ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಚೀನಾ ಸಹಮತಿ ಸಾಧ್ಯತೆ

|
Google Oneindia Kannada News

ಬೀಜಿಂಗ್, ಏಪ್ರಿಲ್ 30: ಪುಲ್ವಾಮಾ ಭಯೋತ್ಪಾದನಾ ದಾಳಿಯ ಮುಖ್ಯ ಸಂಚುಕೋರ, ಜೈಶ್ ಎ ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಲು ಅಡ್ಡಗಾಲು ಹಾಕುತ್ತಿರುವ ಚೀನಾ, ತನ್ನ ಹಠಮಾರಿತನದ ಧೋರಣೆಯಿಂದ ಹಿಂದೆ ಸರಿಯುವ ಸಾಧ್ಯತೆ ಇದೆ.

ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಭದ್ರತಾ ಸಮಿತಿಯಲ್ಲಿ ಚೀನಾ ತಾಂತ್ರಿಕ ಕಾರಣವೊಡ್ಡಿ ತಕರಾರು ತೆಗೆದಿತ್ತು. ಈ ಸಮಸ್ಯೆಯನ್ನು ಸೂಕ್ತವಾಗಿ ಬಗೆಹರಿಸಲಾಗುವುದು ಎಂದು ಚೀನಾ ತಿಳಿಸಿದೆ.

ಚೀನಾಕ್ಕೆ ಅಮೆರಿಕ ಕೌಂಟರ್: ಕಪ್ಪುಪಟ್ಟಿಯಲ್ಲಿ ಅಜರ್ ಸೇರಿಸಲು ಹೊಸ ತಂತ್ರ ಚೀನಾಕ್ಕೆ ಅಮೆರಿಕ ಕೌಂಟರ್: ಕಪ್ಪುಪಟ್ಟಿಯಲ್ಲಿ ಅಜರ್ ಸೇರಿಸಲು ಹೊಸ ತಂತ್ರ

ಮೇ ತಿಂಗಳಿನಲ್ಲಿ ವಿಶ್ವಸಂಸ್ಥೆಯ ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್ ಕೈದಾ ನಿರ್ಬಂಧಗಳ ಸಮಿತಿಯಲ್ಲಿ ಚೀನಾ, ಮಸೂದ್‌ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡುವ ಭಾರತದ ಒತ್ತಾಯಕ್ಕೆ ಸಹಮತ ವ್ಯಕ್ತಪಡಿಸಲಿದೆ ಎನ್ನಲಾಗಿದೆ. ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಒತ್ತಕ್ಕೆ ಮಣಿದಿರುವ ಚೀನಾ ಈ ನಿರ್ಧಾರಕ್ಕೆಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

China expected lift hold on listing JeM Masood azhar as global terrorist

ನಾಲ್ಕನೇ ಬಾರಿಗೆ ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಅಜರ್ ನನ್ನು ರಕ್ಷಿಸಿದ ಚೀನಾ ನಾಲ್ಕನೇ ಬಾರಿಗೆ ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಅಜರ್ ನನ್ನು ರಕ್ಷಿಸಿದ ಚೀನಾ

ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಪ್ರಸ್ತಾವದಂತೆ ಪುಲ್ವಾಮಾ ದಾಳಿಯ ಪ್ರಮುಖ ಸಂಚುಕೋರ ಮಸೂದ್‌ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಲು ನೀಡಿರುವ ತಾಂತ್ರಿಕ ತಡೆಯನ್ನು ಮೇ 15ರ ಆಸುಪಾಸು ಹಿಂದಕ್ಕೆ ಪಡೆಯುವ ನಿರೀಕ್ಷೆಯಿದೆ. ಅಜರ್ ವಿಚಾರವಾಗಿ ಆತನನ್ನು ರಕ್ಷಿಸುವ ಚೀನಾ ಮತ್ತು ಪಾಕಿಸ್ತಾನದ ಪ್ರಯತ್ನ ಅಂತ್ಯಗೊಳ್ಳಲಿದೆ ಎಂದು ಹೇಳಿದ್ದಾರೆ.

English summary
China is expected to lift its tachnical hold on listing Pakistan based Jaish-e-Mohammed chief Masood Azhar as a global terrorist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X