ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಸಿಬ್ಬಂದಿ ಮೇಲೆ ವೀಸಾ ನಿರ್ಬಂಧ ವಿಧಿಸಿದ ಚೀನಾ

|
Google Oneindia Kannada News

ಬೀಜಿಂಗ್, ಜುಲೈ 9: ಟಿಬೆಟ್ ಮೇಲೆ ಅತಿರೇಕದ ವರ್ತನೆ ತೋರಿರುವ ಅಮೆರಿಕ ಸಿಬ್ಬಂದಿ ಮೇಲೆ ಚೀನಾ ವೀಸಾ ನಿರ್ಬಂಧ ಹೇರಿದೆ.

ಅಮೆರಿಕದಿಂದ ತಪ್ಪು ನಿರ್ಧಾರಗಳಿಗೆ ಪ್ರತಿಯಾಗಿ ಆ ದೇಶದ ಸಿಬ್ಬಂದಿ ಮೇಲೆ ವೀಸಾ ನಿರ್ಬಂಧವನ್ನು ವಿಧಿಸುವ ನಿರ್ಧಾರವನ್ನು ಚೀನಾ ಕೈಗೊಂಡಿದೆ. ಟಿಬೆಟ್ ವಿಚಾರದಲ್ಲಿ ಕೆಟ್ಟದ್ದಾಗಿ ಅಮೆರಿಕ ವರ್ತಿಸುತ್ತಿದೆ ಎಂದು ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಜೋ ಲಿಜಿಯಾನ್ ಹೇಳಿಕೆಯನ್ನು ಉಲ್ಲೇಖಿಸಿ ಸ್ಪೂಟಿಕ್ ವರದಿ ಮಾಡಿದೆ.

ಆನ್‌ಲೈನ್ ಕ್ಲಾಸ್ ಹೊಂದಿರುವ ವಿದೇಶಿ ವಿದ್ಯಾರ್ಥಿಗಳಿಗೆ ಅಮೆರಿಕ ವೀಸಾ ರದ್ದುಆನ್‌ಲೈನ್ ಕ್ಲಾಸ್ ಹೊಂದಿರುವ ವಿದೇಶಿ ವಿದ್ಯಾರ್ಥಿಗಳಿಗೆ ಅಮೆರಿಕ ವೀಸಾ ರದ್ದು

2018ರ ಕಾಯ್ದೆಯೊಂದರ ಅಡಿಯಲ್ಲಿ ಚೀನಾದ ಕೆಲ ಅಧಿಕಾರಿಗಳಿಗೆ ವೀಸಾ ನಿರ್ಬಂಧವನ್ನು ಅಮೆರಿಕಾ ಸೆಕ್ರೆಟರಿ ಆಫ್ ಸ್ಟೇಟ್ ಮೈಕ್ ಪಾಂಪಿಯೊ ಹೇರಿದ ಬೆನ್ನಲ್ಲೇ, ಚೀನಾ ಈ ಕ್ರಮ ಕೈಗೊಂಡಿದೆ.

China Imposes Visa Restrictions On US Personnel

ಇದಕ್ಕೂ ಮುನ್ನ ಟಿಬೆಟ್ ಗೆ ವಿದೇಶಿಯರ ಭೇಟಿಯನ್ನು ನಿರ್ಬಂಧಿಸಿದ ಚೀನಾ ಸರ್ಕಾರ ಹಾಗೂ ಕ್ಯೂನಿಸ್ಟ್ ಪಕ್ಷದ ಅಧಿಕಾರಿಗಳಿಗೆ ನಾನು ಇಂದು ವೀಸಾ ನಿರ್ಬಂಧವನ್ನು ವಿಧಿಸಿದ್ದೇನೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಟ್ವೀಟ್ ಮಾಡಿದ್ದರು.

ಅಮೆರಿಕವು ವಿದೇಶಗಳ ವಿದ್ಯಾರ್ಥಿಗಳಿಗೂ ಕೂಡ ವೀಸಾ ನಿರ್ಬಂಧ ಹೇರಿದೆ, ಅಷ್ಟೇ ಅಲ್ಲದೆ ಆನ್‌ಲೈನ್ ತರಗತಿ ಇರುವ ವಿದ್ಯಾರ್ಥಿಗಳು ನಿಮ್ಮ ದೇಶಗಳಿಗೆ ಹೋಗಿ ಇಲ್ಲವಾದರೆ ಒತ್ತಾಯಪೂರ್ವಕವಾಗಿ ಕಳುಹಿಸಲಾಗುತ್ತದೆ ಎಂದು ಹೇಳಿದ್ದಾರೆ.

English summary
China has imposed visa restrictions on US personnel "with egregious behavior on Tibet," CGTN reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X