ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದುವರಿದ ಚೀನಾ ಕಿರಿಕ್: ಕೊರೊನಾ ಅಧ್ಯಯನ ಮಾಡಲು WHO ತಂಡಕ್ಕೆ ಸಿಗದ ಅನುಮತಿ

|
Google Oneindia Kannada News

ಬೀಜಿಂಗ್, ಜನವರಿ 6: ಕೊರೊನಾ ವೈರಸ್ ಮೂಲವನ್ನು ಹುಡಕಲು ಅಧ್ಯಯನಕ್ಕಾಗಿ ತೆರಳಲು ಸಿದ್ಧವಾಗಿರುವ ಅಂತಾರಾಷ್ಟ್ರೀಯ ಪರಿಣತರ ತಂಡದ ಪ್ರವೇಶಕ್ಕೆ ಚೀನಾ ಇನ್ನೂ ಅನುಮತಿ ನೀಡದೆ ಇರುವುದು ತೀವ್ರ ನಿರಾಶ ಮೂಡಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಚೀನಾದ ವುಹಾನ್‌ನಲ್ಲಿ 2019ರ ಅಂತ್ಯದಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದವು. ಆದರೆ ಇದು ಹರಡಿದ್ದು ಹೇಗೆ ಎಂಬುದರ ಬಗ್ಗೆ ನಿಖರ ಮಾಹಿತಿಗಳಿಲ್ಲ. ಇದನ್ನು ತಿಳಿದುಕೊಳ್ಳುವ ಸಲುವಾಗಿ ಅಧ್ಯಯನ ನಡೆಸಲು 10 ಮಂದಿ ತಜ್ಞರ ತಂಡವೊಂದು ಜನವರಿಯ ಆರಂಭದಲ್ಲಿಯೇ ಚೀನಾಕ್ಕೆ ತೆರಳಲು ಸಜ್ಜುಗೊಂಡಿದೆ. ಅವರಲ್ಲಿ ಇಬ್ಬರು ಈಗಾಗಲೇ ಚೀನಾಕ್ಕೆ ಹೊರಟಿದ್ದು, ಅವರ ಪ್ರವೇಶಕ್ಕೆ ಇದುವರೆಗೂ ಅನುಮತಿ ಸಿಕ್ಕಿಲ್ಲ. ಕೊರೊನಾ ಮೂಲವನ್ನು ಅರಿಯುವಲ್ಲಿ ಸುದೀರ್ಘ ಕಾಲದಿಂದ ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪ್ರವಾಸಕ್ಕೆ ಕಾದು ಕುಳಿತಿದೆ.

4 ರೀತಿಯ ಕೊರೊನಾವೈರಸ್ ರೂಪಾಂತರ ಜಗತ್ತಿನಲ್ಲಿ ಹರಡುತ್ತಿದೆ: WHO ಎಚ್ಚರಿಕೆ4 ರೀತಿಯ ಕೊರೊನಾವೈರಸ್ ರೂಪಾಂತರ ಜಗತ್ತಿನಲ್ಲಿ ಹರಡುತ್ತಿದೆ: WHO ಎಚ್ಚರಿಕೆ

'ಪರಿಣತರ ತಂಡವು ಚೀನಾಕ್ಕೆ ಭೇಟಿ ನೀಡಲು ಬೇಕಿರುವ ಸೂಕ್ತ ಅನುಮತಿಗಳನ್ನು ಚೀನಾದ ಅಧಿಕಾರಿಗಳು ಇದುವರೆಗೂ ಅಂತಿಮಗೊಳಿಸಿಲ್ಲ ಎನ್ನುವುದು ನಮಗೆ ತಿಳಿದುಬಂದಿದೆ' ಎಂದು ಜಿನೀವಾದಲ್ಲಿ ಆನ್‌ಲೈನ್ ಸುದ್ದಿಗೋಷ್ಠಿಯ ಮೂಲಕ ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯಿಸಸ್ ಹೇಳಿದ್ದಾರೆ. ಮುಂದೆ ಓದಿ.

ಫೈಜರ್, ಬಯೋಎನ್‌ಟೆಕ್ ಕೊರೊನಾ ಲಸಿಕೆಗಳ ತುರ್ತು ಬಳಕೆಗೆ WHO ಅನುಮತಿಫೈಜರ್, ಬಯೋಎನ್‌ಟೆಕ್ ಕೊರೊನಾ ಲಸಿಕೆಗಳ ತುರ್ತು ಬಳಕೆಗೆ WHO ಅನುಮತಿ

ಆದ್ಯತೆ ಸ್ಪಷ್ಟಪಡಿಸಿದ್ದೇನೆ

ಆದ್ಯತೆ ಸ್ಪಷ್ಟಪಡಿಸಿದ್ದೇನೆ

'ನಾನು ಚೀನಾದ ಅಧಿಕಾರಿಗಳ ಜತೆಗೆ ಸಂಪರ್ಕದಲ್ಲಿದ್ದೇನೆ. ಈ ಯೋಜನೆಯು ವಿಶ್ವ ಆರೋಗ್ಯ ಸಂಸ್ಥೆಗೆ ಪ್ರಮುಖ ಆದ್ಯತೆ ಎಂದು ನಾನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದೇನೆ' ಎಂದು ಬೀಜಿಂಗ್‌ ಜತೆಗಿನ ಮಾತುಕತೆಯ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಆದರೆ ಚೀನಾದಿಂದ ಇನ್ನೂ ಅಧಿಕೃತ ಒಪ್ಪಿಗೆ ಬಂದಿಲ್ಲ ಎಂದು ನಿರಾಶೆ ವ್ಯಕ್ತಪಡಿಸಿದ್ದಾರೆ.

ವಾಪಸಾದ ಇಬ್ಬರು ತಜ್ಞರು

ವಾಪಸಾದ ಇಬ್ಬರು ತಜ್ಞರು

ಈ ಯೋಜನೆಯು ವಿಶ್ವಸಂಸ್ಥೆಯ ಹಿರಿಯ ಪ್ರಾಣಿ ಕಾಯಿಲೆ ಪರಿಣತ ಪೀಟರ್ ಬೆನ್ ಎಂಬರೆಕ್ ಅವರ ನೇತೃತ್ವದಲ್ಲಿ ನಡೆಯಲಿದ್ದು, ಅವರು ಕಳೆದ ಜುಲೈನಲ್ಲಿ ಪ್ರಾಥಮಿಕ ಯೋಜನೆಯ ಭಾಗವಾಗಿ ಚೀನಾಕ್ಕೆ ಭೇಟಿ ನೀಡಿದ್ದರು. ಅಂತಾರಾಷ್ಟ್ರೀಯ ತಂಡದ ಇಬ್ಬರು ಸದಸ್ಯರು ಈಗಾಗಲೇ ಚೀನಾಕ್ಕೆ ಪ್ರಯಾಣಿಸಿದ್ದರು. ಅವರಲ್ಲಿ ಒಬ್ಬರು ವಾಪಸಾಗಿದ್ದರೆ, ಮತ್ತೊಬ್ಬರು ಬೇರೆ ದೇಶದಲ್ಲಿದ್ದಾರೆ.

ಆರೋಪ ನಿರಾಕರಿಸಿದ ಚೀನಾ

ಆರೋಪ ನಿರಾಕರಿಸಿದ ಚೀನಾ

ಆರಂಭದಲ್ಲಿ ಕಾಣಿಸಿಕೊಂಡ ಸೋಂಕಿನ ಪ್ರಕರಣಗಳನ್ನು ನಿಭಾಯಿಸಲು ಚೀನಾ ವಿಫಲವಾಗಿದೆ ಮತ್ತು ಸೋಂಕು ಕಾಣಿಸಿಕೊಂಡರೂ ಅದನ್ನು ಹೊರ ಜಗತ್ತಿಗೆ ಮುಚ್ಚಿಟ್ಟಿದೆ ಎಂಬ ಆರೋಪಗಳನ್ನು ಚೀನಾ ನಿರಾಕರಿಸಿದೆ. ಅಲ್ಲದೆ, ಕೊರೊನಾ ವೈರಸ್ ಮೂಲ ತನ್ನ ದೇಶವಲ್ಲ ಎಂದು ಪ್ರತಿಪಾದಿಸಿದೆ.

ಅನುಮಾನ ಹೆಚ್ಚಿಸಿದ ಚೀನಾ ನಡೆ

ಅನುಮಾನ ಹೆಚ್ಚಿಸಿದ ಚೀನಾ ನಡೆ

ಕೊರೊನಾ ವೈರಸ್ ಕುರಿತು ಹೆಚ್ಚು ಹೆಚ್ಚು ಅಧ್ಯಯನ ಮಾಡುತ್ತಿರುವಂತೆಯೇ ಇದು ಅನೇಕ ಪ್ರದೇಶಗಳಲ್ಲಿ ಹುಟ್ಟಿಕೊಂಡಿರುವುದು ಎನ್ನುವುದು ತಿಳಿಯುತ್ತಿದೆ ಎಂದು ಚೀನಾದ ಹಿರಿಯ ರಾಜತಾಂತ್ರಿಕ ವಾಂಗ್ ಯಿ ಹೇಳಿದ್ದಾರೆ. ಆದರೆ ವೈರಸ್ ಹರಡಲು ಕಾರಣವಾದ ವುಹಾನ್‌ನ ಮಾಂಸ ಮಾರುಕಟ್ಟೆಗೆ ತೆರಳಿ ಅಲ್ಲಿ ಅಧ್ಯಯನ ನಡೆಸಲು ಪರಿಣತರಿಗೆ ಚೀನಾ ಅವಕಾಶ ನೀಡದೆ ಇರುವುದು ಅನುಮಾನಗಳನ್ನು ಹೆಚ್ಚಿಸಿದೆ.

English summary
China has blocked experts who wanted to visit Wuhan to study the origin of Coronavirus. WHO said very disappointed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X