ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಯುದ್ಧನೌಕೆಯನ್ನು ಓಡಿಸಿದ ಚೀನಾ: ಜೋ ಬೈಡನ್‌ಗೆ ಮೊದಲ ಬಿಸಿ

|
Google Oneindia Kannada News

ಬೀಜಿಂಗ್, ಫೆಬ್ರವರಿ 6: ಅಮೆರಿಕದ ಕ್ಷಿಪಣಿ ವಿಧ್ವಂಸಕ ನೌಕೆಯೊಂದನ್ನು ದಕ್ಷಿಣ ಚೀನಾ ಸಮುದ್ರದಿಂದ ಹೊರಹಾಕಿರುವುದಾಗಿ ಚೀನಾ ತಿಳಿಸಿದೆ. ತೈವಾನ್ ಜಲಸಂಧಿ ಮೂಲಕ ಅಮೆರಿಕ ತನ್ನ ಯುದ್ಧನೌಕೆಯನ್ನು ರವಾನಿಸಿದ ಮರುದಿನವೇ ಅದು ಈ ಪ್ರಕಟಣೆ ನೀಡಿದೆ. ಜೋ ಬೈಡನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಂತಾರಾಷ್ಟ್ರೀಯ ನೀತಿಯಲ್ಲಿ ಅವರಿಗೆ ಇದು ಮೊದಲ ಆಘಾತವಾಗಿದೆ.

ಅಮೆರಿಕದ ಜಾನ್ ಎಸ್ ಮೆಕ್‌ಕೈನ್ ಹಡಗನ್ನು ದಕ್ಷಿಣ ಚೀನಾ ಸಮುದ್ರದಲ್ಲಿನ ತನ್ನ ಪ್ರದೇಶ ಕ್ಸಿಶಾ ಐಲ್ಯಾಂಡ್‌ನಿಂದ ಹೊರದಬ್ಬಲು ಯುದ್ಧನೌಕೆಗಳು ಹಾಗೂ ವಿಮಾನಗಳನ್ನು ನಿಯೋಜಿಸಿದ್ದಾಗಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ದಕ್ಷಿಣ ಥಿಯೇಟರ್ ಕಮಾಂಡ್ ಹೇಳಿಕೆಯಲ್ಲಿ ತಿಳಿಸಿದೆ.

ಒಪ್ಪಂದ ಆಘಾತದ ಬಳಿಕ ಭಾರತದ ಸಾಲ ವಾಪಸ್ ಕೊಟ್ಟ ಶ್ರೀಲಂಕಾ: ಚೀನಾ ಕೈವಾಡ ಶಂಕೆಒಪ್ಪಂದ ಆಘಾತದ ಬಳಿಕ ಭಾರತದ ಸಾಲ ವಾಪಸ್ ಕೊಟ್ಟ ಶ್ರೀಲಂಕಾ: ಚೀನಾ ಕೈವಾಡ ಶಂಕೆ

ಚೀನಾದ ಈ ನಡೆಯು ನೌಕಾಯಾನ ಕಾರ್ಯಾಚರಣೆಯ ಸ್ವಾತಂತ್ರ್ಯದ ವಿರುದ್ಧದ ಕಾನೂನು ಬಾಹಿರ ಚಟುವಟಿಕೆಯಾಗಿದೆ ಎಂದು ಅಮೆರಿಕ ಆರೋಪಿಸಿದೆ.

ಈ ಪ್ರದೇಶದಲ್ಲಿ ಅಮೆರಿಕದ ಯುದ್ಧನೌಕೆಯು ಹಾದುಹೋಗಿದ್ದರ ವಿಚಾರವಾಗಿ ಚೀನಾ ಮತ್ತು ಅಮೆರಿಕ ನಡುವೆ ಮಾತಿನ ಚಕಮಕಿ ನಡೆದಿದೆ. ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷೀಯ ಅವಧಿಯಲ್ಲಿ ಎರಡು ದೇಶಗಳ ನಡುವೆ ದಕ್ಷಿಣ ಚೀನಾ ಸಮುದ್ರ ಭಾಗದಲ್ಲಿ ಹಾಗೂ ತೈವಾನ್‌ನಲ್ಲಿ ಅಮೆರಿಕದ ನೌಕೆಗಳ ಹಾಜರಾತಿ ವಿಚಾರವಾಗಿ ಅನೇಕ ಬಾರಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಬೈಡನ್ ಅಧಿಕಾರಕ್ಕೆ ಮೊದಲ ಬಾರಿ ಈ ಬಿಸಿ ತಟ್ಟಿದಂತಾಗಿದೆ. ಮುಂದೆ ಓದಿ.

ಭಾರತದ 16 ನಾವಿಕರಿಗೆ ಬಿಡುಗಡೆ ನೀಡಲು ಕೊನೆಗೂ ಚೀನಾ ಒಪ್ಪಿಗೆಭಾರತದ 16 ನಾವಿಕರಿಗೆ ಬಿಡುಗಡೆ ನೀಡಲು ಕೊನೆಗೂ ಚೀನಾ ಒಪ್ಪಿಗೆ

ವಿವಿಧ ದೇಶಗಳ ಪ್ರತಿಪಾದನೆ

ವಿವಿಧ ದೇಶಗಳ ಪ್ರತಿಪಾದನೆ

ದಕ್ಷಿಣ ಚೀನಾ ಸಮುದ್ರದ ಇಡೀ ಭಾಗ ತನ್ನದು ಎಂದು ಚೀನಾ ಹೇಳಿಕೊಂಡಿದೆ. ಆದರೆ ನೆರೆಯ ಪಿಲಿಪ್ಪೀನ್ಸ್, ಬ್ರೂನಿ, ಮಲೇಷಿಯಾ, ಇಂಡೋನೇಷ್ಯಾ, ವಿಯೆಟ್ನಾಂ ಮತ್ತು ತೈವಾನ್‌ಗಳು ಈ ಜಲಪ್ರದೇಶಗಳು ತಮಗೆ ಸೇರಿದ್ದು ಎಂದು ಪ್ರತಿಪಾದಿಸಿವೆ.

ಸಾರ್ವಭೌಮತೆಗೆ ಧಕ್ಕೆ

ಸಾರ್ವಭೌಮತೆಗೆ ಧಕ್ಕೆ

ಅಮೆರಿಕದ ಯುದ್ಧನೌಕೆಯು ಇಲ್ಲಿ ಸಾಗಿರುವುದು ಚೀನಾದ ಸಾರ್ವಭೌಮತೆ ಮತ್ತು ಭದ್ರತೆಯ ಗಂಭೀರ ಉಲ್ಲಂಘನೆಯಾಗಿದೆ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಕಡೆಗಣಿಸಿದೆ. ಹಾಗೆಯೇ ದಕ್ಷಿಣ ಚೀನಾ ಸಮುದ್ರ ವಲಯದಲ್ಲಿನ ಶಾಂತಿ, ಸ್ನೇಹ ಮತ್ತು ಸಹಕಾರದ ಉತ್ತಮ ವಾತಾವರಣವನ್ನು ಉದ್ದೇಶಪೂರ್ವಕವಾಗಿ ಹದಗೆಡಿಸಿದೆ ಎಂದು ಚೀನಾ ಸೇನೆಯ ವಕ್ತಾರ ಟಿಯಾನ್ ಜುನ್ಲಿ ಹೇಳಿದ್ದಾರೆ.

ಮುಕ್ತ ಸಂಚಾರ ಮಾಡಬಹುದು

ಮುಕ್ತ ಸಂಚಾರ ಮಾಡಬಹುದು

'ಈ ಜಲಸಂಚಾರ ಕಾರ್ಯಾಚರಣೆಯ ಸ್ವಾತಂತ್ರ್ಯವು, ಅಂತಾರಾಷ್ಟ್ರೀಯ ಕಾನೂನು ಗುರುತಿಸಿರುವ ಸಮುದ್ರ ಭಾಗವನ್ನು ಹಕ್ಕುಗಳು, ಸ್ವಾತಂತ್ರ್ಯ ಮತ್ತು ಕಾನೂನಾತ್ಮಕವಾಗಿ ಬಳಸಿಕೊಳ್ಳುವ ಹಕ್ಕನ್ನು ಎತ್ತಿಹಿಡಿಯುತ್ತದೆ. ಚೀನಾ, ತೈವಾನ್ ಮತ್ತು ವಿಯೆಟ್ನಾಂಗಳು ಇಲ್ಲಿನ ಮುಕ್ತ ಸಂಚಾರಕ್ಕೆ ಕಾನೂನು ಬಾಹಿರವಾಗಿ ವಿಧಿಸುವ ನಿರ್ಬಂಧಗಳನ್ನು ಹಾಗೂ ಪ್ಯಾರೆಸೆಲ್ ದ್ವೀಪ ಸಮೀಪದ ಜಲಸಂಧಿಯ ಮೇಲಿನ ಚೀನಾದ ಪ್ರತಿಪಾದನೆಯನ್ನು ಅಂತಾರಾಷ್ಟ್ರೀಯ ಕಾನೂನು ಪ್ರಶ್ನಿಸುತ್ತದೆ' ಎಂದು ಅಮೆರಿಕ ಹೇಳಿದೆ.

ಕಾನೂನಿನ ಪ್ರಕಾರ ಅವಕಾಶ

ಕಾನೂನಿನ ಪ್ರಕಾರ ಅವಕಾಶ

'ಚೀನಾ, ತೈವಾನ್ ಮತ್ತು ವಿಯೆಟ್ನಾಂ ಮೂರೂ ದೇಶಗಳು ಪ್ಯಾರೆಸೆಲ್ ದ್ವೀಪದ ಮೇಲೆ ಸಾರ್ವಭೌಮತ್ವವನ್ನು ಪ್ರತಿಪಾದಿಸಿವೆ. ಸಮುದ್ರ ಪ್ರದೇಶದಲ್ಲಿ ತಮ್ಮ ಸೇನಾ ಹಡಗು ಅಥವಾ ಯುದ್ಧನೌಕೆಯನ್ನು ತೊಡಗಿಸಲು ಈ ಮೂರು ದೇಶಗಳು ಪೂರ್ವಾನುಮತಿ ಅಥವಾ ಮುಂಗಡ ಸೂಚನೆ ಪಡೆಯಬೇಕು. ಎಲ್ಲ ದೇಶಗಳೂ ಸಮುದ್ರ ಪ್ರದೇಶದಲ್ಲಿನ ಮುಕ್ತ ಮಾರ್ಗದಲ್ಲಿ ಸಾಗುವ ಹಕ್ಕು ಹೊಂದಿವೆ ಎಂದು ಸಾಗರ ಸಮಾವೇಶದ ಕಾನೂನು ಹೇಳುತ್ತದೆ' ಎಂದು ಅಮೆರಿಕ ತಿಳಿಸಿದೆ.

English summary
China claimed it has expelled a US guided missile destroyer from South China Sea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X