• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾ ವಿರುದ್ಧ ಭಾರತದ ಬೆನ್ನಿಗೆ ನಿಂತಿದ್ದೇಕೆ ಅಮೆರಿಕಾ?

|

ವಾಶಿಂಗ್ಟನ್, ಜುಲೈ.17: ಭಾರತ ಮತ್ತು ಚೀನಾ ನಡುವೆ ಶಾಂತಿ ಸ್ಥಾಪನೆಗೆ ಅಗತ್ಯ ಸಹಕಾರ ನೀಡುವುದಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿದ್ಧ ಎಂದು ವೈಟ್ ಹೌಸ್ ಮಾಧ್ಯಮ ಕಾರ್ಯದರ್ಶಿ ಕಾಯ್ಲಿ ಮೆಕ್ ಎನಾನಿ ತಿಳಿಸಿದ್ದಾರೆ.

   BBMP commissioner Anil Kumar transferred | Oneindia Kannada

   ನನಗೆ ಭಾರತೀಯ ಪ್ರಜೆಗಳನ್ನು ಕಂಡರೂ ಇಷ್ಟ, ಚೀನಾದ ಜನರನ್ನು ಕಂಡರೂ ಬಹಳ ಇಷ್ಟ. ಹೀಗಾಗಿ ಎರಡು ರಾಷ್ಟ್ರದ ಪ್ರಜೆಗಳಿಗಾಗಿ ಉಭಯ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪನೆಗಾಗಿ ಏನು ಬೇಕಾದರೂ ಮಾಡುವುದಕ್ಕೆ ನಾವು ಸಿದ್ಧ ಎಂದು ಕಾಯ್ಲಿ ಮೆಕ್ ಎನಾನಿ ಹೇಳಿದ್ದಾರೆ.

   ಲಡಾಖ್ ಗಡಿ ಸಂಘರ್ಷ: ಚೀನಾದ ಮೇಲೆ ನಿರಂತರ ಕಣ್ಣಿಟ್ಟಿರಬೇಕು ಎಂದ ಭಾರತೀಯ ಸೇನೆ

   ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಬಗ್ಗೆ ಬೀಜಿಂಗ್ ಹೊಂದಿರುವ ಆಕ್ರಮಣಕಾರಿ ನಿಲುವು ಚೀನಾ ಕಮ್ಯುನಿಷ್ಟ್ ಪಕ್ಷದ ನಿಜವಾದ ಸ್ವರೂಪವನ್ನು ತೋರಿಸುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಂಬಿದ್ದರು. ಕಳೆದ ಜುಲೈ.02ರಂದು ಕಾಯ್ಲಿ ಮೆಕ್ ಎನಾನಿ ಈ ರೀತಿ ಹೇಳಿಕೆ ನೀಡಿದ್ದರು.

   1975ರ ನಂತರ ಮೊದಲ ಬಾರಿ ಉಭಯ ರಾಷ್ಟ್ರಗಳ ಸಂಘರ್ಷ

   1975ರ ನಂತರ ಮೊದಲ ಬಾರಿ ಉಭಯ ರಾಷ್ಟ್ರಗಳ ಸಂಘರ್ಷ

   ಭಾರತ-ಚೀನಾ ಯೋಧರ ನಡುವೆ 1975ರ ನಂತರ ಮೊದಲ ಬಾರಿಗೆ ಗಾಲ್ವಾನ್ ಕಣಿವೆ ವಿಚಾರಕ್ಕೆ ಸಂಘರ್ಷ ನಡೆದಿತ್ತು. ಜೂನ್.15 ಮತ್ತು 16ರಂದು ಚೀನಾ ಸೈನಿಕರು ತೋರಿದ ಕ್ರೌರ್ಯಕ್ಕೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, 76 ಯೋಧರು ಗಾಯಗೊಂಡಿರುವ ಬಗ್ಗೆ ಭಾರತೀಯ ಸೇನೆಯು ಬಹಿರಂಗವಾಗಿ ಸ್ಪಷ್ಟನೆ ನೀಡಿತು. ಆದರೆ ಚೀನಾ ಯಾವುದೇ ರೀತಿಯ ಮಾಹಿತಿ ನೀಡಿರಲಿಲ್ಲ. ಬದಲಿಗೆ ಅಮೆರಿಕಾದ ಗುಪ್ತಚರ ಇಲಾಖೆ ನೀಡಿದ ಅಂಕಿ-ಅಂಶಗಳ ಪ್ರಕಾರ ಭಾರತೀಯ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಚೀನಾದ ಕನಿಷ್ಠ 35 ಸೈನಿಕರು ಹತರಾಗಿದ್ದಾರೆ ಎಂದು ತಿಳಿದು ಬಂದಿತ್ತು.

   ಭಾರತದ ಬೆನ್ನಿಗೆ ನಿಂತ ವಿಶ್ವದ ದೊಡ್ಡಣ್ಣ

   ಭಾರತದ ಬೆನ್ನಿಗೆ ನಿಂತ ವಿಶ್ವದ ದೊಡ್ಡಣ್ಣ

   ಚೀನಾ ಮತ್ತು ಭಾರತದ ನಡುವಿನ ಸಂಘರ್ಷದ ಬೆನ್ನಲ್ಲೇ ವಿಶ್ವದ ದೊಡ್ಡಣ್ಣ ಅಮೆರಿಕಾ ಭಾರತದ ಬೆನ್ನಿಗೆ ನಿಂತಿತು. ಅಮೆರಿಕಾ ಆಡಳಿತಾತ್ಮಕ ಸರ್ಕಾರದ ಜನಪ್ರತಿನಿಧಿಗಳ ಆದಿಯಾಗಿ ಬಹುತೇಕ ನಾಯಕರು ಭಾರತದ ಪರ ನಿಂತು ಚೀನಾಗೆ ಛೀಮಾರಿ ಹಾಕಿದರು. ಅಮೆರಿಕಾ ವೈಟ್ ಹೌಸ್ ನ ಆರ್ಥಿಕ ಸಲಹೆಗಾರ ಲ್ಯಾರಿ ಕುದ್ಲೋ ಭಾರತವು ಅಮೆರಿಕಾದ ಮಿತ್ರರಾಷ್ಟ್ರ ಎಂದು ಹೇಳಿಕೆ ನೀಡಿದ್ದರು. ಆ ಮೂಲಕ ಚೀನಾಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

   ಆಕ್ರಮಣಕಾರಿ ನಿಲುವಿಗೆ ಭಾರತದಿಂದ ತಕ್ಕ ಉತ್ತರ

   ಆಕ್ರಮಣಕಾರಿ ನಿಲುವಿಗೆ ಭಾರತದಿಂದ ತಕ್ಕ ಉತ್ತರ

   ಉಭಯ ರಾಷ್ಟ್ರಗಳ ಗಡಿ ವಿಚಾರದಲ್ಲಿ ಚೀನಾ ನಂಬುವುದಕ್ಕೆ ಸಾಧ್ಯವಾಗದಷ್ಟು ಆಕ್ರಮಣಕಾರಿ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕಳೆದ ಜುಲೈ.08ರಂದು ಸೆಕ್ರಟರಿ ಆಫ್ ಸ್ಟೇಟ್ ಆಗಿರುವ ಮೈಕ್ ಪೊಂಪಿಯೋ ತಿಳಿಸಿದ್ದರು. ಚೀನಾ ನಿಲುವನ್ನು ಪ್ರಶ್ನಿಸಿದ ಅವರು, ಭಾರತವು ಪರಿಸ್ಥಿತಿಗೆ ತಕ್ಕಂತೆ ಪ್ರತ್ಯುತ್ತರವನ್ನು ನೀಡಿದೆ. ಅಮೆರಿಕಾದ ಮಟ್ಟಿಗೆ ಭಾರತವು ಮಿತ್ರರಾಷ್ಟ್ರ ಎಂದು ಹೇಳಿದ್ದರು.

   ದಕ್ಷಿಣ ಸಮುದ್ರದಲ್ಲಿ ಅಮೆರಿಕಾದೊಂದಿಗೂ ಚೀನಾ ಕಿತ್ತಾಟ

   ದಕ್ಷಿಣ ಸಮುದ್ರದಲ್ಲಿ ಅಮೆರಿಕಾದೊಂದಿಗೂ ಚೀನಾ ಕಿತ್ತಾಟ

   ಕೊರೊನಾವೈರಸ್ ಸೋಂಕಿನಿಂದ ಅಮೆರಿಕಾದ ಆರ್ಥಿಕತೆ ಭಾರಿ ಹೊಡೆತ ಕೊಟ್ಟಿದೆ. ಇದರ ನಡುವೆ ದಕ್ಷಿಣ ಸಮುದ್ರ ಪ್ರದೇಶದಲ್ಲಿ ಅಮೆರಿಕಾದ ಜೊತೆಗೆ ಚೀನಾ ಜಗಳಕ್ಕೆ ನಿಂತಿದೆ. ವಾಶಿಂಗ್ಟನ್ ಮತ್ತು ಬೀಜಿಂಗ್ ನಡುವಿನ ಸಂಬಂಧ ಈಗಾಗಲೇ ಹಳಸಿದೆ. ದಕ್ಷಣ ಸಮುದ್ರದಲ್ಲಿ ಉಭಯ ರಾಷ್ಟ್ರಗಳ ಸೇನಾಪಡೆಗಳು ಶಕ್ತಿ ಪ್ರದರ್ಶನಕ್ಕೆ ನಿಂತಿವೆ.

   English summary
   China-India Conflict: Want To Do Everything Possible To Keep Peace In Dual country- Says USA President Donald Trump.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X