ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ಅರ್ಧ ಭಾಗ ಆವರಿಸಿದ ಡೆಲ್ಟಾ; ದೇಶದಲ್ಲಿ ಕಟ್ಟೆಚ್ಚರ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಬೀಜಿಂಗ್, ಆಗಸ್ಟ್ 05: ಭಾರತದಲ್ಲಿ ಮೊದಲು ಪತ್ತೆಯಾದ ಡೆಲ್ಟಾ ಕೊರೊನಾ ರೂಪಾಂತರ ಈಗ ಹಲವು ದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಕೊರೊನಾ ಸೋಂಕು ಮೊದಲು ಪತ್ತೆಯಾದ ಚೀನಾಗೂ ಡೆಲ್ಟಾ ಪಸರಿಸಿದ್ದು, ದೇಶದ ಅರ್ಧದಷ್ಟು ಭಾಗದಲ್ಲಿ ಈ ರೂಪಾಂತರ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.

ಕೊರೊನಾ ಸೋಂಕು ಮೊದಲು ಸ್ಫೋಟಗೊಂಡು ಆನಂತರ ವರ್ಷದಿಂದಲೂ ಸೋಂಕಿನಿಂದ ಮುಕ್ತವಾಗಿದ್ದ ವುಹಾನ್‌ ನಗರದಲ್ಲಿಯೂ ಡೆಲ್ಟಾ ಪ್ರಕರಣಗಳು ಕಂಡುಬಂದಿವೆ. ಆಗಸ್ಟ್ 3ರವರೆಗೂ ವುಹಾನ್‌ನಲ್ಲಿ 12 ಪ್ರಕರಣಗಳು ಪತ್ತೆಯಾಗಿದ್ದು, ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಪ್ರಯಾಣ ನಿರ್ಬಂಧಗಳನ್ನು ಹೇರುವತ್ತ ಚಿಂತನೆ ನಡೆಸುತ್ತಿದೆ. ಮುಂದೆ ಓದಿ...

 ವುಹಾನ್‌ನಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ಪರೀಕ್ಷೆ ಮಾಡುವಂತೆ ಚೀನಾ ಆದೇಶ ವುಹಾನ್‌ನಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ಪರೀಕ್ಷೆ ಮಾಡುವಂತೆ ಚೀನಾ ಆದೇಶ

 ಚೀನಾದ ಚೀನಾದ 15 ಪ್ರಾಂತ್ಯಗಳಲ್ಲಿ ಡೆಲ್ಟಾ ಪ್ರಕರಣಗಳು ಪತ್ತೆ

ಚೀನಾದ ಚೀನಾದ 15 ಪ್ರಾಂತ್ಯಗಳಲ್ಲಿ ಡೆಲ್ಟಾ ಪ್ರಕರಣಗಳು ಪತ್ತೆ

ಚೀನಾದ 15 ಪ್ರಾಂತ್ಯಗಳಲ್ಲಿ 500 ಡೆಲ್ಟಾ ಪ್ರಕರಣಗಳು ಪತ್ತೆಯಾಗಿದ್ದು, ಈ ಬೆನ್ನಲ್ಲೇ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಸಾರ್ವಜನಿಕ ಸಾರಿಗೆ ಹಾಗೂ ಟ್ಯಾಕ್ಸಿ ಸೇವೆಯ ಮೇಲೆ ನಿರ್ಬಂಧ ಹೇರಲಾಗಿದೆ. ಬೀಜಿಂಗ್‌ನಲ್ಲಿ ರೈಲು ಸೇವೆಯನ್ನು ಸ್ಥಗಿತಗೊಳಿಸಲು ಚಿಂತನೆ ನಡೆಸಲಾಗುತ್ತಿದೆ. ಹಾಂಕಾಂಗ್‌ನಲ್ಲಿ ಕ್ವಾರಂಟೈನ್ ನಿಯಮಗಳನ್ನು ಮತ್ತೆ ಜಾರಿಗೆ ತರಲಾಗಿದೆ. ಮತ್ತೆ ಸೋಂಕು ವ್ಯಾಪಕವಾಗಿ ಹರಡದಂತೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಕುರಿತು ಸರ್ಕಾರ ತುರ್ತು ಕ್ರಮ ತೆಗೆದುಕೊಳ್ಳುತ್ತಿದೆ.

ಚೀನಾದ ಸಾಂಕ್ರಾಮಿಕ ರೋಗ ನಿಯಂತ್ರಣ ಕೇಂದ್ರವು ನಾಂಜಿಂಗ್ ಪ್ರದೇಶದಲ್ಲಿ ಪತ್ತೆಯಾದ ಕೊರೊನಾ ಸೋಂಕಿತ ಪ್ರಕರಣದ ಮಾದರಿಯಲ್ಲೇ ಸೋಂಕು ಹರಡುವಿಕೆಯ ಸರಪಳಿ ಬೆಳೆಯುತ್ತಿದೆ ಎಂಬುದನ್ನು ಹೋಲಿಕೆ ಮಾಡಿ ನೋಡಿದೆ. ಕೊರೊನಾ ಸೋಂಕು ಈ ಬಾರಿ ನಾಂಜಿಂಗ್ಸ್ ಲುಕೋವಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿಯಲ್ಲಿ ಮೊದಲು ಪತ್ತೆಯಾಗಿತ್ತು. ನಂತರದಲ್ಲಿ ಕೆಲವು ಸ್ಥಳೀಯರಿಗೆ ಮತ್ತು ದಕ್ಷಿಣ ಚೀನಾದ ಹೆನಾನ್ ಪ್ರದೇಶದಲ್ಲಿ ಝಾಂಗ್ ಝಿಯಾಜಿ ಪ್ರದೇಶಕ್ಕೆ ಪ್ರಯಾಣಿಸಿದ ಹಲವರಿಗೆ ಸೋಂಕು ತಗುಲಿರುವುದು ಖಾತ್ರಿಯಾಗಿದೆ.

 61% ಜನರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ

61% ಜನರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ

ಚೀನಾದಲ್ಲಿ 61% ಜನಸಂಖ್ಯೆಗೆ ಈಗಾಗಲೇ ಲಸಿಕೆ ನೀಡಲಾಗಿದೆ. ಹೀಗಿದ್ದೂ ಸೋಂಕು ಹರಡುವ ಅಪಾಯವನ್ನು ತಡೆಗಟ್ಟಲು ಸರ್ಕಾರ ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಸೋಂಕಿನ ಪ್ರಕರಣಗಳು ಇನ್ನಷ್ಟು ಹೆಚ್ಚಾದರೆ ಮತ್ತೆ ಲಾಕ್‌ಡೌನ್ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಬಹುದು ಎಂದು ತಿಳಿಸಿದೆ.

ಮುಂದಿನ 10 ದಿನಗಳಲ್ಲಿ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ವಸತಿ ಸೇರಿದಂತೆ ಸಂಪೂರ್ಣವಾಗಿ ಸೋಂಕುರಹಿತಗೊಳಿಸಲಾಗುವುದು ಎಂದು ಬಂದ್ ಆಗಿರುವ ಲುಕಾವೋ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

 ಪ್ರಯಾಣ ರದ್ದುಗೊಳಿಸುವಂತೆ ಜನರಿಗೆ ಸೂಚನೆ

ಪ್ರಯಾಣ ರದ್ದುಗೊಳಿಸುವಂತೆ ಜನರಿಗೆ ಸೂಚನೆ

ಚೀನಾದಲ್ಲಿ ಎರಡೇ ವಾರಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ವಿಮಾನ ನಿಲ್ದಾಣ ಸಿಬ್ಬಂದಿ, ಆಸ್ಪತ್ರೆ ಸಿಬ್ಬಂದಿಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ವುಹಾನ್ ಒಳಗೊಂಡಂತೆ ಪ್ರಮುಖ ನಗರಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ. ಕೊರೊನಾ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ತಮ್ಮ ವ್ಯವಹಾರದ ಪ್ರಯಾಣವನ್ನು ರದ್ದುಗೊಳಿಸುವಂತೆ ಜನರಿಗೆ ಸೂಚಿಸಿದೆ. ಶಾಲೆ, ಕಾಲೇಜುಗಳನ್ನು ಬಂದ್ ಮಾಡುವ ಆಲೋಚನೆಯಲ್ಲಿದೆ.

 ವುಹಾನ್‌ನಲ್ಲಿ ಸಾಮೂಹಿಕ ಪರೀಕ್ಷೆಗೆ ಸೂಚನೆ

ವುಹಾನ್‌ನಲ್ಲಿ ಸಾಮೂಹಿಕ ಪರೀಕ್ಷೆಗೆ ಸೂಚನೆ

ಸೋಂಕಿನ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವುಹಾನ್‌ ನಗರದಲ್ಲಿ ಸಾಮೂಹಿಕ ಕೊರೊನಾ ಪರೀಕ್ಷೆಯನ್ನು ಕೈಗೊಳ್ಳಲಾಗಿದೆ. 12 ಮಿಲಿಯನ್ ಜನರನ್ನು ಪರೀಕ್ಷೆಗೆ ಒಳಪಡಿಸುತ್ತಿದೆ. ಈ ಮೂಲಕ ಸಾಮೂಹಿಕ ಕೊರೊನಾ ಪರೀಕ್ಷೆಗೆ ಆದೇಶಿಸಲಾದ ಚೀನಾದ ಮೊದಲ ನಗರ ವುಹಾನ್ ಆಗಿದೆ.
ಪ್ರಸ್ತುತ ಚೀನಾದ ದಿನನಿತ್ಯದ ಕೋವಿಡ್ ಪ್ರಕರಣಗಳ ಸಂಖ್ಯೆ ನೂರರ ಸಂಖ್ಯೆಯಲ್ಲಿದ್ದರೂ ರಾಜಧಾನಿ ಬೀಜಿಂಗ್ ಸೇರಿದಂತೆ ಅನೇಕ ಪ್ರಾಂತ್ಯಗಳು ಮತ್ತು ನಗರಗಳಲ್ಲಿ ಸದ್ದಿಲ್ಲದೇ ಕೊರೊನಾ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ. ಸೋಂಕು ನಿಯಂತ್ರಣಕ್ಕೆ ತುರ್ತು ಕ್ರಮ ವಹಿಸಲು ಸರ್ಕಾರ ಪ್ರಯತ್ನಗಳನ್ನು ಮುಂದುವರೆಸಿದೆ.

English summary
China imposed new travel and movement restrictions across the nation as a delta-driven outbreak grew to over 500 symptomatic cases scattered across 15 provinces and municipalities,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X