ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ ಸ್ಪೈ ವಿಮಾನದ ವಿರುದ್ಧ ಕ್ಷಿಪಣಿ ಹಾರಿಸಿದ ಚೀನಾ

|
Google Oneindia Kannada News

ಬೀಜಿಂಗ್, ಆ. 27: ಸಂಪೂರ್ಣವಾಗಿ ಹಾರಾಟ ನಿಷೇಧ ಇರುವ No fly Zoneನಲ್ಲಿ ಬೇಹುಗಾರಿಕೆ ವಿಮಾನವನ್ನು ಹಾರಿಸಿದ್ದ ಯುಎಸ್ಎಗೆ ಚೀನಾ ತಕ್ಕ ಉತ್ತರ ನೀಡಿದೆ. ಎರಡು ಖಂಡಾಂತರ ಕ್ಷಿಪಣಿಗಳನ್ನು ಪ್ರತಿಯಾಗಿ ಹಾರಿ ಬಿಟ್ಟಿದೆ.

ಅಮೆರಿಕ ವಾಯುಪಡೆಯ 'ಯು-2' ಬೇಹುಗಾರಿಕೆ ವಿಮಾನವು ಚೀನಾ ವ್ಯಾಪ್ತಿಯ ದಕ್ಷಿಣ ಚೀನಾ ಸಮುದ್ರದ No fly Zoneನಲ್ಲಿ ಅಕ್ರಮವಾಗಿ ಪ್ರವೇಶಿಸಿದೆ ಎಂದು ಚೀನಾ ಪ್ರತಿಪಾದಿಸಿದೆ. ಹೀಗಾಗಿ ಯುದ್ಧ ವಿಮಾನ ಹೊಡೆದುರುಳಿಸುವ ಕ್ಷಿಪಣಿಗಳನ್ನು ಅಮೆರಿಕದ ವಿರುದ್ಧ ಹಾರಿಸಲಾಗಿದೆ ಎಂದು ಚೀನಾ ವಕ್ತಾರರು ಹೇಳಿದ್ದಾರೆ.

ಸಂಪದ್ಭರಿತ ಟ್ರಿಲಿಯನ್ ಡಾಲರ್ ಜಾಗಕ್ಕಾಗಿ ವರ್ಲ್ಡ್ ವಾರ್..?ಸಂಪದ್ಭರಿತ ಟ್ರಿಲಿಯನ್ ಡಾಲರ್ ಜಾಗಕ್ಕಾಗಿ ವರ್ಲ್ಡ್ ವಾರ್..?

ಚೀನಾ ಸೇನಾ ಅಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ಬೇಹುಗಾರಿಕೆ ವಿಮಾನದ ಹಾರಾಟ ನಡೆಸಲಾಗಿದೆ. ಇದು ಪ್ರಚೋದನೆ ಕೃತ್ಯ, ಗಂಭೀರ ಪ್ರಕರಣ ಎಂದು ಚೀನಾದ ರಾಷ್ಟ್ರೀಯ ರಕ್ಷಣಾ ಸಚಿವಾಲಯ ಟೀಕಿಸಿದೆ.

ಚೀನಾದ 24 ಕಂಪೆನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿದ ಅಮೆರಿಕಚೀನಾದ 24 ಕಂಪೆನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿದ ಅಮೆರಿಕ

ಕ್ವಿಂಘೈ ಪ್ರಾಂತ್ಯದಿಂದ ಅಂತರ್ ಮಧ್ಯಮ ಖಂಡಾಂತರ ಕ್ಷಿಪಣಿ ಡಿಎಫ್ 26 ಬಿ ಕ್ಷಿಪಣಿ ಹಾಗೂ ಝೆಜಿಯಾಂಗ್ ಪ್ರಾಂತ್ಯದಿಂದ ಡಿಎಫ್ 21 ಡಿ ಮಧ್ಯಮ ಖಂಡಾಂತರ ಕ್ಷಿಪಣಿಯನ್ನು ಹಾರಿಸಲಾಗಿದೆ ಎಂದು ಸೌಥ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

 ಅಂತಾರಾಷ್ಟ್ರೀಯ ಕಾನೂನು ಮುರಿಯುತ್ತಿದೆ

ಅಂತಾರಾಷ್ಟ್ರೀಯ ಕಾನೂನು ಮುರಿಯುತ್ತಿದೆ

ಚೀನಾ ಪದೇ ಪದೇ ಅಂತಾರಾಷ್ಟ್ರೀಯ ಕಾನೂನು ಮುರಿಯುತ್ತಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಹಿಡಿತ ಸಾಧಿಸಲು ಯತ್ನಿಸುತ್ತಿದೆ ಎಂದು ಯುಎಸ್ ರಕ್ಷಣಾ ಮುಖ್ಯಸ್ಥ ಮಾರ್ಕ್ ಎಸ್ಪರ್ ಪ್ರತಿಕ್ರಿಯಿಸಿದ್ದಾರೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಹಿಡಿತ ಸಾಧಿಸಲು ಯತ್ನಿಸುತ್ತಿರುವ ಚೀನಾಗೆ ವಿಶ್ವದ ದೊಡ್ಡಣ್ಣ ಅಮೆರಿಕ ಖಡಕ್ ವಾರ್ನಿಂಗ್ ನೀಡಿದೆ. ಚೀನಾದ ಈ ವರ್ತನೆ ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಕಠಿಣ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಜುಲೈ ತಿಂಗಳಿನಲ್ಲಿ ದಕ್ಷಿಣಾ ಚೀನಾ ಸಮುದ್ರದಲ್ಲಿ ನ್ಯಾವಿಗೇಷನ್ ಕಸರತ್ತು ನಡೆಸಿದ್ದ ಯುಎಸ್ ಯುದ್ಧ ವಿಮಾನಗಳ ಬಗ್ಗೆ ಚೀನಾ ಭಾರಿ ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ಯು2 ಸ್ಪೈ ವಿಮಾನ ಹಾರಾಟ ಕೂಡಾ ಅಂತಾರಾಷ್ಟ್ರೀಯ ಸಮುದ್ರ ಗಡಿ ನಿಯಮ, ಕಾನೂನಿಗೆ ಬದ್ಧವಾಗಿದೆ ಎಂದು ಪೆಂಟಗಾನ್ ಪ್ರತಿಕ್ರಿಯಿಸಿದೆ.

ಚೀನಾದ ಸೇನಾ ಕಸರತ್ತು

ಚೀನಾ ಮತ್ತು ಪಾಕಿಸ್ತಾನಗಳ ನಡುವೆ ಗಡಿ ವಿವಾದ ಸಂಘರ್ಷದ ನಡುವೆಯೇ ಭಾರತದ ಪಡೆ ಮುಂದಿನ ತಿಂಗಳು ರಷ್ಯಾದಲ್ಲಿ ಆಯೋಜಿಸಲಾಗಿರುವ ಸೇನಾ ಕಸರತ್ತು ಈ ಚಟುವಟಿಕೆಯಲ್ಲಿ ತೊಡಗಲಿದೆ.

ದಕ್ಷಿಣ ಚೀನಾ ಸಮುದ್ರ ಕಬಳಿಸಲು ಚೀನಾ ಸ್ಕೆಚ್

ದಕ್ಷಿಣ ಚೀನಾ ಸಮುದ್ರ ಕಬಳಿಸಲು ಚೀನಾ ಸ್ಕೆಚ್

ಹಲವು ದಶಕಗಳಿಂದ ಈ ಸಮುದ್ರ ಭಾಗದ ಮೇಲೆ ಕಣ್ಣಿಟ್ಟು ಕೂತಿರುವ ಚೀನಾ, 3.5 ಮಿಲಿಯನ್ ಚದರ ಕಿಲೋ ಮೀಟರ್ (ಭಾರತ ಹೊಂದಿರುವ ಭೂಭಾಗಕ್ಕಿಂತಲೂ ದೊಡ್ಡದಾದ ಪ್ರದೇಶ) ಜಲಭಾಗವನ್ನು ವಶಕ್ಕೆ ಪಡೆಯಲು ಯತ್ನಿಸುತ್ತಿದೆ.

ಸೌತ್ ಚೀನಾ ಸಮುದ್ರದ ಮಾರ್ಗವಾಗಿ ಪ್ರತಿವರ್ಷವೂ 5.3 ಟ್ರಿಲಿಯನ್ ಮೊತ್ತದ ವ್ಯಾಪಾರ, ವಹಿವಾಟು ನಡೆಯುತ್ತಿದೆ. ಇದು ಇಡೀ ಜಗತ್ತಿನಲ್ಲಿ ಜಲ ಮಾರ್ಗದ ಮೂಲಕ ನಡೆಯುವ ವ್ಯಾಪಾರದ 3ನೇ ಒಂದು ಭಾಗ. ಭಾರತ ಕೂಡ ಪ್ರತಿವರ್ಷ 200 ಬಿಲಿಯನ್ ಡಾಲರ್ ಮೊತ್ತದ ವಹಿವಾಟನ್ನು ದಕ್ಷಿಣ ಚೀನಾ ಸಮುದ್ರದ ಮಾರ್ಗದಲ್ಲಿ ನಡೆಸುತ್ತದೆ. ಅಮೆರಿಕ, ಜಪಾನ್, ಚೀನಾ, ಕೊರಿಯಾ, ಆಸ್ಟ್ರೇಲಿಯಾ ಹೀಗೆ ಹತ್ತಾರು ದೇಶಗಳು ಇದೇ ಮಾರ್ಗ ಬಳಸಿ ವ್ಯಾಪಾರ ನಡೆಸುತ್ತಿವೆ. ಹೀಗಾಗಿ ದಕ್ಷಿಣ ಚೀನಾ ಸಮುದ್ರ ಕಬಳಿಸಲು ಚೀನಾ ಸ್ಕೆಚ್ ಹಾಕಿ ಕೂತಿದೆ.

24 ಸಂಸ್ಥೆಗಳನ್ನು ಅಮೆರಿಕ ಕಪ್ಪುಪಟ್ಟಿಗೆ

24 ಸಂಸ್ಥೆಗಳನ್ನು ಅಮೆರಿಕ ಕಪ್ಪುಪಟ್ಟಿಗೆ

ದಕ್ಷಿಣ ಚೀನಾ ಸಮುದ್ರದ ವಿವಾದಾತ್ಮಕ ಜಲ ಪ್ರದೇಶದಲ್ಲಿ ಕೃತಕ ದ್ವೀಪಗಳನ್ನು ನಿರ್ಮಿಸಿದ ಕಾರ್ಯದಲ್ಲಿ ಭಾಗಿಯಾದ ಎರಡು ಡಜನ್ ಚೀನಾ ಕಂಪೆನಿಗಳು ಮತ್ತು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಅಮೆರಿಕ ಬುಧವಾರ ನಿಷೇಧ ಮತ್ತು ನಿಬಂಧನೆಗಳನ್ನು ಹೇರಿತ್ತು. ಇದು ಚೀನಾ ವಿರುದ್ಧ ನೇರವಾಗಿ ವಿಧಿಸಿದ ಮೊದಲ ನಿರ್ಬಂಧವಾಗಿದೆ

ಚೀನಾದ ನಿರ್ಮಾಣ ದಿಗ್ಗದ ಸಂಸ್ಥೆ ಚೀನಾ ಕಮ್ಯುನಿಕೇಷನ್ ಕನ್‌ಸ್ಟ್ರಕ್ಷನ್ ಕೋ, ದೂರಸಂಪರ್ಕ ಸಂಸ್ಥೆಗಳು ಮತ್ತು ಚೀನಾದ ಹಡಗು ನಿರ್ಮಣ ಸಮೂಹದ ಒಂದು ಘಟಕ ಸೇರಿದಂತೆ ಚೀನಾ ಸರ್ಕಾರಿ ಸ್ವಾಮ್ಯದ 24 ಸಂಸ್ಥೆಗಳನ್ನು ಅಮೆರಿಕ ಕಪ್ಪುಪಟ್ಟಿಗೆ ಸೇರಿಸಿದೆ. ಇದೇ ಸಂದರ್ಭದಲ್ಲಿ ದಕ್ಷಿಣ ಚೀನಾ ಸಮುದ್ರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ

English summary
China Fires Aircraft-Carrier Killer Missile into South China Sea in Warning to America. Ballistic missiles launched in response to US aerial activities in a 'no-fly zone' area during a Chinese naval drill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X