English summary
Zabihullah Mujahid, Taliban spokesperson told an Italian newspaper that they look at China as the most important partner and will rely on financing from Beijing
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X