ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಸೂದ್ ಅಜರ್‌ಗೆ ಜಾಗತಿಕ ಉಗ್ರ ಹಣೆಪಟ್ಟಿ ನೀಡಲು ಚೀನಾ ಮತ್ತೆ ಅಡ್ಡಿ?

|
Google Oneindia Kannada News

ಬೀಜಿಂಗ್‌, ಮಾರ್ಚ್ 13: ಜೈಷ್ ಎ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ಗೆ ಜಾಗತಿಕ ಉಗ್ರ ಹಣಪಟ್ಟಿ ನೀಡಲು ಅಮೆರಿಕ ನಿರ್ಧರಿಸಿದೆ. ಆದರೆ ಚೀನಾ ಮತ್ತೊಮ್ಮೆ ಅಡ್ಡಿಪಡಿಸುವ ಸಾಧ್ಯತೆ ಇದೆ.

ಇಂದು ವಿಶ್ವಸಂಸ್ಥೆಯು ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ಇನ್ನೇನು ಘೋಷಿಸಬೇಕು ಎನ್ನುವಷ್ಟರಲ್ಲಿ ಚೀನಾ, ಎಲ್ಲರೂ ಒಪ್ಪಿಕೊಳ್ಳುವಂತಹ ನಿರ್ಧಾರ ತೆಗೆದುಕೊಳ್ಳಬೇಕು ಅದರಿಂದ ಸಮಸ್ಯೆ ಬಗೆಹರಿಯಬೇಕು ಎಂದು ಕ್ಯಾತೆ ತೆಗೆದಿದೆ.

ಮಸೂದ್ ಒಬ್ಬ ಜಾಗತಿಕ ಉಗ್ರ ಅಮೆರಿಕದಿಂದ ಘೋಷಣೆ ಮಾತ್ರ ಬಾಕಿ ಮಸೂದ್ ಒಬ್ಬ ಜಾಗತಿಕ ಉಗ್ರ ಅಮೆರಿಕದಿಂದ ಘೋಷಣೆ ಮಾತ್ರ ಬಾಕಿ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಭಾಗವಹಿಸಿ, ಜವಾಬ್ದಾರಿಯುತ ರೀತಿಯಲ್ಲಿ ಚರ್ಚೆಯಲ್ಲಿ ಪಾಲ್ಗೊಳ್ಳಲಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

China Hints At Blocking Move On Masood Azhar Again Ahead Of UN Meeting

ಮಾರ್ಚ್‌ 13ರಂದು ಸಂಜೆ 3 ಗಂಟೆಯೊಳಗೆ ಯಾವುದೇ ಆಕ್ಷೇಪ ವ್ಯಕ್ತವಾಗದಿದ್ದರೆ ಅಜರ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಲಾಗುವುದು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಷೇಧ ಸಮಿತಿ ಮುಖ್ಯಸ್ಥರು ಅಧಿಸೂಚನೆಯಲ್ಲಿ ಪ್ರಕಟಿಸಿದ್ದಾರೆ. ಆದರೆ ಚೀನಾ ಮತ್ತೆ ಆಕ್ಷೇಪ ವ್ಯಕ್ತಪಡಿಸುವ ಸುಳಿವು ನೀಡಿದೆ.

ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿ ಬಳಿಕ ಅದರಲ್ಲಿ ಜೈಷ್ ಸಂಘಟನೆ ಕೈವಾಡವಿದೆ ಎಂದು ತಿಳಿದ ಬಳಿಕ ಅಮೆರಿಕ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ನನ್ನು ಜಾಗತಿಕ ಉಗ್ರ ಎಂದು ಹಣೆಪಟ್ಟಿ ಕಟ್ಟಲು ಮತ್ತೊಮ್ಮೆ ನಿರ್ಧರಿಸಿತ್ತು. ಆದರೆ ಚೀನಾ ಮತ್ತೊಮ್ಮೆ ಅಡ್ಡಗಾಲು ಹಾಕಿದೆ.

English summary
Hours before the United Nations Security Council is to take up a resolution on listing Jaish-e-Mohammed chief Masood Azhar as a global terrorist, China on Wednesday .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X