ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಕ್ಕೆ ಸುಧಾರಿತ ಯುದ್ಧನೌಕೆ ಕೊಟ್ಟ ಚೀನಾ

|
Google Oneindia Kannada News

ಬೀಜಿಂಗ್, ನವೆಂಬರ್ 09: ದಿನ ಕಳೆದಂತೆ ಪಾಕಿಸ್ತಾನ ಹಾಗೂ ಚೀನಾ ನಡುವಿನ ಗೆಳೆತನ ಮತ್ತಷ್ಟು ಸದೃಢವಾಗುತ್ತಿದೆ.

ಅಫ್ಘಾನಿಸ್ತಾನದ ಕುರಿತು ಭಾರತ ಕರೆದಿರುವ ಸಭೆಯಿಂದಲೂ ಈ ಎರಡು ದೇಶಗಳು ಹಿಂದುಳಿದಿವೆ. ಒಂದಾಗಿ ಕೆಲಸ ಮಾಡುತ್ತಿವೆ. ಇದೀಗ ಚೀನಾವು ಪಾಕಿಸ್ತಾನಕ್ಕೆ ಸುಧಾರಿತ ಯುದ್ಧನೌಕೆ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿರುವುದರ ಜತೆಗೆ ಚಿಂತೆಗೀಡುಮಾಡಿದೆ.

ಅಫ್ಘಾನ್ ಕುರಿತು ಭಾರತ ಆಯೋಜಿಸಿದ್ದ ಸಭೆಯಿಂದ ಹೊರಗುಳಿದ ಚೀನಾ, ಪಾಕ್ಅಫ್ಘಾನ್ ಕುರಿತು ಭಾರತ ಆಯೋಜಿಸಿದ್ದ ಸಭೆಯಿಂದ ಹೊರಗುಳಿದ ಚೀನಾ, ಪಾಕ್

ಪಾಕಿಸ್ತಾನದ ಅತ್ಯಾಪ್ತ ಗೆಳೆಯ ಚೀನಾ ಈಗ ತನ್ನದೇ ಆದ ಅತಿ ದೊಡ್ಡ ಮತ್ತು ಸುಧಾರಿತ ಯುದ್ಧನೌಕೆಯೊಂದನ್ನು ಪಾಕಿಸ್ತಾನಕ್ಕೆ ನೀಡಿದ್ದು, ಹಿಂದೂ ಮಹಾಸಾಗರ ಮತ್ತು ಅರಬ್ಬಿ ಸಮುದ್ರದಲ್ಲೂ ಕೂಡಾ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಹವಣಿಸುತ್ತಿದೆ.

China Has Delivered Its Largest And Most Advanced Warship To Pakistan

ಹಿಂದೂ ಮಹಾಸಾಗರದಲ್ಲಿ ಪಾಕಿಸ್ತಾನದ ಸಾಮರ್ಥ್ಯವನ್ನು ಪಿಎನ್​ಎಸ್ ತುಘ್ರಿಲ್‌ ಖಾತ್ರಿಪಡಿಸುತ್ತದೆ. ಒಟ್ಟಾರೆಯಾಗಿ ಭದ್ರತೆ ಹೆಚ್ಚುವುದಲ್ಲದೇ, ಹಿಂದೂ ಮಹಾಸಾಗರದಲ್ಲಿ ಶಾಂತಿ, ಸ್ಥಿರತೆ ಕಾಪಾಡಲು ಪಿಎನ್​ಎಸ್​ ತುಘ್ರಿಲ್ ನೆರವಾಗುತ್ತದೆ ಎಂದು ಚೀನಾಕ್ಕೆ ಪಾಕಿಸ್ತಾನಿ ರಾಯಭಾರಿಯಾಗಿರುವ ಮೊಯಿನ್ ಉಲ್ ಹಕ್ ಹೇಳಿದ್ದಾರೆ ಎಂದು ಗ್ಲೋಬಲ್ ಟೈಮ್ಸ್ ತಿಳಿಸಿದೆ.

ಚೀನಾ ಸ್ಟೇಟ್ ಶಿಪ್ ಬಿಲ್ಡಿಂಗ್ ಕಾರ್ಪೊರೇಷನ್ ಲಿಮಿಟೆಡ್ (CSSC) ನಿರ್ಮಾಣ ಮಾಡಿರುವ ಈ ನೌಕೆಯನ್ನು ಶಾಂಘೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಹಸ್ತಾಂತರ ಮಾಡಲಾಗಿದೆ ಎಂದು ಸಿಎಸ್​ಎಸ್​ಸಿ ಸೋಮವಾರ ಘೋಷಿಸಿದೆ. 054A/P ಮಾದರಿಯ ನೌಕೆಗೆ ಪಿಎನ್​ಎಸ್​ ತುಘ್ರಿಲ್ ಎಂದು ಹೆಸರಿಡಲಾಗಿದೆ ಎಂದು ಗ್ಲೋಬಲ್ ಟೈಮ್ಸ್ ಮಂಗಳವಾರ ವರದಿ ಮಾಡಿದೆ.

ಪಿಎನ್​ಎಸ್ ತುಘ್ರಿಲ್​ನಲ್ಲಿ ಇರುವುದೇನು?: 2017ರಲ್ಲೇ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಪಿಎನ್​ಎಸ್ ತುಘ್ರಿಲ್ ತಾಂತ್ರಿಕವಾಗಿ ಸಾಕಷ್ಟು ಮುಂದುವರೆದಿದ್ದು, ನೌಕೆ ಮೇಲಿಂದ ನೌಕೆಯನ್ನು ಗುರಿಯಾಗಿಸಿ ನೌಕೆ ಮೇಲಿಂದ ಗಾಳಿಯಲ್ಲಿರುವ ವಿಮಾನಗಳನ್ನು ಗುರಿಯಾಗಿಸಿ (Surface to Air) ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ. ಇದರ ಜೊತೆಗೆ ನೀರೊಳಗಿನ ಕಾರ್ಯಾಚರಣೆಗಳಿಗೆ ಅತ್ಯದ್ಭುತವಾಗಿ ನೆರವಾಗಬಲ್ಲ ಸಾಮರ್ಥ್ಯವನ್ನು ಈ ಯುದ್ಧನೌಕೆ ಹೊಂದಿದೆ ಎಂದು ಪಾಕಿಸ್ತಾನ ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ.

ಚೀನಾದ ಈಗಾಗಲೇ ಹಾರ್ನ್​ ಆಫ್ ಆಫ್ರಿಕಾದಲ್ಲಿರುವ ಡಿಜಿಬೋಟಿಯಲ್ಲಿ ಮೊದಲ ಮಿಲಿಟರಿ ನೆಲೆಯನ್ನು ಸ್ಥಾಪಿಸಿದೆ. ಇದು ಮಿಲಿಟರಿ ನೆಲೆ ಹಿಂದೂ ಮಹಾಸಾಗರದ ಸಮೀಪದಲ್ಲಿಯೇ ಇದೆ. ಪಾಕಿಸ್ತಾನದ ಗ್ವಾದಾರ್ ಬಂದರನ್ನು 'ವಶಕ್ಕೆ' ಪಡೆದಿರುವ ಚೀನಾ ಅಲ್ಲಿಂದ ಅರ್ಥಾತ್ ಅರಬ್ಬಿ ಸಮುದ್ರದಿಂದ ಚೀನಾದ ಕ್ಸಿನ್​ಜಿಯಾಂಗ್ ಪ್ರಾಂತ್ಯವನ್ನು ಸಂಪರ್ಕಿಸಲು ಯತ್ನಿಸುತ್ತಿದೆ.

ಇದಕ್ಕಾಗಿ ಚೀನಾ ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ (CPEC) ಅಡಿಯಲ್ಲಿ 60 ಬಿಲಿಯನ್ ಅಮೆರಿಕನ್ ಡಾಲರ್​ಗಳನ್ನು ಖರ್ಚು ಮಾಡುತ್ತಿದೆ. ಇದರ ಜೊತೆಗೆ ಶ್ರೀಲಂಕಾದ ಹಂಬನ್​ತೋಟಾ ಬಂದರನ್ನು ಚೀನಾ 99 ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿದ್ದು, ಇಲ್ಲಿಂದಲೂ ಹಿಂದೂ ಮಹಾಸಾಗರದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದೆ.
ಪಾಕಿಸ್ತಾನಕ್ಕಾಗಿ ಚೀನಾ ಸಿದ್ಧಪಡಿಸುತ್ತಿರುವ 054 ಮಾದರಿಯ ನಾಲ್ಕು ಯುದ್ಧನೌಕೆಗಳಲ್ಲಿ ಇದು ಮೊದಲನೇಯದಾಗಿದ್ದು, ಇನ್ನೂ ನಾಲ್ಕು ನೌಕೆಗಳನ್ನು ಚೀನಾ ಸ್ಟೇಟ್ ಶಿಪ್ ಬಿಲ್ಡಿಂಗ್ ಕಾರ್ಪೊರೇಷನ್ ಲಿಮಿಟೆಡ್ ನಿರ್ಮಿಸಿ ಪಾಕಿಸ್ತಾನಕ್ಕೆ ಹಸ್ತಾಂತರ ಮಾಡಲಿದೆ.

ಈ ಯುದ್ಧನೌಕೆ ಈವರೆಗೆ ಚೀನಾ ರಫ್ತು ಮಾಡಿರುವ ಅತ್ಯಂತ ದೊಡ್ಡ ಮತ್ತು ಸುಧಾರಿತ ಯುದ್ಧ ನೌಕೆಯಾಗಿದೆ. ಈ ಯುದ್ಧ ನೌಕೆಯಲ್ಲಿ ಯುದ್ಧ ನಿರ್ವಹಣಾ ವ್ಯವಸ್ಥೆ, ಆಧುನಿಕ ಸ್ವರಕ್ಷಣಾ ಸಾಮರ್ಥ್ಯ, ಸತತವಾಗಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಸಾಮರ್ಥ್ಯ ಇದೆ ಎಂದು ಸಿಎಸ್​ಎಸ್​ಸಿ ಹೇಳಿದೆ.

ಇನ್ನು ಚೀನಾ ಪಾಕಿಸ್ತಾನಕ್ಕೆ ಅತಿ ದೊಡ್ಡ ಯುದ್ಧ ಸಾಮಗ್ರಿ ರಫ್ತು ಮಾಡುವ ದೇಶವಾಗಿದ್ದು, ಯುದ್ಧನೌಕೆ ಮಾತ್ರವಲ್ಲದೇ, ಪಾಕಿಸ್ತಾನ ವಾಯುಪಡೆಯ ಸಹಭಾಗಿತ್ವದಲ್ಲಿ ಜೆಎಫ್​-17 ಥಂಡರ್ ಫೈಟರ್ ಏರ್​ಕ್ರಾಫ್ಟ್​ ಸಿದ್ಧಪಡಿಸುತ್ತಿದೆ. ಇನ್ನೂ ಹಲವು ತಂತ್ರಗಳ ಮೂಲಕ ಭಾರತವನ್ನೇ ಗುರಿಯಾಗಿಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.
ಅಫ್ಘಾನಿಸ್ತಾನ ಕುರಿತು ಚರ್ಚೆ ನಡೆಸಲು ಭಾರತ ಆಯೋಜಿಸಿದ್ದ ಸಭೆಯಿಂದ ಪಾಕಿಸ್ತಾನ ಹಾಗೂ ಚೀನಾ ಹಿಂದುಳಿದಿದೆ.

ಈ ಹಿನ್ನೆಲೆ ಸಭೆಗೆ ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಉನ್ನತ ಭದ್ರತಾ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ದೆಹಲಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆಯನ್ನು ಭಾರತ ಆಯೋಜಿಸಿದೆ. ಈ ಸಭೆ ಭಾರತದ ಎನ್ ಎಸ್ ಎ ಅಜಿತ್ ದೋವಲ್ ನೇತೃತ್ವದಲ್ಲಿ ನಡೆಯಲಿದ್ದು, ನಾಳೆ ಅಫ್ಘಾನಿಸ್ತಾನದ ಕುರಿತು ಪ್ರಾದೇಶಿಕ ಭದ್ರತಾ ಸಭೆ ನಡೆಯುತ್ತಿದೆ.

ರಷ್ಯಾ ಮತ್ತು ಇರಾನ್ ದೇಶದ ಪ್ರತಿನಿಧಿಗಳು ಸಹ ನಾಳೆಯ ಸಭೆಯಲ್ಲಿ ಭಾಗಿಯಾಗಲಿದ್ದು, ಭಯೋತ್ಪಾದನೆ, ಮಾದಕವಸ್ತು ಕಳ್ಳಸಾಗಣೆ ಬೆದರಿಕೆಗಳನ್ನು ಎದುರಿಸುವ ಸಹಕಾರಕ್ಕಾಗಿ ಈ ಸಭೆಯನ್ನು ಕರೆಯಲಾಗಿದೆ. ಆದರೆ ಈ ಸಭೆಯಿಂದ ಚೀನಾ ಮತ್ತು ಪಾಕಿಸ್ತಾನ ಹೊರಗುಳಿದಿದೆ.

ಅಶಾಂತಿಯ ನೆಲೆಗೂಡಾಗಿರುವ ಅಫ್ಘಾನಿಸ್ತಾನದ ಕುರಿತು ಚರ್ಚಿಸಲು ಭಾರತ ಸಭೆಯೊಂದನ್ನು ಆಯೋಜಿಸಿದೆ. ಆದರೆ ಅಫ್ಘಾನಿಸ್ತಾನದ ಮಿತ್ರ ರಾಷ್ಟ್ರಗಳು ಎಂದು ಗುರುತಿಸಿಕೊಂಡಿರುವ ಚೀನಾ ಮತ್ತು ಪಾಕಿಸ್ತಾನ ಭಾರತದ ಸಭೆಯಿಂದ ಹೊರಗುಳಿದಿವೆ. ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆಯನ್ನು ದೆಹಲಿಯಲ್ಲಿ ಏರ್ಪಡಿಸಲಾಗಿದೆ.

ಭಾರತದ NSA ಅಜಿತ್ ದೋವಲ್ ಸಭೆಯ ನೇತೃತ್ವ ವಹಿಸಿದ್ದಾರೆ. ತಾಲೀಬಾನ್​ ಪ್ರೇರಿತ ಭಯೋತ್ಪಾದನೆ, ಮಾದಕ ವಸ್ತು ಕಳ್ಳಸಾಗಣೆ ಬೆದರಿಕೆ ಹಿನ್ನೆಲೆಯಲ್ಲಿ ಭಯೋತ್ಪಾದನೆ ಕುಕೃತ್ಯಗಳನ್ನು ಎದುರಿಸಲು ಸಹಕಾರ ನೀಡುವಂತೆ ಕೋರಿ ಸಭೆ ಕರೆಯಲಾಗಿದೆ.

English summary
China has delivered its largest and most advanced warship to Pakistan as it seeks to beef up the navy of its all-weather ally in the Arabian Sea and the Indian Ocean.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X