ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐವರು ಶಾಲಾ ಮಕ್ಕಳ ಬಲಿ ತೆಗೆದುಕೊಂಡ ಕಾರು: ಹೃದಯ ವಿದ್ರಾವಕ ಘಟನೆ

|
Google Oneindia Kannada News

ಬೀಜಿಂಗ್, ನವೆಂಬರ್ 22: ರಸ್ತೆ ದಾಟುತ್ತಿದ್ದ ಶಾಲಾ ಮಕ್ಕಳ ಮೇಲೆ ಕಾರು ಹರಿದು ಐವರು ಮೃತಪಟ್ಟ ಘಟನೆ ಈಶಾನ್ಯ ಚೀನಾದಲ್ಲಿ ಗುರುವಾರ ನಡೆದಿದೆ.

ಮಧ್ಯಪ್ರದೇಶದಲ್ಲಿ ಅಪಘಾತ: ಶಾಲೆಗೆ ತೆರಳುತ್ತಿದ್ದ 7 ಮಕ್ಕಳ ದುರಂತ ಸಾವುಮಧ್ಯಪ್ರದೇಶದಲ್ಲಿ ಅಪಘಾತ: ಶಾಲೆಗೆ ತೆರಳುತ್ತಿದ್ದ 7 ಮಕ್ಕಳ ದುರಂತ ಸಾವು

ಲಿಯಾನಿಂಗ್ ಪ್ರಾಂತ್ಯದ ಹುಲುಡಾವೊದಲ್ಲಿ ಈ ದುರಂತ ನಡೆದಿದೆ. ಅಪಘಾತದ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

China huludao car rammed on school children 5 dead

ಶಾಲೆಯೊಂದರ ಮುಂಭಾಗದಲ್ಲಿ ಮಕ್ಕಳು ರಸ್ತೆ ದಾಟುತ್ತಿದ್ದರು. ಆಗ ವಿರುದ್ಧ ದಿಕ್ಕಿನಲ್ಲಿ ಅಡ್ಡಾದಿಡ್ಡಿಯಾಗಿ ನುಗ್ಗಿದ ಕಾರು ಅವರ ಮೇಲೆಯೇ ಹರಿದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕೆಲವರು ಹಲವು ಅಡಿಗಳಷ್ಟು ದೂರ ಹಾರಿ ಬಿದ್ದರೆ, ಇನ್ನು ಕೆಲವರು ಚಕ್ರದ ಅಡಿ ಸಿಲುಕಿಕೊಂಡಿದ್ದಾರೆ.

ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಕಾರು: ಐವರ ದುರ್ಮರಣಮಲಗಿದ್ದ ಕಾರ್ಮಿಕರ ಮೇಲೆ ಹರಿದ ಕಾರು: ಐವರ ದುರ್ಮರಣ

ಅಪಘಾತದಿಂದ ತೀವ್ರ ಗಾಯಗೊಂಡ ಇಬ್ಬರು ಸಣ್ಣ ಮಕ್ಕಳು ರಕ್ತದ ಮಡುವಿನಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದರು.

ಉಳಿದ ಗಾಯಾಳು ಮಕ್ಕಳ ಆಕ್ರಂದನ ಮುಗಿಲುಮುಟ್ಟಿತ್ತು. ಆದರೆ, ದಾರಿಹೋಕರು ಸಹಾಯಕ್ಕೆ ಬಾರದೆ ಮೂಕಪ್ರೇಕ್ಷಕರಾಗಿ ನಿಂತಿದ್ದರು. ಗಾಯಗೊಂಡಿದ್ದ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ.

ವಿಜಯಪುರದಲ್ಲಿ ಬೊಲೆರೋ-ಲಾರಿ ಡಿಕ್ಕಿ: ಸ್ಥಳದಲ್ಲೇ ಐವರ ದುರ್ಮರಣವಿಜಯಪುರದಲ್ಲಿ ಬೊಲೆರೋ-ಲಾರಿ ಡಿಕ್ಕಿ: ಸ್ಥಳದಲ್ಲೇ ಐವರ ದುರ್ಮರಣ

18 ವರ್ಷದ ಯುವಕ ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಕಾರಿನ ಚಾಲಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

English summary
A car plows into school children crossing a street killing five in Huludao, China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X