ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಲಸಿಕೆ ತೆಗೆದುಕೊಂಡರೆ ಮಾತ್ರ ಒಳಗೆ ಪ್ರವೇಶ: ಚೀನಾ

|
Google Oneindia Kannada News

ಬೀಜಿಂಗ್, ಮಾರ್ಚ್ 16: ಭಾರತ, ಅಮೆರಿಕ, ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಿಂದ ಬರುವ ಜನರಿಗೆ ಚೀನಾ ಗಡಿ ನಿರ್ಬಂಧಗಳನ್ನು ಸಡಿಲಗೊಳಿಸಿದೆ. ಆದರೆ ಒಂದು ಷರತ್ತನ್ನು ವಿದೇಶಿಗರು ಪಾಲಿಸಲೇಬೇಕು. ಚೀನಾಕ್ಕೆ ಬರುವ ಪ್ರವಾಸಿಗರು ಚೀನಾ ನಿರ್ಮಿತ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳುವುದು ಕಡ್ಡಾಯ.

ಕೋವಿಡ್ ಸೋಂಕು ತೀವ್ರಗೊಳ್ಳುತ್ತಿದ್ದ ಕಾರಣ ಕಳೆದ ಮಾರ್ಚ್ ತಿಂಗಳಿನಿಂದಲೂ ಅನೇಕ ದೇಶಗಳಿಗೆ ಚೀನಾ ತನ್ನ ಗಡಿಗಳನ್ನು ಮುಚ್ಚಿತ್ತು. ಈಗ ಚೀನಾದಲ್ಲಿ ಬಹುತೇಕ ಸೋಂಕು ನಿಯಂತ್ರಣಕ್ಕೆ ಬಂದಿದೆ. ಆದರೆ ಚೀನಾ ಒಳಗೆ ಅನೇಕ ವಿದೇಶಿಗರು ಸಿಲುಕಿಕೊಂಡಿದ್ದಾರೆ. ಈ ನಡುವೆ ವಿವಿಧ ದೇಶಗಳಲ್ಲಿನ ಚೀನಾ ರಾಯಭಾರ ಕಚೇರಿಗಳು ಆಯ್ದ ದೇಶಗಳ ಜನರಿಗೆ ವೀಸಾ ಅರ್ಜಿಗಳನ್ನು ತೆರೆಯುತ್ತಿರುವುದಾಗಿ ತಿಳಿಸಿದೆ.

ಲಸಿಕೆ ಹಾಕಿಸಿಕೊಂಡ 2ನೇ ದಿನಕ್ಕೆ ಸಚಿವರಿಗೆ ಕೊರೊನಾ ಪಾಸಿಟಿವ್!ಲಸಿಕೆ ಹಾಕಿಸಿಕೊಂಡ 2ನೇ ದಿನಕ್ಕೆ ಸಚಿವರಿಗೆ ಕೊರೊನಾ ಪಾಸಿಟಿವ್!

ಚೀನಾ ಮುಖ್ಯಭೂಮಿಯಲ್ಲಿ ಉದ್ಯೋಗ ಮುಂದುವರಿಸಲು, ವ್ಯವಹಾರ ಪ್ರಯಾಣ ಅಥವಾ ಕುಟುಂಬವನ್ನು ಸೇರಿಕೊಳ್ಳುವಂತಹ ಮಾನವೀಯ ಅಗತ್ಯಗಳಿಗಾಗಿ ಚೀನಾಕ್ಕೆ ಪ್ರಯಾಣಿಸಬಹುದು. ಆದರೆ ಅವರು ಚೀನಾ ನಿರ್ಮಿತ ಲಸಿಕೆಯನ್ನು ಪಡೆದುಕೊಳ್ಳಬೇಕು. ಚೀನಾ ಇದುವರೆಗೂ ಆಂತರಿಕವಾಗಿ ಅಭಿವೃದ್ಧಿಪಡಿಸಿದ ನಾಲ್ಕು ಲಸಿಕೆಗಳ ಬಳಕೆಗೆ ಅನುಮೋದನೆ ನೀಡಿದೆ. ಆದರೆ ಯಾವುದೇ ವಿದೇಶಿ ಲಸಿಕೆಗೆ ಅನುಮತಿ ನೀಡಿಲ್ಲ.

China Eases Border Restrictions For Foreigners Including Indians If They Take Chinese Vaccine

ಅಮೆರಿಕ, ಭಾರತ, ಪಾಕಿಸ್ತಾನ, ಫಿಲಿಪ್ಪೀನ್ಸ್, ಇಟಲಿ ಮತ್ತು ಶ್ರೀಲಂಕಾಗಳಲ್ಲಿನ ಚೀನಾ ರಾಯಭಾರ ಕಚೇರಿಗಳು ಹೇಳಿಕೆ ಬಿಡುಗಡೆ ಮಾಡಿದ್ದು, ಎರಡು ಡೋಸ್ ಲಸಿಕೆ ಪಡೆದವರು ಅಥವಾ ವೀಸಾಕ್ಕೆ ಅರ್ಜಿ ಸಲ್ಲಿಸುವ ಕನಿಷ್ಠ 14 ದಿನ ಮುನ್ನ ಒಂದು ಡೋಸ್ ಲಸಿಕೆ ಪಡೆದವರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.

English summary
China eases border restrictions for foreigners including Indians if they take Chinese Covid-19 vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X