• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾ ಪ್ರವಾಹ: ಸತ್ತವರ ಸಂಖ್ಯೆ 302ಕ್ಕೆ ಏರಿಕೆ, 50ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ

|
Google Oneindia Kannada News

ಬೀಜಿಂಗ್, ಆಗಸ್ಟ್ 02: ಚೀನಾದಲ್ಲಿ ಇತ್ತೀಚೆಗೆ ಸಂಭವಿಸಿದ್ದ ಮಹಾ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 302ಕ್ಕೆ ಏರಿಕೆಯಾಗಿದೆ. 50ಕ್ಕೂ ಹೆಚ್ಚು ಮಂದಿ ಇನ್ನೂ ಪತ್ತೆಯಾಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಜನರ ಕುತ್ತಿಗೆಯವರೆಗೂ ನೀರು ಬಂದಿರುವುದು, ನೂರಾರು ಕಾರುಗಳು ನೀರಿನಲ್ಲಿ ಕೊಚ್ಚಿ ಹೋಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಚೀನಾದಲ್ಲಿ ಪ್ರವಾಹ : ಮೆಟ್ರೋ ಸುರಂಗಕ್ಕೆ ನೀರು ನುಗ್ಗಿ 12 ಮಂದಿ ಸಾವುಚೀನಾದಲ್ಲಿ ಪ್ರವಾಹ : ಮೆಟ್ರೋ ಸುರಂಗಕ್ಕೆ ನೀರು ನುಗ್ಗಿ 12 ಮಂದಿ ಸಾವು

ಹೆನಾನ್ ಪ್ರಾಂತ್ಯದ ರಾಜಧಾನಿ ಜೆಂಗ್‌ಜೌನಲ್ಲಿ ದಾಖಲೆಯ ಪ್ರಮಾಣದಲ್ಲಿ ಪ್ರವಾಹ ಉಂಟಾಗಿತ್ತು, ಪರಿಣಾಮವಾಗಿ 302 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

ಜಂಗ್‌‌ಜೌನ ಕಾರು ಪಾರ್ಕಿಂಗ್ ಮತ್ತು ಇತರೆ ನೆಲಮಾಳಿಗೆ ಪ್ರದೇಶಗಳಿಂದ 39 ಮೃತದೇಹಳನ್ನು ಹೊರತೆಗೆಯಲಾಗಿದೆ. ಚೀನಾದಲ್ಲಿ ದಶಕಗಳಲ್ಲೇ ಸಂಭವಿಸಿದ ಭೀಕರ ಪ್ರವಾಹ ಇದಾಗಿದೆ.

ಕಾರು ಪಾರ್ಕಿಂಗ್ ಪ್ರದೇಶಗಳು, ಸುರಂಗ ಮಾರ್ಗಗಳು ಸೇರಿದಂತೆ ಹಲವೆಡೆ ಜನರು ಸಿಲುಕಿದ್ದಾರೆ. ರೈಲು ಬೋಗಿಯೊಂದರ ಒಳಗೆ ಒಂದೇ ಸಮನೆ ನೀರು ಹರಿದಿದ್ದರಿಂದ ಒಳಗಿದ್ದವರಿಗೆ ಹೊರ ಬರಲು ಯಾವುದೇ ಅವಕಾಶವಾಗಲಿಲ್ಲ. ಒಳಗಿದ್ದವರಲ್ಲಿ ಕೆಲವರು ಮುಳುಗಿದ್ದರೆ, ಇನ್ನು ಕೆಲವರು ಉಸಿರಾಡಲು ಸಾಧ್ಯವಾಗುವಷ್ಟು ತಲೆ ಹೊರಹಾಕಿದ್ದರು. ಜನರನ್ನು ಸುರಕ್ಷಿತವಾಗಿ ಹೊರತೆಗೆಯುವುದಕ್ಕಾಗಿ ರಕ್ಷಣಾ ಕಾರ್ಯಕರ್ತರು ರೈಲಿನ ಚಾವಣಿಯನ್ನು ಕತ್ತರಿಸಬೇಕಾಯಿತು.

12ಕ್ಕೂ ಹೆಚ್ಚಿನ ನಗರಗಳಲ್ಲಿ ಮಳೆ ಅಬ್ಬರ ತೀವ್ರವಾಗಿದ್ದು, ಮುಖ್ಯ ರಸ್ತೆಗಳು ಜಲಾವೃತವಾಗಿವೆ. ಅನೇಕ ಕಡೆ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ. ಲ್ಯೊಯಾಂಗ್ ನಗರದ ಅಣೆಕಟ್ಟು ಭರ್ತಿಯಾಗಿದ್ದು, ಅಪಾಯದ ಸ್ಥಿತಿಯಲ್ಲಿದೆ. ಈ ಅಣೆಕಟ್ಟು ಯಾವಾಗ ಬೇಕಾದರೂ ಒಡೆಯಬಹುದು ಎಂದು ಸೇನೆ ಎಚ್ಚರಿಕೆ ನೀಡಿದೆ.

 China Floods: Death Toll Rises To 302, 50 Still Missing After Record Downpour

ಜೆಂಗ್‌ಜೌ ಪ್ರದೇಶದಲ್ಲಿ ಕಳೆದ 60 ವರ್ಷಗಳಲ್ಲಿಯೇ ಇಷ್ಟು ಪ್ರಮಾಣದ ಮಳೆ ಸುರಿದಿರಲಿಲ್ಲ. ಒಂದು ವರ್ಷದ ವಾಡಿಕೆಯ ಸರಾಸರಿ ಮಳೆ ಕೇವಲ ಮೂರು ದಿನಗಳಲ್ಲಿಯೇ ಸುರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚೀನಾದಲ್ಲಿ ಪ್ರತಿ ವರ್ಷ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದ್ದರೂ, ಈ ಭಾಗದಲ್ಲಿ ಇಷ್ಟು ಅನಾಹುತ ಸಂಭವಿಸಿರಲಿಲ್ಲ.

ಚೀನಾದ ಮಧ್ಯಪ್ರಾಂತ್ಯದಲ್ಲಿ ಇಷ್ಟೊಂದು ಪ್ರಮಾಣದ ಮಳೆಯಾಗುತ್ತಿರಲು ಕಾರಣ ಇನ್​ ಫಾ ಚಂಡಮಾರುತ ಎಂದು ಸೌತ್​ ಚೀನಾ ಮಾರ್ನಿಂಗ್​ ಪೋಸ್ಟ್ ವರದಿ ಮಾಡಿದೆ. ಅದರಲ್ಲೂ ಝೆಂಗ್​ಝು ನಗರ ತೈಹಾಂಗ್ ಮತ್ತು ಫ್ಯೂನಿಯು ಪರ್ವತಗಳಿಂದ ಆವೃತವಾಗಿರುವುದರಿಂದ ಮತ್ತಷ್ಟು ಬಾಧಿಸುತ್ತಿದೆ ಎಂದು ಹೇಳಿದೆ.

ಜು.20ರಂದು ಸಂಜೆ 4 ಗಂಟೆಯಿಂದ 5 ಗಂಟೆವರೆಗೆ ಅಂದರೆ ಒಂದೇ ತಾಸಿನಲ್ಲಿ ಬರೋಬ್ಬರಿ 20 ಸೆಂಟಿಮೀಟರ್​ ಮಳೆಯಾಗಿತ್ತು. ಸುಮಾರು 1.2 ಕೋಟಿ ಜನಸಂಖ್ಯೆ ಹೊಂದಿರುವ ಈ ನಗರದಲ್ಲೀಗ ನಾಗರಿಕರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ಅತಿಯಾದ ಪ್ರವಾಹದಿಂದ ಜನರಿಗೆ ಒಂದಿನಿತೂ ಕದಲಲು ಸಾಧ್ಯವಾಗುತ್ತಿರಲಿಲ್ಲ. ಜಲಾವೃತಗೊಂಡ ರಸ್ತೆಯಲ್ಲಿ, ಶಾಪಿಂಗ್​ ಮಾಲ್​ನಲ್ಲಿ, ಕಚೇರಿಗಳಲ್ಲಿ, ಸುರಂಗ ಮಾರ್ಗದಲ್ಲಿ ರೈಲುಗಳಲ್ಲಿ ಸಿಲುಕಿಕೊಂಡವರು ಅನೇಕ ಮಂದಿ. ಎಲ್ಲೆಲ್ಲೂ ನೀರೇ ಇರುವ ಕಾರಣಕ್ಕೆ ಅಲ್ಲಿಂದ ಹೊರಹೋಗಲೂ ಸಾಧ್ಯವಾಗುತ್ತಿರಲಿಲ್ಲ.

ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಇಲ್ಲಿನ ಅಣೆಕಟ್ಟೆಒಡೆಯುವ ಭೀತಿ ಸಹ ಆರಂಭವಾಗಿದೆ. ಹೀಗಾಗಿ ಹೋಟೆಲ್‌, ಸಬ್‌ವೇ ರೈಲು, ಸಾರ್ವಜನಿಕ ಪ್ರದೇಶಗಳಲ್ಲಿ ಸಿಲುಕಿರುವವರ ರಕ್ಷಣೆಗೆ ಚೀನಾ ಸೇನೆ ಧಾವಿಸಿದೆ. ಕಳೆದೊಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಇಡೀ ಪ್ರಾಂತ್ಯ ನೀರಿನಿಂದ ಆವೃತವಾಗಿದೆ.

ನದಿಗಳು ಅಪಾಯದ ಮಟ್ಟಮೀರಿ ಹರಿಯುತ್ತಿವೆ. ಜನಸಂಚಾರ ಪ್ರದೇಶ ಮತ್ತು ರೈಲಿನೊಳಗೆ ಪ್ರಯಾಣಿಕರ ಎದೆಮಟ್ಟದವರೆಗೂ ನೀರು ತುಂಬಿಕೊಂಡಿದ್ದು, ಜನರು ಪ್ರಾಣ ಉಳಿವಿಗಾಗಿ ಪರದಾಡುವ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

ಚೀನಾದಲ್ಲಿ ಈ ರೀತಿಯ ಮಳೆಯಾಗಿದ್ದು ಕಳೆದ 1000 ವರ್ಷಗಳ ಇತಿಹಾಸದಲ್ಲೇ ಮೊದಲು ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ಝೆಂಗ್‌ ಝೋಹು ಪ್ರಾಂತ್ಯದಲ್ಲಿ ಮಂಗಳವಾರ ಒಂದೇ ದಿನ ಬರೋಬ್ಬರಿ 457.5 ಮಿ.ಮೀನಷ್ಟುಮಳೆಯಾಗಿದೆ. ಇದು ದೇಶದಲ್ಲಿ ಹವಾಮಾನ ದಾಖಲೆ ಆರಂಭಿಸಿದ ನಂತರದಲ್ಲಿ ಸುರಿದ ಅತ್ಯಂತ ಗರಿಷ್ಠ ಪ್ರಮಾಣ ಎಂದು ವರದಿಯಾಗಿದೆ.

English summary
The death toll from floods in central China last month is at least 302 with dozens of people still missing, officials said Monday, after record downpours dumped a year's worth of rain on a city in just three days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X