ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಆಯ್ತು, ಈಗ ಚೀನಾ ಜನರಿಗೆ ಹಕ್ಕಿ ಜ್ವರದ ಕಾಟ

|
Google Oneindia Kannada News

ಬೀಜಿಂಗ್, ಏಪ್ರಿಲ್ 27 : ಕೊರೊನಾ ಮೂಲ ಸ್ಥಾನ ಎನ್ನಲಾದ ಚೀನಾದಲ್ಲಿ ಈಗ ಮತ್ತೊಂದು ವೈರಸ್‌ನ ಭೀತಿ ಶುರುವಾಗಿದೆ. ಚೀನಾದಲ್ಲಿ ಇದೇ ಮೊದಲ ಬಾರಿಗೆ ಮಾನವರಲ್ಲಿ H3N8 ಹಕ್ಕಿಜ್ವರದ ಹರಡಿರುವ ಮೊದಲ ಪ್ರಕರಣ ದಾಖಲಾಗಿದೆ.

ಕೊರೊನಾದಿಂದಲೇ ತತ್ತರಿಸಿರುವ ಚೀನಾಗೆ ಈಗ ಹಕ್ಕಿ ಜ್ವರದ ಭೀತಿಯು ಶುರುವಾಗಿದೆ. ಈ ಸೋಂಕು ಕೇವಲ ಪಕ್ಷಿಗಳಲ್ಲಿ ಮಾತ್ರ ಕಂಡು ಬರುತ್ತಿತ್ತು. ಆದರೆ, ಇದೆ ಮೊದಲ ಬಾರಿಗೆ ಮನುಷ್ಯರಲ್ಲೂ H3N8 ಹಕ್ಕಿ ಜ್ವರ ಪತ್ತೆಯಾಗಿದೆ ಎಂದು ಚೀನಾ ದೃಢಪಡಿಸಿದೆ. ಸದ್ಯಕ್ಕೆ ಈ ಸೋಂಕು ಜನರಲ್ಲಿ ವ್ಯಾಪಕವಾಗಿ ಹರಡುವ ಅಪಾಯ ಕಡಿಮೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

H3N8 ಸೋಂಕು ಉತ್ತರ ಅಮೆರಿಕಾದ ಜಲಪಕ್ಷಿಗಳಲ್ಲಿ ಮೊದಲು ಕಾಣಿಸಿಕೊಂಡಿತ್ತು. ನಂತರ 2002 ರಿಂದ ಇದು ಪಕ್ಷಿಗಳು, ಕೋಳಿ, ಕುದುರೆ, ನಾಯಿ, ಸೀಲ್ ಗಳಲ್ಲಿ ಹೆಚ್ಚಾಗಿ ಹರಡಲು ಶುರುವಾಯಿತು. ಆದರೆ ಇದೇ ಮೊದಲ ಬಾರಿಗೆ ಮಾನವರಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಚೀನಾದ ಮಧ್ಯ ಹೆನಾನ್ ಪ್ರಾಂತ್ಯದಲ್ಲಿ ವಾಸಿಸುವ ನಾಲ್ಕು ವರ್ಷದ ಬಾಲಕನಿಗೆ ಜ್ವರ ಮತ್ತು ಇತರ ರೋಗಲಕ್ಷಣಗಳು ಕಾಣಿಸಿಕೊಂಡ ಹಿನ್ನಲೆ ಆಸ್ಪತ್ರೆ ದಾಖಲಿಸಲಾಗಿತ್ತು. ಈ ವೇಳೆ ತಪಾಸಣೆ ನಡೆಸಿದಾಗ ಬಾಲಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

China has detected 1st human case of H3N8 bird flu

ಸೋಂಕಿತ ಹುಡುಗನ ಕುಟುಂಬವು ಮನೆಯಲ್ಲಿ ಕೋಳಿ ಸಾಕಣೆ ಮಾಡುತ್ತಿತ್ತು ಮತ್ತು ಕಾಡು ಬಾತುಕೋಳಿಗಳು ವಾಸಿಸುವ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಹೀಗಾಗಿ ಹುಡುಗನಿಗೆ ನೇರವಾಗಿ ಪಕ್ಷಿಗಳಿಂದ ಸೋಂಕು ತಗುಲಿದೆ. ಆದರೆ, ಈ ಸೋಂಕು ಮನುಷ್ಯರ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಆಯೋಗವು ಮಾಹಿತಿ ನೀಡಿದೆ.

ಒಟ್ಟಿನಲ್ಲಿ ಅನಾರೋಗ್ಯ ಪಕ್ಷಿಗಳಿಂದ ದೂರವಿರುವುದು ಹಾಗೂ ಜ್ವರ ಅಥವಾ ಉಸಿರಾಟದ ಸಮಸ್ಯೆ ಕಂಡು ಬಂದರೆ, ಕೂಡಲೇ ಚಿಕಿತ್ಸೆಯನ್ನು ಪಡೆಯುವಂತೆ ಸಾರ್ವಜನಿಕರಿಗೆ ಆಯೋಗವು ಎಚ್ಚರಿಕೆ ನೀಡಿದೆ.

China has detected 1st human case of H3N8 bird flu

2012 ರಲ್ಲಿ ಪ್ರಾಣಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ನಂತರ ಯುನೈಟೆಡ್ ಸ್ಟೇಟ್ಸ್ ನ ಈಶಾನ್ಯ ಕರಾವಳಿಯಲ್ಲಿ 160 ಕ್ಕೂ ಹೆಚ್ಚು ಸೀಲ್ ಪ್ರಾಣಿಗಳ ಮಾರಣಹೋಮವಾಗಿತ್ತು 1997 ಮತ್ತು 2013 ರಲ್ಲಿ ಪತ್ತೆಯಾದ ಹಕ್ಕಿ ಜ್ವರದ H5N1 ಮತ್ತು H7N9 ತಳಿಗಳು ಏವಿಯನ್ ಇನ್ಫ್ಲುಯೆನ್ಜಾ ದಿಂದ ಮಾನವನ ಅನಾರೋಗ್ಯದ ಹೆಚ್ಚಿನ ಪ್ರಕರಣಗಳಿಗೆ ಕಾರಣವಾಗಿವೆ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ತಿಳಿಸಿದೆ. ಏವಿಯನ್ ಇನ್ಫ್ಲುಯೆನ್ಸ ಮುಖ್ಯವಾಗಿ ಕಾಡು ಪಕ್ಷಿಗಳು ಮತ್ತು ಕೋಳಿಗಳಲ್ಲಿ ಕಂಡುಬರುತ್ತದೆ. ಮನುಷ್ಯರ ನಡುವೆ ಹರಡುವ ಪ್ರಕರಣಗಳು ಅತ್ಯಂತ ವಿರಳ ಎನ್ನಲಾಗಿದೆ.

English summary
China has confirmed the first known human case of the H3N8 strain of avian flu, but health authorities say there is a low risk of widespread transmission among people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X