• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ಯಾಂಗಾಂಗ್ ಸರೋವರದಲ್ಲಿ ಚೀನಾ ಸೈನಿಕರ ಸಂಪರ್ಕಕ್ಕೆ ಹೊಸ ಸಾಧನ

|

ನವದೆಹಲಿ, ಸಪ್ಟೆಂಬರ್.14: ಭಾರತ-ಚೀನಾ ಪೂರ್ವ ಭಾಗದ ಲಡಾಖ್ ಗಡಿಯ ಪ್ಯಾಂಗಾಂಗ್ ತ್ಸೋ ಸರೋವರ ದಕ್ಷಿಣದ ವಿವಾದಿತ ಪ್ರದೇಶಗಳಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ನೆಟವರ್ಕ್ ಬಳಸಿಕೊಳ್ಳುವುದಕ್ಕೆ ಚೀನಾ ಮುಂದಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಕಳೆದ ನಾಲ್ಕು ತಿಂಗಳಿನಿಂದಲೂ ಭಾರತ ಮತ್ತು ಚೀನಾ ನಡುವಿದ ನಿಗದಿತ ಗಡಿರೇಖೆಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಈ ಹಿನ್ನೆಲೆ ಚೀನಾ ಸೇನೆಯ ಜೊತೆಗೆ ಉತ್ತಮ ಸಂಪರ್ಕ ಹೊಂದುವ ಉದ್ದೇಶದಿಂದ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಚೀನಾ ಮುಂದಾಗಿದೆ ಎಂದು ವರದಿಗಳಿಂದ ಗೊತ್ತಾಗಿದೆ.

ಆ ಪರ್ವತಗಳ 'ಸ್ಪಂಗರ್ ಗ್ಯಾಪ್' ನಲ್ಲಿ ಗನ್ ಹಿಡಿದು ನಿಂತ ಚೀನಾ ಸೇನೆ!

ದೀರ್ಘಕಾಲಿಕ ಚಳಿಗಿಂತಲೂ ತಾಪಮಾನವು ಇಳಿಕೆಯಾಗಿದ್ದು, ಪರ್ವತಗಳಲ್ಲಿ ಹಿಮವು ಸಂಗ್ರಹವಾಗುತ್ತಿದೆ. ಈ ಹಿನ್ನೆಲೆ ಚೀನಾದ ಸೇನೆಯ ಜೊತೆಗೆ ನಿರಂತರ ಮತ್ತು ಸುರಕ್ಷಿತ ಸಂಪರ್ಕ ಸಾಧಿಸುವ ಉದ್ದೇಶದಿಂದ ಫೈಬರ್ ಕೇಬಲ್ ನೆಟವರ್ಟ್ ವ್ಯವಸ್ಥೆ ಕಲ್ಪಿಸಿ ಕೊಡಲಾಗಿದೆ ಎಂದು ರಾಯಟರ್ಸ್ ಗೆ ಚೀನಾದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚೀನಾ ಸೇನೆಗೆ ಸಂದೇಶ ರವಾನೆ:

ಭಾರತ-ಚೀನಾ ಗಡಿಯಲ್ಲಿ ನಿಂತಿರುವ ಸೈನಿಕರಿಗೆ ಫೈಬರ್ ಕೇಬಲ್ ನೆಟವರ್ಕ್ ಅಭಿವೃದ್ಧಿಪಡಿಸಿರುವ ಮತ್ತು ಬಳಸುವ ಬಗ್ಗೆ ಈಗಾಗಲೇ ಸರ್ಕಾರದ ಪ್ರಾಧಿಕಾರದಿಂದ ಸಂದೇಶವನ್ನು ರವಾನಿಸಲಾಗಿದೆ ಎಂದು ಚೀನಾದ ಉನ್ನತ ಅಧಿಕಾರಿಯು ರಾಯಟರ್ಸ್ ಗೆ ತಿಳಿಸಿದ್ದಾರೆ.

ಭಾರತೀಯ ಸೇನೆಯು ಇನ್ನೊಂದು ಕಡೆ ಸಂಪರ್ಕ ಸಾಧಿಸುವುದಕ್ಕಾಗಿ ರೇಡಿಯೋ ಸಾಧನವನ್ನು ಬಳಕೆ ಮಾಡುತ್ತಿದೆ. ರೇಡಿಯೋ ಸಾಧನಕ್ಕೆ ಹೋಲಿಸಿದ್ದಲ್ಲಿ ಫೈಬರ್ ಕೇಬಲ್ ನೆಟವರ್ಕ್ ಹೆಚ್ಚು ಸುರಕ್ಷಿತವಾಗಿರುತ್ತದೆ. ಕಳೆದ ತಿಂಗಳ ಪ್ಯಾಂಗಾಂಗ್ ತ್ಸೋ ಸರೋವರದ ಬಳಿ ಭಾರತೀಯ ವಾಯು ಪಡೆಯು ಪರಿಶೀಲನೆ ವೇಳೆಯಲ್ಲಿ ಇದೇ ಫೈಬರ್ ಕೇಬಲ್ ಗಳು ಪತ್ತೆಯಾಗಿದ್ದವು ಎಂದು ತಿಳಿದು ಬಂದಿದೆ.

ಭಾರತ ಮತ್ತು ಚೀನಾದ ಗಡಿಯಲ್ಲಿ ಯೋಧರ ಸಂಘರ್ಷ ಮತ್ತು ಸನ್ನಿವೇಶಕ್ಕೆ ಸಂಬಂಧಿಸಿದಂತೆ ಮುಂಗಾರು ಅಂಧಿವೇಶನವನ್ನು ಉದ್ದೇಶಿಸಿದ ಮಂಗಳವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡುವ ಸಾಧ್ಯತೆಗಳಿವೆ.

English summary
China Govt Builded Optical Fibre Network Along South Of Pangong Lake For Peoples Liberation Army.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X